ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

Sampada Blogs

ಮುಕೆಶ್ ರ‌ "ಕಹಿ ದೂರ್ ಜಬ್ ದಿನ್ ಡಲ್ ಜಾಯೆ" ಕನ್ನಡೀಕರಣಗೊಂಡಾಗ.............

July 24, 2014 - 12:59am
bhargava_nudi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪರಿತ್ಯಕ್ತ - ಲಕ್ಷ್ಮೀಕಾಂತ ಇಟ್ನಾಳ

July 23, 2014 - 8:46pm
lpitnal

ಪರಿತ್ಯಕ್ತ      
ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ
ಊರ ಅಗಸಿಯಾಚೆಯ ಮಠದ ಹಿಂದೆ
ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ,
ಜೋಪಾನವಾಗಿ ತಂದ ‘ಬಾಟಲಿ’ ತೆಗೆದು ಗ್ಲಾಸ್‍ನಲ್ಲಿ ಸುರುವಿಕೊಂಡೆ,
ತಂದ ತುಸು ಹುರಿಗಾಳು ಮೆಲ್ಲುತ್ತ,

ಒಡಕು ಧ್ವನಿಯಲ್ಲಿ ಕೂಗುತ್ತ   ಕಾಗೆಯೊಂದು ಕಾಳಿನಾಸೆಗೆ ತುಸು ದೂರವೇ ಹಾರಿ ಕೂತಿತು,
ಎಸೆದೆ, ಅದರತ್ತ ತುಸು, ಸಮೀಪವೇ ಬಂತು ಇನ್ನಷ್ಟು!
ದಿಟ್ಟಿಸಿ ನೋಡಲು ಕಾಗೆಯ ಕಣ್ಣಲ್ಲಿ
‘ಅಪ್ಪ’ ಕಂಡ,
ಅರೆ, ‘ಅಪ್ಪ,  ನೀನಿಲ್ಲಿ’ ಎಂದೆ,
‘ ನಿನ್ನ ನೋಡಿ ಬಂದೆ’ ಎಂದ,
Read more about ಪರಿತ್ಯಕ್ತ - ಲಕ್ಷ್ಮೀಕಾಂತ ಇಟ್ನಾಳ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾಟಕ - ಲಕ್ಷ್ಮೀಕಾಂತ ಇಟ್ನಾಳ

July 23, 2014 - 10:08am
lpitnal

ನಾಟಕ 

ಮಿಂಚು ಕೇಳದು ಗುಡುಗಿನಾರ್ಭಟ,

ಗುಡುಗು ಕಾಣದು ಮಿಂಚಿನ ಓಟ

ಮುಖ ನೋಡದ, ಮಥನದ ಅವಳಿಗಳಿವು,

ಒಂದೇ ನಾಣ್ಯದ ಮುಖಗಳಿವು

 

ಮಿಂಚುಗಳು ಮೋಡಗಳ ಎದೆಯೆಲ್ಲ ಹರಗುವವು

ಗುಡುಗುತ್ತ ಮೇಘಗಳು ಇಳೆ ಮಡಿಲ ಬಿತ್ತುವವು

ಆಕಳಿಸಿ,ಏಳುವವು ಟೋಪಿಗಳ ಸಹಿತ, ಬೀಜ ಕಣ್ಣು ಬಿಡುತ

ನಿಲ್ಲವುವು ಕೈಚಾಚಿ ಸೂರ್ಯನೆಡೆ, ಹಸಿರುಡುಗೆ ನೇಯುತ

 

ಗುಡ್ಡ ಬೆಟ್ಟಗಳಿಗೆ ಹಸಿರು ತೋರಣಗಳ ಮಾಲೆಗಳ Read more about ನಾಟಕ - ಲಕ್ಷ್ಮೀಕಾಂತ ಇಟ್ನಾಳ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಒಂದು ಸಣ್ಣ ಒಗಟು

July 22, 2014 - 5:00pm
ವಿಶ್ವ ಪ್ರಿಯಂ

ಬಿಲವಾಸಿಯನೇರಿದವನ ಅಪ್ಪನ 
ಕೋಪಕೆ ಮಣಿದನ ಆಯುಧ ಕುಲದೊಳ
-ಗತಿ ಕಲಿಶೂರನ ವೈರಿಯ ಬಡಿದನ 
ಕಳೆಗೆಟ್ಟಿಹ ಕರುನಾಡಿನ ಊರು.. Read more about ಒಂದು ಸಣ್ಣ ಒಗಟು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ

July 22, 2014 - 4:46pm
partha1059

 

ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)  

[ ಕಡೆಯ ಬಾಗ ]

 

ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ  ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ ಹುಟ್ಟಿಸಬಲ್ಲದು ಅನ್ನಿಸಿತು. ನಂತರ ಕೇಳಿದ

"ಸರಿಯಪ್ಪ ಈಗ ಮುಂದೆ ಏನು ಮಾಡೋದು. ಅಲ್ಲಿ ನೋಡಿದರೆ ಶೇಖರನು ಅಡುಗೆ ಮಾಡಿಸಿರುವೆ ಊಟಕ್ಕೆ ಬಾ ಎಂದು ಕರೆದಿದ್ದಾನೆ , ಅಲ್ಲಿಗೆ ಹೋಗುವುದಾ , ನೀನು ಜೊತೆಗೆ ಬರುವೆಯಾ?" .

 

ಪ್ರಕಾಶ ಶಾಂತವಾಗಿ ಕುಳಿತಿದ್ದವನು ನುಡಿದ. Read more about ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು) .... ಕಡೆಯ ಬಾಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - blogs

ಟ್ವಿಟ್ಟರಿನಲ್ಲಿ ಸಂಪದ