ಈಗಿನಂತೆ 5 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸಾಲದ ಪ್ರಸಂಗವೂ ಗಾನ ಮಾಲೆಯೂ !
bhalle's picture
ಶ್ರೀನಾಥ್ ಭಲ್ಲೆ
19
May
2011
ಲೇಖನ

 

ಬೆಳಿಗ್ಗೆ ಎದ್ದೆ. ಬೇಸಿಗೆ ರಜೆಗೆ ಹೋಗಿದ್ದ ಸಂಸಾರ ಇಂದು ಸಂಜೆಗೆ ಬರುವವರಿದ್ದರು. ಹಾಗಾಗಿ ಅಲ್ಲಿಯವರೆಗೆ ಮನೆಯಲ್ಲಿ ನನ್ನ ಬಿಟ್ಟರೆ, ಕೆಲವು ಜಿರಳೆಗಳನ್ನುಳಿದು...

ಪ್ರತಿಕ್ರಿಯೆಗಳು: 29
ಹಿಟ್ಸ್ : 824
ಡಾ|ರಾಜ್ - ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ !
bhalle's picture
ಶ್ರೀನಾಥ್ ಭಲ್ಲೆ
25
Apr
2011
ಲೇಖನ

 

ಡಾ|ರಾಜ್ ಅವರ ಹುಟ್ಟು ಹಬ್ಬದಂದು ಅವರ ವಿಚಾರ ಅಧಾರಿತವಾಗಿ ಏನಾದರೂ ಬರೆಯಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ ಏನು ಬರೆಯಬೇಕೆಂದು

ತಲೆಗೆ ಬಂದಿರಲಿಲ್ಲ....

ಪ್ರತಿಕ್ರಿಯೆಗಳು: 15
ಹಿಟ್ಸ್ : 783
’ಎಣ್ಣೆ ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
29
Sep
2011
ಬ್ಲಾಗ್ ಬರಹ

’ಎಣ್ಣೆ  ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’

( ಹೊಸ ಮಯೂರ -ಅಕ್ಟೋಬರ್ ೨೦೧೧-ದ   ವಿಶೇಷಗಳು

ಹೊಸ ಮಯೂರ -ಅಕ್ಟೋಬರ್ ೨೦೧೧...

ಪ್ರತಿಕ್ರಿಯೆಗಳು: 1
ಹಿಟ್ಸ್ : 193
ಮೆಡಿಕಲ್ ಕಾಲೇಜುಗಳಲ್ಲಿ ಇವನ್ನು ಕಲಿಯಲಿಕ್ಕಾಗದು!
addoor's picture
ಅಡ್ಡೂರು ಕೃಷ್ಣ ರಾವ್
14
Nov
2011
ಲೇಖನ

"ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿ ಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 410
' ಯಕ್ಷಗಾನ ಬಯಲಾಟ ಸಂಭ್ರಮ '
sada samartha's picture
ಸದಾನಂದ
07
Feb
2011
ಲೇಖನ

 

                ...

ಪ್ರತಿಕ್ರಿಯೆಗಳು: 6
ಹಿಟ್ಸ್ : 772
ಕಲಾಶಾಲೆಗೆ ಪೂರ್ಣತೆ ಲಭಿಸುವುದು ಭವಿಷ್ಯವು ಪಳೆಯುಳಿಕೆಯಾದಾಗಲೆ:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೯
anilkumar's picture
ಎಚ್.ಎ. ಅನಿಲ್ ಕುಮಾರ್
26
May
2010
ಬ್ಲಾಗ್ ಬರಹ

(೪೧) ಒಳ್ಳೆಯ ಕಲಾಶಾಲೆಯೊಂದು, ಮೊದಲಿಗೆ, ಅಲ್ಲಿ ಕಲಿಸುವುದನ್ನೆಲ್ಲೆ ಹೇಗೆ ಮರೆಯುವುದು ಎಂಬುದನ್ನು ತಿಳಿಸುತ್ತದೆ. ಸಾಧಾರಣ ಕಲಾಶಾಲೆಯೊಂದು ಮಿಕ್ಕೆಲ್ಲವನ್ನೂ ಕಲಿಸುತ್ತದೆ....

ಪ್ರತಿಕ್ರಿಯೆಗಳು: 3
ಹಿಟ್ಸ್ : 640
ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪
manjunath.kunigal's picture
ಮಂಜುನಾಥ್ ಕುಣಿಗಲ್
13
Dec
2010
ಲೇಖನ

http://sampada.net/article/24590 - ಭಾಗ ೦೧

http://sampada.net/article/24910 - ಭಾಗ...

ಪ್ರತಿಕ್ರಿಯೆಗಳು: 10
ಹಿಟ್ಸ್ : 777
ಡಾಲ್ಫಿನ್: ನೀರೊಳಗಿನ ಬೆರಗು
balukolar's picture
ಡಾ. ಜೆ.ಬಾಲಕೃಷ್ಣ
04
Dec
2010
ಲೇಖನ

ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ.

-ಚಾರ್ಲ್ಸ್ ಡಾರ್ವಿನ್

  1998ರಲ್ಲಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 710
ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೧
manjunath.kunigal's picture
ಮಂಜುನಾಥ್ ಕುಣಿಗಲ್
29
Mar
2010
ಪುಟ

ನಿನ್ನೆಯ ಆ ಮಿಲಿಟರಿ ವಿಮಾನ ಪ್ರಯಾಣದ ಆಯಾಸ ಇನ್ನೂ ತಗ್ಗಿರಲಿಲ್ಲವಾದ್ದರಿಂದ, ಹಾಸಿಗೆಯಿಂದ ಏಳಲಾಗದ ಬ್ರಹ್ಮಾಂಡಾಲಸ್ಯದಿಂದಲೇ ಇನ್ನೂ ಕೋಳಿ ನಿದ್ದೆಯಲ್ಲಿಯೇ ಇದ್ದೆ. ಕರೆಗಂಟೆ...

ಪ್ರತಿಕ್ರಿಯೆಗಳು: 32
ಹಿಟ್ಸ್ : 1,979
ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
25
Apr
2006
ಪುಟ
ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ. ಎಲ್ಲ ಮನುಷ್ಯರೂ ನೀತಿವಂತರಲ್ಲ ಮತ್ತು ಸತ್ಯಾಚರಣೆ ಉಳ್ಳವರಲ್ಲ ಎಂದು ಅವನು ಕಲಿಯಬೇಕು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,761

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ. ಅನುವಾದದಲ್ಲಿ ಸಾಧ್ಯವಾದಷ್ಟು ಬಳಕೆಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ. ಬರುವ ಒಂದೆರಡು ವಾರಗಳಲ್ಲಿ ಪ್ರತಿ ಲೇಖನವನ್ನೂ ಹಲವು ಕಂತುಗಳಲ್ಲಿ ಸೇರಿಸಲಾಗುವುದು. - ಹರಿ ಪ್ರಸಾದ್ ನಾಡಿಗ್
ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨ (ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್) (ಮೊದಲನೇ ಕಂತು) GNU ಇ-ಮೇಯ್ಲುಗಳಲ್ಲಿ M S ವರ್ಡ್ ಡಾಕ್ಯುಮೆಂಟುಗಳು ಬಂದರೆ ನಿಮಗೆ ಸಿಟ್ಟು ಬರೋದಿಲ್ವೆ? ವರ್ಡ್ ಅಟ್ಟಾಚ್ಮೆಂಟುಗಳು ಕಿರುಕುಳ ಕೊಡೋದಷ್ಟೇ ಅಲ್ಲ, ಜನರನ್ನು ಮುಕ್ತ ತಂತ್ರಾಂಶದ ಬಳಕೆಯಿಂದ ದೂರ ತಳ್ಳುತ್ತೆ. ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳನ್ನು ಕಳುಹಿಸೋ ಈ ಅಭ್ಯಾಸವನ್ನ ನಾವುಗಳು ಬಹುಶಃ ಒಟ್ಟುಗೂಡಿದ ಒಂದು ಅತಿ ಸಾಮಾನ್ಯ ಪ್ರಯತ್ನದಿಂದ ನಿಲ್ಲಿಸಬಹುದು. ಕಂಪ್ಯೂಟರ್ ಬಳುಸುವ ಸುಮಾರು ಜನ ಮೈಕ್ರೊಸಾಫ್ಟಿನ ವರ್ಡ್ ಬಳಸ್ತಾರೆ. ಅದು ಅವರಿಗೆ ದುರದೃಷ್ಟಕರವಾದುದು, ಏಕಂದ್ರೆ ವರ್ಡ್ ಬೇರೊಬ್ಬರ ಸ್ವಾಮ್ಯದಡಿ ಇರುವ ತಂತ್ರಾಂಶ. ಅದನ್ನು ಬಳಸುವವರಿಗೆ ತಂತ್ರಾಂಶವನ್ನು ಅಧ್ಯಯನ ಮಾಡಲು, ಬದಲಾಯಿಸಲು ಅಥವ ಬೇರೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಇದಲ್ಲದೆ, ಮೈಕ್ರೊಸಾಫ್ಟ್ ತನ್ನ ಈ ತಂತ್ರಾಂಶದ ಪ್ರತಿ ಆವೃತ್ತಿಯೊಂದಿಗೂ ಈ ವರ್ಡ್ ಫೈಲುಗಳ ಪಾರ್ಮ್ಯಾಟ್ (ವಿನ್ಯಾಸ) ಬದಲಾಯಿಸುತ್ತದಾದ್ದರಿಂದ ಇದನ್ನು ಬಳಸುತ್ತಿರುವವರು ಪ್ರತಿ ಸಾರಿ ಹೊಸ ಆವೃತ್ತಿಯನ್ನು ಕೊಳ್ಳಲೇಬೇಕು - ತಮಗೆ ಬೇಕೋ ಬೇಡವೋ, ಮುರಿಯಲಾಗದ ಬಂಧನ. ಇಷ್ಟೇ ಅಲ್ಲದೆ, ಈ ತಂತ್ರಾಂಶವನ್ನು ಬಳಸುತ್ತಿರುವವರಿಗೆ ಹಲವು ವರ್ಷಗಳ ನಂತರ ಈಗ ಬರೆದಿಟ್ಟಿರುವ ವರ್ಡ್ ಡಾಕ್ಯುಮೆಂಟುಗಳೂ ಮುಂದೆ ಬರುವ ವರ್ಡ್ ಆವೃತ್ತಿಗಳಲ್ಲಿ ಓದಲು ಬರುವುದಿಲ್ಲ ಎಂಬುದು ತಿಳಿದುಬರಬಹುದೇನೊ. ಆದರೆ ನೋವಾಗುವುದು ಯಾವಾಗ ಗೊತ್ತೆ? ಈ‌ ತಂತ್ರಾಂಶವನ್ನು ಬಳಸುತ್ತಿರುವವರು ನಾವೂ ವರ್ಡ್ ಬಳಸುತ್ತಿದ್ದೇವೆ ಎಂದು ಲೆಕ್ಕ ಹಾಕಿ ನಮಗೆ ವರ್ಡ್ ಫಾರ್ಮ್ಯಾಟಿನಲ್ಲಿ ಕಳುಹಿಸಿದಾಗ (ಅಥವ ನಾವು ಆ ಫಾರ್ಮ್ಯಾಟಿನಲ್ಲಿ ಕಳುಹಿಸಲಿ ಎಂದು ತಗಾದೆ ತೆಗೆದಾಗ). ಕೆಲವರು ತಮ್ಮ ಡಾಕ್ಯುಮೆಂಟುಗಳನ್ನ ವರ್ಡ್ ಫಾರ್ಮ್ಯಾಟಿನಲ್ಲಿ ಪ್ರಕಟಿಸುತ್ತಾರೆ ಅಥವ ಪೋಸ್ಟ್ ಮಾಡ್ತಾರೆ. ಕೆಲವು ಸಂಸ್ಥೆಗಳಂತೂ ಬರೇ ವರ್ಡ್ ಫಾರ್ಮ್ಯಾಟಿನಲ್ಲಿದ್ದರೆ ಮಾತ್ರ ಕಡತಗಳನ್ನ (ಫೈಲುಗಳನ್ನ) ಸ್ವೀಕರಿಸುತ್ತಾರೆ: ನನ್ನ ಪರಿಚಯದವರೊಬ್ಬರಿಗೆ ಕೆಲಸಕ್ಕೆ ಅರ್ಜಿ ಹಾಕೋದಕ್ಕಾಗುತ್ತಿರಲಿಲ್ಲ - ಅವರ ರೆಸ್ಯೂಮು ವರ್ಡ್ ಫೈಲಿನಲ್ಲಿರಬೇಕಾಗಿತ್ತು ನೋಡಿ. ದೌರ್ಜನ್ಯದ ವಿಷಯವೇನೆಂದರೆ ಸರಕಾರಗಳು ಕೂಡ ಹಲವು ಬಾರಿ ಸಾರ್ವಜನಿಕರ ಮೇಲೆ ವರ್ಡ್ ಫಾರ್ಮ್ಯಾಟ್ ಹೇರುತ್ತಾರೆ. ಮುಕ್ತ ತಂತ್ರಾಂಶ, ಮುಕ್ತ ಆಪರೇಟಿಂಗ್ ಸಿಸ್ಟಮುಗಳನ್ನು ಬಳಸುವ ನಮ್ಮಂತವರಿಗೆ ವರ್ಡ್ ಡಾಕ್ಯುಮೆಂಟುಗಳನ್ನು ಸ್ವೀಕರಿಸೋದು ರಗಳೆ. ಆದರೆ ವರ್ಡ್ ಫಾರ್ಮ್ಯಾಟಿನಲ್ಲಿ ಕಳುಹಿಸುವುದರ ಕೆಟ್ಟ ಪ್ರಭಾವ ಬೀರೋದು ಮುಕ್ತ ಪದ್ಧತಿಗಳೆಡೆಗೆ ಬದಲಾಗುತ್ತಿರುವ ಜನರ ಮೇಲೆ: ವರ್ಡ್ ಫೈಲುಗಳನ್ನು ಓದಲು ವರ್ಡ್ ತಮ್ಮಲ್ಲಿ ಇರಲೇಬೇಕೆಂದು ಅವರು ಹಿಂದೇಟು ಹಾಕುತ್ತಾರೆ, ಹಿಂಜರಿಯುತ್ತಾರೆ. ರಹಸ್ಯಮಯವಾದ ವರ್ಡ್ ಫಾರ್ಮ್ಯಾಟ್ ಬಳಸುವ ಅಭ್ಯಾಸ ಇದೆಯಲ್ಲ ಅದು ಸಮುದಾಯದ ಬೆಳವಣಿಗೆಯನ್ನು ಕುಂಟಿತಕೊಳುಸುತ್ತೆ. ಆಗೀಗ ವರ್ಡ್ ಫೈಲೊಂದನ್ನ ಪಡೆದಾಗ ಆಗುವ ಕಿರುಕುಳ ಗಮನಿಸುತ್ತೇವೆಯೇ ವಿನಃ ಸಮುದಾಯಕ್ಕಾಗುವ ಕೆಡುಕು ನಮ್ಮ ಗಮನಕ್ಕೆ ಬರೋದಿಲ್ಲ. ಆದರೆ ಪ್ರತೀ ಸಾರಿ ಇದಾಗುತ್ತಲೇ ಇರುತ್ತದೆ. ಗ್ನು (GNU) ಬಳಕೆದಾರರಲ್ಲಿ ವರ್ಡ್ ಡಾಕ್ಯುಮೆಂಟುಗಳನ್ನು ಪಡೆಯುವ ಹಲವರು ಅದನ್ನು ನಿಭಾಯಿಸುವ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಗಬ್ಬಾಗಿ ಕಾಣುವ ಅಕ್ಷರಗಳ ಮಧ್ಯೆ ಕೆಲವು ASCII ವಾಕ್ಯಗಳನ್ನು ಫೈಲಿನಲ್ಲಿ ಕಣ್ಣು ಹಾಯಿಸಿ ಹುಡುಕುವಷ್ಟು ನೀವು ಯಶಸ್ವಿಯಾಗಬಹುದು. ಮುಕ್ತ ತಂತ್ರಾಂಶ ಇಂದು ಕೆಲವು ವರ್ಡ್ ಡಾಕ್ಯುಮೆಂಟುಗಳನ್ನು ಓದಬಲ್ಲುದು, ಆದರೆ ಎಲ್ಲವನ್ನೂ ಓದುವುದಿಲ್ಲ -- ಆ ಫಾರ್ಮ್ಯಾಟು ರಹಸ್ಯವಾದುದಲ್ಲದೆ ಸಂಪೂರ್ಣ ಡೀಕೋಡ್ (ವಿಂಗಡಣೆ) ಕೂಡ ಮಾಡಲಾಗಿಲ್ಲ. ಇನ್ನೂ ಕೆಟ್ಟದೇನಪ್ಪಾಂದ್ರೆ, ಮೈಕ್ರೊಸಾಫ್ಟ್ ಆ ಫಾರ್ಮ್ಯಾಟನ್ನ ಯಾವಾಗ ಬೇಕಾದರೂ ಬದಲಾಯಿಸಬಹುದು. ಭವಿಷ್ಯದಲ್ಲಿ, ಬೇರೆ ಯಾವುದೇ ತಂತ್ರಾಂಶಕ್ಕೆ ಶತ ಪ್ರಯತ್ನಮಾಡಿದರೂ ಮೈಕ್ರೊಸಾಫ್ಟಿನ ಅನುಮತಿಯಿಲ್ಲದೆ ಫೈಲುಗಳನ್ನು ಮುಟ್ಟಲಾಗದಂತಹ ರೀತಿಯಲ್ಲಿ ಅವರು ಹೊಸ ವರ್ಡ್ ಫಾರ್ಮ್ಯಾಟಿನೊಂದಿಗೆ ಪಲ್ಲಾಡಿಯಮ್1 ಅಥವ ಇನ್ಯಾವುದೋ "ವಂಚನೆಯ ಗಣಕಪ್ರಯೋಗ" ವ್ಯವಸ್ಥೆಯನ್ನು ಬಳಸಬಹುದು. ಮೈಕ್ರೊಸಾಫ್ಟು ತನ್ನ ಪೇಟೆಂಟೆಡ್ XML extensionಗಳನ್ನು ಭವಿಷ್ಯದ ಫೈಲ್ ಫಾರ್ಮ್ಯಾಟ್ ಮಾಡ ಹೊರಟಿದೆ2 ಎಂಬ ಸುದ್ದಿಗಳು ಬಂದಿವೆ; ಮುಕ್ತ ತಂತ್ರಾಂಶಗಳಲ್ಲಿ ಯಾರಾದರೂ ಅದನ್ನು ಕಾರ್ಯಗತಗೊಳಿಸಿದರೆ ಅವರನ್ನು "ಪೇಟೆಂಟ್ ಉಲ್ಲಂಘನೆ" ಎಂದು ಮೈಕ್ರೊಸಾಫ್ಟು ಕೋರ್ಟಿನ ಕಟಕಟೆ ಹತ್ತಿಸಿಬಿಡಬಹುದು. (ಲೇಖನದ ಉಳಿದ ಭಾಗ ಎರಡನೇ ಕಂತಿನಲ್ಲಿ ಪ್ರಕಟವಾಗಲಿದೆ)
1 - http://en.wikipedia.org/wiki/Palladium, http://www.gnu.org/philosophy/can-you-trust.html 2 - ಸ್ಟಾಲ್ಮನ್ ಈ ಲೇಖನ ಬರೆದ ಸಮಯದಲ್ಲಿ ಇನ್ನೂ ಆ ಬಗ್ಗೆ ಸುದ್ದಿಗಳು ಹೊರಬರುತ್ತಿದ್ದವು. ಆದರೆ ಈಗಾಗಲೇ ಮೈಕ್ರೊಸಾಫ್ಟಿನ ಪೇಟೆಂಟೆಡ್ XML ಫಾರ್ಮ್ಯಾಟುಗಳು ಬಂದುಬಿಟ್ಟಿವೆ. ಆದರೆ ಯೂರೋಪಿಯನ್ ಯೂನಿಯನ್ ಮುಕ್ತ ಫಾರ್ಮ್ಯಾಟುಗಳೆಡೆಗೆ ಒಲವು ತೋರಿತ್ತು. ತಮಾಷೆಯೇನೆಂದರೆ ನಮ್ಮ ಭಾರತದ NIC - ನ್ಯಾಶನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಇದೇ ಮೈಕ್ರೊಸಾಫ್ಟಿನ ಫಾರ್ಮ್ಯಾಟುಗಳನ್ನ ಭಾರತದಲ್ಲಿ e-governanceಗೆ ನಿರ್ದಿಷ್ಟಮಾನವನ್ನಾಗಿ ಮಾಡಹೊರಟಿದೆ.
No votes yet
3365 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
srikanth's picture
23
Jan
2007
11:20
ಕೆಲವು ತಿಂಗಳ ಹಿಂದೆ RMS ಬೆಂಗಳೂರಿಗೆ ಬಂದ ಸಂದರ್ಭದಲ್ಲಿ, ಅವರ GNU software ಚಳುವಳಿಯ ಬಗ್ಗೆ ಕೆಲವು ವಿಚಾರಗಳು ತಿಳಿದುಬಂತು. proprietery software ಬಳಕೆಯಿಂದ ಸ್ವಾತಂತ್ರ್ಯ ಕುಂಠಿತಗೊಳ್ಳುತ್ತದೆ ಎಂಬ ಅವರ ವಾದ, ಆಗ ನನಗೆ ಪೂರ್ಣವಾಗಿ ಅರ್ಥವಾಗಿರಲಿಲ್ಲ. ನಿಮ್ಮ ಈ ಲೇಖನ ಓದಿದ ಮೇಲೆ "ಸಾಫ್ಟ್ ವೇರ್ ಸ್ವಾತಂತ್ರ್ಯ" ದ ಬಗ್ಗೆ ತಿಳಿದುಬಂದದ್ದು. ಧನ್ಯವಾದಾಗ್ಳು ಶ್ರೀಕಾಂತ್
hpn's picture
27
Jan
2007
1:49
ಮೇಲೆ ತಿಳಿಸಿದಂತೆ, RMSರ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾದರೆ ಈ‌ ನನ್ನ ಪ್ರಯತ್ನ ಫಲಿಸಿದಂತೆ. ಅನಾರೋಗ್ಯದ ಕಾರಣ ಸೇರಿಸಲಾಗದ ಮುಂದಿನ ಕಂತು ಸದ್ಯದಲ್ಲೇ ಸೇರಿಸಲಾಗುವುದು. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. -- Check my Blog Kannada wikipedia "ಹೊಸ ಚಿಗುರು, ಹಳೆ ಬೇರು"
pavanaja's picture
27
Jan
2007
7:33
hpn wrote:
ತಮಾಷೆಯೇನೆಂದರೆ ನಮ್ಮ ಭಾರತದ NIC - ನ್ಯಾಶನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಇದೇ ಮೈಕ್ರೊಸಾಫ್ಟಿನ ಫಾರ್ಮ್ಯಾಟುಗಳನ್ನ ಭಾರತದಲ್ಲಿ e-governanceಗೆ ನಿರ್ದಿಷ್ಟಮಾನವನ್ನಾಗಿ ಮಾಡಹೊರಟಿದೆ.
ಇದು ನಿಜವಲ್ಲ. NICಯವರು ODF (Open Document Format) ನ್ನು ಶಿಷ್ಟತೆಯನ್ನಾಗಿಸಲು ಹೊರಟಿರುವುದು. ಬೆಂಗಳೂರಿನಲ್ಲಿ NICಯವರು ಕರೆದ ಸಭೆಯಲ್ಲಿ ಭಾಗವಹಿಸಿದ ಎಚ್.ಪಿ. ನಾಡಿಗರಿಗೆ ಇದು ತಿಳಿಯದ ಸಂಗತಿಯಲ್ಲ. ಅಥವಾ ಜಾಣ ಮರೆವೋ? -ಪವನಜ ----------- Vishva Kannada Think globally, Act locally
hpn's picture
27
Jan
2007
10:08
NIC ಕರೆದ ಸಭೆಯಲ್ಲಿ ಭಾಗವಹಿಸಿ ಸಂಗತಿ ತಿಳಿದಿದ್ದರಿಂದಲೆ ಬರೆದದ್ದು. ನೀವ್ಯಾಕೆ ಇಷ್ಟೊಂದು ಸಂಕಟದಿಂದ ಉತ್ತರಿಸಿದ್ದೀರಿ ತಿಳಿಯದು. ಬೆಂಗಳೂರಿನಲ್ಲಿ ನಡೆದ NIC ಮೀಟಿಂಗಿನ "minutes"ನಲ್ಲಿ ODF ಜೊತೆಗೆ ಮೈಕ್ರೋಸಾಫ್ಟಿನ ಫಾರ್ಮ್ಯಾಟುಗಳನ್ನೂ ಸೇರಿಸಿಕೊಂಡಿದ್ದರು. ಅಲ್ಲೇನೂ "ODF"ಅನ್ನೇ ಬಳಸುತ್ತೇವೆ ಎಂದು ನಿರ್ಧಾರ ತೆಗೆದುಕೊಂಡಿರಲಿಲ್ಲ. "ODFಅನ್ನು minutesನಲ್ಲಿ ಸೇರಿಸಿಕೊಳ್ಳಿ" ಎಂಬುದನ್ನು ಕೂಡ ಕೊನೆಯ ಘಳಿಗೆಯಲ್ಲಿ ಅಭಿಜಿತ್ ಮತ್ತು ನಾನು *ವರ್ಡ್ ಡಾಕ್ಯುಮೆಂಟ್ ಒಂದರಲ್ಲಿ ಚರ್ಚೆಯ Minutes ಬರೆದುಕೊಳ್ಳುತ್ತಿದ್ದ* ಮಹಾಶಯರ ಗಮನಕ್ಕೆ ತಂದಿದ್ದೂ ನೆನಪಿದೆ. ಅಧ್ಯಕ್ಷತೆ ವಹಿಸಿದ್ದವರು ಮೈಕ್ರೊಸಾಫ್ಟಿನ ಫಾರ್ಮ್ಯಾಟುಗಳ ಬಗ್ಗೆ ಒಲವು ತೋರಿದ್ದು - ಲಿನಕ್ಸಿನ ಬಗ್ಗೆ ಕಡಿಮೆ ಗಮನ ಕೊಟ್ಟದ್ದು - ಮಾತು ತಿರುಚಿದ್ದು, ಅಲ್ಲಿ ಅರ್ಧಕ್ಕರ್ಧ ಜನ ಮೈಕ್ರೊಸಾಫ್ಟಿಗರೋ ಅಥವ ಮೈಕ್ರೊಸಾಫ್ಟಿಗೆ ಬೇಕಾದವರೋ ಇದ್ದದ್ದು ನಾನು ಹೇಳಬೇಕಿಲ್ಲವಷ್ಟೆ? ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ. -- Check my Blog Kannada wikipedia "ಹೊಸ ಚಿಗುರು, ಹಳೆ ಬೇರು"