ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಶಾಸಕರ ರಾಜೀನಾಮೆ ರಾಜಕೀಯ

July 6, 2008 - 6:54pm — Chamaraj

(ರಾಜ್ಯ ರಾಜಕೀಯ ನಿರ್ಲಜ್ಜ ಘಟ್ಟದಲ್ಲಿದೆ. ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ಉಂಟಾಗಿದೆ. ಅಧಿಕಾರ ಹಿಡಿಯುವುದೇ ಪರಮ ಉದ್ದೇಶವಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿ ಶನಿವಾರದಿಂದ ನಡೆದಿರುವ ಘಟನೆಗಳೇ ಸಾಕ್ಷಿ. ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಹಿಂದಿರುವ ಹುನ್ನಾರ ಕುರಿತು ಈ ಬರಹ)

ಬಹುಶಃ ೨೦೦೮ನೇ ವರ್ಷ ರಾಜ್ಯ ರಾಜಕೀಯದಲ್ಲಿ ಹಲವಾರು ಕಾರಣಗಳಿಂದಾಗಿ ನೆನಪಿನಲ್ಲಿರುತ್ತದೆ.
ಇತ್ತೀಚನ ವರ್ಷಗಳಲ್ಲಿ ಕಂಡ ಅತ್ಯಂತ ನಿರ್ಲಜ್ಜ ರಾಜಕಾರಣವನ್ನು ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಪ್ರದರ್ಶಿಸಿದ ಪರಿಣಾಮ ಬಹುಮತ ಸಾಬೀತು ಮಾಡಲು ಹೋಗಿದ್ದ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ಸಲ್ಲಿಸಿ ಹಿಂತಿರುಗಿದರು. ರಾಷ್ಟ್ರಪತಿ ಆಡಳಿತ ಬಂದಿತು. ಅಧಿಕಾರಿಗಳದೇ ಸಾಮ್ರಾಜ್ಯ. ಪರಿಣಾಮ, ರಸಗೊಬ್ಬರದಂಥ ಬೇಡಿಕೆಯನ್ನು ಸರಿಯಾಗಿ ಸಲ್ಲಿಸದೇ ಮುಂಗಾರು ಗೊಂದಲಕ್ಕೆ ಕಾರಣವಾಯಿತು.
ಇನ್ನೊಂದೆಡೆ ಚುನಾವಣಾ ಆಯೋಗ ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಥವಾಗಿ ಕೆಲಸ ಮಾಡಿ, ಕ್ಷೇತ್ರ ಪುನರ್‌ವಿಂಗಡಣೆ ನಂತರವೂ ದಾಖಲೆ ಸಮಯದಲ್ಲಿ ಚುನಾವಣೆ ನಡೆಸಲು ಮುಂದಾಯಿತು. ವಿರೋಧದ ನಡುವೆಯೂ ಗದ್ದಲ ಗೊಂದಲಗಳಿಲ್ಲದೇ ಚುನಾವಣೆ ಮುಗಿಸಿತು. ಜೆಡಿಎಸ್‌ನ ಪಾಪದ ಫಲವೆಂಬಂತೆ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬಂದು, ಜೆಡಿಎಸ್‌ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಇಳಿಯಿತು.
ಇದು ಒಂದು ಪ್ರಮುಖ ಘಟ್ಟ.
ಅಧಿಕಾರಕ್ಕೆ ಬರಬೇಕೆಂದರೆ ಪಕ್ಷೇತರರ ಮರ್ಜಿಯಲ್ಲೇ ಇರಬೇಕೆನ್ನುವ ಕಹಿ ವಾಸ್ತವ ಒಪ್ಪಿಕೊಳ್ಳಲು ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು ಸಿದ್ಧರಿದ್ದಿಲ್ಲ. ಹೀಗಾಗಿ, ಶಾಸಕರ ಖರೀದಿಗೆ ಮುಂದಾದರು. ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷೇತರರ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸಲಾಯಿತು. ಆದರೆ, ಇದು ಶಾಶ್ವತ ಪರಿಹಾರವಲ್ಲ ಎಂಬ ಅರಿವು ಬಿಜೆಪಿ ನಾಯಕರಲ್ಲಿ ಇದ್ದೇ ಇತ್ತು.
ಯಥಾಪ್ರಕಾರ, ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಬಳ್ಳಾರಿ ಗಣಿ ದೊರೆಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಈ ಸಮಸ್ಯೆ ಪರಿಹರಿಸಲು ಮುಂದಾದರು. ಮೊದಲು ಜೆಡಿಎಸ್‌ ಒಡೆಯುವ ತಂತ್ರ ಹೆಣೆಯಲಾಯಿತು. ಆದರೆ, ಅದು ಸುಲಭ ಸಾಧ್ಯವಲ್ಲ ಎಂಬುದು ಗೊತ್ತಾಯಿತು. ಆಗ ರೂಪಿಸಿದ್ದೇ ರಾಜೀನಾಮೆ ಕೊಟ್ಟು ಹೊರಬರುವ ತಂತ್ರ.
ಈ ಕಾರ್ಯಾಚರಣೆಯ ಕೆಲ ವಿಶೇಷತೆಗಳು ಹೀಗಿವೆ:
- ಶಾಸಕನೊಬ್ಬ ತನ್ನ ಸದಸ್ಯತ್ವ ಅವಧಿಯಲ್ಲಿ ಇನ್ನೊಂದು ಪಕ್ಷಕ್ಕೆ ಬೆಂಬಲ ಕೊಡುವುದಾಗಲಿ, ಸೇರಿಕೊಳ್ಳಲಾಗಲಿ ಬರುವುದಿಲ್ಲ. ಹಾಗೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವನ ಸದಸ್ಯತ್ವ ರದ್ದಾಗುತ್ತದೆ.
- ಆದರೆ, ರಾಜೀನಾಮೆ ನೀಡಿ ಹೊರ ಬಂದರೆ ಆತ ಸ್ವತಂತ್ರ. ಸಾಮಾನ್ಯವಾಗಿ ಈ ಕ್ರಮ ಕೈಗೊಳ್ಳಲು ಶಾಸಕರು ಸಿದ್ಧರಿರುವುದಿಲ್ಲ. ಏಕೆಂದರೆ, ಆಗ ಉಪಚುನಾವಣೆ ನಡೆಯಬೇಕಾಗುತ್ತದೆ. ಒಂದು ಸಾರಿ ಗೆಲ್ಲಲಿಕ್ಕೇ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಹೀಗಾಗಿ ಈ ಸವಾಲು ತೆಗೆದುಕೊಳ್ಳಲು ಹೆದರುತ್ತಾರೆ.
- ಗಣಿ ದೊರೆಗಳು ಗಮನ ಕೊಟ್ಟಿದ್ದೇ ಈ ಅಂಶದತ್ತ. ಒಂದು ಮೂಲದ ಪ್ರಕಾರ, ಚುನಾವಣೆಯಲ್ಲಿ ಖರ್ಚಾದ ಹಣವನ್ನು ಹೊಂದಿಸುವ, ಹೆಚ್ಚುವರಿಯಾಗಿ ಹಣ ಕೊಡುವ, ಮತ್ತೆ ಚುನಾವಣೆ ಎದುರಿಸುವ ಎಲ್ಲ ಖರ್ಚನ್ನೂ ನೋಡಿಕೊಳ್ಳುವ ಹಾಗೂ ಗೆದ್ದ ನಂತರ ’ಸೂಕ್ತ’ ಸ್ಥಾನ ಕಲ್ಪಿಸುವ ಭರವಸೆಯನ್ನು ಕೆಲ ಶಾಸಕರಿಗೆ ನೀಡಲಾಯಿತು.
- ಶಾಸಕರು ಈ ಆಮಿಷಕ್ಕೆ ಮಣಿದರು. ಏಕೆಂದರೆ, ಪ್ರತಿ ಪಕ್ಷದಲ್ಲಿ ಇನ್ನೈದು ವರ್ಷ ಕೂತರೂ ಅವರಿಗೆ ಚುನಾವಣೆಯಲ್ಲಿ ಮಾಡಿರುವ ಖರ್ಚು ಹಿಂತಿರುಗುವ ಭರವಸೆ ಇಲ್ಲ. ಅದರ ಬದಲು ರಾಜೀನಾಮೆ ನೀಡಿದರೆ, ಖರ್ಚು ಮಾಡಿದ ಹತ್ತು ಪಟ್ಟು ಹಣ ಬರುತ್ತದೆ. ಇನ್ನೊಮ್ಮೆ ಉಚಿತವಾಗಿ ಗೆದ್ದು ಬರುವ ಅವಕಾಶವೂ ಸಿಗುತ್ತದೆ.
- ಗಣಿ ದೊರೆಗಳು ಇನ್ನೊಂದು ತಂತ್ರ ಹೆಣೆದರು. ರಾಜ್ಯದ ದೊಡ್ಡ ಕೋಮಿನಲ್ಲಿ ಒಂದಾಗಿರುವ ವಾಲ್ಮೀಕಿ ಸಮಾಜದ ಶಾಸಕರನ್ನು ಬಿಜೆಪಿಗೆ ಸೆಳೆಯುವ ಜವಾಬ್ದಾರಿಯನ್ನು ಸಚಿವ ಶ್ರೀರಾಮುಲು ಹೊತ್ತುಕೊಂಡರು. ಈ ತಂತ್ರ ಫಲ ನೀಡಿತು. ವಾಲ್ಮೀಕಿ ಜನಾಂಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಶಿವಾನಂದ ನಾಯಕ್‌ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡರು. ಗಣಿ ದೊರೆಗಳ ವ್ಯಾಪಾರದಲ್ಲಿ ಮುಖ್ಯ ಪಾತ್ರಧಾರನಾಗಿರುವ ಕಾರವಾರದ ಕಾಂಗ್ರೆಸ್‌ ಶಾಸಕ ಆನಂದ ಆಸ್ನೋಟಿಕರ್‌ ಕೂಡ ಬಿಜೆಪಿಗೆ ಬಂದರು. ಕಾಂಗ್ರೆಸ್‌ನ ಸಂಸದ ಆರ್‌.ಎಲ್‌. ಜಾಲಪ್ಪ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಹೊಂದಿದ್ದ ಅಸಮಾಧಾನದ ಅಂಗವಾಗಿ ಅವರ ಮಗ ಶಾಸಕ ನರಸಿಂಹಸ್ವಾಮಿ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
- ಬರಲಿರುವ ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಇನ್ನೂ ಐದಾರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ. ಸುಮಾರು ಎಂಟ್ಹತ್ತು ಶಾಸಕರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಸುವುದಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತದೆ. ತಮ್ಮದೇ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ, ಗಣಿ ದೊರೆಗಳ ಕಾರ್ಯಾಚರಣೆ ನಡೆಯುವುದರಿಂದ ಹತ್ತರಲ್ಲಿ ನಾಲ್ಕೈದು ಸ್ಥಾನಗಳನ್ನು ಬಿಜೆಪಿ ಗೆದ್ದರೂ ಸಾಕು, ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಅಬಾಧಿತ.
ಇದು ಬಿಜೆಪಿ ಲೆಕ್ಕಾಚಾರ.
ಆ ಪ್ರಕಾರ, ರಾಜೀನಾಮೆ ಪ್ರಹಸನ ಪ್ರಾರಂಭವಾಗಿದೆ. ನಾವು-ನೀವು ಮೂಕ ಪ್ರೇಕ್ಷಕರಂತೆ ನೋಡುತ್ತ ಕೂತಿದ್ದೇವೆ.
ನಮ್ಮೊಳಗಿನ ಮತದಾರ ಜಾಗೃತನಾಗುವುದು ಯಾವಾಗ?
- ಚಾಮರಾಜ ಸವಡಿ
chamarajs@gmail.com

  • ಪ್ರಚಲಿತ
~.~
  • Login or register to post comments
  • 572 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 6, 2008 - 7:54pm — ಗಣೇಶ

ಉ: ಶಾಸಕರ ರಾಜೀನಾಮೆ ರಾಜಕೀಯ

ಗಣೇಶ's picture

ಕಾಂಗ್ರೆಸ್ ಆಡಳಿತವಿರುವಾಗ : ಕರ್ನಾಟಕ c/o ದೆಹಲಿ ಹೈಕಮಾಂಡ್.
ಜನತಾದಳ ಬಂದಾಗ : ಕರ್ನಾಟಕ c/o ದೇವೇ ಗೌಡ.

ಬಿ.ಜೆ.ಪಿ ಬಂತು : ಕರ್ನಾಟಕವನ್ನು ಗಣಿದೊರೆಗಳಿಗೆ ಒಪ್ಪಿಸಿತು.

೨೦-೨೦ ಕ್ರಿಕೆಟ್‌ ನಂತೆ ಕರ್ನಾಟಕವನ್ನು ಏಲಂ ಹಾಕುವುದು ಮಾತ್ರ ಬಾಕಿ ಇದೆ.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 11:24am — Chamaraj

ಉ: ಶಾಸಕರ ರಾಜೀನಾಮೆ ರಾಜಕೀಯ

Chamaraj's picture

ರಾಜಕೀಯ ಎಂದರೆ ಎಲ್ಲ ಕ್ರೀಡೆಗಳ ಹಾಗೂ ಎಲ್ಲ ಅಪರಾಧಗಳ ತಂದೆ ಇದ್ದಂತೆ. ಅದಕ್ಕೇ ಅಲ್ಲವಾ ಅಧಿಕಾರ ಪಡೆಯಲು ಈ ಎಲ್ಲ ಹೀನ ಕೆಲಸ. ಸುಮ್ಮನಿರುವ ಮೂಲಕ ನಾವೂ ಅದನ್ನು ಬೆಂಬಲಿಸುತ್ತಿದ್ದೇವೆ.

- ಚಾಮರಾಜ ಸವಡಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 9:30am — srinivasps

ಉ: ಶಾಸಕರ ರಾಜೀನಾಮೆ ರಾಜಕೀಯ

srinivasps's picture

ಅದ್ಭುತ ರಾಜಕೀಯದಾಟ...

ಬಿ ಜೆ ಪಿ ಗೂ ತಿಳಿದಿದೇ ಕಾಂಗ್ರೆಸ್ ಮತ್ತು ಜನತಾ ದಳ ಸುಮ್ಮನೆ ಪ್ರತಿಪಕ್ಷಗಳಾಗಿ ಕುಳಿತಿರಲಾರು ಎಂದು...

ಸದಾ ವಿಧಾನಸಭೆಯ ಅತಂತ್ರ ಸ್ಥಿತಿಯ ಭೀತಿಯೊಂದಿಗೆ ಸರ್ಕಾರ ನಿರ್ವಹಿಸುವುದಕ್ಕಿಂತಾ ಆಳುವಪಕ್ಷಕ್ಕೇ ಬಹುಮತವಿದ್ದರೆ ರಾಜ್ಯಕ್ಕೆ ಒಳಿತು...

ಮಧ್ಯಂತರ ಚುನಾವಣೆ ತಪ್ಪಿಸಿದರೆ ಹಲವಾರು ಕೋಟಿ ನಷ್ಟವನ್ನು ತಪ್ಪಿಸಬಹುದು...!

--ಶ್ರೀ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 2:17pm — maatumouna

ಉ: ಶಾಸಕರ ರಾಜೀನಾಮೆ ರಾಜಕೀಯ

maatumouna's picture

ಕಾಂಗ್ರೆಸ್ ಅಥವ ಜೆಡಿಎಸ್ ಅಧಿಕಾರಕ್ಕೆ ಬಂದಿದ್ದರೂ ಇದೆ ಪ್ರಸಾಹನ ನಡೆಯುತ್ತಿತ್ತು. ಇದೆ ಅಲ್ವೇ So called " ರಾಜಕೀಯ ".

ನಿಮ್ಮ ಸ್ನೇಹಿತ
ನವೀನ ಕೆ. ಎಸ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 11:17am — Chamaraj

ಉ: ಶಾಸಕರ ರಾಜೀನಾಮೆ ರಾಜಕೀಯ

Chamaraj's picture

ಎಲ್ಲ ರಾಜಕೀಯ ಪಕ್ಷಗಳ ನಡೆ ಇಂಥದೇ. ಶತಾಯಗತಾಯ ಅಧಿಕಾರದಲ್ಲಿ ಉಳಿದುಕೊಳ್ಳಲು ಯತ್ನಿಸುವುದರಲ್ಲಿಯೇ ಸಮಯ ಮತ್ತು ಇದ್ದಬದ್ದ ಬುದ್ಧಿಶಕ್ತಿ ಖರ್ಚಾಗುತ್ತಿದೆ. ಅಷ್ಟರಲ್ಲಿ ಚುನಾವಣೆ ಬಂದಿರುತ್ತದೆ. ಹೇಗಾದರೂ ಮಾಡಿ ಆಯ್ಕೆಯಾಗಲು ಯತ್ನಿಸುವ ಮೂಲಕ ಇಡೀ ಸಮಾಜವನ್ನು ಇನ್ನಷ್ಟು ಹದಗೆಡಿಸುತ್ತಾರೆ.

ಇದಕ್ಕೊಂದು ಪರ್ಯಾಯ ಕ್ರಮವನ್ನು ವೈಯಕ್ತಿಕ ಮಟ್ಟದಲ್ಲಾದರೂ ಮಾಡಬೇಕಿದೆ.

- ಚಾಮರಾಜ ಸವಡಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 2:17pm — shreevathsa

ಉ: ಶಾಸಕರ ರಾಜೀನಾಮೆ ರಾಜಕೀಯ

shreevathsa's picture

ಪಕ್ಷೇತರ ಶಾಸಕರನ್ನು ನಂಬಿಕೊಂಡು ಆಡಳಿತ ನಡೆಸುವುದು ತುಂಬ ಕಷ್ಟ..ಯಾವಾಗ ಏನು ಬೇಕಾದರೂ ಆಗುವ ಸಾದ್ಯತೆ ಹೆಚ್ಚು.....ಮಧ್ಯಂತರ ಚುನಾವಣೆ ಗಿಂತ ಇದು ಲೇಸು...

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 11:15am — Chamaraj

ಉ: ಶಾಸಕರ ರಾಜೀನಾಮೆ ರಾಜಕೀಯ

Chamaraj's picture

ಸರಳ ಬಹುಮತವಿದ್ದರೆ ಉತ್ತಮ ಎಂಬ ಆಶಯವೇ ಶಾಸಕರ ರಾಜೀನಾಮೆ (ಖರೀದಿ) ಬೆಳವಣಿಗೆಗೆ ಕಾರಣ. ಹಾಗಂತ ಪ್ರತಿಪಕ್ಷಗಳು ಸುಮ್ಮನೇ ಕೂಡುವುದಿಲ್ಲ. ಚಿಂತೆ ಏನಪ್ಪಾ ಎಂದರೆ, ಈ ಏಟು-ಎದಿರೇಟಿನಲ್ಲಿ ರಾಜ್ಯದ ಅಭಿವೃದ್ಧಿಯಾಗುವುದು ಯಾವಾಗ?

- ಚಾಮರಾಜ ಸವಡಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ರಾಜೀನಾಮೆ
  • ಹಾವೇರಿಯಲ್ಲಿ ನಡೆದಿದ್ದು ಏನು?
  • ಹಾವೇರಿಯಲ್ಲಿ ನಡೆದಿದ್ದು ಏನು?
  • ಕರ್ನಾಟಕ ಚುನಾವಣೆ-ಎರಡು ಹಂತಗಳು
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೇತುವೆ: ಕಾಫ್ಕಾ ಕಥೆ
  • ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
  • ’ಕಿಂಗ್ ಕತೆ’
  • ಅನರ್ಥಕೋಶ ೬
  • ನಾವು ಅದೆಷ್ಟು ಬಡವರು!
  • ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................
  • ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:02am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:01am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:59am
  • anil.ramesh
    ಉ: ಅರ್ಧ ಚಂದಿರ
    January 8, 2009 - 10:57am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:57am
  • anil.ramesh
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 10:56am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:54am
  • harshab
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:51am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 149 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator