ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 12, 2007
-- ನಿಮ್ಮ ಹೊಟೆಲನ್ನ ಇಷ್ಟು ಚೆನ್ನಾಗಿ ನಡಸ್ತಿದ್ದೀರಾ , ಎಷ್ಟೊಂದ್ ವ್ಯಾಪಾರ, ಎಷ್ಟೊಂದ್ ಲಾಭ ! ನಿಮಗೆ ಈ ಉದ್ಯೋಗದ ಯಶಸ್ಸಿಗೆ ಏನ್ ಕಾರಣ ? ಹೇಳ್ತೀರಾ? -- ಎಲ್ಲಾ ನಾನು ಓದದೇ ಇರೋ ಒಂದ್ ಪುಸ್ತಕದ ಪ್ರಭಾವಾ ಕಣಯ್ಯಾ -- ಯಾವ ಪುಸ್ತ್ಕಾ ಸ್ವಾಮೀ , ಅದು , ಹೋಟೆಲ್ ನಡಸೋ ಬಗ್ಗೆ ಯಾವ ಪುಸ್ತಕಾ ಇದ್‌ಹಾಗಿಲ್ವೇ? -- ನಾನೂ ನಿನ್ಹಾಗೇ ನಿರುದ್ಯೋಗಿ ಆಗಿದ್ದೆ ಕಣಪ್ಪಾ , ಒಂದಿನ ಕಡ್ಲೆ ಕಾಯಿ ತಿನ್ನೋವಾಗ ಅದನ್ನು ಕಟ್ಟಿದ ಕಾಗದ ನೋಡ್ದೆ , ಒಂದು ಗಿಳಿಯನ್ನ ಸಾಕಿ , ಅದಕ್ಕೆ ಪ್ರತೀನಿತ್ಯ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 11, 2007
ಪಾರ್ಟಿಯ ಹೆಸರು--- ಅಕ್ರಮ(S)ಪಾರ್ಟಿ, ಅಂದರೆ ಅಕ್ರಮ(ಸಕ್ರಮ) ಪಾರ್ಟಿ ಸದ್ಯಕ್ಕೆ ಅಕ್ರಮ.ರಿಜಿಸ್ಟರ್ ಆಗಬೇಕಷ್ಟೆ. ನಾಯಕ --- ನಾನೆ ಅಂದರೆ ಗಣೇಶ ಗೌಡ,ಗಣೇಶಪ್ಪ,ಗಣೇಶ ಸಿಂಗ್.. ಅಕ್ರಮ ಹೆಸರುಗಳು. ರಾಜಕೀಯ ಹಿನ್ನಲೆ--- ನನ್ನ ಜೀವನದ ಅರ್ಧ ಭಾಗವನ್ನು ರಾಜಕೀಯ(ಪತ್ರಿಕೆಗಳಲ್ಲಿ ರಾಜಕೀಯದ ಬಗ್ಗೆ ಓದುವುದ)ಕ್ಕೆ ಮುಡಿಪಾಗಿಟ್ಟಿದ್ದೆ. ನನ್ನ ತಾತನವರು ರಾಷ್ಟ್ರಪಿತ ಗಾಂಧೀಜಿಯವರೊಂದಿಗೆ.. .. .. .. .. .. . .. .. .. ನೆಹರು ಇರುವ ಫೊಟೋಗೆ ಕಟ್ಟು ಹಾಕಿಸಿ ಟ್ರಂಕಿನಲ್ಲಿ ಇಟ್ಟುಕೊಂಡಿದ್ದರು.…
ಲೇಖಕರು: ವೈಭವ
ವಿಧ: Basic page
December 11, 2007
ಕನ್ನಡದೊಳ್ ಪೇಳ್ವೆನು ಎನ್ಗುಂಡಿಗೆ ಅನಿಸುಂಗಳ, ಬೇರ್ಯಾವ ನುಡಿಗಳುಂ ಅರುಪಲ್ ಬಾರದೆನಗುಂ ಆಡಿದೊಡೆ ಕನ್ನಡದೊರೆಗೊಳ್ ನಾಲಿಗೆಯೊಳ್ ಕುಣಿವುದೆನ್ನ ಮನದೊಳ್ ನೆಮ್ಮದಿಯುಂನೆಲೆಗಾಣಿರ್ಪುದಿಂತುಂ (ತಪ್ಪಿದ್ದರೆ ಮನ್ನಿಸಿ)
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 11, 2007
ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು... ಧರ್ಮಸ್ಥಳ ಅಮ್ರತ ಮಹೋತ್ಸವ: ಡಾ: ವೀರೆಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಮ್ರತ ಮಹೋತ್ಸವದಲ್ಲಿ ಪಾಲ್ಗೋಂಡ ಮುಖ್ಯ ಅತಿಥಿಗಳು... - ಶ್ರೀ ರವಿಶಂಕರ್ ಗುರುಜಿ - ಪೂಜ್ಯ ಎಡೆಯೂರು ಮಠಾಧೀಶ ಸಿದ್ಧಲಿಂಗ ಮಹಾಸ್ವಾಮಿ. - ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ - ಡಾ ಅಬ್ದುಲ್ ಕಲಾಂ ಡಾ ಅಬ್ದುಲ್ ಕಲಾಂ ತನ್ನ ಸಂದೇಶದಲ್ಲಿ ಧರ್ಮ ಧರ್ಮಗಳ ಸಮನ್ವಯದಿಂದ ಶಾಂತಿ ಸಾಧ್ಯವೆಂದರು..."…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 11, 2007
ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ... ಧರ್ಮಸ್ಥಳದ ಮೂಲನಾಮ ಕುಡುಮ.ದಾನ ಧರ್ಮಗಳಿಗೆ ಖ್ಯಾತಿಯಾದ ಈ ಸ್ಥಳ ಆಮೇಲೆ ಧರ್ಮಸ್ಥಳವಾಯಿತು. ಈ ಕ್ಷೇತ್ರದ ದೇವರು ಮಂಜುನಾಥ. ಇಲ್ಲಿರುವುದು ಶಿವಲಿಂಗ. ಶಿವಾಲಯವಾದರೂ ಆರ್ಚಕರು ವ್ಯೆಷ್ಣವರು. ಆದಳಿತಕ್ಕೆ ಗುಡಿಯ ಹಿರಿಯರು, ಊರ ಒಡೆಯರಾದ ಹೆಗ್ಗಡೆಯವರು. ಅವರದು ದಿಗಂಬರ ಜೈನ ಸಂಪ್ರದಾಯ. ಎಂತನೆಯ ತೀರ್ಥಂಕರ ಚಂದ್ರನಾಥನ ಬಸದಿಯೂ ಇಲ್ಲಿದೆ. ಮಂಜುನಾಥನಿಗೆ ವೇದೋಕ್ತ ಕ್ರಮದಲ್ಲಿ. ಚಂದ್ರನಾಥನಿಗೆ ಜೈನಾಗಮವನ್ನು ಅನುಸರಿಸಿ ಆರಾಧನೆ. ಧರ್ಮದೇವತೆಗಳೆಂಬ…
ಲೇಖಕರು: sindhu
ವಿಧ: ಬ್ಲಾಗ್ ಬರಹ
December 11, 2007
ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ…
ಲೇಖಕರು: naasomeswara
ವಿಧ: ಬ್ಲಾಗ್ ಬರಹ
December 11, 2007
ಶಾಶ್ವತ ಪ್ರಕೃತಿ ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ ಮಾಡುತ್ತಾರಂತೆ ಮದುವೆ| ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ ಇಬ್ಬರು ಮಾಗಲು ತಡವೆ?|| ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ ಕುಡಗೋಲು ಬೀಳುವ ಹಾಗೆ| ಮದುವೆ ಮುಗಿದ ಮೇಲೆ ಇಬ್ಬರನ್ನು ಒಂದು ರಾತ್ರಿ ದೂಡುತ್ತಾರೆ ಕತ್ತಲು ತುಂಬಿದ ಕೋಣೆಗೆ|| ಅಂದು, ಹುಡುಗಿ ಬೆದರಿದ ಹರಿಣಿ ಮೂಲೆಯಲ್ಲಿದ್ದಳು ಒಳಗೊಳಗೆ ನಡನಡುಗುತ್ತಾ! ಬರುವುದು ಹುಲಿಯೋ ಕಿರುಬನೋ ಇಲ್ಲ…
ಲೇಖಕರು: shammi
ವಿಧ: Basic page
December 10, 2007
ಪ್ರಪಂಚದ ಯಾವುದೋ ಒಂದು  ಮೂಲೆಯಲ್ಲಿ ನೀವು ಪ್ರಯಾಣ ಮಾಡುತ್ತಿರುವಿರಿ ಎಂದು ಒಂದು ಕ್ಷಣ ಯೋಚಿಸಿ.ಅಲ್ಲಿ ನಿಮಗೆ ಅಕಸ್ಮಾತ್ ಒಬ್ಬರು ಬೆಂಗಳೂರಿನ ಮಹಾನ್ ಪ್ರಜೆ ದೊರೆತರೆ, ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಮೊದಲಿಗೆ ನಾವು ಮತ್ತು ಅವರು ಪರಸ್ಪರ ಪರಿಚಯ ಮಾಡಿಕೊಳ್ಳುವುದೇ ಇಲ್ಲ, ಅದು ಬಿಟ್ಟು, ನಾಲಿಗೆ ಆದಷ್ಟು ಹೊರಚಾಚಿ ನಮ್ಮ ಬೆಂದಕಾಳೂರಿನ ಹದಗೆಟ್ಟ ಟ್ರಾಫಿಕ್ ಬಗ್ಗೆಯೇ ಗಂಟೆಗಟ್ಟಲೆ ಕಂಠ ಶೋಷಣೆ ಮಾಡುತ್ತೇವೆ ವಿನ:, ಪ್ರಜೆಗಳಾಗಿ ನಾವು ಮಾಡಬೇಕಾದ ಕೆಲಸವನ್ನು ಮರೆಯುತ್ತೇವೆ.  "…
ಲೇಖಕರು: ASHOKKUMAR
ವಿಧ: Basic page
December 10, 2007
(ಇ-ಲೋಕ-52)(10/12/2007)  Udayavani   ಕಂಪ್ಯೂಟರ್ ಆಟಗಳು ಜನರ ಮನಸ್ಸು ಗೆದ್ದಿವೆ.ಮಕ್ಕಳಂತೂ ಕಂಪ್ಯೂಟರ್ ಆಟಗಳಿದ್ದರೆ ಜಗತ್ತನ್ನೇ ಮರೆಯುತ್ತಾರೆ.ಆಟವನ್ನು ಆಡುವುದರಲ್ಲೇ ಮನರಂಜನೆ ಪಡೆಯುವ ಜತೆಗೆ ಅವರು ಶಿಕ್ಷಣವನ್ನೂ ಪಡೆಯುವ ಹಾಗಿದ್ದರೆ,ಮಕ್ಕಳು ಕಂಪ್ಯೂಟರ್ ಆಟವಾಡಿ ಸಮಯ ಕಳೆಯುತ್ತಾರೆ ಎಂದು ಹಪಹಪಿಸುವ ಅಪ್ಪ-ಅಮ್ಮಂದಿರಿಗೆ ತುಸುವಾದರೂ ಸಮಾಧಾನವಾದೀತು.ಥಾಮಸ್ ಎನ್ನುವ ಕ್ಯಾಲಿಫೊರ್ನಿಯಾದ ಪ್ರಾಧ್ಯಾಪಕರು ಮಕ್ಕಳ ಕಂಪ್ಯೂಟರ್ ಆಟಗಳಲ್ಲಿ ಪಾಠವನ್ನೂ ಸೇರಿಸುವ…
ಲೇಖಕರು: deepakbs
ವಿಧ: ಚರ್ಚೆಯ ವಿಷಯ
December 10, 2007
ನಮಸ್ಕಾರ, ಪ್ರಣೌತಿ ಅನ್ನೊ ಪದ ಕನ್ನಡದ್ದು ಎಂದು ಹಲವಾರು websites ನಲ್ಲಿ ಬರೆದಿದೆ. http://www.hamaranews.com/babynamehome.jsp?typ=hindu&bg=girl&ltr=P http://www.nameandfame.org/p.html http://www.eknazar.com/Parenting/viewbabynames.php?&g=F&n=P&r=Hindu http://indianames.indviews.com/indian-hindu-girl-name-p.htm http://www.hiren.info/indian-baby-names/Girl/P ಆದರೆ, ಈ ಪದ ಸಂಸ್ಕೃತದಿಂದ…