ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕಳಲೆ(ಕಣಿಲೆ)

July 1, 2008 - 3:59pm — ಗಣೇಶ

ನಿಮಗೆಲ್ಲಾ ಬಿದಿರು ಬಗ್ಗೆ ಗೊತ್ತೇ ಇದೆ.
ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು.
(ಸಂ- ವಂಶ, ಹಿಂ-ಬಾಂಸ್, ಇಂ-Bamboo)
ವಿಷಯುಕ್ತ(ಸಯನೈಡ್!) ಎಳೆ ಬಿದುರಿನಿಂದ ಸಾಂಬಾರ್,ಪಲ್ಯ,ಉಪ್ಪಿನಕಾಯಿ ಮಾಡುವರು!

ಈ ಎಳೇ ಬಿದುರಿಗೆ ಕಳಲೆ (ತುಳುವಲ್ಲಿ ಕಣಿಲೆ) ಎನ್ನುವರು. ೨ ವಾರದಷ್ಟು ಎಳೆಯ ಅಥವಾ ೧-೨ ಅಡಿ ಬೆಳೆದಿರುವ ಕಳಲೆ (bamboo shoot) ಜೂನಿಂದ ಸೆಪ್ಟೆಂಬರ್‌ವರೆಗೆ ಮಾರ್ಕೆಟ್‌ನಲ್ಲಿ ಸಿಗುವುದು. ಇದರ ಸಿಪ್ಪೆ ತೆಗೆದು, ಉರುಟುರುಟಾಗಿ ಕತ್ತರಿಸಿ, ನೀರಲ್ಲಿ ೩ ದಿನ ಮುಳುಗಿಸಿಡಬೇಕು. ದಿನವೂ ನೀರು ಬದಲಾಯಿಸಬೇಕು. ಇದರಿಂದ ಅದರ ವಿಷ ನಿವಾರಣೆಯಾಗುವುದು.

ಈ ಕಣಿಲೆ ತುಂಡುಗಳೊಂದಿಗೆ, ಚೇಟ್ಲ( ಎಳೆ ಕೆಸುವಿನ ಎಲೆಯನ್ನು ಸುತ್ತಿ
ಗಂಟು ಹಾಕಿದ್ದು), ಹೆಸರು ಕಾಳು, ಸೌತೆಕಾಯಿ ಸೇರಿಸಿ ಸಾಂಬಾರ್ ಮಾಡಿದರೆ.. ಆಹಾ..

  • ಜ್ಞಾನವಾಹಿನಿ
~.~
  • Login or register to post comments
  • 499 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 1, 2008 - 4:04pm — savithru

ಉ: ಕಳಲೆ(ಕಣಿಲೆ)

savithru's picture

ಹೌದು ಗಣೇಶ್ ಅವ್ರೆ

ಅ ಕೆಲವು ಸೋಮವಾರಗಳ ಕಳಿಲೆ ಪಲ್ಯ- ಜೋಳದ ರೊಟ್ಟಿ ...ಜೋಡಿ....ಸೂಪರ್ ...ಅದಕ್ಕೆ ಸಾಟಿಯೇ ಇಲ್ಲ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 4:08pm — mahesha

ಉ: ಕಳಲೆ(ಕಣಿಲೆ)

mahesha's picture

ಗಣೇಶ..

ನಾವು ಕಣಲೆ ಅಂತಲೇ ಅನ್ನೋದು.. ತುಳು ಎಂದು ಹೇಳಬೇಕಾದ್ದಿಲ್ಲ..!!

ಮುಳುಗು = ಮುಣುಗು!! ಎರಡೂ ಕನ್ನಡವೇ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 4:12pm — kannadakanda

ಉ: ಕಳಲೆ(ಕಣಿಲೆ)

kannadakanda's picture

ಕೞಲೆ=ಕಣಲೆ
ಗೆೞಸು=ಗೆಣಸು
ಮೆೞಸು=ಮೆಣಸು
ಮೊೞ=ಮೊಣ
ಕುೞಿ=ಕುಣಿ
ಗುೞಿ=ಗುಣಿ
ತಲ್ಲೞ=ತಲ್ಲಣ
ಮುೞುಗು/ಮುೞುಂಗು=ಮುಣುಗು/ಮುಣುಂಗು
ಇವೆಲ್ಲ ನಾನು ಹೇೞಿದ ಸಾನುನಾಸಿಕ ’ೞ’ಕ್ಕೆ ಉದಾಹರಣೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 4:16pm — mahesha

ಉ: ಕಳಲೆ(ಕಣಿಲೆ)

mahesha's picture

ನನ್ನಿ..

ಆದರೆ.. ಅವರು ಕಣಲೆ ಗಿಡದ ಬಗ್ಗೆ ಮಾತಾಡ್ತಾ ಇದ್ದಾರೆ..
ಇನ್ನು ಹೆಚ್ಚು ಕಳಲೆ/ಕಣಲೆ/ಕೞಲೆ ಒರೆಯ ಬಗ್ಗೆ ಕಮೆಂಟುಗಳನ್ನು ನಾವು ಹಾಕೋದು ಬೇಡ!

ಗಣೇಶರೇ ನನ್ನ ಕಮೆಂಟು ನಿಮ್ಮ ಬರಹದ ಹುರುಳಿಗೆ ಅಡ್ಡಿ ಬಂದಿದೆ ಮನ್ನಿಸಿರಿ/.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 1, 2008 - 4:17pm — mahesha

ಉ: ಕಳಲೆ(ಕಣಿಲೆ)

mahesha's picture

ಅದರ ಚಿತ್ರ/ಪಾಪೆ ಹಾಕಿರಿ..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:16am — ಗಣೇಶ

ಉ: ಕಳಲೆ(ಕಣಿಲೆ)

ಗಣೇಶ's picture

ಪ್ರತಿಕ್ರಿಯೆ ನೀಡಿದ ಸವಿತೃ, ಮಹೇಶ,ಕನ್ನಡಕಂದ,ಜಯಲಕ್ಷ್ಮಿಯವರಿಗೆ ನನ್ನಿ.
೨ ವಾರ ಮೊದಲು ಮಲ್ಲೇಶ್ವರ ೮ನೇ ಕ್ರಾಸ್(ಈ ರಸ್ತೆಯ ಬಗ್ಗೆ ಯಾರೂ ಯಾಕೆ ಬರೆದಿಲ್ಲಾ?)ನಲ್ಲಿ ತರಕಾರಿ ಮಾರ್ಕೆಟ್‌ನಲ್ಲಿ ಕಣಿಲೆ ಹಿಡಕೊಂಡು ಒಬ್ಬಾಕೆ ಏನಿದು ಎಂದು ವಿಚಾರಿಸುತ್ತಿದ್ದರು.ತರಕಾರಿ ಮಾರುವವನಿಗೆ ವಿವರಿಸುವಷ್ಟು ತಾಳ್ಮೆ ಇರಲಿಲ್ಲ.

ಸದ್ಯಕ್ಕೆ ಬಲಗಡೆ ಚಿತ್ರ ಕಾಣುವುದೇ ಕಣಿಲೆ ಚಿತ್ರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 7:48pm — Jayalaxmi.Patil

ಉ: ಕಳಲೆ(ಕಣಿಲೆ)

Jayalaxmi.Patil's picture

ಬಿದಿರಿಗೆ ಸಂಸ್ಕೃತದಲ್ಲಿ 'ವಂಶ' ಎನ್ನುತ್ತಾರೆನ್ನುವುದು ಗೊತ್ತಿರಲಿಲ್ಲ. ಕಳಲೆ ಉಪ್ಪಿನಕಾಯಿ ನೆನಸ್ಕೊಂಡ್ರೇನೇ ಬಾಯಾಲ್ಲಿ ನೀರೂರುತ್ತೆ ಗಣೇಶ್. ಪ್ಲೀಸ್ ಕಳಲೆಯಿಂದ ಪಲ್ಯ ಮತ್ತು ಸಾಂಬರ್ ಮಾಡುವ ವಿಧಾನ ಬರೀತೀರಾ? (ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ಮನೆಯಲ್ಲಿ ಕೇಳಿ ನಮಗೆ ಹೇಳಿ ಪ್ಲೀಸ್ )
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 11:48pm — ಗಣೇಶ

ಉ: ಕಳಲೆ(ಕಣಿಲೆ)

ಗಣೇಶ's picture

ಕಳಲೆಯಿಂದ ಪಲ್ಯ ಸಾಂಬರ್ ಮಾಡುವ ವಿಧಾನ!?

ಅರ್ಧ ಗಂಟೆ ಹಿಂದೆ ಮುಂದೆ ಸುತ್ತಿದ್ದಕ್ಕೆ,ಸಾಂಬಾರ್ ಬಗ್ಗೆ ವಿವರ ಮೇಲೆ ಬರೆದಷ್ಟೇ ಸಿಕ್ಕಿದ್ದು.
ಪಲ್ಯದ ಬಗ್ಗೆ ..ಒಂದು ವಾರ ಕಾಯುತ್ತೀರಾ?

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 1:29pm — Jayalaxmi.Patil

ಉ: ಕಳಲೆ(ಕಣಿಲೆ)

Jayalaxmi.Patil's picture

ಖಂಡಿತ ಕಾಯ್ತಿನಿ. ಆದ್ರೆ ಈ ಒಂದು ವಾರ ಅನ್ನೋದು ೭ದಿನದ್ದಷ್ಟೆ ಆಗಿರಲಿ. ಇಲ್ಲಾಂತಂದ್ರೆ ಸೀಸನ್ ಮುಗಿದು ಮಾರ್ಕೇಟ್‍ನಲ್ಲಿ ಕಳಲೆ ಸಿಗದೆ ಹೋದರೆ ರೆಸಿಪಿ ವೇಸ್ಟ್!

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 11:43pm — ಗಣೇಶ

ಉ: ಕಳಲೆ(ಕಣಿಲೆ)

ಗಣೇಶ's picture

ನಮಸ್ತೆ,
ಕಣಿಲೆಯನ್ನು ಸಣ್ಣದಾಗಿ ಕೊಚ್ಚಿ, ನೀರಲ್ಲಿ ಹಾಕಿ, ೩ ದಿನ ನೀರು ಬದಲಾಯಿಸಿ,
ನಂತರ ಉಳಿದ ತರಕಾರಿಗಳ ಪಲ್ಯ ಹೇಗೆ ಮಾಡುವಿರೋ ಅದೇ ತರಹ ಈ ಪಲ್ಯ ಮಾಡುವುದಂತೆ.
ಬೆಂಗಳೂರಲ್ಲಿ Bamboo Shoot ಎಂಬ ಚೈನೀಸ್ ಹೋಟೆಲ್ ಸಹ ಇದೆ. ಅಲ್ಲಿ ಕಣಿಲೆ ಸಾಂಬಾರು/ಪಲ್ಯ ಸಿಗಬಹುದೇನೋ Smiling
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 10:41am — Jayalaxmi.Patil

ಉ: ಕಳಲೆ(ಕಣಿಲೆ)

Jayalaxmi.Patil's picture

ಥ್ಯಾಂಕ್ಸ್ ಗಣೇಶ್. ಇಷ್ಟೊಂದು ಮುತುವರ್ಜಿಯಿಂದ ಕಳಲೆ ಪಲ್ಯದ ವಿವರ ಕೇಳಿ ತಿಳಿಸಿದ್ದಕ್ಕೆ. ಇಷ್ಟರಲ್ಲೆ ಕಳಲೆ ಪಲ್ಯ ಮಾಡುತ್ತೇನೆ!ಆಹಾ!
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದೆಲಗ (ಬ್ರಾಹ್ಮಿ)
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
  • ವಚನ ಚಿಂತನ: ಬಸವಣ್ಣ: ಬಿದಿರು ಆಗಬೇಕು
  • ಕಳ್ಳಭಟ್ಟಿ
  • ಝೆನ್ ಕತೆಗಳು ೧೨: ಆರಿಹೋದ ದೀಪ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 96 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator