ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳು

July 13, 2008 - 10:19pm — Sunil Jayaprakash

ಈ ದಿನ ತುಂಬಾ ನನಗೆ ತುಂಬಾ ಸಂತೋಷವಾಗಿರಲಾಗಿ, ನಿಮಗೂ ಅದನ್ನು ಹಂಚಬೇಕೆಂದು ಆತುರಾತುರವಾಗಿ ಬರೆಯುತ್ತಿರುವ ಪುಟಾಣಿ ಬರಹ. ಈ ದಿನ ಎರಡು ಪುಸ್ತಕಗಳನ್ನು ಕೊಂಡು ತಂದೆ. ಆಶ್ಚರ್ಯ ಏನು ಅಂತೀರಾ ಮುಂದೆ ಓದಿ.

೧. ನಾಗವರ್ಮ ಸಂಪುಟ
ಕಾವ್ಯಾವಲೋಕನಂ
ಕರ್ಣಾಟಕ ಭಾಷಾಭೂಷಣಂ
ಅಭಿಧಾನ ವಸ್ತುಕೋಶಂ

ಸಂಪಾದಕರು - ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

೨. ರತ್ನಾಕರವರ್ಣಿ ಸಂಪುಟ
ಭರತೇಶ ವೈಭವ
ಶತಕತ್ರಯ
ರತ್ನಾಕರನ ಹಾಡುಗಳು

ಸಂಪಾದಕರು - ಪ್ರೊ. ಎಂ.ಜಿ. ಬಿರಾದಾರ

ಇವೆರಡಲ್ಲದೆ, ರನ್ನನ ಸಂಪುಟ, ಜನ್ನನ ಸಂಪುಟ ಅಂತ ಇನ್ನೂ ಒಟ್ಟು ಸುಮಾರು ೧೦ ದೊಡ್ಡ ಸಂಪುಟಗಳು ಇದ್ದವು. ಒಂದೇ ಪುಸ್ತಕದಲ್ಲಿ ಒಬ್ಬೊಬ್ಬ ಕವಿಯ ಎಲ್ಲ ಕೃತಿಗಳು. ಆಶ್ಚರ್ಯಕರ ಸಂಗತಿ ಇರೋದು, ಈ ರೀತಿಯ ಪುಸ್ತಕಗಳ ಬೆಲೆ ತಲಾ ೧೦೦/- ನಾನು ಹಿಂದೆ, ಸಾಹಿತ್ಯ ಪರಿಷತ್ತಿನವರ "ಭರತೇಶ ವೈಭವ" ಕೊಂಡಿದ್ದೆ. ಆಗ ಅದೊಂದರ ಬೆಲೆಯೇ ೨೦೦/- (ರಿಯಾಯಿತಿಯಿಂದಾಗ ೧೦೦ಕ್ಕೆ ಸಿಕ್ಕಿತ್ತು). ಈಗ, ಹಂಪಿ ವಿಶ್ವವಿದ್ಯಾಲಯದವರು ಕಡಿಮೆ ದರದಲ್ಲಿ ಕನ್ನಡದ ಇಂತಹ ಅತ್ಯುತ್ತಮ ಪುಸ್ತಕಗಳನ್ನು ಮಾರಾಟಕ್ಕೆ ಮುಂದೆಬಂದಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ನಿಮಗೆ ಯಾರಿಗಾದರೂ ಇಂತಹ ಪುಸ್ತಕಗಳಲ್ಲಿ ಆಸಕ್ತಿಯಿದ್ದರೆ, ಹಂಪಿ ಕನ್ನಡ ವಿಶ್ಯವಿದ್ಯಾಲಯದ ಪುಸ್ತಕಗಳು ಸಿಗುವ ಕಡೆ ವಿಚಾರಿಸಿ.

  • ಪ್ರಚಲಿತ
~.~
  • Login or register to post comments
  • 329 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 14, 2008 - 2:31pm — vikashegde

ಉ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳು

vikashegde's picture

ಎಲ್ಲಿ ತಗೊಂಡೆ, ಎಲ್ಲಿ ಸಿಗುತ್ತವೆ ಅಂತನೂ ಹೇಳಿದ್ರೆ ಉಪಕಾರವಾಗುತ್ತಿತ್ತು ಸುನಿಲ್.
ನನ್ನಿ

**************************
http://vikasavada.blogspot.com/
**************************

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 3:09pm — Sunil Jayaprakash

ಉ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳು

Sunil Jayaprakash's picture

ನಾನು ನೆನ್ನೆ ಅಂಕಿತಕ್ಕೆ ಹೋಗಿದ್ದೆ. ಅವರು ಈ ಪುಸ್ತಕಗಳನ್ನು ಯಾರಿಗೋ ಕೊಡಲು ತರಿಸಿದ್ದರಂತೆ. ಇವುಗಳನ್ನು ಕಾಣದಂತೆ ಇಟ್ಟಿದ್ದರು Eye-wink ಅಕಸ್ಮಾತ್ ಇವುಗಳು ನನ್ನ ಕಣ್ಣಿಗೆ ಬೀಳಲಾಗಿ ಅದು ಬೇಕು ಎಂದಾಗ, ನನಗೆ *ಇಲ್ಲವೆನ್ನಲು* ಅವರಿಗೆ ಮನಸ್ಸಾಗದೆ, ನನಗೆ ಕೊಟ್ಟರು.

ಎಲ್ಲ ಸಂಪುಟಗಳ ಒಂದೊಂದು ಪ್ರತಿ ತರಿಸಿದ್ದರು ಅಂತ ಕಾಣತ್ತೆ. ನೀವೂ ಒಮ್ಮೆ ಟ್ರೈಮಾಡಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 5:47pm — cmariejoseph

ಉ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳು

cmariejoseph's picture

ಅಲ್ಲೇ ಬಿಎಂಎಸ್ ಕಾಲೇಜು ಎದುರುಗಡೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಆವರಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಇದೆ ನೋಡಿ, ಅಲ್ಲಿ ಸಿಗಬಹುದು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 5:54pm — vikashegde

ಉ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆಗಳು

vikashegde's picture

ಒಳ್ಳೆಯ ಮಾಹಿತಿ..ಇಬ್ಬರಿಗೂ ನನ್ನಿ

**************************
http://vikasavada.blogspot.com/
**************************

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತೇಶ ವೈಭವ ಕಲ್ಪು ೭ - ರತ್ನಾಕರವರ್ಣಿಯ ಕಾಲದ ವಿಚಾರ
  • ಭರತೇಶ ವೈಭವ ಮತ್ತು ಕನ್ನಡ ನುಡಿಗಟ್ಟುಗಳು - ಕಲ್ಪು ೧೦
  • ಭರತೇಶ ವೈಭವ : ವಿಜಯನಗರ ಸಾಮ್ರಾಜ್ಯದಲ್ಲಿ ನೌಕಾನೆಲೆ ?? - ಕಲ್ಪು ೬
  • ಬೆಂಗಳೂರು ಓದುಗರು
  • ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೇತುವೆ: ಕಾಫ್ಕಾ ಕಥೆ
  • ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
  • ’ಕಿಂಗ್ ಕತೆ’
  • ಅನರ್ಥಕೋಶ ೬
  • ನಾವು ಅದೆಷ್ಟು ಬಡವರು!
  • ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................
  • ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:02am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:01am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:59am
  • anil.ramesh
    ಉ: ಅರ್ಧ ಚಂದಿರ
    January 8, 2009 - 10:57am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:57am
  • anil.ramesh
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 10:56am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator