ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 18, 2023
ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ್ಯ ಅವರು ಪ್ರಾರಂಭದಿಂದಲೂ ಬಡವರ ಪರವಾದ, ರೈತರ ಪರವಾದ, ನ್ಯಾಯದ ಪರವಾದ, ಹೋರಾಟಗಳನ್ನು ಮಾಡುತ್ತಲೆ ಬೆಳೆದವರು ಎನ್ನುವುದು ಕೃತಿಗೆ ಮುನ್ನುಡಿಯನ್ನು ಬರೆದ ಪ್ರೊ. ಎಚ್.ಟಿ. ಪೋತೆ ಅವರ ಮಾತು. ಅವರು ಬರೆದ ಮುನ್ನುಡಿಯ ಆಯ್ದ ನುಡಿಗಳು ಇಲ್ಲಿವೆ… “ಶ್ರೀ ಕೇದಾರಲಿಂಗಯ್ಯ…
ಲೇಖಕರು: Kavitha Mahesh
ವಿಧ: ರುಚಿ
December 17, 2023
ಕಡಲೆ ಹಿಟ್ಟಿಗೆ ಅಚ್ಚ ಖಾರದ ಹುಡಿ, ಬೇಕಿಂಗ್ ಪೌಡರ್, ಓಂಕಾಳು, ಇಂಗು, ಬೆಣ್ಣೆ, ಉಪ್ಪು ಮೊದಲಾದ ಎಲ್ಲಾ ವಸ್ತುಗಳನ್ನು ಸೇರಿಸಿ ಗಟ್ಟಿಯಾಗಿ ಕಲಸಿಡಿ. ಚಕ್ಕುಲಿ ಒರಳಿಗೆ ಖಾರಾ ಸೇವ್ ನ ಬಿಲ್ಲೆ ಹಾಕಿ ಮಿಶ್ರಣವನ್ನು ತುಂಬಿ ಕಾದ ಎಣ್ಣೆಯಲ್ಲಿ ಕರಿದು ತೆಗೆದರೆ ರುಚಿಯಾದ ಖಾರಾ ಸೇವ್ ರೆಡಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 15, 2023
ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು...  “ಚಿಕ್ಕಯ್ಯ ಊರಿನಿಂದ ಬಂದಿದ್ದರು. ತಿಂಗಳಿಗೋ ಆರು ತಿಂಗಳಿಗೋ ಏನಾದರೂ ಒಂದು ಕೆಲಸದ ನಿಮಿತ್ತ ಬೆನ್ನೂರಿಗೆ ಬರುತ್ತಿರುತ್ತಾರೆ. ಜಮೀನಿನ ಕಾಗದಪತ್ರ ಮಾಡಿಸಲೋ... ದನದ ವ್ಯಾಪಾರಕ್ಕೋ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 13, 2023
ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ. ಶಶಿಕಿರಣ್ ಶೆಟ್ಟಿ ಅವರ ‘ಬದುಕ ಬದಲಿಸುವ ಕತೆಗಳು' ಕೃತಿಯ ಎರಡನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ೬೦ ಕತೆಗಳಿದ್ದರೆ, ಎರಡನೇ ಭಾಗದಲ್ಲಿ ೧೦೪ ಕತೆಗಳಿವೆ. ಭಾವನಾತ್ಮಕ ರೀತಿಯ ಕತೆಗಳನ್ನು ಓದುವವರಿಗೆ ಸುಗ್ಗಿಯೇ ಸರಿ.  ಹಿಂದಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 11, 2023
‘ವೇಶ್ಯೆ’ ಎಂಬ ಪದವನ್ನು ಕೇಳಿದೊಡನೆಯೇ ಬಹಳಷ್ಟು ಮಂದಿ ಅಸಹ್ಯಕರ ಭಾವವನ್ನು ಮೂಡಿಸಿಕೊಳ್ಳುತ್ತಾರೆ. ಒಂದು ಹೆಣ್ಣು ವೇಶ್ಯೆಯಾಗಲು ನೂರಾರು ಕಾರಣಗಳು ಸಿಗುತ್ತವೆ. ಬಡತನ, ಅನಕ್ಷರತೆ, ಪ್ರೇಮ ವೈಫಲ್ಯ, ಬಲವಂತ, ಶೋಕಿ ಜೀವನದ ಆಸೆ, ಕಾಮದ ಹಂಬಲ, ಸುಲಭದಲ್ಲಿ ಸಿಗುವ ಹಣ, ದೊಡ್ದ ವ್ಯಕ್ತಿಗಳ ಸಂಪರ್ಕ ಹೀಗೆ ಹತ್ತು ಹಲವಾರು ಕಾರಣಗಳು ಸಿಕ್ಕೇ ಸಿಗುತ್ತವೆ. ನಮ್ಮ ಸಮಾಜ ವೇಶ್ಯಾವೃತ್ತಿಯನ್ನು ಅತ್ಯಂತ ಕೀಳು ಕೆಲಸವೆಂದು ಹೇಳಿಕೊಂಡರೂ, ಶತಶತಮಾನಗಳಿಂದಲೂ ಇದು ಇನ್ನೂ ನಿವಾರಣೆಯಾಗದೇ ಮುಂದುವರಿದುಕೊಂಡು…
ಲೇಖಕರು: Kavitha Mahesh
ವಿಧ: ರುಚಿ
December 10, 2023
ತೆಂಗಿನ ತುರಿಗೆ ಎಣ್ಣೆಯೊಂದನ್ನು ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣವನ್ನು ೨೦ ನಿಮಿಷಗಳವರೆಗೆ ನೆನೆಸಿ. ಕಲಸಿದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬೇಕಾದ ಗಾತ್ರದಲ್ಲಿ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಸವಿಯಾದ ತೆಂಗಿನಕಾಯಿ ವಡೆ ತಯಾರು.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 08, 2023
೭೪ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕಗಳಲ್ಲಿ “ಉಳ್ಳಾಲದ ವೀರರಾಣಿ ಅಬ್ಬಕ್ಕ” ಸಹ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲ ಎಂಬಲ್ಲಿ ರಾಜ್ಯವಾಳುತ್ತಿದ್ದ ಅಬ್ಬಕ್ಕ ಎಂಬ ಮಹಿಳೆ ನಮ್ಮ ಸ್ವಾತಂತ್ರ್ಯದ ಇತಿಹಾಸದ ಪುಟಗಳಲ್ಲಿ ಅಮರಳಾಗಿ ಸೇರಿಹೋದ ಸಂಗತಿ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಗ್ರಗಣ್ಯ ಮಹಿಳೆಯರಲ್ಲಿ ಒಬ್ಬರಾದ ಅಬ್ಬಕ್ಕನ ಬಗ್ಗೆ ಬಹುತೇಕರಿಗೆ ತಿಳಿದಿರುವುದು ಅಲ್ಪವೇ. ಪೋರ್ಚುಗೀಸ್ ಸೈನಿಕರ ವಿರುದ್ಧ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 07, 2023
ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್‌-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 06, 2023
ವೀರೇಂದ್ರ ರಾವಿಹಾಳ್ ಅವರ ನೂತನ ಕಥಾ ಸಂಕಲನ “ಡಂಕಲ್ ಪೇಟೆ" ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೫೦ ಪುಟಗಳನ್ನು ಹೊಂದಿರುವ ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಜಿ ಪಿ ಬಸವರಾಜು. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮಓದಿಗಾಗಿ... “ಡಂಕಲ್‌ಪೇಟೆ' ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ- ಮಳೆ- ದೂಳು-ಕೆಸರು- ಉಸಿರು- ಬೆವರು- ಜನ- ಭಾಷೆ- ಸಂಸ್ಕೃತಿ- ನಂಬಿಕೆ-ನಿತ್ಯದ ಗೋಳು-ನಗುವಿನ ಅಬ್ಬರ-ಎಲ್ಲವನ್ನೂ…
ವಿಧ: ರುಚಿ
December 06, 2023
ಬಾಳೆಮೂತಿಯನ್ನು ನೀರು ಹಾಕಿ ಒಂದು ಕುದಿ ಬರಿಸಿ ಸೋಸಿಕೊಳ್ಳಿ. ನಂತರ ಒಗ್ಗರಣೆ ಹಾಕಿ ಹುರಿಯಿರಿ. ಒಣಮೆಣಸು, ಸಾಸಿವೆ ಅರ್ಧ ಚಮಚ ಹಾಕಿ ಹುರಿದು ಕಾಯಿಯೊಂದಿಗೆ ಪುಡಿಮಾಡಿ ಹುರಿದ ಬಾಳೆ ಮೂತಿಗೆ ಬೆರೆಸಿ, ಉಪ್ಪು, ಬೆಲ್ಲ, ಹುಣಸೆ ರಸ ಹಾಕಿ, ಚೆನ್ನಾಗಿ ಹುರಿಯಿರಿ. -ಶೃತಿ ಗದ್ದೆಗಲ್, ಉ.ಕ.