ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಮರಳು ಗೂಡು,

July 11, 2008 - 11:05am — parvathi.G.r

ಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅವುಗಳ ಕಲರವ ಹೊಸ ಲೋಕಕ್ಕೆ ಒಯ್ಯುತ್ತವೆ. ಇಂತಹ ಸುಂದರ ವಾತಾವರಣವನ್ನೂ ಆಸ್ವಾದಿಸಿಯೇ ಇರಬೇಕು ಕವಿ ಪು.ತಿ.ನ ಅವರು ಬರೆದದ್ದು " ಈ ಬಾನು, ಈ ಚುಕ್ಕಿ, ಈ ಹೂವು, ಈ ಹಕ್ಕಿ " . ಇವೆಲ್ಲಾಕ್ಕಿಂತ ಆಕರ್ಷಕವಾದದ್ದು, ಸಂಜೆ ವೇಳೆಯಲ್ಲಿ ಆಡುವ ಮಕ್ಕಳು ಮರಳು ಗುಡ್ಡೆಯಲ್ಲಿಯೇ ಹೊಸದೊಂದು ಪ್ರಪಂಚವ ನಿರ್ಮಿಸುವ ಹುನ್ನಾರ ಅವರದು,ಹೊಸ ಹೊಸ ಆಟ, ಹಾಡು ಕುಣೆತ, ಹೇಗಿದೆ ನೋಡಿ ಅವರ ಹೊಸ ಸಂಚು.

ಹೌದು, ಇಂತಹ ಒಂದು ಸನ್ನಿವೇಶ ನೋಡಿ ತಮ್ಮ ಬಾಲ್ಯದ ನೆನಪಾಗಲಿಲ್ಲವೆಂದರೆ ಅದು, ಬಾಲ್ಯವೇ ಅಲ್ಲ ಬಿಡಿ, ಮರಳು ಗುಡ್ಡೆಯಲ್ಲಿ ಗೂಡನ್ನು ಕಟ್ಟಿ ಅದನ್ನು ಗುಬ್ಬಚ್ಚಿ ಗೂಡು ಎಂದು ಕರೆಯುತ್ತಿದ್ದದ್ದು, ಅವರವರ ಅರಿವಿನ ಆಚೆಗೆ ಗುಬ್ಬಚ್ಚಿ ಗೂಡುಗಳ ನಿರ್ಮಾಣ, ಯಾವ ಎಂಜಿನಿಯರ್ ಕೂಡ ಕಟ್ಟೊಕ್ಕಾಗಲ್ಲ ಬಿಡಿ, ಅದೇನಿದ್ದರೂ ಈ ನಮ್ಮ ಮಿನಿ ಎಂಜಿಯರ್ (ಮಕ್ಕಳು)ಗಳ ಕೆಲಸ ಮಾತ್ರ, ಹಾಗೆ ನೆನಪಾಗಿದ್ದು ಅವಳಿಗೆ ಅವಳ ಬಾಲ್ಯ, ಗೇಟಿನ ಸರಪಳಿಗಳ ಹಿಂದೆ ನಿಂತು ಆಡುತಿದ್ದ ಮಕ್ಕಳನ್ನು ನೋಡುತ್ತಿದ್ದದು, ಎಲ್ಲಾ ಹೋದ ಮೇಲೆ ಅವನು ಆಡಲು ಬರುತ್ತಿದ್ದ , ಅವನೊಂದಿಗೆ ಮಾತ್ರ ಅಮ್ಮ ಆಡಲು ಬಿಡುತ್ತಿದ್ದದ್ದು, ಅದ್ಯಾಕೆ ಹಾಗೆ, ಎಂದರೆ ಅವನು ತುಂಬಾ ಡೀಸೆಂಟ್ ಬಾಯ್ ಎನ್ನುತ್ತಿದ್ದದ್ದು, ನೆನಪಾಯ್ತು, ಅವನ ಅವಳ ಸ್ನೇಹ ಎಂದೂ ಸೇರುತ್ತಿರಲಿಲ್ಲ,

ಅಂದು ಅವಳು ಆಸೆಯಿಂದ ಮರಳು ಗೂಡುನ್ನು ಕಟ್ಟಿದ್ದಳು, ಅದಕ್ಕೆ ದೊಡ್ಡ ಅರಮನೆಗೆ ಇರುತ್ತಿದ್ದ ಹಾಗೆ , ದೊಡ್ಡ ರಹದಾರಿ, ಅಕ್ಕಪಕ್ಕ ಗಿಡಗಳನ್ನು ತಂದು ಅಲಂಕರಿಸಿದ್ದಳು. ಹೋಗುವವರೆಲ್ಲಾ ಒಮ್ಮೆ ನಿಂತು ನೋಡಿ ಹೋಗುವಂತೆ ಮಾಡುವಂತಹ ಆಕರ್ಷಕ ನಿರ್ಮಾಣದ ವ್ಯಕ್ತಿತ್ವ ಅವಳಲ್ಲಿತ್ತು. ಕಾರಿನ ಬದಲು ಒಂದು ಇಟ್ಟಿಗೆ ಕಾರಿನ ಜಾಗವನ್ನು ಪಡೆದಿತ್ತು. ಅಂದು ಆಕಾಶ ಕಪ್ಪು ಮೋಡಗಳಿಂದ ಕೂಡಿತ್ತು, ಮುಂಗಾರು ಮಳೆಯು ತನ್ನ ಮುತ್ತಿನ ಹನಿಗಳೊಂದಿಗೆ ಯಾವಾಗ ಬೇಕಾದರೂ ಬರಬಹುದಿತ್ತು, ಆದರೆ ಅವಳಿಗೆ ಅದರ ಅರಿವಿರಲಿಲ್ಲ ಅವಳು ಗೂಡಿನ ನಿರ್ಮಾಣದಲ್ಲಿ ನಿರತಳಾಗಿದ್ದಳೂ, ಇದ್ದಕ್ಕಿದಂತೆ ಬಂದ ಹನಿಗಳು ಭೂವಿಯನ್ನು ಸ್ಪರ್ಶಿಸಿದ್ದವು, ಅಷ್ಟರಲ್ಲಿ ಇವಳು ಒಳಹೋಗಿ ತಂದಿಟ್ಟ ಛತ್ರಿ, ಗೂಡನ್ನು ಕಾಪಾಡಲು ಅವಳು ಪಡುತಿದ್ದ ಪಾಡು ನೋಡಿ ಮಳೆರಾಯ ನಕ್ಕು , ಮತ್ತೆತ್ತಲೂ ತನ್ನ ಮೋಡಗಳೊಂದಿಗೆ ಸಾಗಿತು. ಖುಷಿಯಿಂದ ಮೇಘರಾಜನಿಗೊಂದಿಸಿ, ತನ್ನ ಪುಟ್ಟ ಗೂಡನ್ನು ಅಲಂಕರಿಸುತ್ತಿದ್ದರೆ,

ಅದೆಲ್ಲಿದ್ದನೋ ಅಮ್ಮನಾ ಆ ಡಿಸೆಂಟ್ ಬಾಯ್ ತನ್ನ ಮರಳು ಗೂಡನ್ನು ಹಾಳು ಗೆಡಹಿದನು.ತಾನು ಕಟ್ಟಿದ ಸುಂದರ ಗೂಡಿನ ಮೇಲೆ ಹಾರಿಕುಳಿತ ಆ ಸಂದರ್ಭ ಅವಳನ್ನೂ ಈಗಲೂ ಬೆಚ್ಚಿ ಬೀಳಿಸಿತು. ಅವನದೊಂದು ರೀತಿ ಅಸಹನೀಯ ಮನಸ್ಥಿತಿ, ಅಮ್ಮನಿಗೆ ಹೇಳಿಯು ಪ್ರಯೋಜನವಿಲ್ಲ ಕಾರಣ ಅಮ್ಮ ಅವನ ಪಾರ್ಟಿ.

ಅವನೀಗಾ ದೊಡ್ಡ ಹುದ್ದೆಯಲ್ಲಿದ್ದಾನೆ, ಹೊರದೇಶಕ್ಕೆ ಹೋಗಿ ಬಂದಿದ್ದಾನೆ, ಅಮ್ಮ ಅವನಮ್ಮನಿಗೆ ಮಾತು ಕೊಟ್ಟಿದ್ದಾಳಂತೆ, ನನ್ನನ್ನು ಅವನಿಗೆ ಕೊಡುವುದಾಗಿ, ಅವನನ್ನು ಹೇಗೆ ಒಪ್ಪಲಿ, ಅಂದಿನ ಆ ದಿನದಿಂದ ಇಲ್ಲಿಯವರೆಗೆ ಅವಳು ಅದನ್ನು ಮರೆತಿಲ್ಲ, ಅಂದಿನಿಂದ ಎಂದೂ ಅವನನ್ನೂ ಮಾತಾಡಿಸಿಲ್ಲ, ಅಗೋ ಅವನೆಅಲ್ಲವಾ ಬರುತ್ತಿದ್ದಾನೆ, ಅಯ್ಯೊ ಇಲ್ಲಿ ಆಡುತ್ತಿರುವ ಮಕ್ಕಳನ್ನು ಎನ್ನನ್ನುತ್ತಾನೋ, ಛೇ ಇನ್ನೆಷ್ಟು ಎಳೆ ಮನಗಳನ್ನು ಮುದುಡಿಸುವನೋ, ಎಂದು ಇವಳ ಮನ ಡವಗುಟ್ಟುತ್ತಿರುವಾಗಲೆ, ಆ ಮಕ್ಕಳ ಬಳಿ ಹೋದ ಅವನು ಅಲ್ಲಿ ಗೂಡು ಕಟ್ಟಲು ಬರದೆ ಒದ್ದಾಡುತ್ತಿದ್ದ, ಮಗುವಿಗೆ ಗೂಡು ಕಟ್ಟಿಕೊಟ್ಟಿದ್ದನ್ನು ನೋಡಿ, ದಿಗ್ಬ್ರಾಂತಿ, ಆಶ್ಚರ್ಯವಾಯಿತು. ಇವನು ಅವನೇನಾ ಎಂಬ ಅನುಮಾನ ಮನೆ ಮಾಡಿತು.

ಅದು ಕನಸಾ ಎಂದು ತನ್ನ ಕೈಯನ್ನು ಗಿಲ್ಲಿ ಪರೀಷಿಸಿಕೊಂಡಳು, ನಿಜ, ಮನಸ್ಸು ಪ್ರಪುಲ್ಲಗೊಂಡಿತು, ಕಾಲ ಎಲ್ಲವನ್ನೂ ಕಲಿಸುತ್ತದೆ, ಅನ್ನೋದು ಇದಕ್ಕೆನಾ ಎಂದು ಕೊಂಡಳು, ಕಾಲದೊಂದಿಗೆ ಮನಸ್ಸು ಮಾಗುವುದು ನಿಜನಾ, ಅವನು ಮನೆಯತ್ತ ಬರುತ್ತಿದ್ದಾನೆ , ತುಂಬಾ ವರುಷಗಳ ನಂತರ ಇದು ಅವರ ಮೊದಲ ಭೇಟಿ ಅಮ್ಮ ಹೇಳಿದ್ದು ನೆನಪಾಯ್ತು, ಅವನು ನನ್ನೊಂದಿಗೆ ಮಾತಾಡ ಬೇಕು ಎಂದಿದ್ದನಂತೆ. ಮನಸ್ಸು ಮುದಗೊಂಡಿದೆ, ಒಂದು ಸನ್ನಿವೇಶ ಅಥವ ಘಟನೆ ಬಾಳಿನ ದಿಕ್ಕನ್ನೇ ಬದಲಿಸುತ್ತವಲ್ಲವೇ, ಹಿಂದಿನ ಘಟನೆಯಿಂದ ಮನಸ್ಸಿಗೆ ಮಾರು ದೂರದಲ್ಲಿದ್ದವನು, ಇಂದಿನ ಘಟನೆಯಿಂದ ಮನಸ್ಸಿಗೆ ಇಷ್ಟು ಹತ್ತಿರ ಹೇಗಾದ, ಅವಳದೇ ಆದ ಆಲೋಚನಾ ಲೋಕದಲ್ಲಿ ಮುಳುಗಿದ್ದವಳಿಗೆ ಅವನು ಬಂದು ಕುಳಿತಿದ್ದದ್ದು , ಅರಿವಿಗೆ ಬರಲಿಲ್ಲಾ, ಅಮ್ಮ ಕೂಗಿ ಎಚ್ಚರಿಸಿದಾಗಲೇ ಅರಿವಾಗಿದ್ದು, ಅಮ್ಮ ಅಂದರೂ ಅವನು ಬಂದು ೧೫ ನಿಮಿಷ ಆಯ್ತು, ಎನಾದರೂ ಮಾತಾಡ ಬಾರದ, ಎಂದಾಗ , ಅವನ ಹುಸಿ ನಗು, ಅವನತ್ತ ಚಿತ್ತ ನೆಡುವಂತೆ ಮಾಡಿತು.

ಅವನು ಹಾಯ್ ಅಂದ, ಮುಸ್ಸಂಜೆಯಲ್ಲಿ ಮನಸ್ಸುಗಳ ಮಾತು ಸಾಗಿದವು.
ಮನದ ಬಾಗಿಲಲ್ಲಿ ನಿಂದು ಒಳಬರಲು ಅನುಮತಿ ಕೋರುತ್ತಿದ್ದಾನೆ, ಏನು ಮಾಡಲಿ?
ಮನಸ್ಸು ಹೊಸ ಮರಳು ಗೂಡಿನ ನಿರ್ಮಾಣದ ಕನಸು ಕಾಣುತ್ತಿದೆ,ಅದು ಕನಸಾಗದಿರಲಿ,
ಯಾವುದೋ ಹೊಸ ಸಂಚಿಗೆ ಒಳಗಾದವಳಹಾಗೆ ಒಳಗೊಳಗೆ ಭಾವಗಾನವೊಂದು ಗುನುಗಿದೆ,

"ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ
ಮನಸು ಕನಸುಗಳನ್ನು ಕಲೆಸಿರುವುದು
ಗಿರಿಕಮರಿ ಆಳದಲಿ ತೆವಳಿದ್ದ ಭಾವಗಳ
ಮುಗಿಲ ಮಂಚದಲಿಟ್ಟು ತೂಗುತಿಹುದು
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ"

ನಿಜ, ಅಮ್ಮ ಹೇಳುತ್ತಿದ್ದದು. ಅವನು ಡಿಸೆಂಟ್ ಬಾಯ್ ಅಂತ,
********************

  • ಸಣ್ಣ ಕಥೆ
~.~
  • Login or register to post comments
  • 209 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2008 - 4:40pm — kadakolla05

ಉ: ಮರಳು ಗೂಡು,

kadakolla05's picture

ಕಥೆಯ ವಸ್ತು ಹಳೆಯದಾದರೂ ನಿರ್ವಾಹಣೆ ತುಂಬಾ ಸೊಗಸಾಗಿದೆ. ಮರಳ ಗೂಡು ಗುಬ್ಬಚ್ಚಿ ಗೂಡಾಗಿದ್ದು, ನನ್ನ ಬಾಲ್ಯವನ್ನು ನೆನಪಿಗೆ ತಂತು.

ಈ ಬಾಳದಾರಿಯಿಂದ ಒಮ್ಮೆ ನನ್ನ ಗುಬ್ಬಚ್ಚಿ ಗೂಡಿಗೊಮ್ಮೆ ಬನ್ನಿ.
http://baaladaari.blogspot.com/
http://www.gubbacchi-goodu.blogspot.com/

ಕುಮಾರಸ್ವಾಮಿ. ಕಡಾಕೊಳ್ಳ.
ಪುನಣೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 11, 2008 - 8:32pm — Rajeshwari

ಉ: ಮರಳು ಗೂಡು,

Rajeshwari's picture

ಚೆನ್ನಾಗಿ ನಿರೂಪಣೆ ನೀಡಿದ್ದೀರಿ. ಕಾಲವು ಎಲ್ಲವನ್ನೂ ಬದಾಲಾಯಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 11, 2008 - 10:39pm — Guruprasadkr

ಉ: ಮರಳು ಗೂಡು,

Guruprasadkr's picture

ತುಂಬಾ ನವಿರಾಗಿ, ನಿರೂಪಣೆ ಮಾಡಿದ್ದೀರ, ನಮ್ಮ ಬಾಲ್ಯದ ನೆನಪುಗಳ ಹತ್ತಿರ ಮತ್ತೊಮ್ಮೆ ಸುಳಿದಾಡುವಂತೆ ಮಾಡಿದ್ದಕ್ಕಾಗಿ ಧನ್ಯವಾದಲಾಗು , ಮರಳಿನ ಗುಡು, ಗುಬ್ಬಚ್ಚಿ ಗೂದಿನ ನೆನಪು, ಸೊಗಸಾಗಿದೆ,
ಅಮ್ಮ ಹೇಳುತ್ತಿದ್ದ ಡೀಸೆಂಟ್ ಬಾಯ್ ಅಂದು ಏಕೆ ಆ ಹುಡುಗಿಯ ಮರಳು ಗೂಡನ್ನು ಹಾಳು ಮಾಡಿದ ? (ನಿಮ್ಮ ಸಣ್ಣ ಕಥೆ ಮುಂದುವರಿದಿದ್ದಲ್ಲಿ ಈ ಕಾರಣ ಇದ್ದಿದ್ದರೆ ಚೆನ್ನಾಗಿರ್ತಾ ಇತ್ತ ? ಆ ಹುಡುಗಿ ಎಲ್ಲಿ ಇದ್ದಾಳೆ ಹೇಳಿ ನಾನೊಬ್ಬನೇ ಕಾರಣ ತಿಳಿದುಕೊಳ್ಳುತ್ತೇನೆ)
Smiling

ಗುರುಪ್ರಸಾದ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 12, 2008 - 12:12pm — parvathi.G.r

ಉ: ಮರಳು ಗೂಡು,

parvathi.G.r's picture

ಧನ್ಯವಾದಗಳು,

ಕುಮಾರವರೆ ನಿಮ್ಮ ಗುಬ್ಬಚ್ಚಿ ಗೂಡೂ ಚೆನ್ನಾಗಿದೆ, ಸಾಧ್ಯವಾದರೆ ಇಲ್ಲಿ ಒಮ್ಮೆ ಭೇಟಿ ಕೊಡಿ,
http://www.vismayanagari.com/v5/?q=blog/558
ರಾಜೇಶ್ವರಿಯವರೆ ಥ್ಯಾಂಕ್ಸ್, ಗುರುಪ್ರಸಾದರವರೆ, ಆ ಹುಡುಗಿ ನನ್ಗೆ ಸಿಕ್ಕರೆ ಖಂಡಿತ ನಿಮಗೆ ತಿಳಿಸುತ್ತೇನೆ,
ನೀವೆ ಕೇಳಿ, ಕಲ್ಪನೆಯಲ್ಲಿ ಮೂಡುವ ಕಥೆಗೆ, ಮನಸ್ಸಿನ ಭಾವನೆಗಳನ್ನು ಸಣ್ಣ ಲೇಖನದಲ್ಲಿ ಹಿಡಿದಿಡುವ, ಸಣ್ಣ ಪ್ರಯತ್ನವಷ್ಟೆ, ಮರಳು ಗೂಡು,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಭೂಮಿ ತಾಯಿಯನು ಉಳಿಸೋಣ..
  • ಜೇನುರಾಣಿಯ ಉತ್ತರಾಧಿಕಾರದ ಸಮಸ್ಯೆ ( ಮುಂದುವರೆದುದು)
  • ಪುಟ್ಟಿಯ ದಿನಚರಿ
  • ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?
  • ಮಳೆಯ ಹನಿಗಳು
Syndicate content

ಲೇಖಕರು

parvathi.G.r's picture

ಪೂರ್ಣ ಹೆಸರು
parvathi.G.R

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator