ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ನಿಮಗೆ ಕನ್ನಡ ಬರುತ್ತಾ?

July 3, 2008 - 3:00pm — shashikannada
Kannada Baavuta

(ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗೆಳೆಯನೊಬ್ಬ ಇ-ಮೇಲ್ ಮಾಡಿದ್ದರಿಂದಾಗಿ ಯಾರು ಬರೆದಿರುವುದು ಎಂದು ತಿಳೀದಿಲ್ಲ. ಅದು ಯಾರಾದರೂ ಆಗಿರಲಿ, ಆ ವ್ಯಕ್ತಿಯ ಕನ್ನಡ ಪ್ರೇಮವನ್ನು ನಿಜಕ್ಕೂ ಮೆಚ್ಚಬೇಕು.ನಮ್ಮ ತಾಯಿಭಾಷೆಯನ್ನು ಮರೆತರೆ, ನಮ್ಮ ತಾಯಿಯನ್ನೇ ಮರೆತಂತೆ. "ಕನ್ನಡ ಉಳಿಸಿ, ಬೆಳೆಸಿ" ಎನ್ನುವ ಕೂಗು ಈಗ 'ಅರಣ್ಯ ರೋದನ'ವಾಗಿಬಿಟ್ಟಿದೆ. ಒಂದು ಸಮಾಧಾನದ ಸಂಗತಿಯೆಂದರೆ, ಕನ್ನಡ ಹಾಗೂ ಪರಭಾಷಾ ಸಂಘರ್ಷ ಹೆಚ್ಚಾಗಿರುವ ಐಟಿ ವಲಯದ ಜನರು ಇತ್ತೀಚೆಗೆ ಹೆಚ್ಚಾಗಿ ಕನ್ನಡದಲ್ಲಿಯೇ ಬ್ಲಾಗ್ ಮುಂತಾದವುಗಳನ್ನು ಬರೆಯುತ್ತಿರುವುದು. ಅವರ ಕನ್ನಡ ಕಳಕಳಿ ಕೂಡ ಪ್ರಶಂಸನೀಯ.

ಇಂಗ್ಲೀಶ್ ಬಾರದ ಅಥವಾ ಕನ್ನಡದಲ್ಲಿಯೇ ಓದುವುದಕ್ಕೆ ಬಯಸುವವ "ನಮ್ಮ" ಕನ್ನಡಿಗರಿಗಾಗಿ ಈ ಇಂಗ್ಲೀಶ್ ಲೇಖನವನ್ನು ಕನ್ನಡೀಕರಿಸಿ, ಸ್ವಲ್ಪ ಮಟ್ಟಿಗೆ "ನನ್ನತನ"ವನ್ನು ಸೇರಿಸಿ ಪ್ರಕಟಿಸುತ್ತಿದ್ದೇನೆ. ಇಷ್ಟವಾದಲ್ಲಿ ಬರೆದು ತಿಳಿಸುತ್ತೀರಲ್ಲ.)

"ಕನ್ನಡ ಬರುತ್ತಾ?", ಎನ್ನುವ ಮಾತನ್ನು ಬೆಂಗಳೂರಿನಲ್ಲಿರುವ ಬಹಳಷ್ಟು ಜನ ಕೇಳಿರುತ್ತೀರಿ. ಆದರೆ, ಹಾಗಂದ್ರೆ ಏನು?

ಸಿಲಿಕಾನ್ ಸಿಟಿ, ಭಾರತದ ಐಟಿ ರಾಜಧಾನಿ ಎಂದೆಲ್ಲಾ ಕರೆಸಿಕೊಳ್ಳುವ 'ನಮ್ಮ' ಬೆಂಗಳೂರು, ಹೆಚ್ಚು ಕಮ್ಮಿ ಎಲ್ಲಾ ಥರದ ಜನರಿಗೆ ತನ್ನ ಬಾಗಿಲನ್ನು ತೆರೆಯುವುದರ ಮೂಲಕ, "ಕಾಸ್ಮೋಪಾಲಿಟನ್ ಸಂಸ್ಕೃತಿ"ಯನ್ನು ಹುಟ್ಟು ಹಾಕುವುದಕ್ಕೂ ಕಾರಣವಾಗಿದೆ.

ಇತ್ತೀಚಿನ ಜನಗಣತಿಯೊಂದರ ಪ್ರಕಾರ, 'ನಮ್ಮ' ಬೆಂಗಳೂರಿನಲ್ಲಿರುವುದು ಕೇವಲ ಶೇ.47ರಷ್ಟು ಜನ ಮಾತ್ರ ಮೂಲನಿವಾಸಿಗಳು. ನಗರದ ಜೀವನಶೈಲಿ ಎಷ್ಟರ ಮಟ್ಟಿಗೆ ಬದಲಾಗಿದೆ ಅಂದ್ರೆ, 'ನಮ್ಮ' ಎಂಟಿಆರ್ ಗಳನ್ನು ಪೀಡ್ಜಾ ಕಾರ್ನರ್ ಗಳು, ವಿದ್ಯಾರ್ಥಿ ಭವನವನ್ನು ಶೋಕಿಯಾಗಿ ಕಾಣೋ ಈಟ್-ಔಟ್(ಹೊರಗೆ ತಿನ್ನಿ) ಗಳು ಹಾಗೂ ಮಹಾಲಕ್ಷ್ಮಿ ವೈನ್ ಶಾಪ್ಎಣ್ಣೆ ಅಂಗಡಿಗಳನ್ನು ಅದ್ದೂರಿಯಾಗಿ ಕಾಣೋ ಪಬ್ ಗಳು ಆಕ್ರಮಿಸಿಕೊಂಡುಬಿಟ್ಟಿವೆ.

"ಬದಲಾವಣೆ ಅನಿವಾರ್ಯ" ಅನ್ನೋದು ಬಿಇಎಂಎಲ್, ಎಚ್ಎಎಲ್ ಹಾಗೂ ಬಿಎಚ್ಇಎಲ್ ನಿಂದ ಇನ್ಫೋಸಿಸ್, ವಿಪ್ರೊ, ಐಬಿಎಂ ಮುಂತಾದವುಗಳಿಗೆ ಗಮನ ಸರಿದಾಗಲೇ ತಿಳಿದುಹೋಯ್ತು.

ಈಗ ಬೆಂಗಳೂರು ವಿಶ್ವದ ಭೂಪಟದಲ್ಲಿ ಹೊಸ ಸ್ಥಾನವನ್ನು ಪಡೆದುಕೊಂಡಿದೆ. ಹಿಂದೆಯೆಲ್ಲಾ ಭಾನುವಾರದ ಸಂಜೆ ಎಂದರೆ, ಕಬ್ಬನ್ ಪಾರ್ಕ್, ಲಾಲ್ ಬಾಗ್ ನಲ್ಲಿ ಅಡ್ಡಾಡುತ್ತ ಹೊರಗೆ ಎಂಟಿಆರ್ ನಲ್ಲಿ ರವೆ ಇಡ್ಲಿ, ಕಾಫಿ ಸವಿಯುತ್ತ ಇದ್ದದ್ದು, ಸಂತೋಶ್ ನಲ್ಲೋ, ಸೆಂಟ್ರಲ್ ನಲ್ಲೋ ಅಣ್ಣಾವ್ರ ಫಿಲ್ಮ್ ನೋಡಿಕೊಂಡು ಬರೋದು ರೊಮ್ಯಾಂಟಿಕ್ ಅನುಭವವನ್ನು ನೀಡುತ್ತಿತ್ತು. ಆದರೆ ಇಂದು, ಟ್ರಾಫಿಕ್, ಕೆಲಸದೊತ್ತಡ, ಆಯಾಸಗಳಲ್ಲಿ ಮುಳುಗಿಹೋಗಿದೆ. ಗುಂಡು ತುಂಡು ಇಲ್ಲದ ಶನಿವಾರದ ರಾತ್ರಿ, ಹತ್ತಿರದ ಸ್ಪಾ ಅಥವಾ ಹೆಲ್ತ್ ಕ್ಲಿನಿಕ್ ಗೆ ಭೇಟಿ ಕೊಡದಿರೋದು ಅನ್ ಕಾಮನ್ ಅನಿಸಿಕೊಂಡು ಬಿಟ್ಟಿದೆ. ಅಂದು ಮನಸ್ಸು 'ಗಾಂಧೀ ಬಜಾರು' ಅಂಥ ಪದ್ಯ ಬರೆದಿದ್ರು 'ನಮ್ಮ' ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರು. ಇಂದು ಆ 'ಗಾಂಧೀ ಬಜಾರು' ಹವಾನಿಯಂತ್ರಿತ ಸೂಪರ್ ಮಾರ್ಕೆಟ್ ಗಳಿಂದ ಆವೃತವಾಗಿದೆ. ಮೆಜೆಸ್ಟಿಕ್ ವೈವಿಧ್ಯಮಯ, ಅಲ್ಟ್ರಾ ಮಾಡ್ರನ್ ಬ್ರಿಗೇಡ್ ರೋಡ್ ನಿಂದ ಆಕ್ರಮಿಸಲ್ಪಟ್ಟಿದೆ. 'ಶ್ರೀ ಕಾವೇರಿ ಕಾಫಿ ಜಾಯಿಂಟ್' 'ಕಾಫಿ ಡೇ' ಗಳಾಗಿ ಮಾರ್ಪಟ್ಟಿದ್ದರೆ, ಭಾಗ್ಯಲಕ್ಷ್ಮಿ ಕಾಫಿ ಅಡ್ಡಾ' ಬ್ಯಾರಿಷ್ಟ ಆಗಿಬಿಟ್ಟಿದೆ. ಜಾಗತೀಕರಣ ಹಾಗೂ ರೀಟೇಲ್ ಮಾರುಕಟ್ಟೆಯ ಗಾಳಿಯಿಂದಾಗಿ ಈ ನಗರ ಇನ್ನೂ ಏನೇನು ಬದಲಾವಣೆ ಕಾಣಲಿದೆಯೋ ಆ 'ಕೆಂಪೇಗೌಡ'ರೇ ಬಲ್ಲರು

ಇವೆಲ್ಲವೂ ನಮ್ಮ ಭಾಷೆಯನ್ನು ಬದಲಿಸಿವೆಯೇ?

ದೇಶದ ಐಟಿ ರಾಜಧಾನಿಯೆಂದೇ ಕರೆಯಬಹುದಾದ, ಸಿಲಿಕಾನ್ ನಗರ ಬೆಂಗಳೂರಿನ ಸ್ಥಳೀಯ ಭಾಶೆಯಾಗಿರುವ ಕನ್ನಡ, 7 ಜ್ಞಾನಪೀಠಗಳನ್ನು ಪಡೆದಿರುವ, ಸುಮಾರು 2,500 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಭಾರತದ ಮೂರು ಪ್ರಾಚೀನ ಭಾಶೆಗಳಲ್ಲಿ ಒಂದು. 1,900 ವರ್ಷಗಳಷ್ಟು ಹಿಂದೆಯೇ ಕನ್ನಡ ತನ್ನ ವರ್ಣಮಾಲೆಯನ್ನು ರೂಪಿಸಿಕೊಂಡದ್ದು ಹೆಮ್ಮೆಯ ವಿಷಯ. ಆದರೆ, ಬೆಂಗಳೂರಿನಲ್ಲಿ ಈಗ ಎಷ್ಟು ಜನ ಕನ್ನಡ ಬಳಸುತ್ತಾರೆ ಅನ್ನೋದು ಯಕ್ಷಪ್ರಶ್ನೆ. ಅಂಕಿಅಂಶಗಳು ಗಾಬರಿ ಹುಟ್ಟಿಸುತ್ತವೆ. ರಾಜ್ಯದ ರಾಜಧಾನಿಯಲ್ಲಿ ಇಂದು ಕೇವಲ ಶೇ.37ರಷ್ಟು ಮಂದಿ ಮಾತ್ರ ಕನ್ನಡ ಬಳಸುತ್ತಾರೆ. ಇನ್ನುಳಿದವರಿಗೆ ಕೇವಲ "ಕನ್ನಡ ಬರುತ್ತಾ?"

ಯಾವುದೇ ಕನ್ನಡಿಗನಾಗಲಿ ತಾನು ಇನ್ನೊಬ್ಬರೊಂದಿಗೆ ಮಾತನಾಡುವಾಗ ಮೊದಲು ಕೇಳುವ ಪ್ರಶ್ನೆ ನಿಮಗೆ "ಕನ್ನಡ ಬರುತ್ತಾ?".

'ನೀವು ಬೆಂಗಳೂರಿನಲ್ಲಿ ಯಾರನ್ನಾದರೂ ವಿಳಾಸ ಕೇಳ್ಬೇಕಾ? ಅಥವಾ ಪ್ರಶ್ನೆಯೊಂದಕ್ಕೆ ಉತ್ತರಿಸಬೇಕೆಂದರೆ, ಹಿಂದಿ ಬಿಟ್ಟರೆ ಇಂಗ್ಲೀಶ್ ಅತ್ಯಂತ ಬಳಕೆಯಾಗುವ ಭಾಶೆ. ಐಟಿ ಕಂಪನಿಯಲ್ಲಿನ ಇಬ್ಬರು ಕನ್ನಡಿಗರು ಎಲ್ಲರಿಗೂ ಅರ್ಥವಾಗುವ ಭಾಶೆಯನ್ನು ಬಳಸುತ್ತಾರೆಂಬುದು ಜನಪ್ರಿಯ ಸಂಗತಿ.

ರಸ್ತೆ ಬದಿಯಲ್ಲಿ ಕೂರುವ ಮಾರಾಟಗಾರರು, ಅಂಗಡಿ ಮಾಲೀಕರು ಎಲ್ಲರಿಗೂ ಈ ಗರ ಬಡಿದಿದ್ದು, ಬೆಂಗಳೂರಿನಲ್ಲಿ ಯಾವುದೇ ಅಂಗಡಿಗೆ ಕಾಲಿರಿಸಿ, "ಕನ್ನಡ ಬರುತ್ತಾ?" ಅನ್ನೋ ಪ್ರಶ್ನೆ ಥಟ್ಟನೆ ಎದುರಾಗುತ್ತದೆ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಸಂಭಾಷಣೆಯು ಕನ್ನಡೇತರ ಭಾಶೆಯಲ್ಲಿ ನಡೆಯುತ್ತದೆ. ಜನ ಕನ್ನಡದಲ್ಲಿ ಮಾತನಾಡುವ ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಟ್ಟಿದ್ದಾರೇನೋ ಅನಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ಎಂಜಿ ರೋಡಿನಲ್ಲಿ, ಕೋರಮಂಗಲದ ಬೀದಿಗಳಲ್ಲಿ ಕನ್ನಡ ಮಾತನಾಡುವುದು 'ಕೀಳು' ಎನ್ನುವ ಭಾವನೆಯನ್ನು ಜನ ಬಳಸಿಕೊಂಡುಬಿಟ್ಟಿದ್ದಾರೆ.

ನಗರದ ಶಾಪಿಂಗ್ ಮಾಲ್ ಗಳಂತೂ ಕನ್ನಡಕ್ಕೆ ನಿಷೇಧ ಹೇರಿದ್ದಾವೇನೋ ಅನಿಸುವಷ್ಟರ ಮಟ್ಟಿಗೆ ಜನ ಕನ್ನಡವನ್ನು ತಿರಸ್ಕರಿಸಿದ್ದಾರೆ. ಮಾತನಾಡುವ ಮೊದಲು, ಕೇಳಿಸಿಕೊಳ್ಳುವ ವ್ಯಕ್ತಿಗೆ ಆ ಭಾಶೆ ಬರುತ್ತಾ ಅಂಥ ಖಾತ್ರಿ ಪಡಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರಿನ ಝಗಝೈಸುವ ಪಬ್ ನಲ್ಲಿ ಯಾರಾದ್ರೂ 'ಒಂದು ಗ್ಲಾಸ್ ಬಿಯರ್ ಕೊಡ್ತೀರಾ" ಅನ್ನೋದು ಅವಮಾನಕರ. "ಸ್ವಲ್ಪ ಮೆನು ಕಾರ್ಡ್ ಕೊಡ್ತೀರಾ" ಅನ್ನೋದು ಹೋಗಿ ಈಗ "Can I have the menu please?" ಅನ್ನೋದು ಚಾಲ್ತಿಯಲ್ಲಿದೆ.

ವಸ್ತುನಿಷ್ಟ ವರದಿ ನೀಡೋದಾದ್ರೆ, ಮರಾಠಿ ಈಗಲೂ ಮುಂಬಯಿಯ ಬೃಹತ್ ಹಾಗೂ ಸಾಮಾನ್ಯವಾಗಿ ಅತ್ಯಂತ ಹೆಚ್ಚು ಬಳಕೆಯಾಗುವ ಭಾಷೆಯಾಗಿದೆ. ಆಶ್ಚರ್ಯದ ಸಂಗತಿ ಎಂದರೆ, ಮುಂಬಯಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಪ್ರದೇಶಗಳಿಂದ ಬಂದ ಜನರನ್ನು ಹೊಂದಿದೆ. ಇನ್ನು ಮತ್ತೊಂದು ಮಹಾನಗರ ಚೆನ್ನೈನಲ್ಲಿ ನೀವು ಹೆಚ್ಚು ಕಾಲ ಉಳಿಯಬೇಕಾದರೆ ಒಂದು ನಿಮಗೆ ತಮಿಳು ಗೊತ್ತಿರಬೇಕು ಇಲ್ಲಾ ನೀವು ರಜನೀಕಾಂತ್ ಅಭಿಮಾನಿಯಾಗಿರಬೇಕು. ಮತ್ತೊಂದು ಐಟಿ ಹಬ್ ಹೈದರಾಬಾದ್ ನಲ್ಲಿ ತೆಲುಗು ಎನ್ನುವುದು ಆಚರಣೆಯಲ್ಲಿರುವ ಸಂಪ್ರದಾಯವಾಗಿಬಿಟ್ಟಿದೆ. ಇನ್ನು ಮಲ್ಲುಗಳು(ಮಲಯಾಳಿಗಳು) ವಿಶ್ವದ ಯಾವುದೇ ಭಾಗದಲ್ಲಿರಲಿ, ಮಲಯಾಳಂ ಅವರ ರಕ್ತದಲ್ಲಿ ಹರಿಯುತ್ತದೆ. ಆದರೆ, ಕನ್ನಡದ ವಿಷಯಕ್ಕೆ ಬಂದರೆ ಮಾತ್ರ, ಅದು ಯಾವಾಗಲೂ "ಕನ್ನಡ ಬರುತ್ತಾ", ಅದರ ನಂತರ "ನಮಸ್ಕಾರ"...

"ಸುವರ್ಣ ಕರ್ನಾಟಕ" ಎಂದು ರಾಜ್ಯಾದ್ಯಂತ ಘೋಷಿಸಿರುವ ಸಂದರ್ಭದಲ್ಲಿ ಹಾಗೂ ನವೆಂಬರ್ ನಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸುವ ಸಂದರ್ಭದಲ್ಲಿ ಮಾತ್ರ "ಕನ್ನಡ" ಬಳಕೆಯಾಗಿ ಉಳಿದ ಸಮಯ "ಎನ್ನಡ" ಎನ್ನುವಂತಾಗದೆ, ಕರ್ನಾಟಕದ ಗಾಳಿ, ನೀರು, ಮಣ್ಣು ಬಳಸುವ ಪ್ರತಿಯೊಬ್ಬರಿಗೂ "ಕನ್ನಡ" ಉಸಿರಾಗಬೇಕಲ್ಲವೇ? ಬನ್ನಿ ಕನ್ನಡಿಗರೇ, ನಾವೆಲ್ಲರೂ ಈ ನಿರಭಿಮಾನ, ದುರಭಿಮಾನಗಳಿಂದ ಹೊರಬಂದು "ಕನ್ನಡ ಡಿಂಡಿಮ" ಬಾರಿಸುತ್ತ, "ಕನ್ನಡ ಬಾವುಟ" ಹಾರಿಸೋಣ.

ಸಿರಿಗನ್ನಡಂ ಗೆಲ್ಗೆ

ಸೂಚನೆ:
ಸಂಪದ ಓದುಗರಿಗೆಲ್ಲರಿಗೂ ನನ್ನ ಆತ್ಮೀಯ ನಮಸ್ಕಾರ. ನನ್ನ ಲೇಖನಗಳು ಹಿಂದೆಂದೂ ಕಾಣದಷ್ಟು ಓದುಗರನ್ನು, ಪ್ರತಿಕ್ರಿಯೆಗಳನ್ನು ಪಡೆಯುವಂತೆ ಮಾಡಿದ ಈ ನನ್ನ ಕನ್ನಡ ಅನುವಾದ ಲೇಖನದ ಮೂಲ(ಇಂಗ್ಲೀಶ್) ಲೇಖಕರಾದ ಶ್ರೀ ಅಭಿಷೇಕ್ ಅಯ್ಯಂಗಾರ್ ಅವರನ್ನು ನಿಮಗೆಲ್ಲಾ ಪರಿಚಯಿಸಲು ಸಂತೋಷವಾಗುತ್ತದೆ. ಓದುಗರಾದ ಶ್ರೀಸಂಗನಗೌಡರು ಅವರ ಇಂಗ್ಲೀಶ್ ಲೇಖನದ ಕೊಂಡಿಯನ್ನು ನನಗೆ ಕಳುಹಿಸಿದಾಗ ಅವರಿಗೆ ಬರೆದು ಅವರ ಲೇಖನವನ್ನು ಹೀಗೆ ಕನ್ನಡಕ್ಕೆ ಅನುವಾದಿಸಿರುವ ಕುರಿತು ತಿಳಿಸಿದೆ. ಅದಕ್ಕೆ ತಾವಾಗಿಯೇ ನನಗೆ ಕರೆ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಅವರು, ಕನ್ನಡಿಗರೆಲ್ಲರೂ ಕನ್ನಡದ ಕೆಲಸವನ್ನು ಹೆಚ್ಚೆಚ್ಚು ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅವರು, ಕನ್ನಡ ನಾಟಕಗಳು, ಬರಹ ಇನ್ನೂ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಇಂಗ್ಲೀಶ್ ಬ್ಲಾಗಿನ ಕೊಂಡಿಯನ್ನು ಇಲ್ಲಿ ಕಾಣಬಹುದು.

http://thoughtsunparalleled.wordpress.com/2008/06/27/kannadabarutha/

  • ಭಾಷೆ-ಕನ್ನಡ
~.~
  • Login or register to post comments
  • 1148 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 3:34pm — maatumouna

ಉ: ನಿಮಗೆ ಕನ್ನಡ ಬರುತ್ತಾ?

maatumouna's picture

ಪ್ರಿಯ ಸ್ನೇಹಿತ ಶಿವಕುಮಾರ್,

ಬೆಂಗಳೂರಿನಲ್ಲಿ ಅಥವಾ ಕರ್ನಾಟಕದಲ್ಲಿ ನಾವು [ಅಂದರೆ ಕನ್ನಡಿಗರು] ಬೇರೆ ಭಾಷೆ ಮಾತನಾಡುವ ಜನರು ಬಂದಾಗ ಅವರು ಇಲ್ಲಿಯ ಭಾಷೆಯನ್ನು ಪ್ರೀತಿಸುವಂತಹ ವಾತಾವರಣ ನಾವಿನ್ನು ನಿರ್ಮಿಸಿಲ್ಲ. ನಮ್ಮ ಈ ಪರಭಾಷಾ ಸಹಿಷ್ಣತೆ ಒಳ್ಳೆಯತನದಿಂದಾಗಿ ನಮ್ಮ ಮನೆಯಲ್ಲಿಯೇ ನಾವು ನಮ್ಮ ಅಸ್ತಿತ್ವಕ್ಕಾಗಿ ಹೋರಾಡುವಂತಹ ಪರಿಸ್ಥಿತಿ ಬಂದಿದೆ.

ನವೀನ ಕೆ. ಎಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 3:52pm — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ನವೀನ್,

ನಮಸ್ಕಾರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನನ್ನ ಪೂರ್ಣ ಹೆಸರು ಶಶಿಕುಮಾರ್. ನೀವು ಹೇಳುವುದು ಸರಿ. ಆದರೆ, ಪರಭಾಷಾ ಸಹಿಷ್ಣುತೆ ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಅದು ನಮ್ಮ ನಿರಭಿಮಾನ ಅಥವಾ ದುರಭಿಮಾನವನ್ನು ತೋರಿಸುತ್ತದೆ ಅಷ್ಟೆ. ನನ್ನ ತಾಯಿ ಸುಂದರವಾಗಿಲ್ಲ ಎಂದೋ, ಹಳ್ಳಿಯವಳು ಎಂದೋ, ಸುಂದರವಾಗಿರುವವರನ್ನು, ನಗರದವರನ್ನು ನನ್ನ ತಾಯಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನನ್ನ ಪ್ರಶ್ನೆ. ತಾಯಿ ಹೇಗಾದರೂ ಇರಲಿ, ತಾಯಿ ತಾಯಿಯೇ. ಹಾಗೆಯೇ, ತಾಯಿ ಭಾಷೆ ಕೂಡ ಅಲ್ಲವೇ?

ವಿಶ್ವಾಸದಿಂದ,
ಶಶಿ

Mobile: 9886484937
Personal Blog: http://sampada.net/user/shashikannada

Personal Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:08am — sushil

ಉ: ನಿಮಗೆ ಕನ್ನಡ ಬರುತ್ತಾ?

sushil's picture

ನಿಜ.ಎಲ್ಲೆಲ್ಲೂ ಕನ್ನಡಮಯವಾಗಬೇಕು.ಇದು ನಮ್ಮ ಕನಸು.ನನಸಾಗುವ ದಿನ ದೂರವಿಲ್ಲ.ಸಂಪದಿಗರ ಹಾಗು ಕನ್ನಡಪ್ರೇಮಿಗಳ ಪ್ರೀತಿಯೇ ಇದಕ್ಕೆ ಸಾಕ್ಷಿ.ಕನ್ನಡಕ್ಕೆ ಕನ್ನಡಿಗರ ಬಗ್ಗೆ ಯಾವ ಬೈಗುಳವೂ ನನಗೆ ಹಿಡಿಸುವುದಿಲ್ಲ.ಅದರ ಅಗತ್ಯವೂ ಇಲ್ಲ.ನಾವೆಲ್ಲರೂ ಎಲ್ಲ ಜವಾಬ್ದಾರಿಯೂ ನಮ್ಮ ಮೇಲೆಯೇ ಇದೆಯೇನೋ ಎನ್ನುವಂತೆ ದುಡಿಯೋಣ. ನಾವು ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿರುವ ಜನರಿಗೆ ತಿಳಿಹೇಳೋಣ.ಹೋದಲ್ಲೆಲ್ಲ ಕನ್ನಡವನ್ನೇ ಮಾತನಾಡೋಣ..ಅದು ಮಾಲ್,ಥೇಟರ್,ಪಿಜ್ಜಾ ಹಟ್,ಇನ್ಯಾವುದೇ ಸ್ಥಳವಾಗಿರಲಿ.ಬೆಂಗಳೂರು ಕನ್ನಡಮಯವಾಗಬೇಕು ಇದಕ್ಯಾರ ಅಪ್ಪಣೆಯ ಅಗತ್ಯವಿಲ್ಲ.ನಮ್ಮೆಲ್ಲರ ಹನಿ ಹನಿ ಕನಸುಗಳು ಸಾಕಾರಗೊಂಡು ಹೊಳೆಯಾಗಿ ಹರಿಯಲಿ!!

-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:13am — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಸುಶೀಲ್,

ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ. "ನಾವೆಲ್ಲರೂ ಒಬ್ಬರಿಗೊಬ್ಬರು ಜವಾಬ್ದಾರರು" ಎಂಬ ಭಾವ ಒಂದು ಇದ್ದಲ್ಲಿ, ನಮ್ಮೆಲ್ಲಾ ಪ್ರಾಮಾಣಿಕ ಪ್ರಯತ್ನಗಳು ಖಂಡಿತ ಫಲಿಸುತ್ತವೆ. ಆ ದಿಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ನಡೆಯೋಣ. ಇದು ಕೇವಲ ನಮ್ಮ ನಾಡು, ನುಡಿ, ಸಂಸ್ಕೃತಿಗೆ ಮಾತ್ರ ಸೀಮಿತವಾಗದಿರಲಿ. ಕಡೆಯದಾಗಿ "ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ, ನಾವು ಮನುಜರು" ಅಲ್ಲವೇ?

"ಕಟ್ಟೋಣ ನಾವು, ಹೊಸ ನಾಡೊಂದನು, ರಸದ ಬೀಡೊಂದನು"

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

Mobile: 9886484937
Personal Blog: http://sampada.net/user/shashikannada

Personal Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 4:10pm — Chamaraj

ಉ: ನಿಮಗೆ ಕನ್ನಡ ಬರುತ್ತಾ?

Chamaraj's picture

ಶಶಿ ಅವರೇ,

ನನಗೂ ಈ ವಿಷಯದ ಈ ಮೇಲ್‌ ಬಂದಿದೆ. ರಾತ್ರಿ ಅನುವಾದ ಮಾಡಬೇಕು ಅಂದುಕೊಂಡಿದ್ದೆ. ಅಷ್ಟರೊಳಗೆ ನೀವು ಅನುವಾದಿಸುವ ಮೂಲಕ ಕನ್ನಡ ಪ್ರೀತಿ ವ್ಯಕ್ತಪಡಿಸಿದ್ದೀರಿ. ನನಗೆ ಗೊತ್ತಿರುವ ಎಲ್ಲರಿಗೂ ಈ ಲೇಖನದ ಕೊಂಡಿ ಕಳಿಸಿದ್ದೇನೆ.

ಕನ್ನಡ ಬರುತ್ತಾ ಎಂಬುದು ಕೇವಲ ಪ್ರಶ್ನೆಯಾಗಿ ಉಳಿದಿಲ್ಲ. ಅದು ನಿರಭಿಮಾನಕ್ಕೆ, ಸತ್ತು ಹೋಗಿರುವ ಸ್ಪಂದನೆಗೆ, ಕನ್ನಡಿಗರ ಹೇಡಿತನಕ್ಕೆ ಹಿಡಿದ ವ್ಯಂಗ್ಯ ಕನ್ನಡಿ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 9:50am — keerthi2kiran

ಉ: ನಿಮಗೆ ಕನ್ನಡ ಬರುತ್ತಾ?

keerthi2kiran's picture

ನಾನೂ ಕೂಡ... Smiling
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:17am — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಕೀರ್ತಿ ಕಿರಣ್,

ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ. "ನಾವೆಲ್ಲರೂ ಒಬ್ಬರಿಗೊಬ್ಬರು ಜವಾಬ್ದಾರರು" ಎಂಬ ಭಾವ ಒಂದು ಇದ್ದಲ್ಲಿ, ನಮ್ಮೆಲ್ಲಾ ಪ್ರಾಮಾಣಿಕ ಪ್ರಯತ್ನಗಳು ಖಂಡಿತ ಫಲಿಸುತ್ತವೆ. ಆ ದಿಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ನಡೆಯೋಣ. ಇದು ಕೇವಲ ನಮ್ಮ ನಾಡು, ನುಡಿ, ಸಂಸ್ಕೃತಿಗೆ ಮಾತ್ರ ಸೀಮಿತವಾಗದಿರಲಿ. ಕಡೆಯದಾಗಿ "ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ, ನಾವು ಮನುಜರು" ಅಲ್ಲವೇ?

"ಕಟ್ಟೋಣ ನಾವು, ಹೊಸ ನಾಡೊಂದನು, ರಸದ ಬೀಡೊಂದನು"

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

Mobile: 9886484937
Personal Blog: http://sampada.net/user/shashikannada

Personal Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:15am — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಚಾಮರಾಜರವರೇ,

ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ. "ನಾವೆಲ್ಲರೂ ಒಬ್ಬರಿಗೊಬ್ಬರು ಜವಾಬ್ದಾರರು" ಎಂಬ ಭಾವ ಒಂದು ಇದ್ದಲ್ಲಿ, ನಮ್ಮೆಲ್ಲಾ ಪ್ರಾಮಾಣಿಕ ಪ್ರಯತ್ನಗಳು ಖಂಡಿತ ಫಲಿಸುತ್ತವೆ. ಆ ದಿಸೆಯಲ್ಲಿ ನಾವೆಲ್ಲರೂ ಒಟ್ಟಾಗಿ ನಡೆಯೋಣ. ಇದು ಕೇವಲ ನಮ್ಮ ನಾಡು, ನುಡಿ, ಸಂಸ್ಕೃತಿಗೆ ಮಾತ್ರ ಸೀಮಿತವಾಗದಿರಲಿ. ಕಡೆಯದಾಗಿ "ನಾವೆಲ್ಲರೂ ಒಂದೆ ಜಾತಿ, ಒಂದೆ ಮತ, ಒಂದೆ ಕುಲ, ನಾವು ಮನುಜರು" ಅಲ್ಲವೇ?

"ಕಟ್ಟೋಣ ನಾವು, ಹೊಸ ನಾಡೊಂದನು, ರಸದ ಬೀಡೊಂದನು"

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

Mobile: 9886484937
Personal Blog: http://sampada.net/user/shashikannada

Personal Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 4:41pm — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

"ಸುಮಾರು 2000 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಭಾರತದ 3ನೇ ಪ್ರಾಚೀನ ಭಾಶೆ."
ತಪ್ಪು..

ಕನ್ನಡವು ತಮಿಳಿನಶ್ಟೇ ಹಳೆಯದು.

ನಮ್ಮ ದೇಶದಲ್ಲೇ ಎಲ್ಲದಕ್ಕಿಂತ ಹಳೆಯ ನುಡಿಗಳು ಕನ್ನಡ, ತಮಿಳು ಮತ್ತು ಪ್ರಾಕ್ರುತ..
ನಮ್ಮ ದೇಶದಲ್ಲಿ ಬದುಕಿರುವ ಹಳೆಯ ನುಡಿಗಳು ಕನ್ನಡ, ತಮಿಳು
ನಮ್ಮ ದೇಶದಲ್ಲಿ ತನ್ನದೇ ಆದ ಲಿಪಿ ಮತ್ತು ಅಂಕಿಗಳು ಇರುವ ಬಲು ಹಳೆಯ ಒಂದೇ ಒಂದು ನುಡಿ ಕನ್ನಡ. ( ತಮಿಳಿಗೆ ತನ್ನದೇ ಅಂಕಿ ಇಲ್ಲ )

ಕನ್ನಡ ಮತ್ತು ತಮಿಳು (ಮತ್ತು ದ್ರಾವಿಡ ನುಡಿಗಳು) ಇವೆರಡೇ ನಮ್ಮ ನೆಲದಲ್ಲೇ ಹುಟ್ಟಿಬೆಳೆದ ಬಲುಹಳೆಯದಾದ ನುಡಿಗಳು..

ಬೆಂಗಳೂರಲ್ಲಿ ಕನ್ನಡ ಚನ್ನಾಗೇ ಇದೆ..! ದೊಡ್ಡಪಟ್ಟಣಗಳಲ್ಲಿ ಈ ತೊಂದರೆ ಇದ್ದುದೇ.. ಅದರಲ್ಲಿ ಮುಂಬಯ್, ಡೆಲ್ಲಿ, ಕೊಲ್ಕತ್ತಗಳಿಗೆ ಹೋಲಿಸಿದರೆ ಬೆಂಗಳೂರು ವಾಸಿ...! ಚನ್ನಯ್ ಅಲ್ಲೂ ಹೆಚ್ಚು ಮಾತಾಡೋರು ತೆಲುಗರು....! Smiling

ಆದರೂ ತಮ್ಮ ನುಡಿ ಮೇಲೆ ಅಕ್ಕರೆ ಮತ್ತು ಎಚ್ಚರ ಬೇಕು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 10:21pm — hamsanandi

ಉ: ನಿಮಗೆ ಕನ್ನಡ ಬರುತ್ತಾ?

hamsanandi's picture

ಮಹೇಶರೆ,

ನೀವು ಹೇಳಿರೋದೆಲ್ಲ ಸರಿ ಇದ್ರೂ, ಬೆಂಗಳೂರಿನಲ್ಲಿ ಕನ್ನಡ ಚೆನ್ನಾಗೇ ಇದೆ ಎನ್ನೋದು ಮಾತ್ರ ಅನುಮಾನ.. ಹಂಗೇ ಅಂದ್ಕೋತಾ ಇದ್ರೆ, ನಾವು ಕಣ್ಣಿದ್ದೂ ಕುರುಡಾದ ಹಾಗೆ.

ಚೆನ್ನೈ ನಲ್ಲಿ ತೆಲುಗರು ಬಹಳ ಇದ್ದಾರೆ ನಿಜ ( ಸುಮಾರು ೩೦% - ೪೦% ಇರಬಹುದು). ಆದರೆ, ಅವರು ಯಾರೂ ತೆಲುಗನ್ನ ಮನೆಯಿಂದ ಹೊರಗೆ ತರೋದಿಲ್ಲ. ಏನಿದ್ರೂ ಮನೆಮಾತಾಗಿಟ್ಕೊಂಡಿದಾರೆ. ಅಂಗಡಿ ಮುಂಗಟ್ಟಲ್ಲಿ ಯಾರೂ ತೆಲುಗು ಮಾತಾಡೋದು ಕಾಣಲ್ಲ. (ಸ್ವಂತ ಅನುಭವ)

ಬೆಂಗಳೂರಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋದರೆ, ಅವರು ನನ್ನ ಕೈಲಿ ಮಾತಾಡಿದ್ದು ಇಂಗ್ಲಿಷ್- ಹಿಂದಿಯಲ್ಲಿ! ನಾನು ಬಿಡಿ, ಕನ್ನಡದಲ್ಲೇ ಮಾತಾಡಿದೆ. ಅಂಗಡಿಯವನು ಕನ್ನಡದಲ್ಲಿ ಮಾತಾಡ್ದಿದ್ದ ಕಡೆ ನಾನು ಜಾಗ ಖಾಲಿ ಮಾಡಿದೆ. ಅವರ ಜೊತೆ ನಮಗೇನು ವ್ಯಾಪಾರ?

ಅಷ್ಟಕ್ಕೂ ಈ ಅನುಭವಗಳು ಆಗಿದ್ದು ಯಾವುದೋ ಮಾಲ್ ನಲ್ಲೋ, ಕೋರಮಂಗಲ ಇಂದಿರಾನಗರದಲ್ಲೂ ಅಲ್ಲ! ಮೆಜೆಸ್ಟಿಕ್, ಜಯನಗರ ಮೊದಲಾದ ಕಡೆ.

ಇದ್ದದ್ದರಲ್ಲು ಬಸವನಗುಡಿ ಚಾಮರಾಜಪೇಟೆ ಗಾಂಧಿಬಜಾರುಗಳೇ ವಾಸಿ. ವ್ಯಾಪಾರಿಗಳು ಕನ್ನಡವನ್ನು ಇನ್ನೂ ಉಳಿಸಿ(ಕೊಂಡಿ)ದ್ದಾರೆ Smiling

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 8:59am — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

Smiling ನನ್ನಿ....

ಇದಕ್ಕೆ ಓಸುಗರ ನಮ್ಮ ಬೆಂಗಳೂರಿನ ಹಳೇಕನ್ನಡಿಗರೇ.. ನನ್ನ ಜೊತೆ ಕೂಡ ಒಂದು ಮಣ ಇಂಗ್ಲೀಶ್ ಬರೆಸಿ ಮಾತಾಡ್ತಾತೆ ಇಲ್ಲಿನ ನೆಂಟರು Smiling

ನಾವು ಏನಾರ ಹೇಳಕ್ಕೆ ಹೋದ್ರೆ ನೀವು ಹಾಸನ-ಮಂಡ್ಯದ ಗಮಾರುಗಳು ಅಂತಾರೆ ;( !

ಬೆಂಗಳೂರಿನ( + ಕರಾವಳಿ ಮತ್ತು ಮಲೆನಾಡಿನ ಕೊಂಚ ) ಮಂದಿ ಬಲು ಜಾಣರು, ಸುಸಂಸ್ಕೃತರು ಅಂತ ತಾವೇ ಅಂದುಕೊಂಡಿದ್ದಾರೆ.. ಅವರ ಸುಸಂಸ್ಕೃತಿಯ ಮುಂದೆ ನಮ್ಮಂತಹ ಹಳ್ಳಿ ಗಾಮಾಡುಗಳು ಏನು ತಾನೆ ಹೇಳಿಯಾವು..

ಬೆಂಗಳೂರು ಸರಿ. ಮಂಗಳೂರಲ್ಲೂ ಕನ್ನಡ ಇಲ್ಲ.... Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:38am — roshan_netla

ಉ: ನಿಮಗೆ ಕನ್ನಡ ಬರುತ್ತಾ?

roshan_netla's picture

ಮಂಗಳೂರಿನಲ್ಲಿ ನೀವಾಗೆ ಕನ್ನಡ ಮಾತನಾಡಿದರೆ ನಿಮಗೆ ೮೦% ಕನ್ನಡ ದಲ್ಲಿ ಉತ್ತರ ಸಿಕ್ಕುತ್ತದೆ..ನೀವೇ ಬೇರೆ ಬಾಷೆ ಮಾತನಾಡಿ ಅವರಿಂದ ಕನ್ನಡ ನಿರೀಕ್ಷಿಸಲಾಗದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:50am — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

Smiling ನನ್ನಿ.. ಬಲು ಹೆಮ್ಮೆಯ ಸಂಗತಿ...!! Smiling Laughing out loud
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:56am — vikashegde

ಉ: ನಿಮಗೆ ಕನ್ನಡ ಬರುತ್ತಾ?

vikashegde's picture

ಶೇ ೮೦ ಅಲ್ಲ ಶೇ. ೧೦೦ ಕನ್ನಡದಲ್ಲೇ ಸಿಗುತ್ತದೆ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:58am — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ತಿದ್ದುಪಡಿಗೆ ನನ್ನಿ Laughing out loud ...
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 11:14am — roshan_netla

ಉ: ನಿಮಗೆ ಕನ್ನಡ ಬರುತ್ತಾ?

roshan_netla's picture

೮೦%ಕನ್ನಡ ಉತ್ತರ ಅಲ್ಲ ೮೦% ಜನ ಕನ್ನಡ ಉತ್ತರ ಕೊಡುತ್ತಾರೆ ಅಂದಿದ್ದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 1:30pm — ವೈಭವ

ಉ: ನಿಮಗೆ ಕನ್ನಡ ಬರುತ್ತಾ?

ವೈಭವ's picture

ಹಾಗಾದರೆ,

ಮಂಗಳೂರಿನ ಹಲವು ಕಡೆ ಮಲೆಯಾಳದ ಹಲಗೆಬರಹಗಳು ಕಾಣುಬರುವುದು ಏತಕ್ಕೆ? ಇನ್ನೂ ಕೊಲ್ಲೂರಂತೂ ಏನೋ ಕೇರಳಕ್ಕೆ ಬಂದಿದ್ದೀವ ಅನ್ಸುತ್ತೆ? ಆಟೊಂದು ಮಲೆಯಾಳದ ಹಲಗೆ ಬರಹಗಳು. ಇನ್ನು ಮಣಿಪಾಲದಲ್ಲಂತೂ ಬರೀ ಇಂಗಲೀಸೇ. ಕನ್ನಡವೂ ಇಲ್ಲ. ತುಳುವು ಇಲ್ಲ.

ಇತ್ತೀಚೆಗೆ ಸುದ್ದಿಯೋಲೆಗಳಲ್ಲೆಲ್ಲ ಬಂದಿತ್ತು ಮಂಗಳೂರಿನ ರಯ್ಲು ನಿಲ್ದಾಣ ಮಲೆಯಾಳದಿಂದ ತುಂಬು ತುಳುಕುತ್ತಿದೆ ಅಂತಾ? ದಿಟವಾ?

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 5:50pm — roshan_netla

ಉ: ನಿಮಗೆ ಕನ್ನಡ ಬರುತ್ತಾ?

roshan_netla's picture

ಸಾರ್ ಮಂಗಳೊರಿನಲ್ಲಿ ಕೇರಳದಿಂದ ಅನೇಕ ಮಂದಿ ವ್ಯಾಪಾರ ಕ್ಕಾಗಿ ಹಾಗು ಇಲ್ಲಿನ ಆಸ್ಪತ್ರೆ ಗಳಿಗೆ ಬರುತ್ತಾರೆ ಅವರನ್ನು ಆಕರ್ಶಿಸಲು ಈ ವ್ಯಾಪಾರಿಗಳು ಮಳಯಾಳಂನಲ್ಲಿ ಹಲಗೆ ಗಳಲ್ಲಿ ಮಲಯಾಳಂ ನಲ್ಲಿ ಬರೆಸಿದ್ದಾರೆ ಅನ್ಸುತ್ತೆ. ಹೆಚ್ಚಾಗಿ ಮೆಡಿಕಲ್ ಸ್ಟೊರ್ನವರು ಹಾಗು ದಾವಕಾನೆ ಗಳು ಹಾಕಿಕೊಂಡಿವೆ..ಆದರೆ ಬರಿ ಮಲಯಾಳಂ ನಲ್ಲಿ ಇಲ್ಲ.ಆದರೆ ನೀವು ಹೇಳಿರುವ ರೈಲ್ವೆ ಕಥೆ ಸರಿ ಅಲ್ಲಿ ಕನ್ನಡದ ಬಿಡಿ ತುಳುವಿನವರು ಕೂಡ ಕೆಲಸದಲ್ಲಿ ಇರುವಂತೆ ಕಾಣಿಸೊದಿಲ್ಲ.ಆದರೆ ಮಂಗಳೊರಿನಲ್ಲಿ ಕನ್ನಡಕ್ಕೆ ಬರವಿಲ್ಲ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 11:00am — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಮಹೇಶ್,

ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ. "ಸುಮಾರು 2000 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಭಾರತದ 3ನೇ ಪ್ರಾಚೀನ ಭಾಶೆ."
ತಪ್ಪು..ಎಂದು ಹೇಳಿದ್ದೀರಿ. ಹಾಗಾದರೆ, ಸರಿ ಯಾವುದು ಎಂದು ದಯ ಮಾಡಿ ತಿಳಿಸಿದಲ್ಲಿ ನನ್ನ ತಪ್ಪು ತಿದ್ದಿಕೊಳ್ಳಲು ಸಹಾಯವಾಗುತ್ತದೆ.

ಕನ್ನಡ, ತಮಿಳು ಮತ್ತು ಪ್ರಾಕೃತ..ಮಾತ್ರ ನಮ್ಮ ದೇಶದಲ್ಲೇ ಎಲ್ಲದಕ್ಕಿಂತ ಹಳೆಯ ನುಡಿಗಳು ಎಂದು ಹೇಳಿದ್ದೀರಿ. ಹಾಗಾದರೆ, ಸಂಸ್ಕೃತ?

"Sanskrit, the classical language of India brought to us by the Aryans, and also one of the oldest languages of the world. There’s a whole corpus of classical literature, the earliest being the Rig Veda of 1200 BC".

"But Prakrit dialects were already on their steady journey of spreading and mixing. Buddhists picked up one of these dialects around the 6th century BC and developed it into Pali. The process of simplification of the dialects continued throughout the Middle Indo-Aryan stage, culminating in the Apabhramsa stage in 600AD. Further modification of the regional Apabhramsas during 600-1000AD gave rise to the New Indo-Aryan languages of the present day".

ಹಾಗೆಯೇ, ತಾವು ಬುದ್ಧ ಬೋಧಿಸಿದ 'ಪಾಲಿ' ಭಾಷೆಯನ್ನು ಹೆಸರಿಸಿಲ್ಲ.

ಇನ್ನು ದ್ರಾವಿಡ ಭಾಷೆಗಳಲ್ಲಿ ಹಳೆಯದೆನಿಸಿರುವ ತಮಿಳು ಕ್ರಿಸ್ತಪೂರ್ವದಲ್ಲೇ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ(ನಾನು ಭಾರತೀಯ ಭಾಷಾ ಸಂಸ್ಥಾನದ Centre of Excellence for Classical Tamil ಯೋಜನೆಯ ಮುಖ್ಯಸ್ಥರಾಗಿರುವ ಡಾ.ಕೆ.ರಾಮಸಾಮಿಯವರಿಗೆ ಈ ಯೋಜನೆಯಲ್ಲಿ 2 ವರ್ಷಗಳ ಕಾಲ ಸಹಾಯಕನಾಗಿ ದುಡಿದಿದ್ದರಿಂದ ಈ ಕುರಿತು ತಕ್ಕ ಮಟ್ಟಿಗೆ ತಿಳಿದುಕೊಂಡಿದ್ದೇನೆ.

ಕನ್ನಡ ತಮಿಳಿನಷ್ಟೇ ಹಳೆಯದು ಎಂದು ವಾದಿಸಬಹುದಾದರೂ, ಅದಕ್ಕೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂಬುದು ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. "ತಮಿಳು ಕೆಲ ವಿಚಾರಗಳಲ್ಲಿ ಕನ್ನಡ ಭಾಷೆಯಿಂದ ಸ್ಫೂರ್ತಿ ಪಡೆದಿತ್ತು" ಎಂದು ನಮ್ಮ ದೇಶದ ಬಹು ಗಣ್ಯ ಶಾಸನ ತಜ್ಞರಲ್ಲೊಬ್ಬರಾದ ಶ್ರೀ ಐರಾವತಂ ಮಹಾದೇವನ್ ಉಲ್ಲೇಖಿಸಿದ್ದಾರೆ.

ಕನ್ನಡ ಸುಮಾರು 2,000 ವರ್ಷಗಳಷ್ಟು ಹಳೆಯದು ಎಂದು ಯಾವ ಅರ್ಥದಲ್ಲಿ ಹೇಳಿದೆ ಎಂದರೆ, ಪೂರ್ವ ಹಳೆಗನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಿದ್ದಕ್ಕೆ ಸಾಹಿತ್ಯಿಕ ಆಧಾರಗಳಿವೆ. ಯಾವುದೇ ಒಂದು ಭಾಷೆಯಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಬೇಕಾದಲ್ಲಿ ಆ ಭಾಷೆಯ ಆರಂಭಿಕ ಹಂತದಲ್ಲಿ ಸಾಧ್ಯವಿಲ್ಲ ಎಂದು ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಹಾಗಾಗಿ, ಭಾಷಾಶಾಸ್ತ್ರಜ್ಞರ ಒಂದು ಅಂದಾಜಿನ ಮೇಲೆ ಸುಮಾರು(ಖಚಿತವಾಗಿಯಲ್ಲ) 2,000 ವರ್ಷಗಳಷ್ಟು ಹಳೆಯದು ಎಂದು ಹೇಳಿದ್ದೇನೆ. ಈ ಕುರಿತು ಉಲ್ಲೇಖಗಳನ್ನು ತಾವು ಕೇಳಿದಲ್ಲಿ ನೀಡುತ್ತೇನೆ.

ತಮಿಳಿಗೆ ತನ್ನದೇ ಅಂಕಿಯಿಲ್ಲ" ಎನ್ನುವುದು ಸರಿ.

ಹಾಗೆಯೇ, ಮತ್ತೊಂದು ವಿಚಾರವೆಂದರೆ, ತಮಿಳಿನಲ್ಲಿ ಧ್ವನಿಸಬಹುದಾದ ಶಬ್ದಗಳಿಗೆ ಬೇಕಾಗುವಷ್ಟು ವರ್ಣಮಾಲೆ ಕೂಡ ಇಲ್ಲ ಎಂದು ಕೇಳಿದ್ದೇನೆ. ಅದನ್ನು ತಮಿಳಿಗರು ಆ ಭಾಷೆಯ ವೈಶಿಷ್ಟ್ಯವೆಂದೇ ಹೇಳುತ್ತಾರೆ.

ಈ ಕುರಿತು ಆರೋಗ್ಯಕರ ಚರ್ಚೆ ನಡೆಯುವುದಾದಲ್ಲಿ ಖಂಡಿತವಾಗಿಯೂ ಚರ್ಚೆ ಆರಂಭಿಸೋಣ. ಇದರಿಂದ ನಮ್ಮೆಲ್ಲಾ ಸಂಪದಿಗರಿಗೂ ಅನುಕೂಲವಾಗುತ್ತದೆ.

"ದೊಡ್ಡಪಟ್ಟಣಗಳಲ್ಲಿ ಈ ತೊಂದರೆ ಇದ್ದುದೇ.. " ಎಂಬುದು ಸರಿಯಾದರೂ, ನಾನೂ ಮುಂಬಯಿ, ಚೆನ್ನೈ ಮಹಾನಗರಗಳಲ್ಲಿ ವಾಸವಿದ್ದುದರಿಂದ ನನ್ನ ಪ್ರತ್ಯಕ್ಷ ಅನುಭವವೂ ಹೇಳಿಕೆಗಳಲ್ಲಿ ಸೇರಿದೆ. ಇಷ್ಟು ಸ್ಪಷ್ಟನೆ ತಮಗೆ ಸಾಕಾಗುತ್ತದೆ ಎಂದು ಭಾವಿಸುತ್ತೇನೆ.

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

Mobile: 9886484937
Blog: http://sampada.net/user/shashikannada
Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 11:47am — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ಶಶಿ ಅವರೇ

ಇಲ್ಲಿನ ಮಾತುಕತೆ ಬೇರೆಯಾಗಿದೆ.. ಅದಕ್ಕೆ ಚುಟುಕಾಗಿ ಹೇಳ್ತೀನಿ..

ನೀವು ವಿಕೀಪೀಡಿಯದಿಂದ ಕಾಪಿ ಮಾಡಿದ್ದೀರಿ...

ಸಂಪದದಲ್ಲೇ ಇದರ ಬಗ್ಗೆ ಹುಡುಕಬಹುದು...

೧) ವೇದಗಳು ಸಂಸ್ಕೃತದಲ್ಲಿ ಇಲ್ಲ... ವೇದಗಳು ವೇದಬಾಶೆಯಲ್ಲಿ ಇದ್ದು.. ಪಾಣಿನಿಯೇ ತಾನು ವೇದಬಾಶೆಯ ತಳಹದಿಯಲ್ಲಿ ಸಂಸ್ಕೃತವೆಂಬುದನ್ನು ಕಟ್ಟಿದ್ದಾಗಿ ಹೇಳಿದ್ದಾನೆ. ಸಂಸ್ಕೃತ ಹುಟ್ಟಿದ್ದು ಪಾಣಿನಿಯ ಅಶ್ಟಾದ್ಯಯಿಯಿಂದ.

ವೇದಬಾಶೆ ಮತ್ತು ಸಂಸ್ಕೃತಕ್ಕೂ ವ್ಯಾಕರಣದಲ್ಲಿ ಬೇಕಾದಶ್ಟು ವ್ಯತ್ಯಾಸಗಳಿದ್ದು.. ವೇದಬಾಶೆಯನ್ನು ಬೇರೆಯಾಗಿ ನೋಡಬೇಕು. ಈ ವೇದಬಾಶೆ ನಮ್ಮ ನೆಲದಲ್ಲಿ ಹುಟ್ಟದೇ ಅದು ಈಗಿನ ಇರಾಕ್ ಇಂದ ಬಂದುದು ಮತ್ತು ವೇದಬಾಶೆ ಮತ್ತು ಇರಾನಿ/ಪಾರಸೀ ಬಾಶೆ ಒಂದೇ ಬೇರಿನ ಕವಲುಗಳೆಂದು ತೋರಿಸಿದ್ದಾರೆ. ಅವೇಸ್ತಾ ಬಗ್ಗೆ ಓದಿರಿ.

೨) ಕನ್ನಡ ಮತ್ತು ತಮಿಳು ಸಮವಾಗಿ ಹಳೆಯವು ಎಂಬುದಕ್ಕೆ ಈಗಾಗಲೇ ಬೇಕಾದಶ್ಟು ಪುರಾವೆಗಳು ಸಿಕ್ಕಿದ್ದು.. ಅದರಲ್ಲಿ ಗೊಂದಲವೇ ಇಲ್ಲ..
ತಮಿಳಲ್ಲಿ ಏನಿದ್ದರು ದೊರೆತಿರುವ ಬರಹಗಳು ಹಳೆಯವು. ಕನ್ನಡವು ತಮಿಳಿಂದ ಇಲ್ಲವೇ ಪ್ರಾಕೃತದಿಂದ ಬರದೇ ಅದು ತನ್ನದೇ ನೆಲಗಟ್ಟಲ್ಲಿ ಹುಟ್ಟಿಬೆಳದು ಬಂದಿದೆ. ತಮಿಳ ಮತ್ತು ಕನ್ನಡ ಒಂದೇ ಬೇರಿನ ಕವಲುಗಳು..

೩) ಪಾಲಿ ಮುಂತಾದವು ಪ್ರಾಕೃತದ ಕಿರುನುಡಿಗಳು.. ಹಿಂದಿ, ಪಂಜಾಬಿ, ಮುಂತಾದವು ಪ್ರಾಕೃತದಿಂದ ಬಂದಿವೆ ಹೊರತು ಸಂಸ್ಕೃತದಿಂದ ಅಲ್ಲ. ನಮ್ಮ ದೇಶದಲ್ಲಿ ಸಿಕ್ಕಿರುವ ಬಲುಹಳೆಯ ಕಲ್ಬರಹ ಪ್ರಾಕೃತದಲ್ಲಿ ಇರುವುದು ಸಂಸ್ಕೃತದಲ್ಲಿ ಇಲ್ಲ.

ಇದು ಹೇಗೆ ಅಂದರೆ ಒಂದೇ ಬೇರುನುಡಿಯಿಂದ ಬಂದ ಕನ್ನಡ ತಮಿಳುಗಳ ವ್ಯಾಕರಣ ಒಂದೇ ಬಗೆಯಲ್ಲಿದೆ.. ಆದರೆ ಪಂಜಾಬಿ, ಹಿಂದಿ, ಮರಾಟಿಗಳ ವ್ಯಾಕರಣ ಸಂಸ್ಕೃತಕ್ಕೆ ಹೊಂದದೇ ಪ್ರಾಕೃತಕ್ಕೆ ಹೊಂದುವುದೆಂದು.. ಮರಾಟಿಯವೇ ಮಹಾರಾಷ್ಟ್ರಿಪ್ರಾಕೃತ ಎಂದು ಹೇಳಿಕೊಂಡಿದ್ದಾರೆ.

ಹಾಗೆ ನೋಡಿದರೆ ಸಂಸ್ಕೃತದಿಂದ ಎರವಲು ಒರೆಗಳು ನುಡಿಗಳಿಗೆ ಹೋಗಿದೆ ಹೊರತು, ಯಾವ ನುಡಿಯೂ ಅದರಿಂದ ಬಂದಿಲ್ಲ.

೪)ಒಂದು ನುಡಿ ಎಶ್ಟು ಹಳೆಯದು ಎಂದು ಹೇಳವುದು ಅವರ ದೊರೆತಿರುವ ಕಲ್ಬರಹಗಳ ಹಳಮೆಯಿಂದ ಅಲ್ಲ. ಹಲವು ನುಡಿಗಳು ಬರಹಕ್ಕೆ ತಡವಾಗಿ ಬಂದಿವೆ...

೫) ಸಂಸ್ಕೃತವನ್ನು ಹಲವು ಪಂಡಿತರು ಹೀಗೆ ನುಡಿಗಳನ್ನು ಹೋಲಿಸುವಾಗ ಎಣಿಕೆಗೆ ತೆಗೆದುಕೊಳ್ಳಲ್ಲ.. ಏಕೆಂದರೆ ಅದು ಆಡುನುಡಿಯಾಗಿ ಬಲು ಹೆಚ್ಚುಮಂದಿ ಮಾತಾಡಿದ್ದರ ಎಂಬುದು ಇನ್ನೂ ಅನುಮಾದದಲ್ಲಿದೆ.. ಸಂಸ್ಕೃತವು ಬರೀ ಬರಹನುಡಿಯಾಗಿದ್ದು ಅದನ್ನ ಆಡುನುಡಿಯಾಗಿ ಬಳಸಿಲ್ಲ ಅನ್ನೋದಿಕ್ಕೆ ಅದರಲ್ಲಿ ಬದುಕಿರುವ ನುಡಿಗಳಲ್ಲಿ ಸಿಗುವ ಬದಲಾವಣೆಗಳು/phases ಇರದೇ ಇರುವುದು ತೋರುವುದು.. ಕನ್ನಡ ಮತ್ತು ತಮಿಳು ಹಳೆ, ನಡು ಮತ್ತು ಹೊಸ ಮುಂತಾದ ಹಂತಗಳನ್ನು ತೋರಿವೆ.. ಇದು ಎಲ್ಲ ಬದುಕಿರುವ ನುಡಿಗಳಲ್ಲೂ ಇದೆ.. ಮರಾಟಿ, ಬಂಗಾಲಿಗೂ ಕೂಡ.

ಕನ್ನಡ ಪ್ರಾಕೃತದಶ್ಟೇ ಹಳೆಯದು, ಏಕೆಂದರೆ ತಮಿಳು ಪ್ರಾಕೃತದಶ್ಟೇ ಹಳೆಯದು, ಏಕೆಂದರೆ ತಮಿಳು ಕನ್ನಡದಶ್ಟೇ ಹಳೆಯದು.. !

ಕನ್ನಡ ಮತ್ತು ತಮಿಳು, ಸಂಸ್ಕೃತದಿಂದ ಇಲ್ಲವೇ ಪ್ರಾಕೃತದಿಂದ ಬಂದಿಲ್ಲ.. ಸಂಸ್ಕೃತ/ಪ್ರಾಕೃತ ವಲಸೆ ಬಂದ ಆರ್ಯರ ನುಡಿ ಎಂದು ನೀವು ನೀಡಿದ ಬರಹದ ತುಂಡೇ ಹೇಳುವುದು.. ಆದರೆ ಕನ್ನಡ/ತಮಿಳು ನುಡಿಗಾರರು ವಲಸೆ ಬಂದವರಲ್ಲ. ಅವರು ಇಲ್ಲಿಯೇ ಮೊದಲಿಂದಲೂ ನೆಲೆಸಿದವರು ಎಂದು ಲೆಮೂರಿಯ ಮತ್ತು ಕುವರಿಕಾಂಡಂ ತಿಯರಿಗಳು ಹೇಳುವುವು,, ಮತ್ತು ಹರಪ್ಪ ಮತ್ತು ಮಹೆಂಜದಾರೋಗಳಲ್ಲಿ ಸಿಕ್ಕಿರುವ ಹಳಯುಳಿಕೆ ದ್ರಾವಿಡ/ಕನ್ನಡರದ್ದಾಗಿದ್ದು ಆದೂ ಕೂಡ ಆರ್ಯ ಜನಾಂಗದ ದಾಳಿ ಮತ್ತು ವಲಸೆಗೆ ಪುರಾವೆ ಎಂದು ದೊಡ್ಡ ಸಂಸ್ಕೃತಪಂಡಿತ ಮ್ಯಾಕ್ಸ್ ಮುಲ್ಲರನ ವಾದವಾಗಿತ್ತು..

ಇದೆಲ್ಲ ಏನೋ ವಾದಗಳು.. ಕೆಲವು ಸರತಿ ’ನಂಬಿಕೆ’ಯ ಮುಂದೆ ಇವು ಸೋಲೋದು ದಿಟ.. ನನ್ನ ಸೊಂತ ಅನುಬವ.. Smiling

Smiling ಹುಸ್ಸಪ್ಪ!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 11:58am — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಮಹೇಶ್,

ನಾನು ವಿಕಿಪೀಡಿಯದಿಂದ ಕಾಪಿ ಮಾಡಿದ್ದಲ್ಲ. ಇಂಗ್ಲೀಶ್ ಉಲ್ಲೇಗಳನ್ನು ಮಾತ್ರ ಬೇರೆಡೆಯಿಂದ ತೆಗೆದುಕೊಂಡದ್ದು. ಉಳಿದದ್ದು ನಾನು ಓದಿದ್ದು, ತಿಳಿದದ್ದು. ತಾವು ದಯಮಾಡಿ http://www.indiasite.com/language/sanskrit.html ಗೆ ಭೇಟಿ ಕೊಡಿ. ನನ್ನ ಉಲ್ಲೇಖಗಳು ಅಲ್ಲಿಂದ ತೆಗೆದುಕೊಂಡಿದ್ದು. ಈ ಬಗ್ಗೆ ಖಚಿತವಾದ ವಿವರಗಳೊಂದಿಗೆ ಮತ್ತೆ ಬರೆಯುತ್ತೇನೆ.

ವಿಶ್ವಾಸದಿಂದ,
ಶಶಿ

Mobile: 9886484937
Blog: http://sampada.net/user/shashikannada
Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:11pm — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ನೀವು ನೀಡಿದ ಸಯ್ಟು ನಂಬಲು ತಕ್ಕುದಲ್ಲ..

ಇಲ್ಲಿ ನೋಡಿ ncyclopdia Britannica Article

http://ccat.sas.upenn.edu/~haroldfs/sars238/shortencybrit.html

Quote:

a form of Proto-Dravidian, or perhaps Proto-North Dravidian, must have been extensive in northern India before the advent of the Aryans. Apart from the survival of some islands of Dravidian speech, however, the process of replacement of the Dravidian languages by the Aryan tongues was entirely completed before the beginning of the Christian Era, after a period of bilingualism that must have lasted many centuries. Finally, the almost universal adoption of Indo-Aryan in the north and of Dravidian in the south has covered up the original linguistic diversity of India.

Quote:

Dravidian word in the Hebrew text of the Bible (tukkhiyim peacocks; cf. Tamil tokai tail of a peacock), the Dravidian languages enter history in Sanskrit and Greco-Roman texts. The Ceras, a south Indian dynasty, are possibly mentioned in the early Sanskrit text AitareyaA ranyaka. Katyayana, a grammarian of the 4th century BC, mentions the countries of Pandya (Tamil pantiya), Cola (Tamil cola), and Kerala, or Cera (Tamil cera)

Quote:

Of the Dravidian languages, Tamil has the oldest literature, paralleled in India only by that of Sanskrit. Its phonological and grammatical systems correspond in many points to the ancestral parent language, called Proto-Dravidian.

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:11pm — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ನೀವು ನೀಡಿದ ಸಯ್ಟು ನಂಬಲು ತಕ್ಕುದಲ್ಲ..

ಇಲ್ಲಿ ನೋಡಿ Encyclopdia Britannica Article

http://ccat.sas.upenn.edu/~haroldfs/sars238/shortencybrit.html

Quote:

a form of Proto-Dravidian, or perhaps Proto-North Dravidian, must have been extensive in northern India before the advent of the Aryans. Apart from the survival of some islands of Dravidian speech, however, the process of replacement of the Dravidian languages by the Aryan tongues was entirely completed before the beginning of the Christian Era, after a period of bilingualism that must have lasted many centuries. Finally, the almost universal adoption of Indo-Aryan in the north and of Dravidian in the south has covered up the original linguistic diversity of India.

Quote:

Dravidian word in the Hebrew text of the Bible (tukkhiyim peacocks; cf. Tamil tokai tail of a peacock), the Dravidian languages enter history in Sanskrit and Greco-Roman texts. The Ceras, a south Indian dynasty, are possibly mentioned in the early Sanskrit text AitareyaA ranyaka. Katyayana, a grammarian of the 4th century BC, mentions the countries of Pandya (Tamil pantiya), Cola (Tamil cola), and Kerala, or Cera (Tamil cera)

Quote:

Of the Dravidian languages, Tamil has the oldest literature, paralleled in India only by that of Sanskrit. Its phonological and grammatical systems correspond in many points to the ancestral parent language, called Proto-Dravidian.

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:01pm — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

http://en.wikipedia.org/wiki/Avesta

There are strong linguistic and cultural similarities between the texts of the Avesta and those of the early Indian Rigveda; the similarities are assumed to reflect the common beliefs of Proto-Indo-Iranian times, with the differences then assumed to reflect independent evolution that occurred after the pre-historical split of the two cultures.

Structure and content ಹಂತವನ್ನು ಓದಿರಿ...

ಮನ್ನಿಸಿರಿ.. ಟಾಪಿಕ್ ಬದಲಾಗಿ ಬಿಟ್ಟದೆ..

ಕನ್ನಡ ಉಳಿಸಿರಿ.. ಆದರೆ ಸಂಸ್ಕೃತವನ್ನು ಹೇಳಿ ಕನ್ನಡ ಅನ್ನಬೇಡಿ.. Smiling ( ಕನ್ನಡ ನುಡಿ, ಸಂಸ್ಕೃತ ಭಾಷೆ ) Smiling

ನಂಗೆ ಕನ್ನಡ ಬರತ್ತೆ..

ದಿಟವಾದ ಕನ್ನಡವೇನೆಂದು ತಿಳಿಯಿರಿ.. ( ಶಂಕರಬಟ್ಟರ ಹೊತ್ತಗೆಗಳು )
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:32pm — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಮಹೇಶ್,

ನಮಸ್ಕಾರ. ಕನ್ನಡದ ಜನರು ಯಾತಕ್ಕೆ ಪ್ರಸಿದ್ಧರು(ಕವಿರಾಜ ಮಾರ್ಗ) ಎಂಬುದು ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ. ಆದ್ದರಿಂದ, ತಮ್ಮ ಟೀಕೆ-ಟಿಪ್ಪಣಿಯನ್ನು ಸ್ವಾಗತಿಸುತ್ತೇನೆ. ಕನ್ನಡದ ಬಗ್ಗೆ ಇರುವ ನನ್ನ ಅಭಿಮಾನವನ್ನು ನನ್ನಾವ ಪದಗಳು ವ್ಯಕ್ತಪಡಿಸಲಾರವು. ಇದು "ಜ್ಞಾನ ಹಂಚಿಕೊಳ್ಳುವ ಪ್ರಕ್ರಿಯೆ" ಎಂದೇ ಭಾವಿಸುತ್ತೇನೆ ಹೊರತು ಸವಾಲಾಗಿ ಸ್ವೀಕರಿಸಹೋಗುವುದಿಲ್ಲ. ನಾವು "ತಿಳಿದದ್ದು ಹನಿ, ತಿಳಿಯದ್ದು ಸಾಗರ" ಎಂಬುದರಲ್ಲಿ ನನಗೆ ನಂಬಿಕೆಯಿದೆ. ಇನ್ನು ನನ್ನ ಅನಿಸಿಕೆ, ಅಭಿಪ್ರಾಯ ದೊಡ್ಡದು ಎನ್ನುವ ಯಾವ ಅಹಂ ನನ್ನಲ್ಲಿಲ್ಲ. ನಾನು ಈಗಾಗಲೇ ಹೇಳಿದ ಹಾಗೆ, ಈ ವಿಚಾರವಾಗಿ ಆಳಕ್ಕೆ ಹೋಗಬೇಕಾದ ಅಗತ್ಯ ಕಾಣಿಸುತ್ತಿದೆ. ಅದರಿಂದಾಗಿ, ನನ್ನದೇನಾದರೂ ತಪ್ಪಿದಲ್ಲಿ ಕ್ಷಮೆಯಿರಲಿ ಎಂದಷ್ಟೇ ಹೇಳುವೆ.

ಇನ್ನು ಡಿ.ಎಸ್.ಶಂಕರಭಟ್ಟರ ಹೊತ್ತಗೆಗಳಲ್ಲಿ ನಿಮ್ಮ ಚಿತ್ರದಲ್ಲಿ ಕಾಣುವ ಪುಸ್ತಕ ನನ್ನ ಬಳಿಯೂ ಇದೆ. ಅದನ್ನು ಬಹಳ ಹಿಂದೆಯೇ ಓದಿದ್ದೇನೆ. ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದ.

ವಿಶ್ವಾಸದಿಂದ,
Mobile: 9886484937
Blog: http://sampada.net/user/shashikannada
Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:44pm — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ಸರಿ ಸರಿ..

ನಾನು ನಿಮಗೆ ಬರೆಯುವ ತವಕದಲ್ಲಿ ಕರ್ಟಸಿ ಸಾಲುಗಳನ್ನು ಬಿಟ್ಟುಬಿಟ್ಟಿದ್ದೀನಿ.. ಮನ್ನಿಸಿ...

ಹಾಗಾದರೆ.. ನನ್ನ ಮಾತು ನಿಮಗೆ

Quote:
’ಈ ವಿಚಾರವಾಗಿ ಆಳಕ್ಕೆ ಹೋಗಬೇಕಾದ ಅಗತ್ಯ ಕಾಣಿಸುತ್ತಿದೆ’
ಎಂದು ಎಣಿಸುವ ಹಾಗೆ ಮಾಡಿತು.. ಅದಕ್ಕೆ ನನ್ನಿ..

ನಿಮಗೆ ಸವಾಲ್/ಪೋಟಿ ಎಸೆದಿಲ್ಲ.. Smiling ಸವಾಲ್ ಆಗಿ ತಗೊಳ್ಳೋದು ಬಿಡೋದು ನಿಮ್ಮ ಪದಪು.........
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:56pm — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಮಹೇಶ್,

ನಿಮ್ಮ ಶ್ರಮ ಆಸಕ್ತಿ, ಶ್ರಮ ಅಭಿನಂದನಾರ್ಹ. ನಾವು ಒಬ್ಬರಿಂದೊಬ್ಬರು ಕಲಿಯುವುದು ಸಾಕಷ್ಟಿರುತ್ತದಲ್ಲವೇ? ಆರೋಗ್ಯಕರವಾದ ಚರ್ಚೆಗಿಂತ "ಸಂವಾದ" ನಮ್ಮನ್ನು ಬೆಳೆಸುತ್ತದಲ್ಲವೇ? ನಾನೇನು ಪೈಪೋಟಿ, ಸವಾಲು ಎಂದು ಯಾವುದನ್ನು ಸ್ವೀಕರಿಸುವುದಿಲ್ಲ. ನಾನಗಲೇ ಹೇಳಿದ ಹಾಗೆ, ಚರ್ಚೆ ಕಾಲಂನಲ್ಲಿ ಈ ಕುರಿತು ವಿಸ್ತೃತವಾದ ಸಂವಾದ ನಡೆಸುವುದರ ಮೂಲಕ, "ಜ್ಞಾನ ಹಂಚಿಕೊಳ್ಳುವ ಪ್ರಕ್ರಿಯೆ" ಮುಂದುವರಿಸೋಣ, ಆ ಮೂಲಕ ನಮ್ಮ ಭಾಶೆಯ ಋಣವನ್ನು ತೀರಿಸೋಣ. ಈಗ ಸಧ್ಯಕ್ಕೆ ಇಲ್ಲಿಗೆ ಮುಕ್ತಾಯ ಹಾಡೋಣವೇ?

ವಿಶ್ವಾಸದಿಂದ,
ಶಶಿ
Mobile: 9886484937
Blog: http://sampada.net/user/shashikannada
Website: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 1:05pm — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ಅಯ್ಯೋ ’ಅಭಿನಂದನಾರ್ಹ’ ಅಂತೆಲ್ಲ ಸಂಸ್ಕೃತದಲ್ಲಿ ಹೇಳಬೇಡಿ,, ನನಗೆ ಮುಜುಗರ, ಇರುಸುಮುರುಸು..

’ಭಾಷೆಯ ಋಣ’ ನಾನು ಋಣ ಅನ್ನೋದನ್ನ ನಂಬಲ್ಲವಲ್ಲ.. ನಾನು ನನ್ನ ಗುರುತು/identityಗಾಗಿ ಹೇಳಿದ್ದು.. ಋಣ ಅಂದರೆ ಸಾಲ ಎಂಬ ತಿಳಿವಿದೆ..

ಮುಗಿತಾಯ ಹಾಡಿ.. ನನ್ನ ಅಡ್ಡಿಯಿಲ್ಲ.. ..

<ತಮಾಶೆ>
ಹಾಡು ಯಾವುದು, ಯಾವ ರಾಗ? Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 10:59am — mahesha

ಉ: ನಿಮಗೆ ಕನ್ನಡ ಬರುತ್ತಾ?

mahesha's picture

ಕೊನೆಗೂ ಇವರು ಬರಹದಲ್ಲಿ ಇದ್ದ ತಪ್ಪನ್ನು ತಿದ್ದಲಿಲ್ಲ...
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 11:11am — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಮಹೇಶ,

ನಮಸ್ಕಾರ. ನಾನು ಈಗಾಗಲೇ ಕೆಲವೊಂದರ ಕುರಿತು ಸ್ಪಷ್ಟಪಡಿಸಿದ್ದೇನೆ. ನನಗೆ ಅದು ಖಚಿತವೆನಿಸುವವರೆಗೂ ಯಾವುದಕ್ಕೂ ಮುಂದಾಗುವುದಿಲ್ಲ. ದಯವಿಟ್ಟು ತಪ್ಪು ಭಾವಿಸಬೇಡಿ.

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 2:46pm — shashikannada

ಉ: ನಿಮಗೆ ಕನ್ನಡ ಬರುತ್ತಾ?

shashikannada's picture

ಪ್ರಿಯ ಮಹೇಶ,

ನಮಸ್ಕಾರ. ನೀವು ಯಾವುದನ್ನ ತಪ್ಪು ಎಂದು ಹೇಳ್ತಿದ್ದೀರಿ ಎಂದು ದಯಮಾಡಿ ತಿಳಿಸ್ತೀರಾ? (ಕನ್ನಡಕ್ಕೆ 2000 ವರ್ಷಗಳ ಇತಿಹಾಸ ಇದೆ ಅನ್ನೋದನ್ನೆ.) ಸರಿಯಾದ ಮಾಹಿತಿ ಯಾವುದು ಅನ್ನೋದನ್ನ (ಕೊಂಡಿ ಸಮೇತ) ತಿಳಿಸ್ತೀರಾ?

ಇದಲ್ಲದೆ, ನಮ್ಮ ಕನ್ನಡ ಬರೆಹದ ನಡುವೆ ನಾವು ಪರಭಾಶೆ ಇಂಗ್ಲೀಶ್ ಗಿಂತ, ನಮ್ಮದೇ ಆದ ಸಂಸ್ಕೃತವನ್ನು ಬಳಸೋದು ತಪ್ಪೇನಲ್ಲ. ಅಲ್ವ? ನನಗನಿಸುತ್ತೆ ನೀವು ಈ ವಾದವನ್ನ ಒಪ್ಪೋದಿಲ್ಲ ಅಂತ. ಇರಲಿ ಬಿಡಿ. ಆ ಕುರಿತು ಮತ್ತೊಂದು ಕಡೆ ಚರ್ಚೆಸಿದರಾಯಿತು. ನನಗೇನೂ ಬೇಸರವಿಲ್ಲ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 7:31pm — roopablrao

ಉ: ನಿಮಗೆ ಕನ್ನಡ ಬರುತ್ತಾ?

roopablrao's picture

ನಾನು ಮೊದಲು ಈ ಫೋರಮ್ , ಬಿಗ್ ಬ್ಜಜಾರ್, ಹೀಗೆ ಪ್ರತಿಷ್ಟಿತ ಅಂತ ಕರೆಸಿಕೊಳ್ಳುವ ಏರಿಯಾಗೆ ಹೋದಾಗಲೆಲ್ಲಾ ಇಂಗ್ಲೀಷನ್ನೇ ಮಾತಾಡ್ತಿದ್ದೆ
ಆಮೇಲೆ ಒಮ್ಮೆ ಈ ಸಂಪದದಲ್ಲಿ ಸದಸ್ಯಳಾದ ಮೇಲೆ ಇಲ್ಲಿನ ಸದಸ್ಯರಿಗಿರುವ ಕನ್ನಡದ ಬಗ್ಗೆ ಇರುವ ಅಭಿಮಾನ ನೋಡಿದ ಮೇಲೆ ಎಲ್ಲಿ ಹೋದರೂ ಮಾತು ಕನ್ನಡದಲ್ಲೇ ಶುರು ಮಾಡೋದು.
ನಮ್ಮ ರಾಜ್ಯದಲ್ಲಿ ನಮ್ಮ ಭಾಷೆ ಮಾತಾಡೊದಕ್ಕೆ ಯಾರೊ ಅಡ್ಡಿ ಮಾಡುವುದಿಲ್ಲ ಮಾಡಿದರೂ ನಾವು ಕೇರ್ ಮಾಡಬೇಕಿಲ್ಲ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:52am — vikashegde

ಉ: ನಿಮಗೆ ಕನ್ನಡ ಬರುತ್ತಾ?

vikashegde's picture

ಸಂಪದದ ಸಾರ್ಥಕತೆ ಇಲ್ಲಿ ಸ್ವಷ್ಟವಾಗಿ ಕಾಣಿಸುತ್ತಿದೆ.
**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
</