ಕನ್ನಡದ "Best Triller"s
ನಮಸ್ತೆ!
ಮೊದಲನೆಯದಾಗಿ, ನನಗೆ "Thriller"ಗೆ ಕನ್ನಡ ಪದ ಗೊತ್ತಿಲ್ಲ, ಕ್ಷಮಿಸಿ!
ದಯವಿಟ್ಟು.. ಕನ್ನಡ "Best Thriller" ಕಾದಂಬರಿಗಳು ಯಾವುವೆಂದು ತಿಳಿಸಿ!
ಧನ್ಯವಾದ!

- Login or register to post comments
- 857 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಜುಗಾರಿ ಕ್ರಾಸ್
'Triller'ಓ ಅಥವಾ 'Thriller'ಓ?
Thriller ಆದರೆ,
* ಕರ್ವಾಲೋ ಮತ್ತು ಜುಗಾರಿ ಕ್ರಾಸ್ ಓದಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಜುಗಾರಿ ಕ್ರಾಸ್
ಹೌದು ಹರಿ, ಜುಗಾರಿ ಕ್ರಾಸ್ ಓದಿ ಕನ್ನಡದಲ್ಲಿ ಈ ರೀತಿಯ ಕಾದಂಬರಿ ಬರೆಯುವಂತಹವರು ಇದ್ದಾರಲ್ಲಾ ಎಂದು ಬಹಳಾ ಖುಷಿಯಾಯಿತು.
ಕರ್ವಾಲೊ ಪುಸ್ತಕವನ್ನಂತು ನಾನು ೧೫-೨೦ ಬಾರಿ ಓದಿದ್ದೇನೆ.
Thriller ಆದರೆ,
* ಕರ್ವಾಲೋ ಮತ್ತು ಜುಗಾರಿ ಕ್ರಾಸ್ ಓದಿ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ತೇಜಸ್ವಿಯವರ Thrillers
ಯಾವುದರಿಂದ ಥ್ರಿಲ್ ಸಿಗುತ್ತದೆ ಹೇಳೋದು ಕಷ್ಟ.ಪ್ರತಿಯೊಬ್ಬರದು ವಿಭಿನ್ನ ರುಚಿ. ಜುಗಾರಿ ಕ್ರಾಸ್ ಮತ್ತು ಕರ್ವಾಲೊ , ಎರಡೂ ಚೆನ್ನಾಗಿವೆ. ತೇಜಸ್ವಿಯವರ ಚಿದಂಬರ ರಹಸ್ಯ ಇನ್ನೊಂದು ಉತ್ತಮ ಕೃತಿ.'ಕಿರಗೂರಿನ ಗಯ್ಯಾಳಿಗಳು' ಚೆನ್ನಾಗಿದೆ. 'ಪರಿಸರದ ಕತೆ' ,ಕನ್ನಡ ಪುಸ್ತಕ ಒದಲು ಪ್ರಾರಂಭಿಸೋರಿಗೆಲ್ಲ ನಾನು ರೆಕಮಂಡ್ ಮಾಡುವ ಪುಸ್ತಕ.ಇದು thriller ಅಲ್ಲ.ಆದ್ರೆ ನಕ್ಕು ನಕ್ಕು ಸುಸ್ತಾಗ್ತೇವೆ.
ತೇಜಸ್ವಿಯವರ ಎಲ್ಲಾ ಕೃತಿಗಳಲ್ಲು ಅವರ ಟ್ರೇಡ್ ಮಾರ್ಕ್ ಹಾಸ್ಯದ ಪಂಚ್ ಇದೆ.
ತೇಜಸ್ವಿಯ ಬರೆಹಗಳು
ಅವರ `ಮಿಸ್ಸಿಂಗ್ ಲಿಂಕ್` ಕನ್ನಡದಲ್ಲಿ ಮಾನವಶಾಸ್ತ್ರದ ಬಗೆಗೆ ಬಂದ ಬಹಳ ಒಳ್ಳೆಯ ಪುಸ್ತಕ. ತೇಜಸ್ವಿಯವರ ಉತ್ತಮ ಪುಸ್ತಕಗಳ ಯಾದಿಗೆ ಅದನ್ನೂ ಸೇರಿಸಿ ಕೊಳ್ಳಬಹುದು.
ಮತ್ತಷ್ಟು ತೇಜಸ್ವಿ ಬರಹಗಳು....
ತೇಜಸ್ವಿಯವರ "ಕ್ರಿಷ್ನೆಗೌಡನ ಆನೆ" ಇನ್ನೊಂದು ಉತ್ತಮ ಕಥೆ. ಅದು 'ಕಿರಗೂರಿನ ಗಯ್ಯಾಳಿಗಳು'ಕಥಾ ಸಂಕಲನದಲ್ಲೇ ಇದೆ ಅನ್ಕೋತೆನೆ.
ಅವರ "ನಿಗೂಡ ಮನುಷ್ಯರು"-ಕಿರು ಕಾದಂಬರಿ ಕೂಡ ತುಂಬ "Thrill" ಕೊಡುತ್ತೆ.
ಚೇತನ್
ಸದಾ ನಗುತಿರು
"ಕೃಷ್ಣೇ ಗೌಡನ ಆನೆ" ಮತ್ತು "ಕಿರಗೂರಿನ ಗಯ್ಯಾಳಿಗಳು"
"ಕೃಷ್ಣೇ ಗೌಡನ ಆನೆ" ಮತ್ತು "ಕಿರಗೂರಿನ ಗಯ್ಯಾಳಿಗಳು" ಎರಡೂ ಕಥೆಗಳನ್ನು ಆಧರಿಸಿ ಸಿನಿಮಾ ತೆಗೆಯುತ್ತಿದ್ದಾರೆ. ನಿರ್ದೇಶನ : ಡಿ. ರಾಜೆಂದ್ರ ಸಿಂಗ್.
Thrill ಗೆ ಕನ್ನಡ ಪದ
ಕನ್ನಡಕಸ್ತೂರಿ.ಕಾಮ್ ನೋಡಿದೆ , ಅಲ್ಲಿ ಥ್ರಿಲ್ ಗೆ ಈ ಪದಗಳಿವೆ - ನವಿರು , ಪುಳಕ , ರೋಮಾಂಚನ, ಎದೆ ಝಲ್ಲೆನ್ನೋಣ , ಅನ್ನುವ ಪದಗಳಿವೆ .
ರೋಮಾಂಚನ, ರೋಮಾಂಚನಕಾರಿ ಸಾಹಿತ್ಯ ಎನ್ನಬಹುದು.