ನಗೆಹನಿಗಳು ( ಹೊಸವು ?) - 43 ನೇ ಮತ್ತು ಕೊನೇ ಕಂತು

ನಗೆಹನಿಗಳು ( ಹೊಸವು ?) - 43 ನೇ ಮತ್ತು ಕೊನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ನೀವು ದಿನವೂ ಏಳುವುದು ಯಾವಾಗ ?
- ಸೂರ್ಯನ ಪ್ರಥಮ ಕಿರಣ ನನ್ನ ಕಿಟಕಿಯನ್ನು ಪ್ರವೇಶಿಸಿದ ಕೂಡಲೇ ಎದ್ದುಬಿಡುತ್ತೇನೆ.
- ಅದು ತುಂಬಾ ಬೇಗ ಅಲ್ಲವೇ ?
- ಅಲ್ಲ, ನನ್ನ ಕೋಣೆಯ ಕಿಟಕಿ ಪಶ್ಚಿಮಕ್ಕಿದೆ!
****
- ಅಮೇರಿಕದಲ್ಲಿ ಹೆಂಗಸರು ಏಕೆ ಅಧ್ಯಕ್ಷರಾಗುತ್ತಿಲ್ಲ ?
- ಅಧ್ಯಕ್ಷರಾಗುವುದಕ್ಕೆ ಕಡೇ ಪಕ್ಷ 35 ವರ್ಷ ವಯಸ್ಸಿನ ವರಾಗಿರಬೇಕು , ಅದಕ್ಕೆ !
****
- ಹುಲಿಬೇಟೆಯಲ್ಲಿ ನಿನಗೆ ಅದೃಷ್ಟ ಒಲಿಯಿತಾ ?
- ಓಹೋ , ಒಂದು ಹುಲಿಗೂ ನಾನು ಎದುರಾಗಲಿಲ್ಲ !
****
ಬೇಟೆಗಾರನಿಗೆ ಸ್ಥಳೀಯ ಹೇಳಿದ - ಸಾಹೇಬ್ರೆ, ಉತ್ತರ ದಿಕ್ಕಿಗೆ ಇಲ್ಲಿಂದ ಒಂದು ಕಿಲೋ ಮೀಟರ್ ದೂರದಲ್ಲಿ ನಾನು ಹುಲಿಯ ಹೆಜ್ಜೆಯ ಗುರುತುಗಳನ್ನು ನೋಡಿದೆ.
ಬೇಟೆಗಾರ - ಹೌದಾ ? ದಕ್ಷಿಣ ದಿಕ್ಕು ಯಾವುದು , ಹೇಳು.

Rating
No votes yet

Comments

Submitted by gvmt Thu, 12/01/2016 - 12:26

ಶ್ರೀಕಾಂತ ಮಿಶ್ರಿಕೋಟಿಯವರೆ, ನಿಮ್ಮ ನಗೆಹನಿಗಳ ೪೩ನೆಯ ಮತ್ತು ಕೊನೆಯ ಕಂತನ್ನು ಓದಿ ಜೋರಾಗಿ ಅತ್ತುಬಿಟ್ಟೆ. ಒಂದು ತಿಂಗಳ ಮೇಲೆ ದಿನಾಲೂ ತಪ್ಪದೆ ನಗಿಸುತ್ತಿದ್ದದ್ದು ನಿಂತುಹೋಯಿತಲ್ಲ! “ನಗಿಸುವುದು ಪರಧರ್ಮ” ನಿಮಗೆ ಗೊತ್ತಿರಬೇಕಲ್ಲ, ಶ್ರೀಕಾಂತರೆ? ನಿಮಗೆ ಇಂಗ್ಲೀಷಿನ ಜೋಕುಬುಕ್ಕು ಸಿಕ್ಕಿದ್ದು ಒಂದೇ ಏನು? ಮಿಕ್ಕವನ್ನೂ ಕೊಂಚ ತೆಗೆದು ಅನುವಾದ ಮಾಡಬಾರದೆ?
ಅನುವಾದ ಕಷ್ಟದ ಕೆಲಸ. ಅದರಲ್ಲೂ ಹಾಸ್ಯವನ್ನು ಬೇರೆ ಭಾಷೆಗೆ ತರವುದು ಇನ್ನೂ ಕಷ್ಟ. ಇನ್ನು ಇಂಗ್ಲಿಷಿನಂತಹ ಬೇರೆಯದೇ ಜಾಯಮಾನದ ಭಾಷೆಯಿಂದ ಕನ್ನಡಕ್ಕೆ ತರುವುವಾಗ ಹಾಸ್ಯ ಹೋಗಿ ಹಾಸ್ಯಾಸ್ಪದವಾಗುವುದೇ ಹೆಚ್ಚು. ಹಾಗಿರುವಾಗ ಈ ಜೋಕುಗಳನ್ನು ಕನ್ನಡಿಗರೇ, ಕನ್ನಡದಲ್ಲಿಯೇ ಆಡಿದ ಹಾಗೆ ಅನುವಾದ ಮಾಡಿದ್ದೀರಿ. ಒಂದು ವೇಳೆ ನೀವು ನನ್ನ ಕೈಗೆ ಸಿಕ್ಕರೆ ನಿಮ್ಮ ಬೆನ್ನನ್ನು ತಟ್ಟದೆ ಬಿಡುವುದಿಲ್ಲ.
- ವೆಂ.

Submitted by shreekant.mishrikoti Fri, 12/02/2016 - 19:34

In reply to by gvmt

ಮೂರ್ತಿಗಳೇ , ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು , ನಿಮ್ಮ ಕೋಪಕ್ಕೂ ಕೂಡ.
ಈ ಬಗ್ಗೆ ಏನು ಮಾಡಬೇಕೆಂದು ಯೋಚಿ(/ಜಿ) ಸುತ್ತಿದ್ದೇನೆ !