ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕತೆಗಾರ್ತಿ ದೊಡ್ಡಮ್ಮ

July 9, 2008 - 1:21pm — roopablrao

"ರೂಪವ್ವ ಬಾರೆ , ಆನಂದ ಬಾರಲಾ , ಒಂದ್ಕತೆ ಯೇಳ್ತೀನಿ " ಅಂತಾ ಆ ಹೆಂಗಸು ಕರೆದ ತಕ್ಶಣ, ಏನೇ ಮಾಡುತ್ತಿದ್ದರೂ ನಾವು ಅವಳ ಮುಂದೆ ಹಾಜಾರಾಗುತ್ತಿದ್ದೆವು.
ಅವಳ ಹೆಸರೇ ದೊಡ್ಡಮ್ಮ. ಪಕ್ಕದ ಮನೆಯವರಿಗೆ ಯಾವುದೋ ಸಂಬಂಧದವಳು. ಅವಾಗ ವಯಸ್ಸು ಎಷ್ಟು ಅಂತ ಗೊತ್ತಾಗ್ತಿರಲಿಲ್ಲ, ಅದೆಲ್ಲಾ ಬೇಕಾಗೂ ಇರಲಿಲ್ಲ.
ಈಗ ಅನ್ನಿಸುತ್ತಿದೆ ಸುಮಾರು ೬೫ -೭೦ ವರ್ಷವಿರಬೇಕು.

"ಎಲ್ಲಿ ಒಂದ್ನಾಕಾಣೆ ತತ್ತಾ . ಎಲೆ ಅಡಿಕೆ ತಕ್ಕೊಂತೀನಿ ."ಅವಳು ಕೇಳಿದ ತಕ್ಷಣ ಯಾರೂ ಒಬ್ಬ ಹುಡ್ಗ ಅಥವ ನಾನೋ ಯಾರಾದರೂ ತಮ್ಮ ಹುಂಡಿಯಿಂದ ಅವಳಿಗೆ ನಾಕಾಣೆ ಕೊಟ್ಟರೆ ಸೊಂಟಕ್ಕೆ ಸಿಗಿಸಿದ ತನ್ನ ಎಲೆ ಅಡಿಕೆ ಚೀಲದಿಂದ ಒಂದಷ್ಟು ಎಲೆ ಆಡಿಕೇನಾ ಕುಟ್ಕೊಂಡು ಕತೆ ಹೇಳಲು ಶುರು ಮಾಡುತ್ತಿದ್ದಳು.
ಅಬ್ಬಾ ಅವಳೊಂದು ಕಥಾ ಕೋಶವೇ ಇರಬೇಕು . ದಿನಕ್ಕೆ ಒಂದು ಹೊಸಾ ಕತೆ ಹೆಣೆಯುತ್ತಿದ್ದಳು.
ಅವಳ ಕತೆಗಳಾದರೂ ಎಂತಹದು. ಕರಡಿ , ರಾಜ ,ಸಿಂಹ, ರಾಜಕುಮಾರಿ, ಹೀಗೀ ಏನೇನೂ ಕತೆಗಳು . ನಮಗೆಲ್ಲಾ ದೊಡ್ಡಮ್ಮ ಎಂದರೆ ಅಚ್ಚು ಮೆಚ್ಚು.
ರಾತ್ರಿ ಕತ್ತಲೆಯಲ್ಲಿ ಸೀಮೆ ಎಣ್ಣೆ ದೀಪ ಹಚ್ಚಿಕೊಂಡು ವಠಾರದ ಮಕ್ಕಳೆಲ್ಲಾ ಅವಳ ಮುಂದೆ ಕೂತುಬಿಡ್ತಿದ್ದೆವು. ಅವಾಗ ಈಗಿನಂತೆ ಟಿ .ವಿ ಹುಚ್ಚು ಇರಲಿಲ್ಲವಲ್ಲ (ನಮ್ಮನೇಲಿ ಟಿ.ವಿ. ಇರಲಿ, ಕರೆಂಟೇ ಇರಲಿಲ್ಲ ) ಅದೇ ಒಂಥರಾ ಎಂಟರ್‌ಟೈನ್‍ಮೆಂಟ್ ನಮಗೆಲ್ಲಾ.
ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ರಸ ಸೋರಿಸಿಕೊಂಡು ಕತೆ ಹೇಳುತ್ತಿದ್ದರೂ ನಮಗ್ಯಾರಿಗೂ ಅಸಹ್ಯವೆನಿಸುತ್ತಿರಲಿಲ್ಲ.
"ದೊಡ್ಡಮ್ಮ ಮತ್ಯಾವುದಾದರೂ ಕತೆ ಹೇಳು " ಒಂದು ಕತೆ ಮುಗಿದ ನಂತರ ಮತ್ತೆ ದುಂಬಾಲು ಬೀಳುತ್ತಿದ್ದೆವು. ಎಷ್ಟೋ ಕತೆಗಳನ್ನು ಆಗಲೇ ಕೇಳಿದ್ದರೂ ಅವಳ ಬಾಯಿ ಕಣ್ಣಗಳ ಚಲನೆ , ಅವಳ ಭಾಷೆ ಒಂಥರಾ ಅಪ್ಯಾಯಮಾನವಾಗಿಸಿತ್ತು. ಅವಳೂ ಅಷ್ಟೆ ಒಂಚೂರು ಬೇಸರಿಸಿಕೊಳ್ಳದೇ ಹೇಳುತ್ತಿದ್ದಳು. ಒಂದು ರೀತಿಯ ಆತ್ಮೀಯ ಬಂಧವೇರ್ಪಟ್ಟಿತ್ತು ನಮ್ಮಲ್ಲೆಲ್ಲಾ
"ಚಿನ್ನದ ಪೆಟ್ಗೇಲಿ ಅಣ್ಣ, ರನ್ನದ ಪೆಟ್ಗೇಲಿ ಅಕ್ಕ, ಅಟ್ಟಾದ ಮೆಲ್ ಮಾವಾ ನಾಳೆ ಹೊತ್ಗೆ ಎಲ್ಲಾ ಮಾಯ " ಕತೆ ಯೊಂದ ಹೇಳುವಾಗ ಈ ವಾಕ್ಯ ನನ್ನ ಮನಸಲ್ಲಿ ಉಳ್ಕೊಂಡಿದೆ
"ನಮ್ಮನೇಲಿ ಅವರ ಜಾತಿ ಬೇರೆ. ಅವರ ಮನೆಗೆ ಹೋಗ್ಬೇಡ "ಹಾಗೆ ಹೀಗೆ ಅಂತ ಹೇಳಿದರೂ ನಾನು ಕೇಳುತ್ತಿರಲಿಲ್ಲ.
ಮತ್ತೆ ದೊಡ್ಡಮ್ಮ ಒಗಟು ಹೇಳುವುದರಲ್ಲಿ ನಿಸ್ಸೀಮಳು
"ಸಣ್ಣ ಪುಟ್ಟ ದೇವಸ್ಥಾನ ಬಗ್ಗಿ ಬಗ್ಗಿ ನಮಸ್ಕ್ಲಾರ"
"ಹಸಿರು ಗಿಡದ ಮ್ಯಾಗಿ ಮೊಸರು ಚೆಲ್ಯಾರು"
"ಅಡ್ಡಡ್ಡ ಬಾವಿ ನೀರು ಒಂಚೂರು ಇಲ್ಲ"

ಹೀಗೆ ಅವಳು ಒಗಟು ಕೆಳಿದಾಗ ದೊಡ್ಡಾರು ಸಣ್ಣವರು ಎಂದು ನೋಡದೆ ಭಾಗಿಯಾಗುತ್ತಿದ್ದರು.

ಎಷ್ಟೋ ಜನಪದ ಹಾಡುಗಳನ್ನು ಹಾಡುತ್ತಿದ್ದಳು. ಆ ಹಾಡುಗಳನ್ನು ಕಲಿತುಕೊಳ್ಳೊದಿಕ್ಕೂ ನಮಗೆ ಪೈಪೋಟಿ

ತೊಟ್ಟಿಲ ಒತ್ಕೊಂಡು ತವರ ಬಣ್ನ ತೊಟ್ಕೊಂದು

ಅದೇನು ಮತ್ತೆ ಗೊತ್ತಿಲ್ಲ
ಕೂಸು ಇದ್ದ ಮನೀಗೆ ಬೀಸಣಿಕೆ ಯಾತಕ

ಕೂಸ ಕಂದಯ್ಯ ಒಳ ಹೊರಗ
ಕೂಸ ಕಂದಯ್ಯ ಒಳ ಹೊರಗ
ಆಡಿದರ
ಬೀಸಣಿಗೆ ಗಾಳಿ ಸುಳಿದಾವು
-------------
------------------

ಅವಳಿಗೆ ಸಿನಿಮಾ ಹಾಡುಗಳು ಹಿಡಿಸುತ್ತಿರಲಿಲ್ಲ
ನಾನು ನಂಜುಂಡಿ ಕಲ್ಯಾಣ ಸಿನಿಮಾದ "ಒಳಗೆ ಸೇರಿದರೆ ಗುಂಡು " ಹಾಡನ್ನ ಅವಳ ಮುಂದೆ ಹಾಡಿದ್ದಲ್ಲದೆ ಅದಕ್ಕೆ ಕುಣಿದದ್ದಕ್ಕೆ ಹಿಗ್ಗ್ಗಾಮುಗ್ಗಾ ಬೈದಿದ್ದ್ಳು
"ಯವ್ವಿ ಎಂಥಾ ಕಾಲ ಬಂತವ್ವಿ . ಇನ್ನೂ ಎಂತೆಂಥಾ ಹಾಡು ಕೇಳ್ಬೇಕೋ " ಅನ್ನುತ್ತಿದ್ದಳು

ಈಗ ಅವಳಿಲ್ಲ.

ಬಹುಷ ಅವಳು ಈಗ ಯಾವ ಮನೆಯಲ್ಲೂ ಕಾಣ ಸಿಗುವುದಿಲ್ಲ

ಯಾಕೆಂದರೆ ಈಗಿನ ಅಜ್ಜಿಯರೆಲ್ಲರೂ ಟಿ.ವಿ ಯಲ್ಲಿ ಮಗ್ನರಾಗಿದ್ದಾರೆ

ಕತೆ ಹೇಳುವ , ಕತೆ ಕೇಳುವ ತಾಳ್ಮೆ ಈಗ ಯಾರಲ್ಲಿಯೂ ಕಾಣುವುದಿಲ್ಲ

ನೆನ್ನೆ ನನ್ನ ಮಗಲು ಫ್ಯಾನ್ ಕತೆ ಹೇಳು ನೀರು ಕತೆ ಹೇಳು, ಅಂತ ಪೀಡಿಸುತಿದ್ದಾಗ ನಾಲಕ್ಕು ಚಚ್ಚಿ ಮಲಗಿಸಿದೆ. ನಂತರ ಶಾಂತವಾಗಿ ಯೋಚಿಸಿದಾಗ ದೊಡ್ಡಮ್ಮ ನೆನಪಾದಳು.
ಆ ತಾಳ್ಮೆ, ಆ ನಲ್ಮೆ ನಮಗೆ ಬರುತ್ತದೆಯೇ?

ಹೀಘೆ

  • ಪ್ರಬಂಧ
~.~
  • Login or register to post comments
  • 321 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2008 - 10:24am — vikashegde

ಉ: ಕತೆಗಾರ್ತಿ ದೊಡ್ಡಮ್ಮ

vikashegde's picture

-------------ನೆನ್ನೆ ನನ್ನ ಮಗಲು ಫ್ಯಾನ್ ಕತೆ ಹೇಳು ನೀರು ಕತೆ ಹೇಳು, ಅಂತ ಪೀಡಿಸುತಿದ್ದಾಗ ನಾಲಕ್ಕು ಚಚ್ಚಿ ಮಲಗಿಸಿದೆ---------

ಎಂತಾ ತಾಯಂದ್ರಪಾ !! Sad ಮಗು ಕೇಳಿದಾಗ ಒಂದು ಪುಕ್ಸಟ್ಟೆ ಕತೆ ಹೇಳಕ್ಕಾಗದೇ ಇರುವಷ್ಟೇನಿದೆ !!
ಕತೆ ಹೇಳುವುದರಿಂದ ಮಕ್ಕಳ ಮನಸ್ಸಿನಲ್ಲಿ ಕಾಲ್ಪನಿಕ ಪ್ರಪಂಚವೊಂದು ರೂಪುಗೊಂಡು ಯೋಚನಾಶಕ್ತಿ ಬಹಳ ಚೆನ್ನಾಗಿ ಬೆಳವಣಿಗೆಯಾಗುತ್ತದೆ.
ತಾಳ್ಮೆ ನಮಗೆ ಬರುತ್ತದೆಯೇ ಅಂತ ಬೇರೆಯವರಿಗೆ ಕೇಳಿದರೆ ಬರುವುದಿಲ್ಲ. ಮನಸ್ಸಿದ್ದಲ್ಲಿ ಮಾರ್ಗ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 1:18pm — roopablrao

ಉ: ಕತೆಗಾರ್ತಿ ದೊಡ್ಡಮ್ಮ

roopablrao's picture

ವಿಕಾಸ್
ನೀವೂ ಒಮ್ಮೆ ಯಾವುದಾದರೂ ಮಗುವಿನ ಹತ್ತಿರ ಕತೆ ಹೇಳಲು ಶುರು ಮಾಡಿ ಗೊತ್ತಾಗುತ್ತೆ. ಮಗುವಿನ ನೂರಾರು ಪ್ರಶ್ನೆಗಳು ಅದಕ್ಕೆಲ್ಲಾ ಸಮಾಧಾನದಿಂದ ಹೇಳುವಷ್ಟು ತಾಳ್ಮೆ ಈಗ ನನಗಷ್ಟೇ ಅಲ್ಲಾ ದುಡಿಯುತ್ತಿರುವ ಯಾವ ತಾಯಂದಿರಿಗೂ ಇರುವುದಿಲ್ಲಾ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 1:31pm — vikashegde

ಉ: ಕತೆಗಾರ್ತಿ ದೊಡ್ಡಮ್ಮ

vikashegde's picture

ಇಲ್ಲಿ ದುಡಿಯುತ್ತಿರುವವರು ಎಂಬ ಸ್ಪೆಷಾಲಿಟಿ ಏನೂ ಇಲ್ಲ. ನೀವು ಹೊರಗೆ ಕೆಲಸ ಮಾಡುವುದರಿಂದ ನಿಮಗೆ ಸುಸ್ತಾಗಿ ತಾಳ್ಮೆ ಕಡಿಮೆ ಎಂದು ನೀವಂದುಕೊಂಡಿರಬಹುದು.
ಆದರೆ ತಾಳ್ಮೆ ಎನ್ನೋದು ಅದರ ಮೇಲೆ ಅಷ್ಟು ಡಿಪೆಂಡ್ ಆಗಿರೋಲ್ಲ. ಮನೆಯಲ್ಲಿರುವವರೂ ಕೆಲಸ ಮಾಡುತ್ತಾರೆ. ಅವರಿಗೂ ಸುಸ್ತಾಗುತ್ತದೆ.
ಮಗು ನೂರಾರು ಪ್ರಶ್ನೆಗಳನ್ನು ಕೇಳುವುದು ಸಹಜ. ತಾಳ್ಮೆವಹಿಸಿ ಉತ್ತರ ಕೊಟ್ಟು ಅದರ ಬುದ್ಧಿಶಕ್ತಿ ಬೆಳೆಸುವುದು ತಂದೆ ತಾಯಿಯರ ಕರ್ತವ್ಯ. ಅದಕ್ಕೆ ಕಾರಣಗಳನ್ನು ಹುಡುಕಬಾರದು.
ಅದು ಏನಾದರೂ ಕೇಳಿದಾಗ ಸ್ವಂತ ತಾಯಿಯೇ ಚಚ್ಚಿ ಮಲಗಿಸಿಬಿಟ್ಟರೆ ಮಗು ಇನ್ನೆಲ್ಲಿ ಹೋಗಬೇಕು !! Sad
**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 6:51pm — yuvapremi

ಉ: ಕತೆಗಾರ್ತಿ ದೊಡ್ಡಮ್ಮ

yuvapremi's picture

ರೊಪ ಮ್ಯಾಡಮ್ ರವರು ತಮ್ಮ ಮಗಳಿಗೆ ಚಚ್ಚಿ , ಕಚ್ಚಿ ಮಲಗಿಸಿದರು ಅಂತ ಕೇಳಿ ನನಗೆ ಬಹಳ ಬಯ ಆಯ್ತು..!! Sad
ನಾನು ಯಾವುದಕ್ಕು ನನ್ನ ಹೆಲ್ಮೆಟ್ ಹುಡುಕಿ ಕೈನಲ್ಲಿ ಇಟ್ಕೊಬೇಕುಪ್ಪ...!! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 11, 2008 - 10:14am — pallavi.dharwad

ಉ: ಕತೆಗಾರ್ತಿ ದೊಡ್ಡಮ್ಮ

pallavi.dharwad's picture

ಚೆನ್ನಾಗಿದೆ ರೂಪಾ ಪ್ರಬಂಧ.

ನೀವು ಪ್ರಬಂಧದ ಶೀರ್ಷಿಕೆಯಲ್ಲಿ ಬರೆದಿದ್ದರೂ, ನನಗಂತೂ ಅದು ಗತಕಾಲದ ಸೊಗಸಾದ ತುಣುಕೊಂದನ್ನು ಎತ್ತಿ ತಂದಿರಿಸಿದಂತೆ ಕಾಣುತ್ತಿದೆ. ನಾನೂ ಚಿಕ್ಕವಳಿದ್ದಾಗ ಇಂಥ ಕತೆಗಳನ್ನು ಹಾಡುಗಳನ್ನು ಕೇಳಿದ್ದೇನೆ. ಆದರೆ, ನೀವು ಹೇಳಿದಂತೆ, ಚಿಕ್ಕವರಿಗೆ ಅವನ್ನು ಹೇಳುವ ತಾಳ್ಮೆ ನಮ್ಮಲ್ಲಿ ಉಳಿದಿಲ್ಲ.

ಏಕೆ? ನಮ್ಮ ಕಲ್ಪನಾಶಕ್ತಿ ಸತ್ತು ಹೋಗಿದೆಯೆ ಅಥವಾ ನಾವು ಕ್ರಮೇಣ ನಿರ್ಭಾವುಕರಾಗುತ್ತಿರುವೆವೆ? ಏಳು ಸಮುದ್ರದಾಚೆ ಒಂದು ದ್ವೀಪ, ಅಲ್ಲೊಂದು ಮರ, ಅದರಲ್ಲೊಂದು ಪಂಜರ, ಅಲ್ಲೊಂದು ಗಿಣಿ, ಅದರಲ್ಲಿದೆ ರಾಕ್ಷಸನ ಪ್ರಾಣ ಎಂಬೆಲ್ಲ ಕಲ್ಪನೆಗಳು ಎಲ್ಲಿ ಕಳೆದುಹೋದವು?

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿವಾಹದ ವಯಸ್ಸು
  • ಜನಪದ ತ್ರಿಪದಿಗಳು
  • ಮರಳಿ ಗೂಡಿಗೆ ಬಂತು ಮರಿ ಹಕ್ಕಿ
  • ನಿದ್ದೆಯಿಂದ ಆದ ನನ್ನ ಅನುಭವಗಳು
  • ಹೇ ಚಂದ್ರನೇ...
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 101 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator