ಇತ್ತೀಚೆಗೆ ಸೇರಿಸಿದ ಪುಟಗಳು

ಸಾಗಲಿ ಪಯಣ

ನಡೆಯುವಾಗ ಎಡವುದು ಸಹಜ
ಓಡುವವ ಬೀಳುವುದೂ ಸಹಜ
ಬಿದ್ದವಗೆ ಕಾಡುವ ಭಯ ಸಹಜ
ಮತ್ತೆ ಏಳುವುದಾಗಬೇಕು ಸಹಜ

ನೂರು ನಲಿವುಗಳ ಮರೆವುದೇಕೆ
ಮೂರು ನೋವುಗಳ ನೆನೆವುದೇಕೆ
ಬೇಡದ ಚಿಂತನೆ ಬಿಡಬಾರದೇಕೆ
ನಂಬಬೇಕು ಜೀವನ ಸಾಗಲೀಕೆ

ಹೃದಯದ ಭಾರ ಹೆಚ್ಚಿರಬಹುದು
ಮನದೊಳು ಕೆಚ್ಚು ಹತ್ತಿರಬಹುದು
ಬಾಳಾಟದಿ ಹೆಚ್ಚೇ ಕಾಡಿರಬಹುದು
ಸವಿನೆನಪೇ ಮುಗಿಲ ತೋರಬಲ್ಲುದು

ತಲೆಯಲ್ಲಿನ ದುಗುಡಗಳ ಬದಿಗೊತ್ತಿ
ಹೃದಯದಿ ಆನಂದದ ಬತ್ತಿಯ ಹಚ್ಚಿ
ಯೋಚನೆಗಳ ಹಗುರಾಗಿ ಹಾರಿಸಿ
ಪಯಣವ ಸಾಗಿಸಿ ಆರ್ದ್ರತೆ ಒರೆಸಿ

- ಸಚಿನ್. ಎಲ್. ಎಸ್

(Photo credit : Google)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.9 (9 votes)
To prevent automated spam submissions leave this field empty.

ಆಷಾಢದ ದಿನಗಳು

ತಂಪಾದ ಗಾಳಿ,
ಶತೃವಿನ ಹಾಗೆ ಕಾಡಿದೆ.
ಆಕಾಶವ ಅಪ್ಪಿರುವ ,
ಮೋಡಗಳು ಸಹ!
ಬಳಲಿದ ವಿರಹಕ್ಕೆ,
ವಿಶ್ರಾಂತಿಯ ಬಯಕೆ
ಕುಂಟು ನೆಪಒಂದು ಬೇಕಾಗಿದೆ
ತೀರಲು ನೆನಕೆ.
Jayashankar.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

*ಬಾಳಹಾದಿ*

ಮಹಡಿಯೊಳು ನಿಂದು
ರಸ್ತೆ ದಿಟ್ಟಿಸುತ
ಯಾರ ಹಾದಿಯ ಕಾದಿರುವೆ
ಓ ಮನವೇ.....
ಕಳೆದುಹೋದ ದಿನಗಳನೇ
ಬರಲಿರುವ ಸಮಯವನೇ

ಹಾದಿಯ ಮಂದಿಯ
ಭಾವಗಳು
ಭಂಗಿಗಳು
ಮಾತುಗಳು
ಮೌನಗಳು
ಅನುಮಾನಗಳು
ಅನುಬಂಧಗಳು
ನಿನ್ನ ಕಲಕಿದವೇ
ಓ ಮನವೇ.....

ಬದುಕಿನಾ ಹಾದಿಯೊಳು
ಒಂದು ಪುಟದಂತೆ
ರಸ್ತೆಯದು ,
ಹೇಳಿಹುದು
ನೂರು ಕಥೆ ಮತ್ತೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಗುಡ್ ಅರ್ತ್

ಪುಸ್ತಕದ ಲೇಖಕ/ಕವಿಯ ಹೆಸರು : 
ಪರ್ಲ್ ಎಸ್. ಬಕ್
ಪ್ರಕಾಶಕರು: 
ಅಂಕಿತ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ: 
ರೂ.೧೯೫

“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದೆಯಿಂದ ತೊಡಗಿ ಅವನ ಮೊಮ್ಮಕ್ಕಳ ತನಕ ನಾಲ್ಕು ತಲೆಮಾರುಗಳ ಬದುಕಿನ ಕತೆಯೇ ಈ ಕಾದಂಬರಿ.

ರೈತ ವಾಂಗ್ ಲುಂಗನ ಬಾಲ್ಯ ಮತ್ತು ಯೌವನ ಬಡತನದಲ್ಲೇ ಕಳೆಯಿತು. ಓಲನ್‌ಲನ್ನು ವಿವಾಹವಾದ ಬಳಿಕ, ಅವಳೊಂದಿಗೆ ವಾಂಗ್ ಲುಂಗ್ ತನ್ನ ತುಂಡು ಜಮೀನಿನಲ್ಲಿ ಶಕ್ತಿ ಮೀರಿ ದುಡಿಯುತ್ತಾನೆ. ತಮ್ಮ ಜಮೀನಿನ ಮಣ್ಣಿಗೆ ವಾಂಗ್ ಲುಂಗ್ ಮತ್ತು ಓಲನ್ ಸುರಿಸುವ ಬೆವರೇ ಬಂಗಾರವಾಗುತ್ತದೆ. ಕ್ರಮೇಣ ಬೆವರಿಳಿಸಿ ಗಳಿಸಿದ ಹಣದಿಂದ ಇನ್ನಷ್ಟು ಜಮೀನು ಖರೀದಿಸಿ ದೊಡ್ಡ ಜಮೀನ್ದಾರ ಎನಿಸಿಕೊಳ್ಳುತ್ತಾನೆ.

ಕೃಷ್ಣ ಚೆಲುವೆಯ ಚಿತ್ರ


 
ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ  ಕೊಡಲು ಸ್ವಲ್ಪ ತಡವಾಯಿತು'.
 
ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ತುಂಬಿಕೊಂಡ. 'ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ನ ಹೆಂಡತಿಯ ನೆನಪಿಗೆ ಇದಕ್ಕಿಂತ ಒಳ್ಳೇದು ನಾನಿನ್ನೇನೂ ನಿರೀಕ್ಷೆ ಮಾಡ್ಲಿಲ್ಲ. ನಿಮ್ಮ ಕ್ಯಾಮರಾದಲ್ಲಿ ಆದಿನ ಫ಼ೋಟೊ ತೆಗೆಯದೆ ಹೋಗಿದ್ದರೆ ಅವಳ ನೆನಪಿಗೆ ಅಂತ ನನ್ನ ಹತ್ರ ಇನ್ನೇನೂ ಇರ್ಲಿಲ್ಲ'
 
ಸುದೀಪ ದೀರ್ಘ ನಿಟ್ಟುಸಿರು ಬಿಟ್ಟ.  ಅವನ ಮುಖದಲ್ಲೀಗ ದಿವ್ಯ ಸಮಾಧಾನವಿತ್ತು. 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶಿಲ್ಪ ಮರ್ಮ

*ಈ ಕವನ ಭಾರತೀಯ ಶಿಲ್ಪ ಕಲೆಗೆ ಸಮರ್ಪಣೆ*

ಶಿಲೆಯ ಕಲೆಯ ಬಲೆ
ವರ್ಣ ವೈವಿಧ್ಯ, ವಸ್ತು ವೈವಿಧ್ಯ,
ವಾಸ್ತು ವೈವಿಧ್ಯ, ಧರ್ಮ ವೈವಿಧ್ಯ
ಪ್ರೇಮ ಕಾಮವ ಮೀರಿ
ಚರಿತ್ರೆಯ ದಾರಿ,
ಬದುಕಿನ ವೈಖರಿ,
ಧನ್ಯತೆಯ ಆ ಪರಿ
ತಂದಿತ್ತ ಅಚ್ಚರಿ...
ಭಾವಬಂಧನದ ಪ್ರಹರಿ..!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (11 votes)
To prevent automated spam submissions leave this field empty.

ಬೆಳಕು ಬಂದಿದೆ ಬಾಗಿಲಿಗೆ

ಬೆಳಕು ಬಂದಿದೆ ಬಾಗಿಲಿಗೆ
----------------------------------
ಬೆಳಕು ಬಂದಿದೆ ಬಾಗಿಲಿಗೆ
ಬರಮಾಡಿಕೊಳ್ಳಿರಿ ಒಳಗೆ|
ಹೃದಯ ಬಾಗಿಲತೆರೆದು
ಮನಸೆಂಬ ಕಿಟಕಿಗಳ ಒಳತೆರೆದು||

ಬೆಳಕೆಂದರೆ ಬರೀಯ ಬೆಳಕಲ್ಲ
ಇದುವೆ ಮಹಾಬೆಳಕು |
ನಮ್ಮಬದುಕ ಬದಲಿಸುವ ಬೆಳಕು
ನಮ್ಮಬಾಳ ಬೆಳಗುವಾ ಬೆಳಕು||

ಕೋಟಿ ಸೂರ್ಯ ಸಮವೀಬೆಳಕು
ಸರ್ವಕಾಲಿಕ ಸತ್ಯವೀಬೆಳಕು|
ಸರ್ವರನುದ್ದರಿಸೊ ಈ ಬೆಳಕು|
ಅದುವೆ ನಮ್ಮ ಕೃಷ್ಣನೆಂಬಾ ಬೆಳಕು||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

Pages