ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಆ ಹುಡುಗಿ

July 11, 2008 - 3:25pm — roopablrao

ಲಾಲ್‌ಬಾಗ ಪುಷ್ಪಪ್ರದರ್ಶನ, ಎಲ್ಲೆಡೆ ಜನ ಜಂಗುಳಿ, ಒಂದು ಹುದುಗರ ಗುಂಪೂ ಅಲ್ಲಿ ಬಂದಿತ್ತು
ಆ ಹುಡುಗಿ ಸುಮಾರು 19 ವರ್ಷವಿರಬೇಕುಎರೆಡು ಜಡೆ ಭುಜದ ಮೇಲೆ ಕುಣಿಯುತ್ತಿತ್ತು. ಜೀನ್ಸ್ ಮೇಲೆ ಜಾಕೆಟ್ ಧರಿಸಿದ್ದಳು ಒಳಗೆ ಬಂದು ನಿಂತಳು. ಹುಡುಗರ ಕಣ್ಣುಗಳು ಸಹಜವಾಗಿಯೇ ಅವಳತ್ತ ವಾಲಿದವು . ಆಗಂತೆ ಅರಳಿದ ಸುಮದಂತೆ ಚೆಲುವಾಗಿದ್ದಳು

ಹುಡುಗರ ಮನಸಲ್ಲಿ ಪ್ರಶ್ನೆಗಳು ಆರಂಭವಾದವು . ಈ ಲಾಲ್ ಬಾಗ್‌ಗೆ ಒಂಟಿಯಾಗಿ ಯಾಕೆ ಬಂದಿದಾಳೆ ?

ಆಕೆ ಫೋನ್ ತೆಗೆದುಕೊಂಡು ಯಾರಿಗೋ ಫೋನ್ ಮಾಡಿದಳು. ಮತ್ತೆ ಯಾರಿಗೋ ಕಾಯುತೊಡಗಿದಳು ಅತ್ತಿಂದಿತ್ತ ಓಡಾಡತೊಡಗಿದಳು
ಹುಡುಗರು ತಮ್ಮಲ್ಲೇ ಮಾತನಾಡಿಕೊಂಡರು. ಪ್ರೇಮಿಗಾಗಿ ಕಾಯುತ್ತಿರಬಹುದು. ಅಂತ ಒಬ್ಬ ಹೇಳಿದ
ಏ ಇಲ್ಲ ಕಣೋ ಅವಳ ಕಣ್ಣಲ್ಲಿ ಲವರ್‌ಗೆ ಕಾಯೋ ಕಾತುರ ಇಲ್ಲ. ಇದು ಬೇರೆ ಕೇಸಿರಬೇಕು.ಮತ್ತೊಬ್ಬ ಹೇಳಿದ
"ಕೇಸಂದ್ರೆ?"
"ಅದೇ ಕಣೋ ಕಾಲ್‌ಗರ್ಲ್ ಇರಬೇಕು"
ಅವರ ಮಾತು ಅವಳ ಸುತ್ತಾ ಸುತ್ತುತಲೆ ಇತ್ತು.
ಅಷ್ಟರಲ್ಲಿ ಮದ್ಯವಯಸ್ಕನೊಬ್ಬ ಇವಳತ್ತ ಬಂದು ಏನೋ ಹೇಳಿದ . ಆಕೆ ಇಲ್ಲವೆಂಬಂತೆ ತಲೆ ಆಡಿಸಿ ಮತ್ತೆ ಕೊನೆಗೆ ಏತಕ್ಕೊ ಒಪ್ಪಿದಂತೆ ತಲೆ ಮೇಲೆ ಕೆಳಗೆ ಆಡಿಸಿದಳು
ಮತ್ತೆ ಆ ಹುಡುಗಿಗೆ ಆ ವ್ಯಕ್ತಿ ತನ್ನ ಪರ್ಸ್ ತೆಗೆದು ದುಡ್ದು ಕೊಟ್ಟ.
"ಈ ಹುಡುಗರ ಗುಂಪಲ್ಲಿ ಮಾತು " ಎಲ್ಲಾ ಬಿಟ್ಟು ಆ ಮುದಿಯಾನೆ ಬೇಕಿತ್ತಾ ಇವಳಿಗೆ ದುಡ್ಡು ಬೇಕಿದ್ರೆ ನಾವು ಕೊಡ್ತಿರಲಿಲ್ಲವೇನೋ"
ಸ್ವಲ್ಪ ಹೊತ್ತಿನ ನಂತರ ಅ ವ್ಯಕ್ತಿ ಹಾಅಗು ಆ ಹುಡುಗಿ ಜನಜಂಗುಳಿಯಲ್ಲಿ ಬೆರೆತು ಕಾಣದಾದರು.
"ಅಬ್ಬಾ ಮುದುಕನದೇ ಚಾನ್ಸ್ ಕಣೋ ಈಗೇನು ನಡೀತಿರುತ್ತೋ."
"ಬಾರೊ ಹೋಗಲಿ flower show ಆದ್ರೂ ನೋಡೋಣ"
"ಏ ಇಲ್ಲ ಕಣೋ ನಂಗೆ ಮೂಡೆ ಇಲ್ಲ"

ಬೇಜಾರು ಮಾಡಿಕೊಂಡ ಹುಡುಗರ ಗುಂಪು ಸುಮ್ಮನ್ದೆ ಗೇಟಿಂದ ಹೊರಗೆ ಹೊರಟಿತ್ತು

ಆದದ್ದಿಷ್ಟು
ಆ ಹುಡುಗಿ ತನ್ನ ತಂದೆಗೆ ಮೂರುದಿನದಿಂದ ತನ್ನ ನೆಚ್ಚಿನ ಸಿನಿಮಾಕೆ ಕರೆದುಕೊಂಡು ಹೋಗಲು ಹೇಳಿದ್ದಳು
ತಂದೆ ಒಪ್ಪಿರಲಿಲ್ಲ
ಅಂದು ಆ ಥೇಟರ್‌ನಲ್ಲಿ ಕೊನೆಯ ದಿನ
ಹಾಗಾಗಿ
ಅವಳು ಕೋಪ ಮಾಡಿಕೊಂಡು ಹಟ ಹಿಡಿದು ಇಲ್ಲಿ ಬಂದು ನಿಂತಿದ್ದಳು. ಕೊನೆಗೆ ತಂದೆಯೇ ಸೋತು ಇಲ್ಲಿಗೆ ಬಂದು ಮಗಳನ್ನು ಸಿನಿಮಾಗೆ ಕರೆದುಕೊಂಡು ಹೋಗಲು ಬಂದಿದ್ದರು. ಅಷ್ಟೆ ಅಲ್ಲಾ ತನ್ನನ್ನು ಇಷ್ಟು ಕಾಡಿಸಿದ್ದಕ್ಕೆ ತನಗೆ ಕಾಂಪನ್ಸೇಷನ್ ಕೊಡಲು ಬೇಡಿಕೆ ಸಲ್ಲಿಸಿ ಅದನ್ನು ಸ್ಥಳದಲ್ಲಿಯೇ ತೆಗೆದುಕೊಂಡಿದ್ದಳು.

ಆ ಹುಡುಗಿ ಹಾಗು ಅವಳ ಅಪ್ಪ ಆರಾಮವಾಗಿ ಸಿನಿಮಾ ನೋಡಿದರು

ಇತ್ತ ಹುಡುಗರ ಗುಂಪು ತಲೆ ಕೆಡಿಸಿಕೊಂಡು ಒಂದು ನಾಲಕ್ಕು ದಮ್ಮು ಎಳೆದರು .

  • ಸಣ್ಣ ಕಥೆ
~.~
  • Login or register to post comments
  • 375 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2008 - 8:36pm — yuvapremi

ಉ: ಆ ಹುಡುಗಿ

yuvapremi's picture

ಚಂದಕಿಂತ ಚಂದ ಈ ಲೇಖನ ಅತೀ ಸುಂದರ..! Eye-wink

ಹೌದು, ನಮ್ಮ ನಡುವಿನ ಕೆಲವರು ಊಹೆಗಳಿಗೆ ಮಾರುಹೋಗಿ ತಮ್ಮ ನೆಮ್ಮದಿಯನ್ನು ಕೆಡಿಸಿಕೊಳ್ಳುತ್ತಾರೆ...! Sad

"ಯತ್ರ ನಾರ್ಯಂತು ಪೋಜ್ಯಂತೆ, ತತ್ರ ದೇವತಹಾಃ..!!" ಅಂತಂದಹಾಗೆ ಎಲ್ಲಿ ಹೆಣ್ಣು ಇರುತ್ತಾಳೊ ಅಲ್ಲಿ ಊಹೆ ಪೋಹೆಗಳಿಗೆ ಹೆಚ್ಚು ಬೆಲೆ....! ನಿಜ ಸತ್ಯವನ್ನು ತಿಳಿದುಕೊಳ್ಳುವ ತಾಳ್ಮೆ ನಮ್ಮಲ್ಲಿ ಇರುವುದಿಲ್ಲ...! Shocked

ನಿಜ ತಾನೆ ಮ್ಯಾಡಮ್ ?? Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 13, 2008 - 8:07pm — roopablrao

ಉ: ಆ ಹುಡುಗಿ

roopablrao's picture

" ಚಂದಕಿಂತ ಚಂದ ಈ ಲೇಖನ ಅತೀ ಸುಂದರ..! "

ತುಂಬಾ ಅಂದರೆ ತುಂಬಾ ಧನ್ಯವಾದಗಳು Smiling

ಈಗ ಪರವಾಗಿಲ್ಲ ಒಂದು ಹೆಣ್ಣು ,ಹುಡುಗಿ ಹೋಟೆಲ್‌ಗೆ ಒಬ್ಬಳೇ ಹೋಗಿ ಬರಬಹುದು
ಆದರೆ ಜಸ್ಟ್ 6 ವರ್ಷದ ಹಿಂದೆ ಹೆಂಗಸು ಒಂಟಿಯಾಗಿ ಎಲ್ಲಿಯಾದರೂ ಕಂಡರೆ ಈ ರೀತಿಯ ಊಹಾಪೋಶಗಳು ಬಹಳ ಸಾಮಾನ್ಯವಾಗಿತ್ತು.
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 5:33pm — shreekant.mishrikoti

ಉ: ಆ ಹುಡುಗಿ

shreekant.mishrikoti's picture

ಗ ನಾನು ನಮ್ಮ ಸಂಸ್ಥೆಯಿಂದ ಬೆಂಗಳೂರಿನ ಬಸವನಗುಡಿಯಲ್ಲಿದ್ದ ಟ್ರೇನಿಂಗ್ ಸೆಂಟರ್ ಗೆ ಒಂದು ವಾರಕ್ಕೆಂದು ತರಬೇತಿಗೆ ಹೋಗಿದ್ದೆ . ಅದು ಹೇಗೋ ಬೇರೆ ಸಂಸ್ಥೆಯೊಂದರಲ್ಲಿದ್ದ ಅವಳಿಗೂ ಅದೇ ಸಮಯಕ್ಕೇ ಅಲ್ಲೇ ಮುಂದಿನ ಕ್ರಾಸಲ್ಲಿರೋ ಅವರ ಟ್ರೇನಿಂಗ್ ಸೆಂಟರ್ ನಲ್ಲಿ ಅವಳಿಗೂ ಟ್ರೇನಿಂಗ್ ಬರಬೇಕೇ? ಒಳ್ಳೆಯದೇ ಆಯಿತು ಎಂದು ಜತೆಯಾಗಿಯೇ ಬೆಂಗಳೂರಿಗೆ ಹೋದೆವು.
ಇಬ್ಬರಿಗೂ ಊಟವಸತಿಗೆ ವ್ಯವಸ್ಥೆ ಇತ್ತು . ಪ್ರತಿದಿನ ನಮ್ಮ ಟ್ರೇನಿಂಗು ಮುಗಿದ ಮೇಲೆ ಚಹಾ ಕುಡಿದು ಹೊರಕ್ಕೆ ಬೀಳುತ್ತಿದ್ದೆ . ಅವಳೂ ಹಾಗೇ ಮಾಡುತ್ತಿದ್ದಳು. ದಾರಿಯಲ್ಲೇ ಭೇಟಿಯಾಗಿ ಅಲ್ಲೇ ಗಾಂಧೀ ಬಜಾರಿನಲ್ಲಿ ಓಡಾಡಿ ಅವಳು ತಮ್ಮ ಟ್ರೇನಿಂಗ್ ಸೆಂಟರಿಗೂ ನಾನು ನಮ್ಮ ಟ್ರೇನಿಂಗ್ ಸೆಂಟರಿಗೂ ಮರಳೋರು.
ನಾವು ಈ ತರ ಭೆಟ್ಟಿಯಾಗಿ ಓಡಾಡೋದನ್ನ ನನ್ನ ಜತೆಗೆ ಟ್ರೇನಿಂಗ್ ಬಂದೋರು ನೋಡಿದ್ರು. ಒಂತರಾ ನೋಡಿ ’ಏನ್ರೀ , ಯಾರದು? ದಿನಾ ಭೆಟ್ಟಿಯಾಗ್ತೀರಾ ?’ ಅಂತ ಕೇಳಿದ್ರು .
’ಹೌದು , ನನಗೆ ಸಂಬಂಧ ಆಗಬೇಕು’ ಅಂತ ಹೇಳಿ ,
ನಂತರ ಅರಕ್ಷಣದಲ್ಲೇ ತಡಮಾಡದೆ
ಹೇಳಿಬಿಟ್ಟೆ ...
...
..
..
..
’ಅವಳು ನನ್ನ ಸ್ವಂತ ತಂಗಿ’

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 5:44pm — cmariejoseph

ಉ: ಆ ಹುಡುಗಿ

cmariejoseph's picture

ಶ್ರೀಕಾಂತ್ ಸರ್‍, ಇಷ್ಟು ದಿನ ಎಲ್ಲೋಗಿದ್ರಿ?

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 5:42pm — cmariejoseph

ಉ: ಆ ಹುಡುಗಿ

cmariejoseph's picture

ಆಹಾ ಬಿನ್ನಾಣಗಿತ್ತಿ ಅನ್ನೋದಕ್ಕೆ ಪುಲ್ಲಿಂಗ ಶಬ್ದ ಏನೂ ಅಂತ ತಿಳೀಲಿಲ್ಲ. ಸೂಕ್ತವಾದದ್ದನ್ನು ಹಾಕ್ಕೊಳ್ಳಿ ಯುವಪ್ರೇಮಿ.

ಅಂದ ಹಾಗೇ ರೂಪಾ ಅವರೇ Bridge of Sighs ಅಂತ ಒಂದು ಕವನ ಇದೆ. ಬಿಎಂಶ್ರೀ ಯವರು ಕನ್ನಡದಲ್ಲಿ ಅದನ್ನು ದುಃಖಸೇತು ಅನ್ನೋ ಕವನವಾಗಿಸಿದ್ದಾರೆ, ಓದಿ ನೋಡಿ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 6:09pm — ಸಂಗನಗೌಡ

ಉ: ಆ ಹುಡುಗಿ

ಸಂಗನಗೌಡ's picture

ಗಂಡುಮಕ್ಕಳಿಗೆ ’ಡೌಲುಗಾರ’, ’ಡೌಲಿಗ’ ಅಂತಾರೆ.....

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 13, 2008 - 7:48pm — rasheedgm

ಉ: ಆ ಹುಡುಗಿ

rasheedgm's picture

ನಾನು ಏನೇನೋ ಯೊಚಹಿಸಿದೆ..... !!!

ಒಳ್ಳೆಯ ಸಸ್ಪೆಂಸ್....... ಸಣ್ಣ ಕಥೆ ಯಲ್ಲಿ ದೊಡ್ಡ ಸತ್ಯವನ್ನೆ ಹೇಳಿದ್ದೀರ.. ಒಬ್ಬ ಹೆಂಗಸಾಗಿ ಹುಡುಗರು ಯೊಚಿಸುವುದನ್ನು ಹೇಗೆ ಹಾಗೆಯೆ ಬರೆದಿರಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 13, 2008 - 8:08pm — roopablrao

ಉ: ಆ ಹುಡುಗಿ

roopablrao's picture

ತುಂಬಾ ಥ್ಯಾಂಕ್ಲ್ಸ್ ರಶೀದ್

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹುಡುಗರ ಆಟ
  • ಹೂವಿನ ಹುಡುಗಿ....
  • ಕಲ್ಪನೆಯ ಹುಡುಗಿ
  • ಹುಡುಗರ ಗಮನ ಸೆಳೆಯುವುದು ಹೇಗೆ?
  • ಹುಡುಗಿ
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 92 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator