ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ತಾಯಿ ಮತ್ತು ಮಗಳಿಗೆ.

July 10, 2008 - 12:48pm — Jayalaxmi.Patil

ಸೀತೆ ನಿನ್ನ ಮಗಳೆ?
ನಿಜ ಹೇಳೆ ಭೂಮಿ
ಹೌದೆ! ಹಾಗಾದರೆ
ನೀನೇಕೆ ಕಲಿಸಲಿಲ್ಲ
ಅವಳಿಗೆ
ತಪ್ಪಿಲ್ಲದಾಗ ಸಿಡಿಯುವುದನ್ನು
ಎದೆಯ ಮೇಲೆ ನಿಂತು
ನೋಯಿಸುವವರ ಎದೆ
ನಡುಗಿಸುವುದನ್ನು
ಇಡೀ ಜೀವಮಾನದಲಿ
ಎಂದಾದರೂ ವರ್ತಿಸಿದಳೆ
ಆಕೆ ನಿನ್ನಂತೆ
ಇಲ್ಲಾ ನಿನ್ನುದರದಲ್ಲಿ
ಜನಿಸಿದ ದುರ್ಬಲ
ಶಿಶುವೆ
ಸೀತೆ;ನಿನ್ನ ಮಗಳೆ?
*
ಜಗತ್ತು ಬಲ್ಲ
ನಿನ್ನ ಕತೆಯನ್ನು
ಹೇಳಲು ನಾನಿಲ್ಲಿ
ಕುಳಿತಿಲ್ಲ ಸೀತೆ
ನಿನ್ನನ್ನೆ ಕೇಳಬೇಕಿದೆ
ಪ್ರಶ್ನೆಗಳು ಹಲವಾರು
ಎಲ್ಲ ಬೇಡ
ಉತ್ತರಿಸು ಈ ಕೆಲವಕ್ಕಾದರೂ
ಹೆಣ್ಣುಗಳೆಲ್ಲ ಇರಬೇಕು
ಸೀತೆಯಂತೆ ಎಂದಾಗಲೆಲ್ಲ
ಕೈ ಕಾಲು
ಕಟ್ಟಿ ಹಾಕಿದ ಅನುಭವ
ಹೇಗಿದ್ದೆ ಸೀತೆ ನೀನು?
..............
ಭಾವನೆಗಳಿಲ್ಲದ ಕಲ್ಲಿನಂತೆ?
ಎಲ್ಲದಕ್ಕೂ ಕತ್ತಾಡಿಸುವ
ಕೋಲೆ ಬಸವನಂತೆ?
ಹೆಚ್ಚು ನಕ್ಕರೆ
ಮಾತಾಡಬೇಕಾದೀತು
ಮಾತಾಡಿದರೆ ಪ್ರಶ್ನೆಗಳೆದ್ದಾವು
ಎಂಬ ಹೆದರು ಪುಕ್ಕಿಯಂತೆ?
ಅಥವಾ
ನಿನ್ನದೆಂಬ ಆಸೆಗಳ
ಕೊಂದುಕೊಂಡು...
ಯಾಕೆ ಹಾಗಿದ್ದೆ ಸೀತೆ?
ಹೇಗಿದ್ದೆ ನೀನು??....

  • ಕಾವ್ಯ ಮತ್ತು ಕವನ
~.~
  • Login or register to post comments
  • 323 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2008 - 2:01pm — Sunil Jayaprakash

ಉ: ತಾಯಿ ಮತ್ತು ಮಗಳಿಗೆ.

Sunil Jayaprakash's picture

ನಾನು ಕೆಲವು ಹೆಂಗಸರಿಗೆ (ಅಥವಾ ಹುಡುಗಿಯರು ಅಂದರೆ ಸರಿ) ಕೇಳಿದ್ದೀನಿ. ಅವರಿಗೆ ರಾಮನನ್ನು ಕಂಡರೆ ಸಿಟ್ಟು, ಸೀತೆಯನ್ನು ಕಾಡಿಗಟ್ಟಿದ್ದಕ್ಕಾಗಿ. ಅದರಲ್ಲೂ, ರಾಮ ಸೀತೆಯನ್ನು ಅಗ್ನಿಪರೀಕ್ಷೆಗೆ ಈಡುಮಾಡಿದ್ದರ ಬಗ್ಗೆಯಂತೂ ಸಿಕ್ಕಾಪಟ್ಟೆ ಸಿಟ್ಟು. ಸೀತೆಯ ಮೇಲೂ ಸ್ವಲ್ಪ ಸಿಟ್ಟಿದೆ, ಅವಳು ಯಾವುದಕ್ಕೂ ಸಿಡಿದೇಳುತ್ತಿರಲಿಲ್ಲ ಎಂಬುದಾಗಿ, ಆದರೆ ಎಷ್ಟಾದರೂ ಹೆಣ್ಣಾದ್ದರಿಂದ ಸಿಟ್ಟಿಗಿಂತ ಕನಿಕರ ಜಾಸ್ತಿ ಎನ್ನಬಹುದು.

ನೀವು ನೀಡಿದ ಪ್ರಶ್ನೆಗಳಿಗೆ ಮತ್ತೊಬ್ಬಳು ಹೆಣ್ಣೇ ಉತ್ತರ ಹೇಳಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 11, 2008 - 4:04pm — Jayalaxmi.Patil

ಉ: ತಾಯಿ ಮತ್ತು ಮಗಳಿಗೆ.

Jayalaxmi.Patil's picture

ನಿಮ್ಮಗಳ ಉತ್ತರವೂ ಬೇಕು ಈ ಎಲ್ಲೆ ಪ್ರಶ್ನೆಗಳನ್ನು ಹೊತ್ತ ಹೆಣ್ಣು ಮನಸುಗಳಿಗೆ ಸುನೀಲ್. ಬರೀ ಹೆಂಗಸರಿಗೆ ಮಾತ್ರ ಅಲ್ಲ ಸರಿ ತಪ್ಪುಗಳನ್ನು ಹಾಗ್ಹಾಗಿಯೇ ನೋಡುವ ಪ್ರತಿಯೊಬ್ಬರಿಗೂ ಹಾಗೇ ಅನಿಸೋದು.ಅಲ್ಲವೆ?
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 5:13am — ASHOKKUMAR

ಉ: ತಾಯಿ ಮತ್ತು ಮಗಳಿಗೆ.

ASHOKKUMAR's picture

ಭೂಮಿಯೂ ಕ್ಷಮಾಗುಣಕ್ಕೆ ಹೆಸರಾದವಳೇ ಅಲ್ಲವೇ? ಸೀತೆಗೂ ಅದೇ ಗುಣ ಬಂದಿರುವುದು ಸಹಜವಲ್ಲವೇ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 1:03pm — Deeparavishankar

ಉ: ತಾಯಿ ಮತ್ತು ಮಗಳಿಗೆ.

Deeparavishankar's picture

ಗೊತ್ತಿಲ್ಲ...ನನ್ನ ಪ್ರಕಾರ ಎಲ್ಲ ಸ೦ಬ೦ಧಗಳ ಬುನಾದಿಯೇ ನ೦ಬಿಕೆ. ರಾಮ ತನ್ನ ಸೀತೆಯಲ್ಲೇ ಅದನ್ನು ಕಳೆದುಕೊ೦ಡ ಮೇಲೆ ಬಹುಶಃ ಸೀತೆಗೆ ಎಲ್ಲದರ ಮೇಲೆ ನ೦ಬಿಕೆ ಹೊರಟು ಹೋಗಿ ನಿರ್ಲಿಪ್ತಳಾಗಿಬಿಟ್ಟಳೇನೋ. ನಿರ್ಲಿಪ್ತಿ ಕೋಪ, ತಾಪ ನೋವಿಗಿ೦ತಲೂ ಭಯ೦ಕರವಾದುದು. ಸಿಡಿದೇಳಬೇಕಾದ ಒತ್ತಡವೂ ಇರುವುದಿಲ್ಲ ನಿರ್ಲಿಪ್ತಿಯಲ್ಲಿ. ಆ ಸ್ಥಿತಿಗೆ ಯಾರೇ ಯಾರನ್ನೇ ದೂಡಿದರೂ ಅದು ಅಕ್ಷಮ್ಯ. ರಾಮನಿಗೆ ನನ್ನ ಧಿಕ್ಕಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 2:50pm — Jayalaxmi.Patil

ಉ: ತಾಯಿ ಮತ್ತು ಮಗಳಿಗೆ.

Jayalaxmi.Patil's picture

ಬಹುಶಃ ಹಾಗೇ ಆಗಿರಬೇಕು ದೀಪಾ. ಅವಳ ನಿರ್ಲಿಪ್ತತೆಯನ್ನು ಅನುಕೂಲ ಮಾಡಿಕೊಂಡ ಪುರುಷ ಪ್ರಧಾನ ಸಮಾಜ ಅವಳನ್ನು ಎತ್ತರದ ಪೀಠದಲ್ಲಿಟ್ಟು ಹೆಣ್ಣು ಜೀವಗಳೆಲ್ಲ ಅವಳಂತಿರಬೇಕು ಎಂಬ ಲಕ್ಷ್ಮಣ ರೇಖೆ ಎಳೆದರು! ನಗರದಲ್ಲಿ ಉಸಿರುಗಟ್ಟಿಸುವ ವಾತಾವರಣ ಇಲ್ಲದಿರಬಹುದು ಹೆಣ್ಣುಮಕ್ಕಳ ಪಾಲಿಗೆ, ಆದರೆ ಒಮ್ಮೆ ಹಳ್ಳಿ(ಯಾವುದೇ ಹಳ್ಳಿಯಾಗಬಹುದು)ಗೆ ಹೋಗಿ ನೋಡಿ ಅಲ್ಲಿಯ ಹೆಣ್ಣುಮಕ್ಕಳ ಭಾವನೆ, ವಿಚಾರಗಳಿಗೆ ಕಿಮ್ಮತ್ತೇ ಇಲ್ಲ! ಹೆಣ್ಣು ಸಹನಶೀಲೆಯಾಗಿರತಕ್ಕದ್ದು!!
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 15, 2008 - 3:52pm — ಗಣೇಶ

ಉ: ತಾಯಿ ಮತ್ತು ಮಗಳಿಗೆ.

ಗಣೇಶ's picture

ರಾಮ ಕಾಡಿಗೆ ಬಾ ಎಂದು ಸೀತೆಯನ್ನು ಗೋಗರೆದಿರಲಿಲ್ಲ.
ಚಿನ್ನದ ಜಿಂಕೆ ಬೇಕೇ ಬೇಕೆಂದು ಹಠ ಮಾಡಿದ್ದು ಸೀತೆ.
ಈ ಸೀತೆಯ ' ರಾಮಾಯಣ' ಇಲ್ಲದಿರುತ್ತಿದ್ದರೆ, ರಾಮ ೧೪ ವರ್ಷ ಕಾಡಲ್ಲಿ ಹಾಯಾಗಿದ್ದು ಬರುತ್ತಿದ್ದ. Smiling
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2008 - 2:57pm — Jayalaxmi.Patil

ಉ: ತಾಯಿ ಮತ್ತು ಮಗಳಿಗೆ.

Jayalaxmi.Patil's picture

ನನಗೂ ನಿಮ್ಮ ಹಾಗೆ ಒಮ್ಮೊಮ್ಮೆ ಅನಿಸುತ್ತೆ ಗಣೇಶ್, ಬೇಕಿತ್ತಾ ಈ ಸೀತೆಗೆ ರಾಮನ ಹಿಂದೆ ಅವನ ನೆರಳಾಗಿ ನಡೆದೂ ಅವನಿಂದ ಅವಮಾನಗೊಳ್ಳುವುದು? ಆರಾಮಾಗಿ ಅಯೋದ್ಯೆಯಲ್ಲಿದ್ದು ರಾಜ್ಯವಾಳಿದ್ದಲ್ಲಿ ಏನಾದರು ಸಾಧಿಸಿದ ತೃಪ್ತಿಯಾದರೂ ಇರುತ್ತಿತ್ತು!! ;೦)
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಸಾಲು ಸರಿಯೇ?
  • ನೀನು ನಿನ್ನ.....
  • ರಾವಣನ ಪುನರ್ಜನ್ಮದ ಕಣಸು
  • ಅಬಲೆ-ಸಬಲೆ
  • ನನ್ನ ಹಂಬಲ
Syndicate content

ಲೇಖಕರು

Jayalaxmi.Patil's picture

ಪೂರ್ಣ ಹೆಸರು
ಜಯಲಕ್ಷ್ಮೀ.ಪಾಟೀಲ್.

ಪರಿಚಯ

ಓದುವ, ಸ್ವಲ್ಪ ಬರೆಯುವ ಹವ್ಯಾಸವಿದೆ. ಸಂಗೀತ ಇಷ್ಟ. ಅಭಿನಯ ನನ್ನ ವೃತ್ತಿ, ಪ್ರವೃತ್ತಿ ಮತ್ತು ಅಭಿಮಾನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator