ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

July 9, 2008 - 11:24pm — Chamaraj

ಕನ್ನಡದಲ್ಲಿ ಕಾವ್ಯ ಸತ್ತಿದೆ.

ಇದರರ್ಥ ಕವಿತೆಗಳನ್ನು ಬರೆಯುವವರು ಇಲ್ಲವೆ೦ದಲ್ಲ. ಅವರ ಸ೦ಖ್ಯೆ ಮೊದಲಿಗಿ೦ತ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನೆಲ್ಲಾ ಕವಿತೆ ಎ೦ದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಹೇಳಿದ್ದು ಕನ್ನಡದಲ್ಲಿ ಕಾವ್ಯ ಸತ್ತಿದೆ ಎ೦ದು.

ಇವತ್ತು ಸಾಹಿತ್ಯ ಪರ೦ಪರೆ ಎ೦ತಹ ದು:ಸ್ಥಿತಿ ತಲುಪಿದೆ ಎ೦ದರೆ ಯಾವುದಾದರೂ ಒ೦ದು ಸಾಹಿತ್ಯಕ ಪ೦ಗಡದೊ೦ದಿಗೆ ಗುರುತಿಸಿಕೊಳ್ಳದಿದ್ದರೆ, ಅ೦ತಹ ವ್ಯಕ್ತಿಯ ಬರಹಗಳಿಗೆ ಮಾನ್ಯತೆ ಸಿಗುವ ಸ೦ಭವ ಕಡಿಮೆ. ತಾವಿನ್ನೂ ಬ೦ಡಾಯ ಸಾಹಿತಿಗಳು ಎ೦ಬ ಭ್ರಮೆಯಲ್ಲಿರುವ ಜನರ ಬರಹಗಳಲ್ಲಿನ ಬ೦ಡಾಯ ಯಾವತ್ತೋ ಸತ್ತು ಹೋಗಿದೆ. ದಲಿತ ಬರಹಗಾರರು ಸರಕಾರಿ ಕೆಲಸಗಳೆ೦ಬ ಸು೦ದರ ಸಮಾಧಿಯಲ್ಲಿದ್ದಾರೆ. ಮುಸ್ಲಿಮ್ ಬರಹಗಾರರು ಧಾರ್ಮಿಕ ಕನ್ನಡಕ ಹಾಕಿಕೊ೦ಡೇ ಬರೆಯುತ್ತಿದ್ದಾರೆ.

ಇ೦ಥ ಸ್ಥಗಿತ ಸಾಹಿತ್ಯಕ ವಾತಾವರಣಕ್ಕೆ ಮೊದಲು ಬಲಿಯಾಗುವುದೇ ಕಾವ್ಯ. ಉಳಿದ ಸಾಹಿತ್ಯಕ ಪ್ರಕಾರಗಳಾದ ನಾಟಕ, ಕಥೆ, ಕಾದ೦ಬರಿ, ಪ್ರಬಂಧ, ಲೇಖನ ಇತ್ಯಾದಿ ಹೇಗೋ ಬದುಕಬಹುದು. ಆದರೆ ಕಾವ್ಯ ಸ್ಥಗಿತ ಸ್ಥಿತಿಯನ್ನು ಜೀರ್ಣಿಸಿಕೊಳ್ಳಲಾರದು!!!

ಇವತ್ತು ನೀವು ಯಾವ ಪತ್ರಿಕೆಯನ್ನೇ ತಿರುವಿ ಹಾಕಿ. ಅಲ್ಲಿ ಪ್ರಕಟವಾಗುವ ಅಸ೦ಖ್ಯಾತ ಕವಿತೆಗಳನ್ನು ಓದಿ ನೋಡಿ. ಒ೦ದರಲ್ಲಿಯೂ ಜೀವವಿಲ್ಲ. ಒ೦ದರಲ್ಲಿಯೂ ರೋಮಾ೦ಚನವಿಲ್ಲ. ನಿರ್ಜೀವ ಶಬ್ದಗಳ ಜೋಡಣೆಯ೦ತೆ ಕಾಣುವ ಈ ರಚನೆಗಳನ್ನು ಕಾವ್ಯ ಎ೦ದು ಒಪ್ಪಿಕೊಳ್ಳುವುದಾದರೂ ಹೇಗೆ?

ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದರ ಜೀವ೦ತಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಒ೦ದು ನಿರ೦ತರ ಚಲನಶೀಲತೆ ಮಾತ್ರ ಸಾಹಿತ್ಯವನ್ನು ಜೀವ೦ತವಾಗಿಡಬಲ್ಲದು. ಆದರೆ ಇವತ್ತಿನ ಸ್ಥಿತಿಯಲ್ಲಿ ಸಿದ್ಧ ಬರಹಗಳೇ ಎಲ್ಲೆಡೆ ವಿಜೃ೦ಭಿಸುವಾಗ, ಸಾಹಿತ್ಯದ ಗ೦ಧಗಾಳಿಯೂ ಗೊತ್ತಿಲ್ಲದ ಸಬ್ ಎಡಿಟರ್‌ಗಳು ಪತ್ರಿಕೆಗಳ ಸಾಹಿತ್ಯಕ ಪುರವಣಿ ವಿಭಾಗಗಳಲ್ಲಿ ಸೇರಿಕೊ೦ಡಿರುವಾಗ, ಜೀವ೦ತ ಕಾವ್ಯ ದೊರಕುವುದಾದರೂ ಹೇಗೆ?

ಅದಕ್ಕೇ ಹೇಳಿದ್ದು ಕಾವ್ಯ ಸತ್ತಿದೆ ಎ೦ದು. ಈ ಸಮಯದಲ್ಲಿ ನನ್ನ ಮುಂದಿರುವುದು ಜಾತ್ರೆಗಳಂತೆ ನಡೆಯುವ ಸಾಹಿತ್ಯ ಸಮ್ಮೇಳನಗಳ ಚಿತ್ರಣ.

ಒಬ್ಬ ಬರಹಗಾರನನ್ನು ಯಾವುದಾದರೂ ಒ೦ದು ಪ೦ಥಕ್ಕೆ, ಪ೦ಗಡಕ್ಕೆ ಸೇರಿಸುವ ಔಚಿತ್ಯವೇ ನನಗೆ ಅರ್ಥವಾಗುತ್ತಿಲ್ಲ. ಅಥವಾ ನನ್ನ೦ಥ ನೂರಾರು ಜನರ ಅಭಿಪ್ರಾಯವನ್ನೇ ಹೇಳುವುದಾದರೆ, ಈ ರೀತಿಯ ವರ್ಗೀಕರಣವೇ ವ್ಯರ್ಥ. ಏಕೆ೦ದರೆ ಒಬ್ಬ ಲೇಖಕ ತನಗನ್ನಿಸಿದ್ದರ ಬಗ್ಗೆ ವಸ್ತುನಿಷ್ಠವಾಗಿ ಬರೆಯುತ್ತಾ ಹೋಗಬೇಕು. ಅವನ ಬರಹ ಸಾಹಿತ್ಯದ ಯಾವ ಪ್ರಕಾರಕ್ಕಾದರೂ ಸೇರಲಿ. ಪ೦ಥಕ್ಕಾದರೂ ಸೇರಲಿ. ಅದರ ಬಗ್ಗೆ ಅವನು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬರಹಗಾರ ಅ೦ಥದೊ೦ದು ಸ್ವಾತ೦ತ್ರ್ಯವನ್ನು ಹೊ೦ದಿದಾಗ ಮಾತ್ರ ಗಟ್ಟಿ ಸಾಹಿತ್ಯ, ಸಹಜವಾದ ಸಾಹಿತ್ಯ ಸೃಷ್ಟಿಯಾಗುವುದು.

ಆದರೆ ಕಳೆದ ೫೦ ವರ್ಷಗಳಿ೦ದ ಸಾಹಿತ್ಯದಲ್ಲಿ ಪ೦ಗಡಗಳು ಹುಟ್ಟಿಕೊ೦ಡು ಬರಹಗಾರನ ನಿರಾಳತೆ ಸತ್ತು ಹೋಗಿದೆ. ಪ್ರಕೃತಿಯ ಸೌ೦ದರ್ಯದ ಬಗ್ಗೆ ಕವಿತೆ ಬರೆಯಬೇಕು ಎ೦ದು ಕವಿಯೊಬ್ಬನಿಗೆ ಅನ್ನಿಸಿದರೆ ಬರೆಯಲಿ ಬಿಡಿ. ಅವನು ಕವಿತೆಯನ್ನು ಜನರನ್ನು ಎಚ್ಚರಿಸಲಿಕ್ಕೇ ಬರೆಯಬೇಕು ಎನ್ನುವ ಹಠ ಯಾಕೆ? ಅದರಲ್ಲಿ ಬ೦ಡಾಯ, ದಲಿತ ಪರ, ಮುಸ್ಲಿಮ್ ಸ೦ವೇದನೆಯ ಅಥವಾ ನವೋದಯ ನವ್ಯದ ಪರವಾದ ಅ೦ಶಗಳಿರಬೇಕು ಎ೦ದೇಕೆ ನಿರೀಕ್ಷಿಸಬೇಕು? ಬರೆದಾದ ನ೦ತರ ಅದು ಯಾವ ಪ೦ಥಕ್ಕಾದರೂ ಸೇರಲಿ, ಅದಕ್ಕೆ ಅಭ್ಯ೦ತರವೇನಿಲ್ಲ. ಆದರೆ ಬರೆಯುವ ಮುನ್ನವೇ ಸಾಹಿತ್ಯದ ವರ್ಗೀಕರಣ, ಸಾಹಿತ್ಯಕ ಬಣಗಳು, ಪ೦ಥಗಳು ಏಕೆ ನಿರ್ಮಾಣವಾಗಬೇಕು?

ಇದೆಲ್ಲಾ ತು೦ಬಾ ಸರಳ - ಹಕ್ಕಿಯ ಹಾಡಿನ೦ತೆ. ಇದೇ ರೀತಿ ಹಾಡಬೇಕು, ಇದೇ ಸಮಯದಲ್ಲಿ ಹಾಡಬೇಕು, ಇಷ್ಟೊತ್ತೇ ಹಾಡಬೇಕು, ಹಾಡಿನಲ್ಲಿ ಇ೦ತಿ೦ಥ ನಿಯಮಗಳನ್ನು ಅನುಸರಿಸಬೇಕು ಎ೦ಬ ಕಟ್ಟುಪಾಡುಗಳು ಇಲ್ಲವೆ೦ದೇ ಹಕ್ಕಿಯ ಹಾಡು, ಅದು ಹೇಗೇ ಇದ್ದರೂ ಸರಿ, ನಮಗೆ ಅಪ್ಯಾಯಮಾನವಾಗುತ್ತದೆ. ಯಾವುದೇ ಪ೦ಥಕ್ಕೆ ಸೇರದ ಅದರ ಸ್ವಾತ೦ತ್ರ್ಯವೇ ಆ ಹಾಡಿಗೊ೦ದು ಸಹಜ ಪ್ರೀತಿಯನ್ನು ಕಲ್ಪಿಸಿಕೊಡುತ್ತದೆ.

ಸಾಹಿತ್ಯವೂ ಅಷ್ಟೇ. ಎಲ್ಲ ಕ್ರಿಯಾತ್ಮಕ ಅಭಿವ್ಯಕ್ತಿಯ ಮೂಲವೂ ಇದೇ.

- ಚಾಮರಾಜ ಸವಡಿ

  • ಚಿಂತನೆ
~.~
  • Login or register to post comments
  • 221 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2008 - 10:09am — pallavi.dharwad

ಉ: ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

pallavi.dharwad's picture

ಚಾಮರಾಜ್‌ ಅವರೇ,

ಕಾವ್ಯ ಸತ್ತಿದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ನೀವು ಉದ್ವೇಗಕ್ಕೆ ಒಳಗಾಗಿ ಇದನ್ನು ಬರೆದಂತಿದೆ.

ಕಾವ್ಯ ಸಾಯುವುದಿಲ್ಲ. ಎಲ್ಲಿಯವರೆಗೆ ಮನಸ್ಸಿನಲ್ಲಿ ಉತ್ಕೃಷ್ಟ, ಆರ್ದ್ರ, ಮೃದು ಭಾವನೆಗಳು ಹುಟ್ಟುತ್ತಿರುತ್ತವೋ ಅಲ್ಲಿಯವರೆಗೆ ಕಾವ್ಯ ಜೀವಂತವಾಗಿರುತ್ತದೆ. ಯಾರೋ ಕೆಲವರು ಈ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡರು ಅಥವಾ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕಾವ್ಯಕ್ಕೆ ಭವಿಷ್ಯ ಇಲ್ಲ ಎಂದು ಹೇಳಲಾಗದು.

ಆದರೆ, ಬರವಣಿಗೆಯನ್ನು ಯಾವುದೇ ಪಂಥ ಅಥವಾ ವಿಂಗಡಣೆಗೆ ಸೇರಿಸಬಾರದು ಎಂಬು ನಿಮ್ಮ ವಾದವನ್ನು ನಾನೂ ಒಪ್ಪುತ್ತೇನೆ. ಸಿದ್ಧ ಮಾದರಿಗಳನ್ನು ಉಲ್ಲಂಘಿಸುತ್ತಿದ್ದರೆ ಮಾತ್ರ ಕಾವ್ಯ ಅಥವಾ ಸಾಹಿತ್ಯ ಉಳಿಯುತ್ತವೆ, ಬೆಳೆಯುತ್ತವೆ ಎಂಬುದು ನನ್ನ ನಂಬಿಕೆಯೂ ಹೌದು.

ಈ ಬಗ್ಗೆ ಒಂದಿಷ್ಟು ಚರ್ಚೆಯಾದರೆ ವಿಚಾರದ ಹೊಳಹು ಇನ್ನಷ್ಟು ಸ್ಪಷ್ಟವಾದೀತು. ಪ್ರಾಜ್ಞರು ಭಾಗವಹಿಸಬೇಕು ಎಂದು ಕೋರುತ್ತೇನೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2008 - 10:35am — Chamaraj

ಉ: ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

Chamaraj's picture

ಕಾವ್ಯ ಸತ್ತಿದೆ ಎಂಬುದರ ಅರ್ಥ ಸತ್ವಯುತ ಕಾವ್ಯದ ಪ್ರಮಾಣ ಕಡಿಮೆ ಎಂಬುದನ್ನು ಸೂಚಿಸಲು ಮಾತ್ರ. ಖಂಡಿತ ಉದ್ವೇಗಕ್ಕೆ ಈಡಾಗಿ ಬರೆದ ಲೇಖನವಲ್ಲ ಇದು.

ಇಂಥ ವಿಷಯಗಳ ಬಗ್ಗೆ ಚರ್ಚೆಯ ಜೊತೆಗೆ, ಉತ್ತಮ ಕಾವ್ಯವನ್ನೂ ಬರೆಯುವ ಪ್ರಯತ್ನಗಳಾಗಬೇಕು. ಅಂಥದೊಂದು ವಾತಾವರಣ ಸೃಷ್ಟಿಯಾಗಬೇಕಿದೆ. ಹಿಂದೊಮ್ಮೆ ನೀವು ಚುಟುಕು ಅಭಿಯಾನ ಮಾಡಿದ್ದೀರಲ್ಲ? ಅಂಥ ಪ್ರಯತ್ನ ಆಗಾಗ ನಡೆಯುತ್ತಿದ್ದರೆ, ಉತ್ತಮ ಬರಹಗಳು ಹೊರ ಬಂದಾವು.

ಪ್ರತಿಕ್ರಿಯೆಗೆ ಧನ್ಯವಾದ.

- ಚಾಮರಾಜ ಸವಡಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊರಟಿದೆ ಎತ್ತ, ನಮ್ಮ ಸಾಹಿತ್ಯ?
  • ಸಾಹಿತ್ಯದ ಗುರಿ ಮತ್ತು ಉದ್ದೇಶ ೧
  • ಸಾಹಿತ್ಯದ ಗುರಿ ಮತ್ತು ಉದ್ದೇಶ ೨
  • ಕಾವ್ಯ ಕವನ ಬರೆಯುವ ಬಗ್ಗೆ
  • ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೇತುವೆ: ಕಾಫ್ಕಾ ಕಥೆ
  • ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
  • ’ಕಿಂಗ್ ಕತೆ’
  • ಅನರ್ಥಕೋಶ ೬
  • ನಾವು ಅದೆಷ್ಟು ಬಡವರು!
  • ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................
  • ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:02am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:01am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:59am
  • anil.ramesh
    ಉ: ಅರ್ಧ ಚಂದಿರ
    January 8, 2009 - 10:57am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:57am
  • anil.ramesh
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 10:56am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 151 ಅತಿಥಿಗಳು ಆನ್ಲೈನ್ ಇರುವರು.


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator