'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಡಾ. ಭರತ್ ಕುಮಾರ ಪೊಲಿಪು !

'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಡಾ. ಭರತ್ ಕುಮಾರ ಪೊಲಿಪು !

ಚಿತ್ರ

'ಮುಂಬಯಿಯ ಕನ್ನಡ ರಂಗಭೂಮಿ-ತೌಲನಿಕ ಅಧ್ಯಯನ'- ಮುಂಬಯಿ ರಂಗಭೂಮಿಯ-ಭರತ್ ಕುಮಾರ ಪೊಲಿಪುರವರ ಮಹಾಪ್ರಬಂಧದ ಪುಸ್ತಕವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಇತ್ತೀಚಿಗೆ  ಪ್ರಕಟಿಸಿದೆ. ಪೋಲಿಪುರವರಿಗೆ  ತಮ್ಮ ಮೌಲಿಕ ಕೃತಿಗೆ  ಡಾ. ಪದವಿಯನ್ನು ಪ್ರದಾನ ಮಾದಲಾಯಿತು. ಭಾರತೀಯ ರಂಗಭೂಮಿಯ ಇತಿಹಾಸ, ನಡೆದುಬಂದ ರೀತಿ ಮೊದಲಾದವುಗಳು ಬಹಳ ಸುಂದರವಾಗಿ ಮತ್ತು ವ್ಯಾಪಕವಾಗಿ ಚಿತ್ರಿಸಲ್ಪಟ್ಟು, ಹೊಸ ಸಂಶೋಧಕರಿಗೆ ಒಳನೋಟಗಳನ್ನು ಒದಗಿಸುವಲ್ಲಿ ಈ ಮಹಾಪ್ರಬಂಧ ಸಹಕಾರಿಯಾಗಿದೆ, ಹಾಗು  ಮಹತ್ವದ  ಮೌಲಿಕ ಕೊಡುಗೆಯಾಗಿದೆ. ನವೆಂಬರ್ ೨೯ ನೇ ತಾರೀಖಿನ ಶನಿವಾರದ ಮುಂಬಯಿನ ಸಂವಾದಿತ ವಾಹಿನಿಯ ಕಾರ್ಯಕ್ರಮವನ್ನು ಕೇಳುವ ಸಮಯಲ್ಲಿ ಡಾ.ಜಿ.ಎನ್.ಉಪಾಧ್ಯರವರ ಭಾಷಣದ  ಕೆಲವು ತುಣುಕುಗಳನ್ನು ನಾನು ಬರೆದಿಟ್ಟುಕೊಂಡಿದ್ದೆ. ಅವನ್ನೆಲ್ಲಾ ಹಿಡಿದು ತೋರಿಸುವ ಪ್ರಯತ್ನಮಾಡಿದ್ದೇನೆ.

ಪ್ರಖ್ಯಾತ ಅರ್ಥಶಾಸ್ತ್ರಜ್ಞ, ಹಾಗೂ  ಸುಪ್ರಸಿದ್ಧ ನಾಟಕಕಾರ, ಕವಿ, ರಂಗನಾಥ ಭಾರದ್ವಾಜ, ಕಾಳಿದಾಸನ ಸಂಸ್ಕೃತ ಕಾವ್ಯಗಳ ಕನ್ನಡ ರೂಪಾಂತರ ಶೇಷಗಿರಿರಾವ್, ಹೊಸಗನ್ನಡ ಸಾಹಿತ್ಯದ ಉಗಮಕ್ಕೆ  ಬಹುಸಂಸ್ಕೃತಿಯ ನಗರ, ಮುಂಬಯಿ ಬಹಳ ಮಹತ್ವದ ಕೊಡುಗೆಯನ್ನುಕೊಟ್ಟಿದೆ. ಮರಾಠಿ, ಗುಜರಾಥಿ, ತುಳು ರಂಗಭೂಮಿಯ ಜೊತೆಗೆ ಕನ್ನಡದ ಕೊಡುಗೆ ರಂಗ ವಿಮರ್ಶೆ ವಸ್ತುನಿಷ್ಟತೆ, ಖಚಿತ ಅವಲೋಕನಗಳ ಒಳನೋಟಗಳು ಸ್ಪಸ್ಥವಾಗಿಯೂ ವಸ್ತುನಿಷ್ಠವಾಗಿಯೂ ದಾಖಲಾಗಿವೆ. ಸಂಸ್ಕೃತ ನಾಟಕಗಳ ಬಗ್ಗೆ ಹೆಚ್ಚು ವಿಮರ್ಶೆಗಳು  ಬಂದಿವೆ. ಆದರೆ,  ಕನ್ನಡ ದೇಸಿ ನಾಟಕಗಳ ಏಳುಬೀಳುಗಳು ಹೆಚ್ಚುಗಾರಿಕೆ, ಕಲಾತ್ಮಕತೆ, ಬಹಳ ಕಡಿಮೆ ನಿರೂಪಣೆಗಳಿವೆ. ಹಾಗಾಗಿ ಡಾ. ಭರತ್ ಕುಮಾರರ ಕೃತಿ ಎಲ್ಲರ  ಗಮನ ಸೆಳೆಯುತ್ತದೆ.

==ಡಾ ಭರತ್ ಕುಮಾರ್ ರವರ ಸ್ಥೂಲ ಪರಿಚಯ==

ಡಾ ಪೋಲಿಪುರವರು, ಮುಂಬಯಿನಗರದ  ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, ನಂತರ , ಉಪಾಧ್ಯಕ್ಷರಾಗಿ  ಹೊಸತನದ , ಕಾಯಕಲ್ಪ ನೀಡಿದ್ದಾರೆ ಹಲವು ದಶಕಗಳಿಂದ ಮೇರು ಸ್ಥಾನದಲ್ಲಿರುವ ಧಾರವಾಡದ ವಿದ್ಯಾವರ್ಧಕ ಸಂಸ್ಥೆಯ ಗೌರವ, ಉಪಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹಲವಾರು ಗೌರವ ಪ್ರಶಸ್ತಿಗಳ ವಿಜೇತರು. ರಂಗ ಕಲಾತಜ್ಞರಾಗಿ ತಮ್ಮದೇ ಆದ ವಿಶಿಷ್ಠ ವ್ಯಕ್ತಿತ್ವದಿಂದ ಒಂದು  ಭಿನ್ನ ಧ್ವನಿಯನ್ನು ಮೂಡಿಸುತ್ತಾರೆ. ನಟ, ನಿರ್ದೇಶಕ, ೨೦ ಕ್ಕೂ ಹೆಚ್ಚು ನಾಟಕಗಳನ್ನು ತಂದು ಆಡಿ, ಆಡಿಸಿ ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ರಂಗತಜ್ಞ, ಕವಿ, ಚಿಂತಕ, ನಿರ್ದೇಶಕ, ಮುಂಬೈ ಕನ್ನಡ ಸಂಘ, ಸಂಸ್ಥೆಗಳನ್ನು ನಿರಂತರ ಶ್ರಮಗಳಿಂದ ,ಕಟ್ಟಿಬೆಳಸಿದ  ಶ್ರೇಯಸ್ಸು ಅವರದು. ಡಾ ಪೊಲಿಪು ರವರು ಬರೆದು ಸಿದ್ಧಪಡಿಸಿದ ಮುಂಬಯಿ ರಂಗಭೂಮಿಯ ಇತಿಹಾಸ ಒಂದು  ಮಹತ್ವದ ಸಂಶೋಧನ ಗ್ರಂಥಗಳಲ್ಲೊಂದು ಎಂದು ಪರಿಗನಿಸುವುದರಲ್ಲಿ ಎಳ್ಳಷ್ಟೂ ಸಮ್ದೆಹವಿಲ್ಲ. 

ಮುಂಬಯಿ ರಂಗಭೂಮಿಯ ಇತಿಹಾಸಕ್ಕೆ ನೂರುವರ್ಷದ ಇತಿಹಾಸವಿದೆ. ಏಕಕಾಲಕ್ಕೆ ಭಾರತದ ಭಾರತದ ರಂಗಭೂಮಿಯ ಇತಿಹಾಸದ ಜೊತೆಗೆ ಕರ್ನಾಟಕದ ಸಮಗ್ರ, ವ್ಯಾಪಕ ಇತಿಹಾಸ, ತುಳು ಸಾಹಿತ್ಯದ ಬಗ್ಗೆ ಪ್ರಸ್ತಾವಿಸುರುವುದು  ಔಚಿತ್ಯಪೂರ್ಣವಾಗಿದೆ. ಕನ್ನಡ ರಂಗಭೂಮಿಯ  ಪ್ರೇಕ್ಷರ ಕೊರತೆ ಬಗ್ಗೆ  ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ. ನಾಟಕ ಸಾಹಿತ್ಯ ಕೃತಿ ರಂಗಕೃತಿ ಬದ್ಧತೆಗಳು ಆಶಯಗಳು ನಾಟಕ ಸಾಹಿತ್ಯ ರೂಪ ರಂಗರೂಪದ ಒಳನೋಟಗಳು ಎದ್ದು ಕಾಣಿಸುತ್ತವೆ. ರಂಗಪ್ರದರ್ಶನದ ತಾಂತ್ರಿಕ ಒಳನೋಟಗಳ ಸಂಚಲನೆಯನ್ನೂ ಹಿಡಿದಿಡುವ ಕಾರ್ಯ ನಡೆಸಿದ್ದಾರೆ.
ಈ ಮಹಾಪ್ರಬಂಧದ ಧನಾತ್ಮಕ  ಅಂಶವೆಂದರೆ, ಕಮಲಾದೇವಿ ಚಟ್ಟೋಪಾಧ್ಯಾಯ, ಶ್ರೀಲಂಕೇಶ್,ಶ್ರೀರಂಗ, ಕಂಬಾರ,ಗಿರೀಶ ಕಾರ್ನಾಡ್, ಮೊದಲಾದವರ ರಂಗ ಕೊಡುಗೆಗಳನ್ನು ಆತ್ಯಂತ ವಿಷದವಾಗಿಯು ಮೌಲಮಾಪನ ಮಾಡಿ ದಾಖಲಿಸಿರುವುದು ಈ ಕೃತಿಯ ಹೊಸತನಗಳಲ್ಲೊಂದು

ಮುಂಬೈಯ ಕನ್ನಡ ರಂಗಭೂಮಿ ಮಧ್ಯದಿಂದಲೇ ಎದ್ದು ಬಂದ,  ಆರ್.ಡಿ.ಕಾಮತ್, ಕುಂದಾಪುರದ ನಾರಾಯಣರಾಯಣ ಕಾಮತ್, ನರಸಿಂಹ ಹೆಗ್ಗಡೆ, ರಂಗನಾಥ  ಭಾರದ್ವಾಜ, ನಾಟಕ ಸಾಹಿತ್ಯ, ದ ವ್ಯಾಪಕ ಪರಿಚಯಮಾಡಲು ಬಹಳವಾಗಿ ಪ್ರಯತ್ನಿಸಿದ್ದಾರೆ. ಈ ತರಹದ ಮುಂಬೈ ರಂಗಭೂಮಿ. ಕನ್ನಡ ರಂಗಭೂಮಿ ಹಾಗು ಒಟ್ಟಾರೆ ಭಾರತಿಯ ರಂಗ ಮಂಚದ ವಿಸ್ತೃತ ಅಧ್ಯಯನವಾಗಿರಲಿಲ್ಲ. ಹಾಗಿ ಪೊಲಿಪು ತಮ್ಮದೇ ಆದ ಒಂದು ಹೊಸ ಛಾಪನ್ನು ಬೀರುತ್ತಾರೆ.  ಮೌಲ್ಯ ಮಾಪನ, ಜೀವನ ಸಾಧನೆ ,ಕನ್ನಡ ಮರಾಠಿ ರಂಗಭೂಮಿಯ ಇತಿಹಾಸದ ದಾಖಲಾತಿಗಲಿವೆ. ಮುಂಬಯಿನಗರದಲ್ಲಿ  ೮೩ ತುಳು ನಾಟಕ ಸಂಸ್ಥೆಗಳಿವೆ. 
ನಾಟಕದ ಸಾಹಿತ್ಯ ಕೃತಿ, ರಂಗಕೃತಿಯ ಆಶಯಗಳನ್ನು ಭಿನ್ನವಾಗಿ ದಾಖಲಿಸಿದ್ದಾರೆ. ಹೊಸ-ಹೊಸ ಒಳನೋಟಗಳು ಆಕರ ಗ್ರಂಥವಾಗಿ ಹೊಸ ಸಂಶೋಧಕರಿಗೆ ಮಾಗದರ್ಶನ ಮಾಡುವ ನಿಟ್ಟಿನಲ್ಲಿ ಬಳಸಬಹುದಾಗಿದೆ. ರಂಗಭೂಮಿಯ ಕೃತಿ ರಚನೆ, ಮತ್ತು  ರಂಗ ಕಲೆಯ ಅಭಿವ್ಯಕ್ತಿಯ ಬಗ್ಗೆ  ಸಮನ್ವಯತೆ ಯನ್ನು ಸಾಧಿಸಿರುವುದು ಈ ಕೃತಿಯ ವೈಶಿಷ್ಟ್ಯತೆ ಗಳಲ್ಲೊಂದು. 
ಕಾವ್ಯಾನುವಾದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದ  ನಾರಾಯಣರಾಯರು, ಕರ್ಕಿ ವೆಂಕಟರಮಣ ಶಾಸ್ತ್ರಿ, ಶೇಷಗಿರಿರಾಯರು, ಚಿತ್ತಾಲರು, ಬಲ್ಲಾಳರು, ಮಿತ್ರ ವೆಂಕಟರಾಜ್, ಡಾ. ವ್ಯಾಸರಾಯ ನಿಂಜೂರರು, ಜಯಂತ ಕಾಯ್ಕಿಣಿ ಮೊದಲಾದ ಲೇಖಕರು, ಮುಂಬಯಿಯ ಕನ್ನಡಿಗರೆಂದು ಹೇಳಲು ಹೆಮ್ಮೆಯೆನಿಸುತ್ತದೆ. ಡಾ ಪೊಲಿಪುರವರ ಶೋಧ ಕೃತಿ, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
==ಮುಂಬಯಿಯ ಕಾವ್ಯ ಹಾಗು ನಾಟಕ ಪರಂಪರೆಗಳು === 
ಮುಂಬಯಿಯ ಕಾವ್ಯ ಪರಂಪರೆಗೆ ಶತಮಾನದ ಹಿನ್ನೆಲೆಯಿದೆ. ಮುಂಬಯಿ ನಾಟಕ ರಂಗದದ ಕೊಡುಗೆಗಳು ಅವಲೋಕನೀಯ. ಅವುಗಳ ಹೆಚ್ಚುಗಾರಿಕೆಗಳು,  ಏಳುಬೀಳುಗಳು ರಂಗ ವಿಮರ್ಶೆ, ಧನಾತ್ಮಕ ಅಂಶವೆನ್ನಿಸುತ್ತದೆ. ಸಮಗ್ರ ರಂಗಭೂಮಿಯ ಇತಿಹಾಸದ ಅನಾವರಣ, ಹಿರಿಮೆ, ಮೌಲಿಕ ಕೊಡುಗೆ, ಕನ್ನಡ ರಂಗಭೂಮಿ ಭಾರತೀಯ ರಂಗಭೂಮಿಯ ಅದರಲ್ಲಿ ಮುಂಬಯಿನಗರದ ಕಲಾವಿದರ ಮಹತ್ವದ ಕೊಡುಗೆಗಳನ್ನು ದಾಖಲಿಸಿದ್ದಾರೆ. ಡಾ ಭರತ್ ಕುಮಾರ್ ಪೊಲಿಪುರವರ ವಿಸ್ತೃತ ಅಧ್ಯಯನ, ಮುಂಬಯಿನ ರಂಗ ಕಲಾವಿದರ  ಜೀವನ ಸಾಧನೆಗಳನ್ನೂ ವ್ಯಾಪಕವಾಗಿ ದಾಖಲಿಸಿದ್ದಾರೆ. ಬಹಳಷ್ಟು ವಿಷಯ ಸಾಮಗ್ರಿಗಳ ಭಂಡಾರವನ್ನೇ ನಮ್ಮ ಮುಂದೆ ತೆಗೆದಿಡುತ್ತಾರೆ.  

