ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ರಿಯಾಲಿಟಿ ಶೋಗಳು ಮತ್ತು ಮಕ್ಕಳು

July 3, 2008 - 10:02am — maatumouna

ಇತ್ತೀಚಿನ ದಿನಗಳಲ್ಲಿ Reality Show ಗಳು ಪ್ರತಿಯೊಂದು ಚಾನೆಲ್ ಗಳನ್ನೂ ಆಕ್ರಮಿಸಿಕೊಂಡಿವೆ. ನನಗೆ ನೆನಪಿರುವ ಹಾಗೆ " ಮೇರಿ ಆವಾಜ್ ಸುನೋ " ನಾನು ನೋಡಿದ ಮೊದಲ Reality Show [Though it was not called Reality show at that time]. ಹದಿನೈದು ವರ್ಷಗಳ ಹಿಂದೆ ದೂರದರ್ಶನದಲ್ಲಿ ಅ ಕಾರ್ಯಕ್ರಮ ಪ್ರಸಾರವಾಗಿತ್ತು. ಅ ಕಾರ್ಯಕ್ರಮದ ಮೂಲಕ "ಸುನಿಧಿ ಚೌಹಾನ್ " ಎಂಬ ಅನಾಮಿಕ ಪ್ರತಿಭಾವಂತ ಗಾಯಕಿಯ ಪರಿಚಯ ಚಿತ್ರ ಜಗತ್ತಿಗೆ ಆಯಿತು. ಅಲ್ಲಿಂದೀಚೆಗೆ ಹತ್ತಾರು/ನೂರಾರು ರಿಯಾಲಿಟಿ ಶೋಗಳು ಆಗಿವೆ ಹಾಗು ಆಗುತ್ತಿವೆ. ಪ್ರತಿಯೊಂದು ರಿಯಾಲಿಟಿ ಶೋ ಮುಖ್ಯ " ಪ್ರತಿಭಾನ್ವೇಷಣೆ ".ಅನೇಕರು ಇಂಥಹ ಕಾರ್ಯಕ್ರಮಗಳಲ್ಲಿ ಜಯಶಾಲಿಯಾಗಿದ್ದರೂ ಹೊರಪ್ರಪಂಚದಲ್ಲಿ ಅವರು ಬೆಳೆದದ್ದು ಅತಿಕಡಿಮೆ. ಉದಾಹರಣೆಗೆ Indian Idol - I ಗೆದ್ದಂತಹ ಅಭಿಜಿತ್ ಸಾವಂತ್. ಅವನು ಗೆದ್ದ ಮೊದಲ ವರ್ಷದಲ್ಲಿ ಒಂದೆರಡು ಆಲ್ಬಮ್ ಬಂದಿದ್ದು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಅವನ ಸುದ್ದೀನೆ ಇಲ್ಲ. Indian Idol - 2,3 ವಿಜಯಶಲಿಗಳು ಎಲ್ಲಿದ್ದರೋ? Channel V ನಡೆಸಿದ ಸ್ಪರ್ಧೆಯಲ್ಲಿ ಗೆದ್ದ VIVA ಹುಡುಗಿಯರೂ ಈಗ ನಾಪತ್ತೆ...! ಹಾಗಾದರೆ ಈ ಸ್ಪರ್ಧೆಗಳೆಲ್ಲ ನಿಜವಾದ ಪ್ರತಿಭೆಗಳನ್ನು ಗುರುತಿಸುವುದರಲ್ಲಿ ಎಡವುತ್ತಿವೆಯೋ ಅಥವಾ ರಿಯಾಲಿಟಿ ಶೋ ಅನ್ನೋದೇ ಒಂದು ದೊಡ್ಡ ಗಿಮ್ಮಿಕ್ಕೋ ಅನ್ನೋ ಅನುಮಾನ ಕಾಡಲು ಶುರುವಾಗುತ್ತೆ.

ಸಧ್ಯಕ್ಕಿರುವ trend ಅಂದ್ರೆ Reality Shows for Kids. ಮಕ್ಕಳಲ್ಲಿರುವ ಗಾಯನ/ ನರ್ತನ / ಅಭಿನಯ ಪ್ರತಿಭೆಯನ್ನು ಗುರುತಿಸುವ ಸ್ಪರ್ಧೆಗಳು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳೆಲ್ಲ ೧೨ ವರ್ಷಕ್ಕಿಂತ ಕೆಳಗಿನವರು. ಕೇವಲ ಹಿಂದಿ ಚಾನಲ್ಗಳಿಗೆ ಸೀಮಿತವಾದಂತಹ ಈ ಸ್ಪರ್ಧೆಗಳು ಈಗ ಪ್ರಾದೇಶಿಕ ವಾಹಿನಿಗಳಿಗೂ ಲಗ್ಗೆ ಇಟ್ಟಿವೆ. ಹಿಂದಿ ಚಾನೆಲ್ ಗಳಲ್ಲಿ ಪ್ರಸರವಾಗುವಂತಹ ಕಾರ್ಯಕ್ರಮಗಳಂತೂ ಅತಿಯಾದ ನಾಟಕೀಯತೆಯಿಂದ ಕೂಡಿರುತ್ತವೆ. ಈ ವಿಚಾರದಲ್ಲಿ ಪ್ರಾದೇಶಿಕ ವಾಹಿನಿಗಳು Better. ಅಲ್ಲದೆ ಜನರು ಸಹ ಇದನ್ನೇ ನಿಜ ಎಂದು ನಂಬುತ್ತಾರೆ.

ಹಾಗಾದರೆ ಇಂತಹ ಸ್ಪರ್ಧೆಗಳನ್ನು ನಡೆಸುವುದು ತಪ್ಪೇ ? ಅನ್ನೋ ಪ್ರಶ್ನೆ ಎದುರಾಗುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ತಪ್ಪಲ್ಲ. ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದು ಒಳ್ಳೆಯ ಕೆಲಸ. ನನಗೆ ಅಸಮಾಧಾನ ಇರುವುದು ಗುರುತಿಸಲು ಅನುಕರಿಸುವ ಕ್ರಮದ ಬಗ್ಗೆ [ಮಾನದಂಡದ ಬಗ್ಗೆ ಅಲ್ಲ ]. ಚಾನಲ್ ನಿರ್ವಾಹಕರು, ಕಾರ್ಯಕ್ರಮ ನಿರೂಪಕರು, ತೀರ್ಪುಗಾರರು ತಾವು ಪ್ರತಿಭೆಯನ್ನು ಗುರುತಿಸುವ ಕ್ರಮ ಸರಿಯಿದೆಯೇ ಎಂದು ಪರಾಮರ್ಶಿಸುವ ವೇಳೆ ಬಂದಿದೆ. ಪ್ರತಿಭಾನ್ವೇಷಣೆ ಯಲ್ಲಿ ತೀರ್ಪುಗಾರರ ಪಾತ್ರ ಅತ್ಯಂತ ಮಹತ್ವದ್ದು. Reality Show ಹೆಸರಿನಲ್ಲಿ ಸ್ಪರ್ಧಿಗಳನ್ನು ಬಯ್ಯುವ, ಹೀಗೆಳೆಯುವ, ಕೂಗುವ ತೀರ್ಪುಗಾರರು ಮಕ್ಕಳ ಎಳೆ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ಯೋಚಿಸಬೇಕು. There immeture attitude towards kids certainly will have negative impact. ಪ್ರತಿಯೊಬ್ಬ ತೀರ್ಪುಗಾರ Children Psychologyಯನ್ನು ಅರ್ಥಮಾಡಿಕೊಳ್ಳಬೇಕು. Humiliation they undergo during judment is unbearable. It may dishearten the kid.

