~
ತಪ್ಪಿದ ಲೆಕ್ಕ
ಏಕಿಷ್ಟು ಅವಸರವೋ
ಎಲ್ಲಿಗೋಡುವರಿವರು
ನಾಳೆ ಮಾಡುವರು ಏನು ನಾನು ಕಾಣೆ
ಅಷ್ಟು ಅವಸರವದೇಕೋ ನಾನು ಕಾಣೆ.
ದೂರದಲಿ ಇದ್ದ ಜನರೆಲ್ಲರೂ
ಹತ್ತಿರವೇ ಆಗುವರು ಇನ್ನಷ್ಟೂ
ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ
ಗಾವುದ ಗಾವುದ ಸರಿಯುವರು ಮತ್ತಷ್ಟೂ.
ವೈದ್ಯರಾದರು ಜನರು ಎಷ್ಟು-ಎಷ್ಟು
ರೋಗಗಳು ಹೆಚ್ಚಿದವು ಮತ್ತಷ್ಟು
ವಿದ್ಯೆ ಪಡೆದರು ಜನರು ಎಷ್ಟು ಎಷ್ಟು
ಮೋಸ ತಂತ್ರಗಳು ಹೆಚ್ಚಿದವು ಮತ್ತಷ್ಟು.
ಅನ್ನ ಬೆಳೆದರು ಇಲ್ಲಿ ಎಷ್ಟು ಎಷ್ಟು
ಅನ್ನವಿಲ್ಲದ ಜನರು ಈಗಲೂ ಅದು ಎಷ್ಟು
ಧರ್ಮ ನಂಬಿದ ಜನರು ಎಷ್ಟು ಎಷ್ಟು
ಅಧರ್ಮಿಗಳಾಗಿ ಮೆರೆದವರು ಅದು ಎಷ್ಟೋ
ಬಾಯಿಂದ ಹೇಳುವುದು ನೀತಿ ಪಾಠ
ಮತ್ತ ಆಡುವುದು ಅನೀತಿ ಆಟ
ಮುಂದೊಂದು ಹಿಂದೊಂದು,ಒಳಗೊಂದು ಹೊರಗೊಂದು
ಬೇಕೆ ನಮಗೆ ಇಂತ ಆಟ.
ಜಯಪ್ರಕಾಶ ನೇ ಶಿವಕವಿ.

- Login or register to post comments
- 195 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: