ಇತ್ತೀಚೆಗೆ ಸೇರಿಸಿದ ಪುಟಗಳು

ಸಮಾಗಮ

ಅಂಬರದ ಚುಕ್ಕಿಗೆ ಚಂದ್ರಮನು ಬೇಕಿಲ್ಲ
ಬೆಳದಿಂಗಳಂಗು ನನಗಿಲ್ಲವೆಂದುಲಿವ
ತಾರೆಗಳ ತೋರಣ ಕಟ್ಟಿ ಚಂದ್ರನ ಕೂಡಿಸಲಾಗಿ
ಪಳ ಪಳನೊಳೆಯುವ ಮುದ್ದು ಕುವರನ
ಮುಖಾರವಿಂದವದೆಷ್ಟು ಅಂದವೊ ನಾ ಕಾಣೆ!
 
ಹದಿನಾರರ ನವ ತರುಣಿಯರು ಜರತಾರಿ ಸೀರೆಯಲಿ
ಸುತ್ತೆಲ್ಲ ನೆರೆದಿರಲು ಚಂದ್ರವದನೆಯ ಸೊಬಗು
ಲಲನೆಯರಲಿ ಮೇಳೈಸಿರಲು ಲಕ ಲಕ ಮಿನುಗುವ
ನಕ್ಷತ್ರಗಳ ಪಾಡು ಕಂಡಾಗ ಚಂದ್ರಮಗೆ
ಅದೆಷ್ಟು ಇರುಸು ಮುರುಸಾಗುವುದೊ ನಾ ಕಾಣೆ!
 
ಆಕಾಶದಂಗಳದಿ ಉದ್ಭವಿಸುವ ಮಿಂಚುಗಳು
ಅಲ್ಲಲ್ಲಿ ತೂರಿಬರುವ ಕಿರಣದಕ್ಕರೆಯಂತೆ
ಝಳಪಿಸುವ ಕತ್ತಿಯ ಕೋರೈಸುವ ಬೆಳಕಿನಲಿ
ಚಂದ್ರಮನಿಗಿಡಿದಿಟ್ಟ ಕನ್ನಡಿಯಂತೆ ಪ್ರಜ್ವಲಿಸಲು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇದುವೆ ಜೀವ ಇದು ಜೀವನ - ಇನ್ನೊಂದು ಘಟನೆ

ಮುಂಜಾನೆ ಹತ್ತೂವರೆ ಗಂಟೆ, ಎಂದಿನಂತೆ ಆ ದಿನವೂ ಜನರು ಮುಂಬೈನ ಚರ್ಚ್ ಗೇಟ್ ಸ್ಟೇಶನ್ನಿನಿಂದ ಹೊರ ಬೀಳುತ್ತಿದ್ದರು. ಅಲ್ಲಿ ಸಬ್ ವೇ ಇದೆ ಒಂದು ಮೂವತ್ತು ಮೆಟ್ಟಿಲು ಇಳಿದು ಸ್ವಲ್ಪ ನೇರ ನಡೆದು ಮತ್ತೆ ಮೂವತ್ತು ಮೆಟ್ಟಿಲು ಹತ್ತಬೇಕು. ಇಂತಹ ಜನರಲ್ಲಿ ಒಬ್ಬಳು ವಿದ್ಯಾವಂತ , ಮಧ್ಯಮ ವರ್ಗದ , ಆದರೆ ಕುರುಡು ಹುಡುಗಿ. ಕರಿಯ ಕನ್ನಡಕ, ಕೈ ಗೋಲು. ಅವಳಿಗೆ ಕೈ ಹಿಡಿದು ನಡೆಸಲು ಒಬ್ಬ ಜತೆಗಾರ , ದಾರಿಯ ತಗ್ಗುದಿನ್ನೆ , ಇದರಾಗುವ ಜನ , ಇತ್ಯಾದಿ ತಿಳಿಸುತ್ತ ಹೋಗುತ್ತಿದ್ದಾನೆ. ಇದಕ್ಕಿದ್ದಂತೆ ಅವಳ ನಡೆಯನ್ನು ತಡೆದು , ಸ್ವಲ್ಪ ಪಕ್ಕಕ್ಕೆ ಹೋಗುವ ಹಾಗೆ ಅವಳನ್ನು ಮಾಡಿದ , ಅವಳು ಏಕೆ ಅಂತ ಕೇಳಿರಬೇಕು, ಇವನು ಹೇಳಿರಬೇಕು - ಅಲ್ಲಿ ಕೆಳಗೆ ಒಬ್ಬ ಕುಂಟ ಭಿಕ್ಷುಕ ಕೂತಿದ್ದ - ಜನ ಓಡಾಡುವ ಹಾದಿಯಲ್ಲೇ ಭಿಕ್ಷೆ ಬೇಡುತ್ತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಔಷಧೀಯ ಸಸ್ಯ -೯: ಜೇಷ್ಠಮಧು (ಅತಿಮಧುರ)

ಸಸ್ಯಶಾಸ್ತ್ರೀಯ ಹೆಸರು: Glycyrrhiza glabra
ಸಂಸ್ಕೃತ: ಮಧುಕ, ಕ್ಲೀತಕ, ಯಷ್ಟುಮಧು
ಇಂಗ್ಲಿಷ್: Liquorice
ಹಿಂದಿ: ಜೇಷ್ಠಮಧ್, ಮೀಠಿಲಕಡಿ
ಕನ್ನಡ: ಜೇಷ್ಠಮಧು, ಅತಿಮಧುರ
ಪಾರಂಪರಿಕವಾಗಿ ಆಯುರ್ವೇದ ವೈದ್ಯರು ಚಿಕಿತ್ಸೆಗೆ ಬಳಸುತ್ತಿದ್ದ ಸಸ್ಯ ಜೇಷ್ಠಮಧು. ಸಿಹಿತಿಂಡಿಗಳ ತಯಾರಿಯಲ್ಲಿಯೂ ಇದರ ಬೇರು ಮತ್ತು ಗುಪ್ತಕಾಂಡಗಳ ಬಳಕೆ ಜನಜ್ನಿತ. ಇದರ ಹೆಸರೇ ಸೂಚಿಸುವಂತೆ ಇದರ ರುಚಿ ಸಿಹಿಸಿಹಿ – ಅತಿ ಮಧುರ.

ಸಾಂವಿ - ಖರ್ಚಿಲ್ಲದೆ ಆದಾಯ ತರುವ ಬೆಳೆ

ಸಾಂವಿ, ಬರಗ ಮತ್ತು ನವಣೆ ಈ ಮೂರು ಒಂದೇ ಪ್ರಕಾರದ ಬೆಳೆಗಳಾಗಿವೆ. ಆಕಾರದಲ್ಲಿ ಸಣ್ಣ ಕಾಲುಗಳಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತವೆ. ಬರಗ ಎರಡೇ ತಿಂಗಳಿನಲ್ಲಿ ಕೊಯ್ಲಿಗೆ ಬಂದರೆ ಸಾಂವಿ, ನವಣೆ ಮೂರು ತಿಂಗಳಿಗೆ ಕೊಯ್ಲಿಗೆ ಬರುತ್ತವೆ. ಸಾಂವಿಯನ್ನು ಬಿತ್ತಲು ಜೂನ್ ತಿಂಗಳ ಮೊದಲನೆ ವಾರ ಸಕಾಲ. ಉಸುಕು ಮಿಶ್ರೀತ ಕೆಂಪು ಮಣ್ಣಿನ ಮಸಾರಿ ಜಮೀನಿನಲ್ಲಿ ಮತ್ತು ಕಲ್ಲಿನ ಹಕ್ಕಲು ಜಮೀನಿನಲ್ಲೂ ಬೆಳೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸಾಂವಿಯನ್ನು ಬೆಳೆಯುತ್ತಾರೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕೊಡಬಲ್ಲ ಸಾಂವಿ ರೈತರನ್ನು ಬರಗಾಲದ ಬವಣೆಯಿಂದ ಪಾರು ಮಾಡುವ ಬೆಳೆಯಾಗಿದೆ.

ಬೀಜಗಳ ರಕ್ಷಣೆ ಬಹಳ ಸುಲಭ :

Pages