ಎರಡು ದಿನಗಳ ಹಿಂದೆ ಇಂತಹದೇ ಕಾರ್ಯಕ್ರಮದಲ್ಲಿ ತೀರ್ಪುಗರರಿಂದ ಅವಜ್ಞೆಗೊಳಗಾದ ಸ್ಪರ್ಧಿಯೊಬ್ಬಳು ಸ್ಥಳದಲ್ಲಿಯೇ ಮೂರ್ಛೆಹೊಂದಿದಲ್ಲದೆ ಮಾನಸಿಕ ಸಮತೋಲನವನ್ನು ಕಳೆದುಕೊಂಡ ಅಮಾನವೀಯ ಘಟನೆ ಕೋಲ್ಕತ್ತಾ ದಿಂದ ವರದಿಯಾಗಿದೆ. ತೀರ್ಪುಗಾರರ ಇಂತಹ ಕೆಟ್ಟ ಪ್ರತಿಕ್ರಿಯೆಯಿಂದ ಸಿವಂಜಿ ಸೇನಗುಪ್ತ (16) ಎಂಬ ಹುಡುಗಿ NIMHANS ನಲ್ಲಿ ಚಿಕಿತ್ಸೆ ಪಡೆಯುವ ಮಟ್ಟಕ್ಕೆ ಹೋಗಿದೆಯೆಂದರೆ, ಇವಳಿಗಿಂತ ಚಿಕ್ಕ ಮಕ್ಕಳ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ. ಇದರಿಂದ ಒಂದು ಮಗು ಹಾಡುವುದನ್ನೂ / ನರ್ತಿಸುವುದನ್ನೋ ನಿಲ್ಲಿಸಿದರೆ ಅದಕ್ಕೆ ಯಾರು ಹೊಣೆ? ತಾನು ಚೆನ್ನಾಗಿ perform ಮಾಡೋದಿಲ್ಲ ಎನ್ನುವ ಕೀಳರಿಮೆಗೆ [Inferiority Complex] ಒಳಗಾದರೆ ಯಾರು ಹೊಣೆ? ತೀರ್ಪುಗಾರರ ತೀರ್ಪು ಸ್ಪರ್ಧಿಗಳ ಆ ಕ್ಷಣದ performanceನ್ನು ಮಾತ್ರ ಅವಲಂಬಿಸಿರತ್ತೆ ಅನ್ನೋದು ಅರ್ಥಮಾಡಿಕೊಳ್ಳುವಷ್ಟು ಮಕ್ಕಳ ಮನಸ್ಸು ಮಾಗಿರೋದಿಲ್ಲ [ಪಕ್ವವಾಗಿರೋದಿಲ್ಲ] .

ಈ ತರಹದ ಮಕ್ಕಳ ಕಾರ್ಯಕ್ರಮಗಳನ್ನು ಅವರ ಭಾವನೆಗಳಿಗೆ ಘಾಸಿಯಾಗದಂತಹ ರೀತಿಯಲ್ಲಿ ರೂಪಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಒಂದಿಷ್ಟು ನಿಭಂದನೆಗಳಿರಬೇಕು. ಮಕ್ಕಳ ಭಾವನೆಗಳನ್ನು ರಕ್ಷಿಸುವಂತಹ ಕಾನೂನುಗಳ ರಚನೆಯಾಗಬೇಕು. ತಂದೆ ತಾಯಿ ಕೂಡ ಮಕ್ಕಳನ್ನು ಇಂತಹ ಸ್ಪರ್ಧೆಗಳಿಗೆ ಮಾನಸಿಕವಾಗಿ ಸಿದ್ಧಪಡಿಸಿರಬೇಕು. ಗೆಲ್ಲುವುದೇ ಮೂಲಮಂತ್ರವಾದಾಗ ಸೋಲುವ ಕ್ಷಣಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಗೆಲ್ಲುವುದು ಅನಂತರ ಎನ್ನುವುದನು ಮನದಟ್ಟು ಮಾಡಿರಬೇಕು.

ನಾನು ಈ ತರಹದ Reality Show ಗಳನ್ನೂ ಹೆಚ್ಚು ನೋಡದಿದ್ದರೂ ಕೆಲವೊಂದನ್ನು ಕುತೂಹಲದಿಂದ ವೀಕ್ಷಿಸಿದ್ದೇನೆ. Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ Little Champs ನನ್ನ ಗಮನ ಸೆಳೆದಿರುವ ಹಲವು ಸ್ಪರ್ಧೆಗಳಲ್ಲೊಂದು. ರಾಜೇಶ್ ಕೃಷ್ಣನ್ ಮಕ್ಕಳೊಂದಿಗೆ ಚೆನ್ನಾಗಿ ಮಾತನಾಡಿದರೂ ಕಾರ್ಯಕ್ರಮ ನಿರ್ವಾಹಕಿಯಾದ [Show Host] ಅರ್ಚನ ಉಡುಪ [She is also Zee sarigamapa winner]ಬಗ್ಗೆ ನನಗೆ ಒಂದಿಷ್ಟು ಅಸಮಾಧಾನವಿದೆ. Elimination Round ಬಂದಾಗ ಒಂದಿಷ್ಟು ಮಕ್ಕಳು Danger Zone ಗೆ ಬರುತ್ತಾರೆ. ಅವರಲ್ಲಿ ಇಬ್ಬರು ಸ್ಪರ್ಧೆಯಿಂದ ಹೊರಗೆ ಹೋಗಬೇಕಾಗುತ್ತದೆ. ಈ ತೀರ್ಪನ್ನು ಪ್ರಕಟಿಸಬೇಕಾದರೆ ಮಾಡುವ ನಾಟಕ ಅನಗತ್ಯ ಮತ್ತು ಅನಪೇಕ್ಷಿತ. ಆ ಪುಟ್ಟ ಮಕ್ಕಳನ್ನು ಟೆನ್ಶನ್ಗೆ ನೂಕಿ ತೀರ್ಪು ಪ್ರಕಟಿಸುವ ಅಗತ್ಯ ಇದೆಯಾ? ಅರ್ಚನ ಉಡುಪಳಾ ಮಾತಿನಿಂದ [ಎಳೆದು ಎಳೆದು ಮಾತಾಡುವ ರೀತಿಯಿಂದ ] ಅನೇಕ ಮಕ್ಕಳು ಕೊನೆಗೆ ಅತ್ತೇಬಿಟ್ಟಂತ ಪ್ರಸಂಗಗಳು ನಡೆದಿವೆ. ಈ ವಿಚಾರ ಅರ್ಚನ ಉಡುಪಳಿಗೆ ಮಾತ್ರ ಅಲ್ಲ ಇಂತಹ ಕಾರ್ಯಕ್ರಮವನ್ನು ನಿರ್ವಹಿಸುವ ಎಲ್ಲರಿಗು ಅನ್ವಯಿಸುತ್ತದೆ. ಇನ್ನು ಮುಂದಾದರು TV ಚಾನಲ್ಗಳು, ಸರ್ಕಾರ ಕೂಡ ಶಿನ್ಜಿನಿ ಸೇನಗುಪ್ತದಂತಹ ಪ್ರಕರಣದಿಂದ ಎಚ್ಚೆತ್ತುಕೊಳ್ಳುತ್ತಾರೆ ಅನ್ನೋ ಆಶಾಭಾವನೆ ನನ್ನದು.

  • ಪ್ರಚಲಿತ
~.~
  • Login or register to post comments
  • 737 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 11:49am — shashikannada

ಉ: ರಿಯಾಲಿಟಿ ಶೋಗಳು ಮತ್ತು ಮಕ್ಕಳು

shashikannada's picture

ನಮಸ್ಕಾರ ನವೀನ್. ಸಂಪದ ಕುಟುಂಬಕ್ಕೆ ನಿಮಗೆ ಸ್ವಾಗತ.

ಇಂತಹ ಸಾಮಾಜಿಕ ಕಾಳಜಿಗಳು ಪ್ರತಿಯೊಬ್ಬ ಮನುಷ್ಯನಲ್ಲೂ ಇರಬೇಕು ಅಲ್ವ? ಈಗಿನ ಕಾಲದಲ್ಲಿ ಎಲ್ಲ ಮಕ್ಕಳನ್ನೂ 'ರೇಸ್'ಗೆ ಬಿಟ್ಟಿರೋ ಕುದುರೆ ಥರ ನೋಡಲಾಗುತ್ತಿದೆ. ನನಗೆ ಅನಿಸೋ ಹಾಗೆ ಇದಕ್ಕೆ ಮುಖ್ಯ ಕಾರಣ ಪೋಷಕರು. ಅವರು ಮೊದಲು ಎಚ್ಚೆತ್ತುಕೊಳ್ಳಬೇಕು. ಇನ್ನು ಮಾಧ್ಯಮಗಳು ಯಾವ ಮಟ್ಟಕ್ಕಿಳಿದಿವೆ ಅನ್ನೋದನ್ನ ನಾನೇನು ವಿವರಿಸಬೇಕಿಲ್ಲ. ಪ್ರಜ್ಞಾವಂತರಾದ ನಾಗರಿಕರು ಕೂಡ ಇಂತಹ ಕಾರ್ಯಕ್ರಮಗಳನ್ನು ನೋಡುವುದನ್ನು, ಅಂತಹದರಲ್ಲಿ ಭಾಗವಸಿಸುವುದನ್ನು ನಿಲ್ಲಿಸಬೇಕು. ಇದರಲ್ಲಿ ನಮ್ಮೆಲ್ಲರ ಪಾತ್ರವಿದೆ ಅಲ್ವ? ನಾವೆಲ್ಲರೂ ಒಬ್ಬರಿಗೊಬ್ಬರು ಜವಾಬ್ದಾರರಲ್ವ?

ಇಂತಹ ವಿಷಯಗಳ ಬಗ್ಗೆ ಆದಷ್ಟು ಬರೆಯಿರಿ. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ್ದೀರಿ. ಆದರೆ, ನನ್ನದೊಂದು ಸಲಹೆ. ಕನ್ನಡ ಹಾಗೂ ಇಂಗ್ಲೀಶ್ ಕಾಗುಣಿತದ ಬಗ್ಗೆ ಸ್ವಲ್ಪ ಗಮನ ಹರಿಸಿ. ಇತ್ತೀಚೆಗೆ ನಿಮ್ಮಂತಹ ಐಟಿಯಲ್ಲಿರೋ ಜನ ಕನ್ನಡದಲ್ಲಿ ಇಂತಹ ವಿಷಯಗಳ ಬಗ್ಗೆ ಬರೀತಿರೋದು ತುಂಬ ಸಂತಸದ ವಿಚಾರ. ನಿಮಗೆ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

Mobile: 9886484937
Personal Blog: http://sampada.net/user/shashikannada

Personal Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 12:43pm — maatumouna

ಉ: ರಿಯಾಲಿಟಿ ಶೋಗಳು ಮತ್ತು ಮಕ್ಕಳು

maatumouna's picture

ಶಶಿಕುಮಾರ್ ರವರಿಗೆ ಧನ್ಯವಾದಗಳು ,

ನಿಮ್ಮ ಪ್ರತಿಕ್ರಿಯೆ ನನ್ನಲ್ಲಿ ಇನ್ನಷ್ಟು ಹುರುಪು ತಂದಿದೆ.
ನಿಮ್ಮ ಸಲಹೆಗಳಿಗೆ ಸದಾ ಸ್ವಗತ ಕೋರುವ

ನಿಮ್ಮ ಸ್ನೇಹಿತ
ನವೀನ ಕೆ.ಎಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 12:47pm — shreevathsa

ಉ: ರಿಯಾಲಿಟಿ ಶೋಗಳು ಮತ್ತು ಮಕ್ಕಳು

shreevathsa's picture

ನಮಸ್ಕಾರ ನವೀನ್, ನಿಮ್ಮ ಲೇಖನ ತುಂಬ ಚೆನ್ನಾಗಿದೆ..ಈಗ ನಡೆಯುತ್ತಿರುವ reality show ಗಳು ಕೇವಲ TRP ರೇಟಿಂಗ್ ಗೋಸ್ಕರ ಸೀಮಿತವಾಗಿದೆ ಅನ್ನಿಸುತ್ತೆದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 12:53pm — maatumouna

ಉ: ರಿಯಾಲಿಟಿ ಶೋಗಳು ಮತ್ತು ಮಕ್ಕಳು

maatumouna's picture

Hi ಶ್ರೀವತ್ಸ , ಕೇವಲ TRP ಗೆ ಮಾತ್ರವಲ್ಲ, ಇದು ಚಾನಲ್ಗಳ ದುಡ್ಡು ಮಾಡುವ ಒಂದು ತಂತ್ರ.

ನಿಮ್ಮ ಸ್ನೇಹಿತ
ನವೀನ ಕೆ.ಎಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 1:21pm — Aravind M.S

ಉ: ರಿಯಾಲಿಟಿ ಶೋಗಳು ಮತ್ತು ಮಕ್ಕಳು

Aravind M.S's picture

ಪ್ರಿಯ ನವೀನ್ ರವರೆ,

ತಮ್ಮ ಲೇಖನ ನಿಜಕ್ಕೂ ಸಮಯೋಚಿತವಾಗಿದೆ, ಧನ್ಯವಾದಗಳು. ಇಂತಹ ಕಾರ್ಯಕ್ರಮಗಳಲ್ಲಿ ಮೊದಲು ಮಕ್ಕಳನ್ನು ಬಹುವಚನದಿಂದ ಸಂಬೋಧಿಸಲು ತಿಳಿಯಬೇಕು. ಏಕೆಂದರೆ ಅನೇಕರಿಗೆ ಏಕವಚನದಲ್ಲೇ ಆತ್ಮೀಯವಾಗಿ ಮಾತಾಡುವುದು ತಿಳಿದೇ ಇಲ್ಲ.

ರಿಯಾಲಿಟಿ ಶೋಗಳು ಒಂದು ಚಿಕ್ಕ ಉದಾಹರಣೆಯಷ್ಟೇ. ವಾಸ್ತವವಾಗಿ ಈ ಕನ್ಸ್ಯೂಮರಿಸಮ್ ನ ಸಂಸ್ಕ್ರೃತಿಯಲ್ಲಿ ನಾವು ಎತ್ತ ಹೋಗುತ್ತಿದ್ದೇವೋ ತಿಳಿಯದಾಗಿದೆ. ನಾವು ಜಾಗರೂಕರಾಗಿರುವುದು ಅವಶ್ಯಕವಿದ್ದರೂ ಇಂತಹ ಮಿತಿಮೀರಿಕೆಗಳು ಖಂಡಿತಾ ಖಂಡನೀಯ. ಇದನ್ನು ಹತ್ತಿಕ್ಕಲು ಹಲವಾರು ನಾಗರೀಕ ಕಾನೂನುಗಳು ಅಗತ್ಯವಾಗಿ ಜಾರಿಯಾಗಬೇಕಾಗಿದೆ.

ಅದೂ ಈಗಿನ ವ್ಯಾಪಾರಿಗಳಿಗೆ ನಮ್ಮ ಸಮಾಜದ ಕಾಳಜಿ ಒಂದು ಚೂರೂ ಇಲ್ಲ. ತಮ್ಮ ಲಾಭ ತೆಗೆದುಕೊಂಡು ಹೋಗ ಬಯಕೆ ಅಷ್ಟೇ. ಅದೂ ನಮ್ಮ ಭಾವೀ ಪ್ರಜೆಗಳಾದ ಇಂದಿನ ಮಕ್ಕಳಿಗಂತೂ ಈಗಿನ ಕನ್ಸ್ಯೂಮರಿಸಂನಿಂದ ಏನೂ ಪ್ರಯೋಜನ ಆಗ್ತಾ ಇಲ್ಲ. ಅವರು ನ್ಯಾಯಯುತವಾಗಿ ಪಡೆದುಕೊಂಡಿರಬೇಕಾದ ಉತ್ತಮ ಶಿಶು / ಮಕ್ಕಳ ಸಾಹಿತ್ಯ, ಸಂಸ್ಕೃತಿಗೆ ಬದಲಾಗಿ ನಾವು ಕೊಡುತ್ತಿರುವುದು ಈ ವಿಕೋಪ ಪ್ರಪಂಚವೊಂದೇ

- ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 3:19pm — maatumouna

ಉ: ರಿಯಾಲಿಟಿ ಶೋಗಳು ಮತ್ತು ಮಕ್ಕಳು

maatumouna's picture

ಅರವಿಂದ್ ರವರೆ ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ

ನಿಮ್ಮ ಸ್ನೇಹಿತ
ನವೀನ ಕೆ.ಎಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚೋಟು ಟಿವಿ - ಕನ್ನಡ ಮಕ್ಕಳ ಚಾನಲು, ಸನ್ ಟಿವಿ ಬಳಗದಿಂದ..
  • ಪ್ರತಿಭೆ V/S ಎಸ್ಎಂಎಸ್
  • ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ?
  • ಕನ್ನಡ ಹಾಡುಗಳ ರಿಯಾಲಿಟಿ ಶೋಗಳು
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
Syndicate content

ಲೇಖಕರು

maatumouna's picture

ಪೂರ್ಣ ಹೆಸರು
ನವೀನ ಕೆ.ಎಸ್.

ಪರಿಚಯ

ವೃತ್ತಿಯಿಂದ ಸಾಫ್ಟವೇರ್ ತಂತ್ರಜ್ಞ .
ಸಾಹಿತ್ಯ, ಸಿನಿಮಗಳಲ್ಲಿ ಹೆಚ್ಚಿನ ಆಸಕ್ತಿ.
ಕೆಲವೊಮ್ಮೆ ಬರಹಗಾರ, ಕವಿ.

ನನ್ನ ಬ್ಲಾಗ್ :
maatumouna.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator