ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
ಮನೇಲ್ ಕುಂತ್ಕಂಡು ಮಂಡಕ್ಕಿ ತಿಂದು ಕೊಂಡು ನಿಮ್ಮಲ್ಲೇಷ್ಟೋ ಜನ ಭಾನುವಾರದ ಸಂಜೆ ಕಳೆದಿರ ಬೇಕಲ್ಲ. ಅತ್ತೊಂದು ಕಡೆ, ರಣರಂಗ. ವಿಂಬಲ್ಡನ್ ಕಿರೀಟವನ್ನ ತನ್ನದಾಗಿಸಿಕೊಳ್ಳಲು ಘಟಾನುಘಟಿಗಳ ಹರ ಸಾಹಸ. ಆರನೇ ಭಾರಿಗೆ ವಿಂಬಲ್ಡನ್ ನಲ್ಲಿ ಎದುರಾಗಿ ಸೆಣಸುತ್ತಿರುವ ಫೆಡರರ್ ಮತ್ತು ನಡಾಲ್ ಇಂದು ಇತಿಹಾಸವನ್ನ ರಚಿಸಿದ್ದಾಗಿದೆ. ಯಾಕೆಂದರೆ ಇವರನ್ನ ಬಿಟ್ಟರೆ, ಇವಾನ್ ಲೆನ್ಡಲ್ (Ivan Lendl) - ಮ್ಯಾಟ್ಸ್ ವಿಲನ್ಡೆರ್ (Mats Wilander) ಹಾಗು ಸಾಮ್ಪ್ರಾಸ್ (Sampras) - ಆಡ್ರೆ ಅಗಾಸ್ಸಿ (Andre Agassi) ಮಾತ್ರ ಐದು ಬಾರಿ ಎದುರಾಗಿದ್ದರು.
೨೦೦೩ ರಿಂದ ಸತತವಾಗಿ ಪ್ರತಿ ವರ್ಷ ವಿಂಬಲ್ಡನ್ ಗೆದ್ದು ಬಂದಿರುವ ಫೆಡರರ್ ಮತ್ತೆ ಗೆದ್ದು ಇನ್ನೊಂದು ಅಧ್ಯಾಯ ಬರೆಯುತ್ತಾರಾ? ಇಲ್ಲ ನಡಾಲ್ ತನ್ನದೇ ಆದ ಹೊಸ ಅಧ್ಯಾಯವನ್ನ ಬರೆದು ಟೆನಿಸ್ ಸಾಮ್ರಾಜ್ಯದ ಅಧಿಪತ್ಯವನ್ನ ವಹಿಸಿಕೊಳ್ಳುತ್ತಾನೋ ಕಾದು ನೋಡಬೇಕು. ವರುಣನೂ ಫೆಡರರ್ ನ ಇಂದಿನ ಆಟದಿಂದ ಸಿಟ್ಟಿಗೆದ್ದಿರುವಂತಿದೆ. ಮೊದಲೇ ನಿಧಾನವಾಗಿ ಶುರುವಾದ ಪಂಧ್ಯದಲ್ಲಿ ಈಗ ಮತ್ತೆ ವರುಣನ ತಡೆ. ಪರೀಕ್ಷೆ ಮುಗಿಸಿ ಕೊಂಡು ಬಂದ ನನಗೆ ಇವರುಗಳ ನಡುವಿನ ಶಕ್ತಿ ಪ್ರದರ್ಶನದ ಪರೀಕ್ಷೆ ಕಂಡು ಸ್ವಲ್ಪ ಸಮಾಧಾನ. ನನಗೆ ಮಾತ್ರ ಪರೀಕ್ಷೆಯ ಭೂತ ಕಾಡಿಲ್ಲವಲ್ಲ ಎಂದು.
ಫೆಡರರ್ ಇಂದು ನಡಾಲ್ ನೆದುರು ತಡಬಡಿಸುತ್ತಿರುವಂತಿದೆ. ಇವರಲ್ಲಿ ನಿಮ್ಮ ಓಟು ಯಾರಿಗೆ?
ಚಿತ್ರ : ©Reuters / T. Melville : http://www.wimbledon.org/ ಕೃಪೆ

- Login or register to post comments
- 401 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
ಅಯ್ಯೋ ಪೆಡರರ್ ಸೋತ
ಬೋರ್ಗ್‌ನ ರೆಕಾರ್ಡು ಹಾಗೇ ಉಳೀತು.. ಪೆಡರರ್ ಸಮಗಟ್ಟಿದ ಅಶ್ಟೇ!
=====================================
ಮಾಯ್ಸ!
ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
ಅದ್ಭುತ ಆಟ...ಇಬ್ಬರು ವೀರರೂ ಸಮವಾಗಿ ಪರಾಕ್ರಮ ತೋರಿದರು...!
ಸುಮಾರು ನಾಲ್ಕೂ ಮುಕ್ಕಾಲು ಗಂಟೆಗಳ ಹೋರಾಟ..ಕೊನೆಗೂ ನಡಾಲ್ ಗೆದ್ದೇ ಗೆದ್ದ...!
ನೀವು ಈ ಆಟವನ್ನು ನೋಡಲಿಲ್ಲವಾದರೆ ನಿಜವಾಗಲೂ ಅತ್ಯಂತ ಶ್ರೇಷ್ಠ ಮಟ್ಟದ ಟೆನ್ನಿಸ್ ಆಟವನ್ನೂ ನೋಡುವ ಅವಕಾಶವನ್ನು ಕಳೆದುಕೊಂಡಿರಿ...
--ಶ್ರೀ
ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
ಮಳೆ ಬಂದು ತುಂಬಾ ತಡವಾಯ್ತು.. !!
ಆದರೇ ನೆನ್ನೆಯ ಆಟದಲ್ಲಿ ಪೆಡಡರ್‍ಗೆ ಏನೋ ಕುಂದು ತೋರುತ್ತಿತ್ತು. ತುಂಬಾ ತಪ್ಪುಗಳನ್ನು ಮಾಡುತ್ತಿದ್ದ.... ಆದರೂ ಇವನೇ ಹೆಚ್ಚು ಏಸುಗಳನ್ನು ಹೊಡೆದುದು
ಆದರೆ ನ್ಯಡಾಲ್ ತುಂಬಾ ಚನ್ನಾಗಿ ಆಡಿದ..
ಹೆಂಗಸರು ಪಯ್ನಲ್ ನಾನು ನೋಡಲು ಹೋಗಲಿಲ್ಲ.. ವಿಲಿಯಮ್ಸರ ಪವರ್ ಆಟ ನನಗೆ ಹಿಡಿಸಲ್ಲ.. ಸರಿನ ಎದುರು ಆಡಿ ಸೆಮಿ-ಪಯ್ನಲ್ಲಲ್ಲಿ ಸೋತ ಆ ಚೀಣಾ ಹೆಂಗಸು ನನ್ನಗೆ ಮೆಚ್ಚುಗೆಯದಳು. ಈ ಇಬ್ಬರು ಮಿಲಿಯಮ್ಸರು ಇಲ್ಲದೇ ಇದ್ದರೆ ಒಬ್ಬ ಏಶಿಯದವಳು ಈ ಸರತಿ ಗೆಲ್ಲುತ್ತಿದ್ದಳೇನೋ!
=====================================
ಮಾಯ್ಸ!
ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
ನಾನು ಒಳ್ಳೆಯ ಆಟವನ್ನ ತಪ್ಪಿಸಿಕೊಂಡುಬಿಟ್ಟೆ.....
ನಿಮ್ಮ ಸ್ನೇಹಿತ
ನವೀನ ಕೆ. ಎಸ್.
ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
ಶಿವಪ್ರಕಾಶರು ನೆನಪಿಸಿದ ಇವಾನ್ ಲೆಂಡ್ಲ್ - ಮ್ಯಾಟ್ ವಿಲಾಂಡರ್ ರದ್ದು ಒಂದು ಇತಿಹಾಸ ಪ್ರಸಿದ್ಧ ಸ್ಪರ್ಧಾಳು ಜೋಡಿ - ಹಾರ್ಡ್ ಕೋರ್ಟ್ ನಲ್ಲಿ. ಇವರ ೧೯೮೭ರ ಯು.ಎಸ್ ಓಪನ್ ಫೈನಲ್ ನ ಹಣಾ ಹಣಿ ಮರೆಯಲಸಾಧ್ಯವಾದುದು. ಐದು ಸೆಟ್ ಗಳ ಈ ಮ್ಯಾಚ್ ಸುಮಾರು ಐದೂ ವರೆ ಗಂಟೆಗಳ ಕಾಲ ನಡೆದಿದ್ದು ವಿಲಾಂಡರ್ ಗೆದ್ದಿದ್ದರು. ಎರಡು ಸೆಟ್ ಟೈ ಬ್ರೇಕರ್ ವರೆಗೆ ನಡೆದಿತ್ತು.
ಈಗ್ಗೆ ನಡೆದ ಫೆಡರರ್ - ನದಾಲ್ ಪಂದ್ಯ ಇದೇ ರೀತಿಯ ರೋಚಕತೆಯನ್ನು ಪ್ರದರ್ಶಿಸಿತು