ಟೈಮಿಗಿಲ್ಲ ಟೈಮ್ ಸೆನ್ಸು
ಕಾಲ ನಾವಂದುಕೊಂಡಂತೆ ಬಾರದು.ಅದಕ್ಕೆ ಆ ಕಾಲನ 'ಸಮಯ'ಕ್ಕೆ ಹೀಗೆ ಒಂದಿಷ್ಟು ಬೈಗುಳ ನೀಡುವತ್ತ..
ಟೈಮಿಗಿಲ್ಲ ಟೈಮ್ ಸೆನ್ಸು
ಸ್ವಲ್ಪ ಕೂಡ ಕಾಮನ್ ಸೆನ್ಸು ||
ನಾ ಖುಷಿಯಾಗಿದ್ದಾಗ ಓಡಿಹೋಗುತ್ತೆ
ದುಃಖದಲ್ಲಿದ್ರೆ ನಿಂತೇ ಬಿಡತ್ತೆ
ಖಾಲಿಯಾಗಿದ್ರೆ ಕೂತು ಊಟ ಮಾಡುತ್ತೆ
ಮಲಗಿದ್ರೆ ತಾನೂ ಮಲಗೇ ಬಿಡತ್ತೆ ||
ಟೈಮಿಗಿಲ್ಲ ಟೈಮ್ ಸೆನ್ಸು..
ಕ್ಲಾಸಲ್ಲಿ ಪಾಠ ನಡೀತಿದ್ರೆ,ಬಸ್ ಗೋಸ್ಕರ ಕಾಯ್ತಾ ಇದ್ರೆ
ಒಂದೊಂದ್ ನಿಮಿಷಾನೂ ಮಹಾಭಾರತ ರಾಮಾಯಣ
ಮಜಾ ಮಾಡ್ತಿದ್ರೆ,ಜಾಲಿಯಾಗಿ ಓಡಾಡ್ಕೊಂಡಿದ್ರೆ
ಒಂದೊಂದ್ ದಿನಾನೂ ನಿಮಿಷಗಳ ಪಾರಾಯಣ ||
ಟೈಮಿಗಿಲ್ಲ ಟೈಮ್ ಸೆನ್ಸು..
ಬೇಕೆಂದಾಗ ಬರೋದಿಲ್ಲ
ಕೈ ಕೊಡೋದನ್ನ ಮರೆಯೋದಿಲ್ಲ
ಆಗಾಗ ಬಂದು ಸಹಾಯ ಮಾಡಿ
ಬೈಯಲು ಅವಕಾಶ ಕೊಡೋದಿಲ್ಲ ||
(ಸಂಪದಿಗರೇ ಇದು ಸುಮ್ಮನೇ ನಿಮ್ಮ ಮತ್ತು ನನ್ನ ಖುಷಿಗೋಸ್ಕರ ಬರೆದದ್ದು!!)

- Login or register to post comments
- 289 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಟೈಮಿಗಿಲ್ಲ ಟೈಮ್ ಸೆನ್ಸು
ಇನ್ನೂ ಒನ್ಸ್ವಲ್ಪ ಬಯ್ರೀ ಈ ಟೈಮಿಗೆ..ಒಂಚರೂ ಟೇಮ್ ಸೆನ್ಸ್ ಇಲ್ಲ, ಅದಕ್ಕೆ. :grrr:
ಉ: ಟೈಮಿಗಿಲ್ಲ ಟೈಮ್ ಸೆನ್ಸು
ಬೈಯೋಕೆ ನಾನಂತೂ ರೆಡಿ..ಹ್ಹೆ ಹ್ಹೆ..
-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************
ಉ: ಟೈಮಿಗಿಲ್ಲ ಟೈಮ್ ಸೆನ್ಸು
ಒಟ್ಟ್ನ್ಯಾಗ time ಅನ್ನದ ಸರಿ ಅಲ್ಲ ನೋಡ್ರ್ಯಪಾ.....
ಉ: ಟೈಮಿಗಿಲ್ಲ ಟೈಮ್ ಸೆನ್ಸು
ಎಲ್ಲಾ ಸಮಯದಲ್ಲೂ ಸರಿ ಇಲ್ಲ ಅಂತ ಹೇಳೋಕಾಗಲ್ಲ ಆದ್ರೂ ಆಗಾಗ
ಕೈ ಕೊಡ್ತಾ ಇರುತ್ತೆ.ಯಾರೂ ಬೈಯೋರಿಲ್ಲ ಅಂತ ಕೊಬ್ಬು ಅದಕ್ಕೆ.
ಆ ಕೋಪಕ್ಕೇ ಅದಕ್ಕೂ ಬೈದು ಸಮಾಧಾನ ಪಡಲು ಈ ಕವನ!!
-ಸುಶೀಲ್.
**************************************
ಜೀವನದಲ್ಲಿ ಪ್ರತಿ ನಿಮಿಷವೂ ಸ್ನೇಹಿತನ ರೂಪದಲ್ಲಿ ನಿಮ್ಮೆದುರಿಗೆ ಬರುತ್ತದೆ.
ಉಪಯೋಗಿಸಿಕೊಳ್ಳದಿದ್ದಲ್ಲಿ ಸ್ನೇಹಿತ ಸುಮ್ಮನೆ ಹಿಂತಿರುಗಿ ಹೋಗುತ್ತಾನೆ.
**************************************
ಉ: ಟೈಮಿಗಿಲ್ಲ ಟೈಮ್ ಸೆನ್ಸು
ನಾನಂದದ್ದು ಈ time ಅನ್ನೋ entityನೇ ಇರಬಾರದಾಗಿತ್ತು ಅಂತ.
, ದಿನಾ officeಗೆ late ಅಂತ ಆಗದೆ ಇದರಿಂದ...
ಉ: ಟೈಮಿಗಿಲ್ಲ ಟೈಮ್ ಸೆನ್ಸು
ಹ್ಹೆ ಹ್ಹೆ ಒಪ್ಪಿದೆ.
ನನ್ನಿಗಳೊಂದಿಗೆ..
-ಸುಶೀಲ್.
**************************************
ಜೀವನದಲ್ಲಿ ಪ್ರತಿ ನಿಮಿಷವೂ ಸ್ನೇಹಿತನ ರೂಪದಲ್ಲಿ ನಿಮ್ಮೆದುರಿಗೆ ಬರುತ್ತದೆ.
ಉಪಯೋಗಿಸಿಕೊಳ್ಳದಿದ್ದಲ್ಲಿ ಸ್ನೇಹಿತ ಸುಮ್ಮನೆ ಹಿಂತಿರುಗಿ ಹೋಗುತ್ತಾನೆ.
**************************************