ಇತ್ತೀಚೆಗೆ ಸೇರಿಸಿದ ಪುಟಗಳು

ಔಷಧೀಯ ಸಸ್ಯ -೯: ಜೇಷ್ಠಮಧು (ಅತಿಮಧುರ)

ಸಸ್ಯಶಾಸ್ತ್ರೀಯ ಹೆಸರು: Glycyrrhiza glabra
ಸಂಸ್ಕೃತ: ಮಧುಕ, ಕ್ಲೀತಕ, ಯಷ್ಟುಮಧು
ಇಂಗ್ಲಿಷ್: Liquorice
ಹಿಂದಿ: ಜೇಷ್ಠಮಧ್, ಮೀಠಿಲಕಡಿ
ಕನ್ನಡ: ಜೇಷ್ಠಮಧು, ಅತಿಮಧುರ
ಪಾರಂಪರಿಕವಾಗಿ ಆಯುರ್ವೇದ ವೈದ್ಯರು ಚಿಕಿತ್ಸೆಗೆ ಬಳಸುತ್ತಿದ್ದ ಸಸ್ಯ ಜೇಷ್ಠಮಧು. ಸಿಹಿತಿಂಡಿಗಳ ತಯಾರಿಯಲ್ಲಿಯೂ ಇದರ ಬೇರು ಮತ್ತು ಗುಪ್ತಕಾಂಡಗಳ ಬಳಕೆ ಜನಜ್ನಿತ. ಇದರ ಹೆಸರೇ ಸೂಚಿಸುವಂತೆ ಇದರ ರುಚಿ ಸಿಹಿಸಿಹಿ – ಅತಿ ಮಧುರ.

ಸಾಂವಿ - ಖರ್ಚಿಲ್ಲದೆ ಆದಾಯ ತರುವ ಬೆಳೆ

ಸಾಂವಿ, ಬರಗ ಮತ್ತು ನವಣೆ ಈ ಮೂರು ಒಂದೇ ಪ್ರಕಾರದ ಬೆಳೆಗಳಾಗಿವೆ. ಆಕಾರದಲ್ಲಿ ಸಣ್ಣ ಕಾಲುಗಳಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತವೆ. ಬರಗ ಎರಡೇ ತಿಂಗಳಿನಲ್ಲಿ ಕೊಯ್ಲಿಗೆ ಬಂದರೆ ಸಾಂವಿ, ನವಣೆ ಮೂರು ತಿಂಗಳಿಗೆ ಕೊಯ್ಲಿಗೆ ಬರುತ್ತವೆ. ಸಾಂವಿಯನ್ನು ಬಿತ್ತಲು ಜೂನ್ ತಿಂಗಳ ಮೊದಲನೆ ವಾರ ಸಕಾಲ. ಉಸುಕು ಮಿಶ್ರೀತ ಕೆಂಪು ಮಣ್ಣಿನ ಮಸಾರಿ ಜಮೀನಿನಲ್ಲಿ ಮತ್ತು ಕಲ್ಲಿನ ಹಕ್ಕಲು ಜಮೀನಿನಲ್ಲೂ ಬೆಳೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸಾಂವಿಯನ್ನು ಬೆಳೆಯುತ್ತಾರೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕೊಡಬಲ್ಲ ಸಾಂವಿ ರೈತರನ್ನು ಬರಗಾಲದ ಬವಣೆಯಿಂದ ಪಾರು ಮಾಡುವ ಬೆಳೆಯಾಗಿದೆ.

ಬೀಜಗಳ ರಕ್ಷಣೆ ಬಹಳ ಸುಲಭ :

ನಾನು ನೋಡಿದ ಚಿತ್ರ- ಇಂಪ್ರೆಶನೆನ್ ಉಂಟರ್ ವಾಸರ್(ಜರ್ಮನ್)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಕನ್ಯಾನದ ಕುಟುಂಬದ ಕೃಷಿಕಾಯಕ

ಜೂನ್ ೨೬, ೨೦೧೬ರಂದು ನಾವು ಹೊರಟದ್ದು ಕನ್ಯಾನದ ಗೋಪಾಲಕೃಷ್ಣ ಶರ್ಮರ ಮನೆಗೆ. ಮಂಗಳೂರಿನಿಂದ ಕಾರಿನಲ್ಲಿ ಮುಡಿಪು, ಬಾಕ್ರಬೈಲು ಹಾದಿಯಲ್ಲಿ ಸಾಗಿ ಒಡಿಯೂರು ಸಂಸ್ಥಾನದ ಪ್ರವೇಶದ್ವಾರದಲ್ಲಿ ಎಡಕ್ಕೆ ತಿರುಗಿ ಕನ್ಯಾನ ತಲಪಿದೆವು. ಅಲ್ಲಿಂದ ಅರ್ಧ ಕಿಲೋಮೀಟರ್ ಮುಂದಕ್ಕೆ ಹೋಗಿ, ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಗೆ ಬಲಕ್ಕೆ ತಿರುಗಿದೆವು. ಅನಂತರ ಎಡಕ್ಕೆ ತಿರುಗಿ ಇಳಿಜಾರಿನ ಕಚ್ಚಾ ಹಾದಿಯಲ್ಲಿ ಸಾಗಿ ಶರ್ಮರ ಮನೆ ಮುಟ್ಟಿದೆವು. ಅವರ ತಂದೆ ಕಟ್ಟಿಸಿದ ೮೦ ವರುಷಗಳ ಹಳೆಯ ಮನೆ. ಹಂಚಿನ ಚಾವಣಿ. ಮನೆಯ ಎಡಪಕ್ಕದಲ್ಲಿ ಹಟ್ಟಿ – ದನಗಳು. ಹಟ್ಟಿಯ ಹಿಂಭಾಗದಲ್ಲಿ ಒಂದು ದೇಸಿ ಹೋರಿ ಮತ್ತು ಗೋಬರ್ ಗ್ಯಾಸ ಘಟಕ. ಪಕ್ಕದಲ್ಲಿ ಸ್ಲರಿ ಟ್ಯಾಂಕ್.

ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ?

೨೦೧೫ – ೧೬ನೇ ವರುಷದಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳ ಮೌಲ್ಯ ರೂ.೧.೪ ಲಕ್ಷ ಕೋಟಿ. ಇದರಿಂದಾಗಿ ಹುಟ್ಟುವ ಸಂದೇಹ: ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿರಬೇಕೆಂಬ ಧೋರಣೆಯನ್ನು ನಮ್ಮ ದೇಶ ಕ್ಷಿಪ್ರವಾಗಿ ಬದಲಾಯಿಸುತ್ತಿದೆಯೇ? ಈ ಸಂದೇಹಕ್ಕೆ ಕಾರಣ, ಇತ್ತೀಚೆಗಿನ ವರುಷಗಳ ಬೆಳವಣಿಗೆ: ಇತ್ತ ಬಂಪರ್ ಬೆಳೆ ಬೆಳೆದಿದ್ದೇವೆ ಎಂದು ಘೋಷಿಸುವ ಸರಕಾರ, ಅತ್ತ ಕೃಷಿ ಉತ್ಪನ್ನಗಳ ಆಮದಿಗೆ ಉತ್ತೇಜನ ನೀಡುತ್ತಿರುವುದು. ಮುಖ್ಯವಾಗಿ, ಗೋಧಿ, ಜೋಳ ಮತ್ತು ಅಕ್ಕಿ (ಬಸುಮತಿ ಹೊರತಾಗಿ) ಇಂತಹ ಏಕದಳ ಧಾನ್ಯಗಳ ಆಮದಿಗೆ ಅವಕಾಶ ನೀಡಿರುವುದು. ಈ ಆಹಾರಧಾನ್ಯಗಳ ಆಮದು ಪರಿಮಾಣ ೨೦೧೪ರಿಂದ ೨೦೧೭ರ ಅವಧಿಯಲ್ಲಿ ೧೧೦ ಪಟ್ಟು ಹೆಚ್ಚಾಗಿದೆ.

ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ?

“ಕಾಳುಮೆಣಸು ಬಳ್ಳಿಯನ್ನು ಆಧಾರ ಮರಕ್ಕೆ ಹಬ್ಬಿಸುತ್ತೀರಲ್ಲಾ. ಒಂದೂವರೆಯಿಂದ ಎರಡು ಮೀಟರ್ ಎತ್ತರ ಬೆಳೆಯಲಿ. ನಂತರ ಮೇಲ್ಭಾಗದಿಂದ ಬಳ್ಳಿಯನ್ನು ಬಿಡಿಸುತ್ತಾ ಬನ್ನಿ. ಇದನ್ನು ನೆಲಮಟ್ಟದಿಂದ ಒಂದಡಿ ಎತ್ತರದ ವರೆಗೆ ಆಧಾರ ಮರಕ್ಕೆ ಸುತ್ತಿ. ಜಾರದಂತೆ ಬಳ್ಳಿಗಳನ್ನು ಹಗ್ಗದಿಂದ ಸಡಿಲವಾಗಿ ಕಟ್ಟಿ. ಕೊನೆಗೆ ತುದಿ ಭಾಗವನ್ನು ಮೇಲ್ಮುಖವಾಗಿ ದಾರದಿಂದ ಕಟ್ಟಿ. ಇದರಿಂದಾಗಿ ಕಾಳುಮೆಣಸಿನ ಬಳ್ಳಿಯ ಗಂಟುಗಳು ಬೇರುಬಿಟ್ಟು ನೆಲಕ್ಕಿಳಿಯುತ್ತವೆ. ಭೂಮಿಯಿಂದ ಹೆಚ್ಚು ಪೋಷಕಾಂಶ ಹೀರಲು ಸಹಾಯ ಮಾಡುತ್ತದೆ. ಪ್ರತಿ ಗಂಟುಗಳು ಚಿಗುರಿ ಆಧಾರ ಮರದ ಸುತ್ತ ಮೇಲೇರುತ್ತವೆ. ಬಳ್ಳಿಯು ವಿಶಾಲವಾಗಿ ಹಬ್ಬುತ್ತದೆ. ಇದರಿಂದ ಇಳುವರಿ ಹೆಚ್ಚು.” ಪುತ್ತೂರು (ದ.ಕ.) ತಾಲೂಕಿನ ಕೃಷಿಕ ನರಿಮೊಗ್ರು ಎಂ. ಮೋಹನ ರೈವರು ತನ್ನ ಅನುಭವವನ್ನು ಕೃಷಿಕರೊಂದಿಗೆ ಹಂಚಿಕೊಂಡರು.

ಕರಿಬಸರಿಯ ಹಸಿರು ಹೆರಿಗೆ

"ಹೆಸರು ಗುರುತಿಸುವಾಗ ಯಾವತ್ತೂ 'ಅವಳು ಬಸುರಿ' ಎಂದು ಕರಿಬಸರಿಯನ್ನು ತಮಾಷೆಗೆ ಕರೆಯುತ್ತಿದ್ದೆವು. ಬಸುರಿಯಾದವಳು ಹೆರಬೇಕು. ಇದು ನಿಸರ್ಗ ನಿಯಮ. ಈಗ ಕರಿಬಸರಿ ಹೆಸರಿಗೆ ತಕ್ಕಂತೆ ಹಸಿರು ಹೆರಿಗೆಯ ಸಾರ್ಥಕ ಕೆಲಸ ಮಾಡುತ್ತಿದೆ. “ ಕರಿಬಸರಿ ಮರ ನೋಡಿದಾಗ ವಿಚಿತ್ರ ಕಾಣುತ್ತಿದೆ. ಎಳ್ಳಿನ ಗಾತ್ರದ ಇದರ ಬೀಜಕ್ಕೆ ನೇರ ನೆಲಕ್ಕೆ ಬಿದ್ದರೆ ಹುಟ್ಟುವುದಕ್ಕೆ ತಾಕತ್ತಿಲ್ಲ. ಪಕ್ಷಿಗಳು ಹಣ್ಣು ತಿಂದು ಅವುಗಳ ಹೊಟ್ಟೆಸೇರಿ ಬೀಜೋಪಚಾರ ಪಡೆದು ಹಿಕ್ಕೆಯ ಮೂಲಕ ಹೊರಬರಬೇಕು. ಯಾವುದೋ ಮರದ ಟೊಂಗೆಗಳ ಮೇಲೆ ಹಕ್ಕಿಯ ಹಿಕ್ಕೆಯ ಜೊತೆ ಬಿದ್ದು ಮೊಳಕೆಯೊಡೆಯಬೇಕು. ವೃಕ್ಷದ ಟೊಳ್ಳು ಜಾಗಗಳಲ್ಲಿ ಕಷ್ಟಪಟ್ಟು ಬೆಳೆದು ಕೊನೆಗೆ ತನಗೆ ಆಶ್ರಯ ನೀಡಿದ ಮರವನ್ನು ಬಿಗಿದಪ್ಪಿ ಹತ್ಯೆ ಮಾಡುವ ಚಾಳಿ ಇದರದು! ಸಸ್ಯಲೋಕದ ಖಳನಾಯಕನಂತೆ ತಕ್ಷಣಕ್ಕೆ ಮರ ಕಾಣಿಸಬಹುದು.

Pages