ನಾಡಿನ ಹೆಸರಾಂತ ಕನ್ನಡ ಕವಿ, ಚಿಂತಕ, ಡಾ.ಬರಗೂರು ರಾಮಚಂದ್ರಪ್ಪನವರ  ಸಮರ್ಪಕವಾದ ಮುನ್ನುಡಿ ಡಾ ಪೋಲಿಪುರವರಿಗೆ  ಒಳ್ಳೆಯ ಸಮರ್ಥನೆಯನ್ನು ನೀಡುತ್ತದೆ. ಈ ತೌಲನಿಕ  ಅಧ್ಯಯನ ಇತಿಹಾಸದ ಹಿನ್ನೆಲೆಗಳಿಂದ ಕೂಡಿದ್ದು  ಅಪಾರ ಮಾಹಿತಿಗಳನ್ನು ಹೊಂದಿದೆ ಎಮ್ದಿದ್ದಾರೆ.  ಚಾರಿತ್ರ್ಯಿಕ ಮಹತ್ವದ ಶೋಧಕೃತಿಯಾಗಿದೆ. ಗ್ರಂಥ ೬೪೦ ಪು, ೯ ಅಧ್ಯಾಯಗಳು, ತೌಲನಿಕ ಆರೋಗ್ಯಕರ ಹಿನ್ನೆಲೆ, ಮರಾಠಿ ರಂಗಕರ್ತರ ಒಟ್ಟಾರೆ ಭಾರತೀಯ ರಂಗಭೂಮಿಯ ಹೌದು, ಎಂದು ಹೊಗಳಿ ಹರಸಿದ್ದಾರೆ. ಕನ್ನಡ ಮಾರಾಠಿ ರಂಗಭೂಮಿಯ ಅಧ್ಯಯನ, ಬಹುಭಾಷ ರಂಗತಜ್ಞರು ಬೆರಳೆಣಿಕೆಯಷ್ಟು. ನಾಟಕ ಸಾಹಿತ್ಯದ ಹೊಸಹೊಸ ಒಳನೋಟಗಳು ಐತಿಹಾಸಿಕ ಸಮನ್ವಯ ಸಂಚಾಲನೆ ಬಹಳ ಪ್ರಾಮುಖ್ಯವಾದದ್ದು. ಕೊನೆಯಲ್ಲಿ ಡಾ ಉಪಾಧ್ಯ ಡಾ ಪೋಲಿಪುರವರನ್ನು ಅಭಿನಂದಿಸುತ್ತಾ, 'ಈ ಅಧ್ಯಯನಗಳನ್ನೊಳಗೊಂಡ  ಮಾದರಿ ಪ್ರಬಂಧವೆನ್ನುವ ಅಭಿಪ್ರಾಯದಲ್ಲಿ ಎರಡುಮಾತಿಲ್ಲ,' ಎಂದು ಶ್ಲಾಘಿಸಿದ್ದಾರೆ. 

Rating
No votes yet

Comments

ಈ ಅಧ್ಯಯನ ಮಾಡಿದವರು, ಡಾ. ಭಾರತ್ ಕುಮಾರ ಪೊಲೀಪುರವರು. ಕೃತಿಯ ಬಗ್ಗೆ ವಿಶ್ಲೇಷಣೆ ಮಾಡಿದವರು, ಡಾ. ಜಿ. ಏನ್.ಉಪಾಧ್ಯ (ಮುಂಬಯಿಯ ಸಂವಾದಿತ ವಾಹಿನಿಯಲ್ಲಿ) ರೇಡಿಯೋ ಭಾಷಣ ವನ್ನು ನಾನು ಕೇಳಿದಾಗ ವಿಷಯಗಳನ್ನು ಗುರುತುಹಾಕಿಕೊಂಡು, ನನಗೆ ಸಮಯ ದೊರೆತಾಗ ಒಂದು ಪುಟ್ಟ ಲೇಖನದಲ್ಲಿ ಆ ವಿಷಯಗಳನ್ನು ಸೇರಿಸಿ ಸಂಪದದಲ್ಲಿ ಬರೆಯುವ ಸಾಹಸ ಮಾಡಿದ್ದೇನೆ, ಅಷ್ಟೇ.