ಇತ್ತೀಚೆಗೆ ಸೇರಿಸಿದ ಪುಟಗಳು

ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ. - ಮತ್ತಷ್ಟು

ಏಳು ತಿಂಗಳ ಹಿಂದೆ " ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ." ಎಂದು ಸಂಪದದಲ್ಲಿಯೇ ಒಂದು ಕಿರು ಬರಹ ಬರೆದಿದ್ದೆ ( ಅದು ಇಲ್ಲಿದೆ https://sampada.net/blog/ಭಗವದ್ಗೀತೆ-ಕರ್ಮ-ಧರ್ಮ-ಇತ್ಯಾದಿ/15-1-2017/47418 )
ಸರಿ, ಫಲಾಪೇಕ್ಷೆ ಇಲ್ಲದೆ, ಮತ್ತಿತರ ಗುಣಗಳೊಂದಿಗೆ ಕೂಡಿ ಜಗತ್ತಿಗೆ ಅನುಕೂಲವಾಗುವಂಥ ಕೆಲಸವನ್ನು ಮಾಡಬೇಕು. ಆದರೆ ಯಾವುದೇ ಕರ್ಮ / ಕೆಲಸಕ್ಕೂ ಏನಾದರೂ ಪರಿಣಾಮ ಅಥವಾ ಫಲ ಇದ್ದೇ ಇರುತ್ತದಲ್ಲ,. ಅದು ಯಾರಿಗೆ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಮಾಮೂಲು-ಮಾನವೀಯತೆ

ಪ್ರತಿದಿನವೂ ಜಾವದಲ್ಲೆದ್ದು
ಮಾರ್ಕೇಟಿಗೆ ಹೋಗುವೆ
ಒಳ್ಳೊಳ್ಳೆ ತರಕಾರಿ ಕೊಂಡು
ಅದನ್ನು ಮಾರುವೆ
 
ಬೆಳಗಿನಿಂದ ಸಂಜೆವರೆಗೆ ದುಡಿದರೆ
ಮಾರನೇಯ ದಿನ ದೂಡಬಹುದು
ಇಲ್ಲದಿದ್ದಲ್ಲಿ, ಹೊಟ್ಟೆಗೆ ಹಿಟ್ಟಿಲ್ಲ
ನೀರೇ ಗತಿ ಮನೆಯವರಿಗೆಲ್ಲ
 
ಸಂಜೆಯಾದರೆ ಸಾಕು, ಶುರು
ಖಾಕಿಯಿಂದ ನಿತ್ಯದಾತಿಥ್ಯ
'ವ್ಯಾಪರವಿಲ್ಲ, ಇಂದು ಬಿಡಿ', ಎಂದರೆ
ಜೀಪು ತೋರಿ, 'ಬಂದುಬಿಡಿ' ಎನ್ನುವರು
 
'ಸ್ವಾಮಿ, ನಮ್ಮ ಬಗ್ಗೆ ತೋರಿ 
ಕೊಂಚ ಮಾನವೀಯತೆ', ಎಂದರೆ
ನಕ್ಕು ಹೇಳುವರು, 'ತೆಗಿ
ಮಾಮೂಲು, ಇಲ್ಲವೆ ಬಿಡು ಗಾಡಿ'
 
ಮಾನವೀಯತೆಯನ್ನೂ
ಖರೀದಿಸುವ ಕಾಲ ಬಂದಿದೆ
ಮಾನವುಳಿಸಿಕೊಳ್ಳಲು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.

ಜನುಮದ ಜೋಡಿ

ಗಿಡ್ಡ ಬೆಳ್ಳಗೆ ಆಕೆ
ಲಕ್ಷಣವಾಗಿಹಳು
ಬೆಳ್ಳ ತೆಳ್ಳಗೆ ಅತ
ಸುಂದರವಾಗಿಹನು

ಬದುಕ ಬಂಡಿಯನೇರಿ
ದೂರ ಹಾದಿಯ ಸವೆಸಿ
ತಗ್ಗುತಿಟ್ಟುಗಳ ದಾಟಿ
ನೆಲೆಗಂಡಂತಿಹರು

ಕಲ್ಲು ಮುಳ್ಳುಗಳ ಭರಿಸಿ
ಬಾನಹಕ್ಕಿಗಳಂತೆ ತೇಲಿ
ಪ್ರೀತಿ ಉಯ್ಯಾಲೆ ಜೀಕಿ
ಅನುಭವಗಳ ರಾಶಿಯಂತಿಹರು

ಬಾಳ ಕಡಲಲಿ ಮುಳುಗಿ
ವಾತ್ಸಲ್ಯದ್ಹವಳಗಳ
ಮಮತೆಯಾ ಮುತ್ತುಗಳ
ಮೊಗೆದು ತುಂಬಿದಂತಿಹರು

ಪಯಣದಲ್ಲಿ ಚಿತ್ತವಿಟ್ಟು
ಪೀಳಿಗೆಯ ಏಳಿಗೆಗೆ ಪಣತೊಟ್ಟು
ಬಾಳ ನೊಗಕೆ ಹೆಗಲುಕೊಟ್ಟ
ಪರಸ್ಪರರ ಅರಿತಂತಿಹರು....
ಆ ಚಿರಯೌವ್ವನಿಗರು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

Pages