ಗೆಳೆತನ
ಈ ನಮ್ಮ ಸ್ನೇಹದ ಮನನ
ನಾ ಮಾಡುವೆ ಪ್ರತಿದಿನ
ನಮ್ಮ ಸ್ನೇಹದ ಕುರುಹು ಈ ಕವನ
ಆಗಾಗ್ಗೆ ನಮ್ಮಿಬ್ಬರ ಕಲಹ
ಹೆಚ್ಚಿಸಲಿ ನಮ್ಮಿಬ್ಬರ ಸ್ನೇಹ
ಎಂದಿಗೂ ನೀ ಇರು, ನನ್ನೀ ಹೃದಯದ ಸನಿಹ
ತುಂಡಾಗಲು ನಿನ್ನ ಸ್ನೇಹವು
ಬದುಕಲು ಬಯಸದು ಈ ಜೀವವು
ಎಂದೆಂದಿಗೂ ಬಯಸುವೆ, ಆ ನಿನ್ನ ಸ್ನೇಹದ ಒಲವು
ಕಷ್ಟದಿ ಆಗುವ ಗೆಳೆಯ
ಕಟ್ಟಲಾಗದು ಈ ನಿನ್ನ ಸ್ನೇಹಕೆ ಬೆಲೆಯ
ಆದರಿಸು, ಸ್ವೀಕರಿಸು, ಮರೆಯದಿರು ಈ ನನ್ನ ಕೋರಿಕೆಯ
ಕರುಣೆಯು ಸ್ನೇಹದ ಬಿಂಬ
ಬಂದಿದೆ ಈ ಮಾತು ಮನದಾಳದಿಂದ
ಎಂದಾದರೂ ತಪ್ಪಾದರೆ ನನ್ನಿಂದ, ಮನ್ನಿಸು ಸ್ನೇಹದಿಂದ
ನನ್ನ ಮನಕ್ಕಿಲ್ಲ ಭಯ, ದಿಗಿಲು
ಏಕೆಂದರೆ ನನಗಿದೆ ನಿನ್ನೀ ಸ್ನೇಹದ ಕಾವಲು
ಎಂದೆದೀಗೂ ಇರಲಿ, ಆ ನಿನ್ನ ಶುಭ ಹರೈಕೆಯು ನನಗೇ ಮೀಸಲು
ಎಂದಿಗೂ ಆರದಿರಲಿ ಈ ಸ್ನೇಹದ ಜ್ಯೋತಿ
ನನ ಮೈ ಮನಕೆ ನೀಡುವುದು ಅದು ಕಾಂತಿ
ಓ ದೇವರೆ ಈ ನನ್ನ ಸ್ನೇಹಿತನಿಗೆ ಆ ಜ್ಯೋತಿಯ ಆರಿಸದಂತೆ ಕೊಡು ಮತಿ.......ಮತಿ.........ಮತಿ

- Login or register to post comments
- 204 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಗೆಳೆತನ
hi guru
nimma kavana thumba chennagi idde. hege baritha irri
ಉ: ಗೆಳೆತನ
ತುಂಬಾ ಚೆನ್ನಾಗಿದೆ ಕವನ, ಯಾರೋ ಹುಡುಗಿಯ live experiance ಇದ್ದ ಹಾಗಿದೆ, ಆದರೆ ಬರೆದಿರುವುದು ಗೆಳೆಯನೋ ಅಥ್ವಾ ಗೆಳೆತಿಯೋ ಗೊತ್ತಾಗುತ್ತಿಲ್ಲ
