ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

July 2, 2008 - 9:51am — Saroja Prakash

ವಿಶ್ವಮಟ್ಟದಲ್ಲಿ ಆಹಾರವೈವಿಧ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಐದು ದೇಶಗಳ ಮುಖಂಡರು ಬೀಜರಕ್ಷಣೆಯ ಅತಿಸುಭದ್ರ ವ್ಯವಸ್ಥೆಯೊಂದನ್ನು ತಾವು ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ಐಸ್‍ಲ್ಯಾಂಡ್ ಇವೇ ಆ ಐದು ದೇಶಗಳು.

ಈ ತಿಜೋರಿ ಅಂತಿಂಥದಲ್ಲ. ಅತ್ಯಂತ ಬಲಿಷ್ಟವಾದ ೫೦ ಮೀಟರ್ ಉದ್ದದ ಆ ತಿಜೋರಿಯಲ್ಲಿ ಭೂಮಿಯ ಮೇಲಿನ ಎಲ್ಲಾ ರೀತಿಯ ಆಹಾರ ಬೆಳೆಗಳ ಮಾದರಿ ಬೀಜಗಳನ್ನು ಸಂಗ್ರಹಿಸಿಡಲಾಗುವುದು. ತಿಜೋರಿಯನ್ನು ಉತ್ತರ ಧ್ರುವದಿಂದ ಒಂದು ಸಾವಿರ ಕಿಮೀ ದೂರದಲ್ಲಿರುವ ಸ್ವಾಲ್‍ಬಾರ್ಡ್ ಪರ್ವತದ ಬೃಹದಾಕಾರದ ಬಂಡೆಯನ್ನು ಬಗೆದು ಅಲ್ಲಿ ಹೂಳಿಡಲಾಗುವುದು. ತಿಜೋರಿಯ ಹೊರಗೋಡೆ ಒಂದು ಮೀಟರ್ ದಪ್ಪದ ಕಾಂಕ್ರೀಟಿನದ್ದು. ಭವಿಷ್ಯದಲ್ಲಿ ಎಂತಹ ಭಯಂಕರ ನೈಸರ್ಗಿಕ ವಿಪತ್ತಾಗಲೀ, ಭೂಬಿಸಿಯಾಗಲೀ, ಬಾಂಬುದಾಳಿಯಾಗಲೀ ಅಥವಾ ಅಣುಯುದ್ಧವಾಗಲೀ ಸಂಭವಿಸಿದಲ್ಲಿ ತಿಜೋರಿಗೆ ಅಪಾಯವಾಗಬಾರದೆಂದು ಈ ವಿಶೇಷ ವ್ಯವಸ್ಥೆ. ಈ ತಿಜೋರಿಯ ನಿಯಂತ್ರಣಕ್ಕೆ ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿರುತ್ತದೆ. ಒಳಗಡೆ ತಾಪಮಾನವನ್ನು ಹತೋಟಿಯಲ್ಲಿಡಲೆಂದು(-೧೮ಡಿಗ್ರಿ ಸೆಂಟಿಗ್ರೇಡ್) ವಿದ್ಯುತ್ ವ್ಯವಸ್ಥೆಯೂ ಇದೆ. ಅಕಸ್ಮಾತ್ ವಿದ್ಯುತ್ ನಿಲುಗಡೆಯಾದರೂ ತೊಂದರೆಯಿಲ್ಲ, ಏಕೆಂದರೆ ಅಲ್ಲಿ ವಾತಾವರಣದ ಉಷ್ಣತೆ -೩ ಡಿಗ್ರಿಯನ್ನು ಎಂದೂ ದಾಟುವುದಿಲ್ಲ. ಈ ಶೀತಲ ಲೋಕದಲ್ಲಿ ಅಕ್ಕಿ, ಗೋಧಿ ಹಾಗೂ ಕಾಳುಗಳು ಒಂದು ಸಾವಿರ ವರ್ಷಗಳವರೆಗೂ ಹಾಳಾಗದೆ ಉಳಿಯಲಿವೆ. ಭಯಂಕರ ಚಳಿಯಿರುವ ಪ್ರದೇಶವದಾದ್ದರಿಂದ ಹಿಮಬಿರುಗಾಳಿ, ಹಿಮಕರಡಿಗಳ ಓಡಾಟಗಳು ಬೀಜತಿಜೋರಿಗೆ ಕನ್ನ ಹಾಕಬಯಸುವವರಿಂದ ಸದಾ ಪ್ರ್‍ಆಕೃತಿಕ ರಕ್ಷಣೆಯನ್ನು ಒದಗಿಸುತ್ತವೆ. ಆರ್ಕ್ಟಿಕ್ ಖಂಡದಲ್ಲೇನಾದರೂ ಸಮುದ್ರದ ನೀರು ಉಕ್ಕಿತೆಂದರೆ ಎತ್ತರದಲ್ಲಿರುವ ಈ ತಿಜೋರಿಯ ಭದ್ರತೆಗೆ ಯಾವ ಅಪಾಯವೂ ಇರುವುದಿಲ್ಲ.

ಭೂಮಿಯ ಮೇಲೆ ಬೇಸಾಯ ಪ್ರಾರಂಭವಾದಾಗಿನಿಂದ ಅಂದರೆ ಸುಮಾರು ಹತ್ತು ಸಾವಿರ ವರ್ಷಗಳಿಂದ ಮಾನವ ಜೀವಿ ತನ್ನ ಆಹಾರಕ್ಕೆಂದು ಬೆಳೆಯುತ್ತಿದ್ದ ಎಲ್ಲಾ ರೀತಿಯ ಆಹಾರ ಧಾನ್ಯಗಳಲ್ಲಿ ಅನೇಕವು ಕಣ್ಮರೆಯಾಗಿವೆ. ಉಳಿದಿರುವ ಎಲ್ಲ ಜಾತಿಯ ಬೀಜಗಳನ್ನೂ ಇಲ್ಲಿ ಸಂಗ್ರಹಿಸಿಡಲಾಗುತ್ತದೆ. ಪ್ರತಿಬಗೆಯ ಬೀಜಗಳನ್ನು ವಿಶೇಷವಾದ ಲಕೋಟೆಗಳಲ್ಲಿ ಹಾಕಿ ಅವನ್ನು ಕಪ್ಪು ಪೆಟ್ಟಿಗೆಗಳಲ್ಲಿ ಇಡಲಾಗುವುದು. ಯಾವುದಾದರೂ ಸಸ್ಯ ಭೂಮಿಯಲ್ಲಿ ಸಂಪೂರ್ಣ ಅವನತಿ ಹೊಂದಿದ ಸಂದರ್ಭದಲ್ಲಿ ಮಾತ್ರ ಈ ತಿಜೋರಿಯಿಂದ ಆ ಸಸ್ಯದ ಬೀಜಗಳನ್ನು ಹೊರತೆಗೆದು ಬಳಸಬಹುದು. ತಿಜೋರಿಯೊಳಕ್ಕೆ ಪ್ರವೇಶಿಸಲು ಒಂದೇ ಒಂದು ಬಾಗಿಲಿದ್ದು ಅದಕ್ಕೆ ಆರು ಬೀಗದ ಕೈಗಳಿರುತ್ತವೆ. ಈ ಐದು ದೇಶಗಳ ಬಳಿ ಒಂದೊಂದು ಹಾಗೂ ವಿಶ್ವಸಂಸ್ಥೆಯ ಸುಪರ್ದಿಯಲ್ಲಿ ಆರನೆಯ ಬೀಗದಕೈ ಇಡಲಾಗುತ್ತದೆ.

೨೦೦೬ರಲ್ಲಿ ಬೀಜತಿಜೋರಿಯ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ೨೦೦೮ ರಿಂದ ಎಲ್ಲಾ ದೇಶಗಳಿಂದ ಬೀಜಗಳ ಸಂಗ್ರಹ ಆರಂಭಗೊಳ್ಳಲಿದೆ. ಒಟ್ಟೂ ಇಪ್ಪತ್ತು ಲಕ್ಷ ಜಾತಿಯ ಸುಮಾರು ೧೨೦ ಕೋಟಿ ಬೀಜಗಳು ಒಂಭತ್ತು ವರ್ಷ ಕಾಲಾವಧಿಯೊಳಗೆ ಸಂಗ್ರಹಗೊಳುವ ನಿರೀಕ್ಷೆ ಇದೆ.

ಈ ಕಾರ್ಯಕ್ಕೆಂದು ನಾರ್ವೆ ಹಾಗೂ ಸದಸ್ಯ ದೇಶಗಳು ಐವತ್ತು ಕೋಟಿ ಡಾಲರ್ ಹಣ ಹೂಡಿದೆ. ಬೀಜತಿಜೋರಿಯ ನಿರ್ವಹಣಾ ವೆಚ್ಚವನ್ನು 'ವಿಶ್ವ ಜೀವವೈವಿಧ್ಯತಾ ಟ್ರಸ್ಟ್' ಸಂಸ್ಥೆ ವಹಿಸಿಕೊಂಡಿದೆ. 'ಈಗ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ೧೪೦೦ ಬೀಜ ಬ್ಯಾಂಕುಗಳಿವೆ. ಯುದ್ಧ, ಪ್ರಾಕೃತಿಕ ವಿಕೋಪ ಹೀಗೆ ಹಲವಾರು ಕಾರಣಗಳಿಂದಾಗಿ ನಲವತ್ತು ಬೀಜ ಬ್ಯಾಂಕುಗಳು ನಾಶಗೊಂಡಿವೆ. ಆ ದೃಷ್ಟಿಯಿಂದ ಭವಿಷ್ಯದಲ್ಲಿ ಎಂಥಹ ಆಪತ್ತಿನ ದಿನಗಳಲ್ಲೂ ಈ ತಿಜೋರಿಯಲ್ಲಿ ಬೀಜಗಳು ಉಳಿದಿರುತ್ತವೆ. ಇಲ್ಲಿರುವ ಬೀಜ, ಧಾನ್ಯಗಳು ಜನರ ಹೊಟ್ಟೆ ತುಂಬಿಸದಿದ್ದರೂ ಅವರ ಭವಿಷ್ಯಕ್ಕೊಂದು ಆಧಾರವಾಗಲಿವೆ' ಎನ್ನುತ್ತಾರೆ ಟ್ರಸ್ಟ್‍ನ ಜಾಫ್ ಹಾವ್ಟಿನ್ ಅವರು. ಮೂವತ್ತು ಮಿಲಿಯನ್ ಡಾಲರ್ ಧನಸಹಾಯ ಮಾಡಿರುವ ಬಿಲ್ ಗೇಟ್ಸ್ ಫೌಂಡೇಶನ್ ಬೀಜಗಳ ಲೆಕ್ಕ ನಿರ್ವಹಣೆಗೆಂದು ಉಚಿತ ತಂತ್ರಾಂಶವನ್ನು ಒದಗಿಸಲೂ ಮುಂದೆ ಬಂದಿದೆ.

ನಮ್ಮ ರಾಜ್ಯದಲ್ಲಿ ಸುಮಾರು ಅರವತ್ತು ಬೀಜ ಬ್ಯಾಂಕುಗಳಿವೆ. ಗ್ರೀನ್ ಫೌಂಡೇಶನ್ ಸಂಸ್ಥೆ ನಲವತ್ತು ಬೀಜ ಬ್ಯಾಂಕುಗಳನ್ನು ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯರ ನೆರವಿನಿಂದ ಸ್ಥಾಪಿಸಿದೆ. ಈ ಬೀಜಬ್ಯಾಂಕುಗಳು ಆಗಾಗ ಬೀಜಮೇಳವನ್ನು ನಡೆಸಿ ರೈತರು ವಿನಿಮಯ ಕ್ರಮದ ಮೂಲಕ ತಮ್ಮಲ್ಲಿಲ್ಲದ ಬೀಜಗಳನ್ನು ಪಡೆಯುವಲ್ಲಿ ನೆರವಾಗುತ್ತಿವೆ. ಅಳಿವಿನ ಅಂಚಿನಲ್ಲಿರುವ, ಬಳಕೆಯಲ್ಲಿರುವ ಹಾಗೂ ಬಳಕೆಯಲ್ಲಿರದ ಜೀವವೈವಿಧ್ಯಗಳನ್ನು ರಕ್ಷಿಸಲೆಂದು ಜನರು ಕಂಡುಕೊಂಡ ಮಾರ್ಗ ಇದು. ಬೀಜಗಳನ್ನು ಭದ್ರವಾಗಿ ಅಡಗಿಸಿಡುವ ಬದಲು ಮತ್ತೆ ಮತ್ತೆ ಬೆಳೆಯುತ್ತ, ಬಳಸುತ್ತ ತಲೆಮಾರುಗಳಿಗೆ ವರ್ಗಾಯಿಸುತ್ತಿರುವುದೇ ಅವುಗಳನ್ನು ಉಳಿಸಿಕೊಳ್ಳಲು ಸಮರ್ಪಕ ಮಾರ್ಗ ಎಂದು ಹಿರಿಯರು ಹೇಳುತ್ತಾರೆ. ಉದಾಹರಣೆಗೆ ದಕ್ಷಿಣಕನ್ನಡದ ಮಿತ್ತಬಾಗಿಲು ಎಂಬಲ್ಲಿ ದೇವರಾಯ ಎನ್ನುವ ರೈತ ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷವೂ ಸುಮಾರು ನಲವತ್ತಾರು ಜಾತಿಯ ಭತ್ತದ ತಳಿಗಳನ್ನು ಬೆಳೆಸುತ್ತಿದ್ದಾರೆ. ಇಷ್ಟೆಲ್ಲ ತರದ ಅಕ್ಕಿಯನ್ನು ಅವರು ಉಣ್ಣುತ್ತಾರೆಯೇ? ಇಲ್ಲ. ಬಳಸುವುದು ಕೆಲವೇ ಜಾತಿಯ ಅಕ್ಕಿಯಾದರೂ ಭವಿಷ್ಯಕ್ಕಾಗಿ ಉಳಿಸಿಡಬೇಕೆಂಬ ಒಂದೇ ಕಾರಣಕ್ಕಾಗಿ ಅಲ್ಪ ಪ್ರಮಾಣದಲ್ಲಾದರೂ ಸರಿ, ತಮ್ಮಲ್ಲಿರುವ ಎಲ್ಲ ಭತ್ತದ ತಳಿಗಳನ್ನೂ ಪ್ರತಿ ವರ್ಷ ನಾಟಿ ಮಾಡುತ್ತಿದ್ದಾರೆ. ಕುರುಬರಹಳ್ಳಿಯ ಪಾಪಮ್ಮ ಪ್ರತಿವರ್ಷವೂ ತನ್ನಂಗಳದ ಒಂದಿಂಚು ಬಿಡದಂತೆ ಉತ್ತಮ ತರಕಾರಿಗಳನ್ನು ಬೆಳೆಯುತ್ತಾರಲ್ಲದೆ ತನ್ನಲ್ಲಿರುವ ಬೀಜಗಳನ್ನು ಉಳಿದವರಿಗೆ ಹಂಚಿ ಅವರೂ ನೆಲವನ್ನು ಹಸಿರುಗೊಳಿಸುವಂತೆ ಉತ್ತೇಜಿಸುತ್ತಾರೆ. ಅಡ್ಯನಡ್ಕದ ವಾರಣಾಶಿ ಸಂಶೋಧನಾ ಕೇಂದ್ರದಲ್ಲಿ ತರಕಾರಿ ಹಾಗೂ ಭತ್ತದ ಬೀಜಗಳನ್ನು ಗ್ರಾಮೀಣ ಸಾಂಪ್ರದಾಯಿಕ ಪದ್ಧತಿಯಂತೆ ಬಿಸಿಲಲ್ಲಿ ಒಣಗಿಸಿ, ಮಡಕೆಗಳಲ್ಲಿ ಹಾಗೂ ಸೋರೆ ಅಥವಾ ಕುಂಬಳಕಾಯಿಗಳ ಒಣಬುರುಡೆಗಳಲ್ಲಿಟ್ಟು ಹೊಗೆಗೂಡಿನ ಬೆಚ್ಚನೆಯ ಜಾಗದಲ್ಲಿ ರಕ್ಷಿಸಿಡಲಾಗುತ್ತಿದೆ.

ಮೇಲಿನ ಬೀಜತಿಜೋರಿಯ ಕಲ್ಪನೆ ಕೇಳಲಿಕ್ಕೇನೋ ಸೊಗಸಾಗಿದೆ. ಆದರೆ ಅಪಾರ ಹಣಹೂಡಿ ಮಾಡಿದ ಆ ವ್ಯವಸ್ಥೆ ಸದಾಕಾಲ ಉಳಿಯಲು ರಾಜಕೀಯ, ಆರ್ಥಿಕ ಬೆಂಬಲಗಳು ಬೇಕೇಬೇಕು. ಅದರ ನಿರ್ಮಾಣ, ನಿರ್ವಹಣೆ ಕೂಡ ಅತಿ ಕಷ್ಟಕರವಾದದ್ದು. ಅದಕ್ಕಿಂತ ಈಗಿರುವಂತೆ ಅಲ್ಲಲ್ಲಿ ಬೀಜಬ್ಯಾಂಕುಗಳನ್ನು ಸ್ಥಾಪಿಸಿ ಅದರ ನಿರ್ವಹಣೆಯನ್ನೂ ಸ್ಥಳೀಯ ಜನರೇ ನಡೆಸುವಂತಾದರೆ ಬೀಜಗಳ ಸಂರಕ್ಷಣೆಯ ಕಾರ್ಯ ಹೆಚ್ಚು ಸಮರ್ಥವಾಗಿ ನಡೆಯುತ್ತದೆ. ಇದು ಸುಸ್ಥಿರ ಬೀಜಸಂರಕ್ಷಣಾ ಮಾರ್ಗವಷ್ಟೇ ಅಲ್ಲ, ಗಾಂಧೀಜಿಯವರ ವಿಕೇಂದ್ರೀಕರಣ ಸೂತ್ರದ ಅನುಷ್ಠಾನವೂ ಕೂಡ.

**********************************

  • ಪ್ರಚಲಿತ
~.~
  • Login or register to post comments
  • 199 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2008 - 5:48pm — ಶ್ರೀನಿವಾಸ ವೀ. ಬ೦ಗೋಡಿ

ಉ: ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

ಶ್ರೀನಿವಾಸ ವೀ. ಬ೦ಗೋಡಿ's picture

ಲೇಖನ ತುಂಬ ಚೆನ್ನಾಗಿದೆ. ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 5:59pm — Sunil Jayaprakash

ಉ: ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

Sunil Jayaprakash's picture

ಒಳ್ಳೆಯ ಬರಹ ಸರೋಜ ಪ್ರಕಾಶರೇ. ಆ ದೇವರಾಯನೆಂಬ ರೈತನಿಗೆ ಕೈಮುಗಿಯಬೇಕೆನ್ನಿಸಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 2, 2008 - 7:04pm — Jayalaxmi.Patil

ಉ: ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

Jayalaxmi.Patil's picture

ಎಂಥಾ ಉಪಯುಕ್ತ ಲೇಖನವನ್ನು ಬರೆದಿದ್ದೀರ ಸರೋಜಾ! ಆದರೆ ಈ ಬೀಜ ಬ್ಯಾಂಕ್‍ಗಳ ಕುರಿತ ಮಾಹಿತಿ ಮತ್ತು ಅದರ ಬಳಕೆ ಅಶಿಕ್ಷಿತ, ಬಡ ರೈತರನ್ನು ತಲುಪುತ್ತದೆಯೆ?

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 6:43am — Chamaraj

ಉ: ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

Chamaraj's picture

ಬೀಜ ತಿಜೋರಿ ಬಗ್ಗೆ ಉತ್ತಮ ಲೇಖನ ಬರೆದಿದ್ದೀರಿ. ಅದಕ್ಕಿಂತ ಹೆಚ್ಚು ಹಿಡಿಸಿದ್ದು ಈಗಾಗಲೇ ಹರಡುತ್ತಿರುವ ಬೀಜ ಬ್ಯಾಂಕ್‌ಗಳು. ಗ್ರೀನ್‌ ಪ್ರತಿಷ್ಠಾನದ ಈ ಕೆಲಸವನ್ನು ನಾನೂ ಹತ್ತಿರದಿಂದಲೇ ಗಮನಿಸಿದ್ದೇನೆ.

ಆದರೆ, ಗ್ರೀನ್‌ ಫೌಂಡೇಶನ್‌ ಆಗಲಿ, ಸಾವಯವದ ಹೆಸರಲ್ಲಿ ಸಕ್ರಿಯವಾಗಿರುವ ಸಂಸ್ಥೆಗಳಾಗಲಿ ಕೆಲವೊಂದು ವಿಷಯಗಳಲ್ಲಿ ವಿಪರೀತ ಮಡಿವಂತಿಕೆ ಹೊಂದಿವೆ. ಸಂಸ್ಥೆಯಲ್ಲಿರುವ ಕೆಲವರನ್ನು ಬಿಟ್ಟರೆ ವಿದ್ಯಾವಂತರನ್ನು, ವಿಷಯ ತಿಳಿದವರನ್ನು ಸ್ಥಳೀಯ ಮಟ್ಟದಲ್ಲಿ ಸೇರಿಸಿಕೊಳ್ಳಲು ಅವು ಇಷ್ಟಪಡುವುದಿಲ್ಲ. ಹೀಗಾಗಿ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಪತ್ರಿಕೆಗಳಲ್ಲಿ ಲೇಖನ ಬರೆಯುವುದರಿಂದ ಹಿಡಿದು, ತಮ್ಮ ಸಂಸ್ಥೆಯ ಚಟುವಟಿಕೆಗಳಲ್ಲಿಯೂ ಕೆಲವೇ ಕೆಲವು ಜನ ಮಾತ್ರ ಕಂಡು ಬರುತ್ತಾರೆ.

ಇದರಿಂದ ಬೀಜ ಬ್ಯಾಂಕ್‌, ಸಾವಯವ ಚಟುವಟಿಕೆಗಳು ದೊಡ್ಡಮಟ್ಟದ ವ್ಯಾಪ್ತಿ ಕಂಡುಕೊಳ್ಳುವಲ್ಲಿ ವಿಫಲವಾದವು. ಒಬ್ಬ ಪತ್ರಕರ್ತನಾಗಿ ನಾನು ಇಂತಹ ಪ್ರಗತಿಪರ ಕಾರ್ಯಕ್ರಮಗಳ ಬಗ್ಗೆ ತುಂಬ ಬರೆದಿದ್ದೇನೆ. ಆದರೆ, ಇದನ್ನು ಮೆಚ್ಚಬೇಕಾದ ಸಂಸ್ಥೆಗಳೇ, ಇವನ್ಯಾರೋ ನಮ್ಮ ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದ್ದಾನಲ್ಲ ಎಂಬಂತೆ ವರ್ತಿಸಿದವು.

ಉದಾತ್ತ ಆಶಯಗಳು ಜಾರಿಗೆ ಬರಬೇಕಾದರೆ, ಮನಸ್ಸು ಕೂಡ ಉದಾತ್ತವಾಗಿರಬೇಕು, ಅಲ್ವೆ?

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭ್ರಷ್ಟಾಚಾರದ ಬೀಜಗಳು ಇಲ್ಲಿ ನೂರ್ಕಾಲ ಬಾಳುತ್ತವೆ !
  • ೧೮ ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಾದ "ಔದ್ಯೋಗಿಕ ಪ್ರಗತಿಯ ಮೂಲ" - ಹತ್ತಿಯಿಂದ ದಾರ ನೂಲುವ ಯಂತ್ರದಿಂದ !
  • ಭಳಿರೇ ಬನವಾಸಿ ಭತ್ತೋತ್ಸವ !
  • ವಿಮಾನ ಆಸುಪಾಸು...
  • ವಿಮಾನದ ಆಸುಪಾಸು...
Syndicate content

ಲೇಖಕರು

Saroja Prakash's picture

ಪೂರ್ಣ ಹೆಸರು
ಸರೋಜಾ ಪ್ರಕಾಶ

ಪರಿಚಯ

ಹವ್ಯಾಸಿ ಬರಹಗಾರ್ತಿ ಹಾಗೂ ಮನೆಯಂಗಳದ ಕೈತೋಟದಲ್ಲಿ ಅಪಾರ ಆಸಕ್ತಿಯುಳ್ಳವಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 131 ಅತಿಥಿಗಳು ಆನ್ಲೈನ್ ಇರುವರು.


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator