ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಎಲ್ಲ ಪುಟಗಳು

ಲೇಖಕರು: manju.hichkad
ವಿಧ: ಬ್ಲಾಗ್ ಬರಹ
April 17, 2014 43
ಮಾತಿಲ್ಲ, ಕತೆಯಿಲ್ಲ ಏಕಿನಿತು ಮೌನ - ನಲ್ಲೆ?   ಮಾತಿಗಿಲ್ಲದ ಬೆಲೆ ಮೌನಕ್ಕಿರುವಾಗ ಮಾತಿಗಿಂತ, ಮೌನ ಲೇಸಲ್ಲವೇ -ನಲ್ಲ?   --ಮಂಜು ಹಿಚ್ಕಡ್  
5
ಲೇಖಕರು: nageshamysore
ವಿಧ: ಲೇಖನ
April 17, 2014 38
ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು - ಯಾವುದೆ ಪ್ರಚಾರ ಗದ್ದಲಗಳ ಪರಿವೆಯಿಲ್ಲದೆ. ಇನ್ನೇನಿದ್ದರೂ ಅಂತಿಮ ಫಲಿತಕ್ಕೆ ಕಾಯುವುದಷ್ಟೆ - ಜಯಲಕ್ಷ್ಮಿಯ ವರಮಾಲೆ ಯಾರ ಕೊರಳಿಗೆ ಬೀಳುವಳೆಂಬ ಕುತೂಹಲದಲ್ಲಿ. ಹಿಂದೆ ಕೆಲವು ಬಾರಿಯಾದಂತೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿದ ಪರಿಸ್ಥಿತಿಯಾಗುವುದೆ?...
0
ಲೇಖಕರು: shivaram_shastri
ವಿಧ: ಬ್ಲಾಗ್ ಬರಹ
April 15, 2014 6 ಪ್ರತಿಕ್ರಿಯೆಗಳು 338
ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ‌ ನಾನಾಗುವುದರಲ್ಲಿ ಸಂದೇಹವಿಲ್ಲ‌. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ‌ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ ಮುಂದುವರಿಸುವ‌ ಸಾಧ್ಯತೆ ನನಗಂತೂ ಕಂಡುಬರುತ್ತಿಲ್ಲ‌.  ಪಾರ್ಥರಾದಿಯಾಗಿ ಪ್ರೋತ್ಸಾಹಿಸಿದ‌ ಎಲ್ಲರಿಗೂ ಧನ್ಯವಾದಗಳು. ಕ್ಷಮಿಸಿ, ನಾನು ಸೋತಿದ್ದೇನೆ.   ...................... ಕೊನೆ ಹನಿ ... ಹಲವಾರು ಸಂಕೀರ್ಣ ಸಮಸ್ಯೆಗಳಿಗೆ ನನ್ನ ಹತ್ತಿರ‌ ತುಂಬ‌ ಸುಲಭವಾದ ...
5
ಲೇಖಕರು: Araravindatanaya
ವಿಧ: ಬ್ಲಾಗ್ ಬರಹ
April 15, 2014 1 ಪ್ರತಿಕ್ರಿಯೆಗಳು 130
ಅಭಿನವ ರಾಮಾನುಜ ಎಂಬ ಶೀರ್ಷಿಕೆಯಲ್ಲಿ ನನ್ನ ಅಪ್ಪನಿಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ನನ್ನ ಅಪ್ಪ ಜೀವಿಸಿದ್ದ ಕಾಲದಲ್ಲಿ, ಅಂದರೆ ಅವರ ಬಾಲ್ಯ ಮತ್ತು ಪ್ರೌಡವಯಸ್ಸಿನ ಕಾಲದಲ್ಲಿ ಭಾರತದಲ್ಲೆಲ್ಲಾ ಅಸ್ಪೃಶ್ಯತೆಯನ್ನು ಬಹಳ ತೀವ್ರವಾಗಿ, ಅಚ್ಚುಕಟ್ಟಾಗಿ ಆಚರಿಸುತ್ತಿದ್ದ ಸಮಯ. ಈ ಹೀನ ಆಚರಣೆಯ ವಿರುದ್ಧ ಸಮಾಜ ಸುಧಾರಕರೆಲ್ಲ ಭಾರತದ ಉದ್ದಗಲಕ್ಕೆ ನಿರಂತರ ಹೋರಾಟ ಮಾಡುತ್ತಿದ್ದ ಕಾಲವದು. ನನ್ನ ಅಪ್ಪನ ಕಾಲವಿರಲಿ, ನನ್ನ ಬಾಲ್ಯದಲ್ಲೇ, ನಾನೇ ಕಂಡ ಹಾಗೆ ಹರಿಜನರನ್ನು...
4.75
ಲೇಖಕರು: nagaraju Nana
ವಿಧ: ಲೇಖನ
April 15, 2014 1 ಪ್ರತಿಕ್ರಿಯೆಗಳು 114
ಕೊಳ್ಳೇಗಾಲ ನಿವಾಸಿ ಆರ್.ರಘು ಯಳಂದೂರು ತಾಲ್ಲೋಕಿನ ಕೆಸ್ತೂರು ಗ್ರಾಮದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ !ಇವರ ಹವ್ಯಾಸವೆಂದರೆ ರಾವಳೇಶ್ವರನ ಸಂಶೋದನೆ ಮಾಡುವ್ದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಂಚರಿಸಿ ರಾವಳೇಶ್ವರನ ಫೋಟೋಗಳನ್ನು ತೆಗೆದು ಸಂಗ್ರಹಿಸಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ನಡೆಸುವ ವಾರ್ಷಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ರಾವಳೇಶ್ವರನ ಶಿಲ್ಪಗಳು ..ಶಿಲ್ಪ ಮತ್ತು ಸಂಸ್ಕ್ಕುತಿ, ತಾಯಿ ಮತ್ತು ಮಗು. ಕಂಚು ಮತ್ತು...
0
ಲೇಖಕರು: bhalle
ವಿಧ: ಲೇಖನ
April 15, 2014 2 ಪ್ರತಿಕ್ರಿಯೆಗಳು 196
’ಹೊಸತನ’, ’ತಾಜಾತನ’, ’ನವನವೀನ’ ಅಂತ ’ನ’ಗಳನ್ನೇ ಹೇಳ್ಕೊಂತಾ ಜೀವ’ನ’ ಸಾಗಿಸೋ ಮಾ’ನ’ವ ನಿಜಕ್ಕೂ ಹಳಸಲು ಕಣ್ರೀ ನಾವು! ಅಂಕುರಿಸಿದ ದಿನದಿಂದ ನವ ಮಾಸಗಳ ನಂತರ ಕಾಣಿಸಿಕೊಂಡಾಗಲೂ, ’ನವ’ಜಾತ ಅನ್ನಿಸಿಕೊಳ್ಳೋ ಹಳಸಲು ಹೊಸಬಾಡಿಗಳು ನಾವು ! ಎಂದೋ ನೂಲು ತೆಗೆದು, ಮತ್ತೆಂದೋ ಸಿದ್ದ ಮಾಡಿದ ಉಡುಪನ್ನೇ ಹೊಚ್ಚಹೊಸಾ ದಿರಿಸು ಎಂಬಂತೆ ತೊಟ್ಟು ಮೆರೆಯೋ ಹಳಸಲು ನಾವು ! ಎಂದೋ ಬೆಳೆದದ್ದನ್ನು ಕೊರೆಯೋ ಪೆಟ್ಟಿಗೆಯಿಂದ ತೆಗೆದು, ಇಂದೇ ಬೆಳೆಸಿದ್ದು ಅನ್ನೋ ಹಾಗೆ ತಿನ್ನೋ ಹಳಸಲು ’ಕೂಲ್’ಬಾಡಿಗಳು ನಾವು...
3.333335
ಲೇಖಕರು: manju.hichkad
ವಿಧ: ಬ್ಲಾಗ್ ಬರಹ
April 14, 2014 2 ಪ್ರತಿಕ್ರಿಯೆಗಳು 130
ಕವಿಯ ಮನದೊಳಗೆ ಮೂಡಿ ಹೊರ ಬಂದ ಕವಿತೆಗಳೆಲ್ಲವೂ ಒಂದೇ ತೆರನಾಗಿಲ್ಲದಿದ್ದರೂ ಬರೆದ ಕವಿಗೆ ಎಲ್ಲವೂ ಒಂದೇ   ಕವಿ ಎಲ್ಲವನು ಪ್ರೀತಿಸಬೇಕು ತಾಯಿ ತನ್ನ ಒಡಲೊಳಗೆ ಹುಟ್ಟಿದ ಎಲ್ಲಾ ಮಕ್ಕಳನು ಪ್ರೀತಿಸುವಂತೆ   --ಮಂಜು ಹಿಚ್ಕಡ್  
4.333335
ಲೇಖಕರು: kavinagaraj
ವಿಧ: ಲೇಖನ
April 14, 2014 2 ಪ್ರತಿಕ್ರಿಯೆಗಳು 198
     ಒಬ್ಬ ಸಣಕಲ ವ್ಯಕ್ತಿ ಧಡೂತಿ ಪೈಲ್ವಾನನನ್ನು ಕುರಿತು, 'ಈ ಸಲ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ. ಮತ್ತೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನ ಗತಿ ನೆಟ್ಟಗಿರುವುದಿಲ್ಲ" ಎಂದಾಗ ಪೈಲ್ವಾನ ನಕ್ಕು ಸುಮ್ಮನಿರುತ್ತಾನೆ ಎಂದಿಟ್ಟುಕೊಳ್ಳಿ. ಈಗ ಅಹಿಂಸಾ ತತ್ವವನ್ನು ಪಾಲಿಸಿದವರು ಯಾರು? ಸಣಕಲನೋ, ಪೈಲ್ವಾನನೋ? ನಿಜವಾಗಿ ಹೇಳಬೇಕೆಂದರೆ ಪೈಲ್ವಾನನೇ ಅಹಿಂಸಾ ತತ್ವ ಪಾಲಿಸಿದವನು. ಏಕೆಂದರೆ ಸಣಕಲನ ಮಾತು ಕೇಳಿ ಆತ ತಿರುಗಿಸಿ ಅವನ ಮುಸುಡಿಯ ಮೇಲೆ ಗುದ್ದಿಬಿಡಬಹುದಿತ್ತು. ಹಾಗೆ ಗುದ್ದಿದರೂ ಸಣಕಲ...
4.666665

Pages

ಟ್ವಿಟ್ಟರಿನಲ್ಲಿ ಸಂಪದ