"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಓ ನಲ್ಲೇ

ಓ ನಲ್ಲೇ

ಓ ನಲ್ಲೇ ...
ಎಲ್ಲಿ ಹೋಗುವೆ ನಿಲ್ಲೇ.
ನಾ ಕೊಟ್ಟ ಪ್ರೇಮಪತ್ರವೆಲ್ಲೇ.
ಹೇಳು ನಿನ್ನ ನಿರ್ಧಾರವನ್ನಿಲ್ಲೇ....

ಅಲೆದೆ ನಿನ್ನ ಹಿಂದೆ ರೋಡು ಪಾರ್ಕೆನ್ನದೆ
ನೀ ಹೋದೆ ನನ್ನೆದೆ ತಿರುಗಿ ನೋಡದೆ
ನಾ ಮಾಡಿದ ತಪ್ಪಾದರೂ ಏನು...?
ಹೀಗೇಕೆ ನನ್ನ ಕೊಲ್ಲುತಿರುವೆ ...

ಕಾಲೇಜಿನ ಕೊಠಡಿಯಲ್ಲೂ ನಿನ್ನ ಧ್ಯಾನ
ಪ್ರಾಧ್ಯಾಪಕರಿಂದ ನನಗೆ ಬುದ್ದಿ ಮಾತಿನ ವಿಧಾನ
ಹೀಗೇಕೆ ನಿನ್ನ ಮೌನ
ನನಗಾಗುವುದಿಲ್ಲ ನೀ ಹೀಗಿದ್ದರೆ ಸಮಾಧಾನ

ನಾ ಬರೆದೆ ಪ್ರೇಮಪತ್ರವ ರಕ್ತದಲಿ
ನೀ ನೋಡಿದೆ ನನ್ನನು ಪ್ರೀತಿಯಿಂದಲಿ
ಆದರು ಏಕೆ ಈ ಮೌನ ..?
ಇನ್ನಾದರೂ ಮೌನದಿಂದ ಹೊರಗೆ ಬಾ ಚಿನ್ನಾ..!

ನೀನಿಲ್ಲದಾ ಬದುಕು ಶೂನ್ಯ
ನೀನೋಪ್ಪಿದರೆ ನಿನ್ನ ನನ್ನ ಜೀವನ
ಇಲ್ಲವಾದರೆ ನಾ ಮೃತ್ಯು ಲೋಕಕೆ ಪಯಣ .

ಮಾವಿನಕೆರೆ ಪ್ರಶಾಂತ್

0
~.~
Syndicate content

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