ಇತ್ತೀಚೆಗೆ ಸೇರಿಸಿದ ಪುಟಗಳು

ನಾನು ಬಡವನಾದರೇನು!

ನಾನು ಬಡವನಾದರೇನು!
-----------------------------
ನಾನು ಬಡವನಾದರೇನು!
ಪ್ರೀತಿಯಲಿ ಶ್ರೀಮಂತನೆ|
ನನ್ನ ಹೃದಯ ವಿಶಾಲದರಮನೆಯಲ್ಲಿ
ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ
ಧಾರೆ ಎರೆಯುವೆ||

ಒಲಿದ ಪ್ರೀತಿಗಿಲ್ಲ ಎಂದೂ ಬಡತನ
ಮಧುರ ಸುಮಧುರ ಮಾತೇ ಸಿರಿತನ|
ನನಗೊಲಿದ ನಿನ್ನ ಮನದಲೊಂದಾಗಿ
ಸದಾ ನಗೆಯಲೇ ತೇಲಿಸುವೆ ಅನುದಿನಾ||

ನನ್ನ ಪೀತಿಯೇ ನಿನಗೆ ಸಿಂಧೂರ ತಿಲಕ
ನನ್ನ ಪ್ರೇಮವೇ ನಿನ್ನಗೆ ಕಾಲಂದುಗೆ ಗೆಜ್ಜೆ|
ನನ್ನೋಲವ ಪೀತಾಂಭರವ ಉಡುಸಿ
ನಿನ್ನೆಲ್ಲಾ ಕೋರಿಕೆಯ ಪೂರೈಸುವೆ ಪ್ರತೀದಿನ|
ನಿನ್ನ ಪ್ರೇಮ ಮೂರುತಿಯಾಗಿರಿಸಿ
ನಾ ದೇವರ ಮುಂದಿನ ದೀಪದಂತೆ
ಬೆಳಗುವೆ ನಿನ್ನೋಲವ ಪ್ರತೀ ಕ್ಷಣ||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ವರ್ಷ ಹರುಷ

ಬಸಿರಂತಿಹ ಹೊಸ ಮೋಡಕೆ
ಮಳೆಗರೆಯುವ ಚಿಂತೆ

ಹಸಿರುಕ್ಕಿಹ ವನರಾಶಿಗೆ
ಸಡಗರದಾ ಸಂತೆ

ಸುಳಿಗಾಳಿಯ ಪಿಸುಮಾತಿಗೆ
ದನಿಗೂಡಿದೆ ಮತ್ತೆ

ಗುಡುಗಾಡುವ ನಭದಂಚಿಗೆ
ಕೋಲ್ಮಿಂಚಿನ ಹಣತೆ

ಚಿಲಿಪಿಲಿಗಳ ಕಲರವದಲಿ
ಸಂಭ್ರಮಗಳ ಒರತೆ

ಜಿನುಗುತ್ತಿಹ ಆ ಸೋನೆಗೆ
ಸುಖ ವೀಯುವ ಘನತೆ

ಮಿಂದೆದ್ದಿಹ ಇಳೆ ಖಳೆಗೆ
ಸಮೃದ್ಧಿಯ ಭತ್ಯೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ನೀ ನನಗೆ

ಶುಭೋದಯ
 
ಕವನ
 
ನಿನ್ನೊಂದಿಗೆ ನಾನು
ಹಾಯಾಗಿದ್ದೇನೆ
ನಿರಾಸೆ ಇಲ್ಲ
ಚಿಂತೆ ಇಲ್ಲ
ಬೇಸರ ಇಲ್ಲ
ಒಂಟಿತನ ಇಲ್ಲ
ಮಾತಿನಲ್ಲೂ
ಮೌನದಲ್ಲೂ
ಸಂತೋಷ ಇದೆ
ಹೃದಯ ತಂಪಾಗಿದೆ
ಉತ್ಸಾಹಕ್ಕೆ
ಹೆಸರು ನೀನೆ
ನನ್ನೊಳಗಿನ
ಒರತೆ ನೀನು
ನನ್ನ ಜೀವವೆ
ನೀನು
ನೀನು ನೀನೆ
ನಿನ್ನಲ್ಲಿ ನಾನು!
28-11-2015  10.50pm

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಶೃಂಗಾರಕಾವ್ಯ

ಹೂವಿನಂಗಡಿಯಲ್ಲಿ ,
ಮಲ್ಲಿಗೆ ಸಂಪಿಗೆ ಎರಡನ್ನು ಕೊಂಡಾಗ
ಸಂಪಿಗೆಯ ಮೊದ್ಲು
ನನ್ನಾಕೆ ಮುಡಿಗೆರಿಸಿಕೊಂಡಾಗ
ಜೇಬಿನಲ್ಲಿದ್ದ ಮಲ್ಲಿಗೆ ಹೂ ಬೀಗುಮಾನವ ಬೀಗಿತ್ತು.
ಇವಳ್ಯಾರೋ ಚೆಲುವೆ, ಕೆಂಡ ಸಂಪಿಗೆ ಮುಡಿದು ನನ್ನೇ ಮರೆತಳಲ್ಲ ಎಂದು ಹಲುಬಿತ್ತು .
ಸಂಜೆ ಕರಗಿ,
ಸಂಪಿಗೆ ಸೊರಗಿ,
ಮಂಚದ ಮೇಲೆ ಮಲ್ಲಿಗೆ ಎರಗಿ,
ಮಲ್ಲಿಗೆ ಸಂಪಿಗೆ ಎರಡು ಮುದುಡಿತ್ತು.
#ಶೃoಗಾರಕಾವ್ಯ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತೀರಿಹೋದವರು

ತೀರಿಕೊಂಡವರೆಂದೂ ಮರಳಿ ಬರಲ್ಲ
ಅವರ ನೆನಪು ಮಾತ್ರ ನಮ್ಮಲ್ಲಿ ಸಾಯಲ್ಲ
ಆ ನೆನಪುಗಳೇಕೆ ಅವರೊಂದಿಗೆ ಹೋಗಲ್ಲ
ಅವ ಮರೆಯಲು ನಮಗೇಕೆ ಸಾದ್ಯವಿಲ್ಲ
 
ಹುಟ್ಟದು ಸಿಗುವುದು ಎಲ್ಲರಿಗೂ ಉಚಿತ
ಸಾವು ಪ್ರತಿಯೊಂದು ಜೀವಿಗೂ ಖಚಿತ
ಹುಟ್ಟು ಸಾವಿನ ಗುಟ್ಟದು ಗುಟ್ಟೇ ಖಂಡಿತ
ಇದೆಲ್ಲ ಸೃಷ್ಠಿಕರ್ತನ ನಾಟಕ ನಿಯಮಿತ
 
ಮರಣಾನಂತರ ಆತ್ಮಗಳೇನಾಗುವವು ತಿಳಿಯದು
ಎಂದರೆ ನೆನಪಾಗುವುದು ಆತ್ಮಕ್ಕೆ ಸಾವಿಲ್ಲ ನುಡಿಯದು
ನಿಜವಾದರೆ ಆತ್ಮಗಳು ಮರುಜನ್ಮ ಪಡೆಯುವುದು
ಮರಳುವುದಿಲ್ಲವೇಕೆ ಹಿಂದಿನ ಜನ್ಮದ ನೆನಪದು
 
ನಮ್ಮನ್ನಗಲಿದವರಿಗೂ ನಮ್ಮ ನೆನಪಾಗದೆ?
ಅವರೆಮ್ಮ ಬಿಟ್ಟದ್ದು ತಪ್ಪೆಂದು ಅರಿವಾಗದೆ?
ನಮ್ಮ ನೋಡಲು ಅವರಿಗೆ ಸಾದ್ಯವೆ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages