August 4, 2012 - 10:11pm
ಗಂಡನಿಗೆ ಹೆಂಡತಿಯ ಮೇಲೆ ಒಂದು ತೆರೆನಾದ ಅನುಮಾನ. ಚಿಕ್ಕ ಕೂದಲೇನಾದರು ಸಿಕ್ಕಿದರೆ, ಯಾರೋ ಸಣ್ಣ ಕೂದಲಿನವನು ಮನೆಗೆ ಬಂದಿದ್ದನೆಂದು ಅನುಮಾನಿಸುತ್ತಿದ್ದ. ಉದ್ದ ಕೂದಲೇನಾದರೂ ಸಿಕ್ಕರೆ ಉದ್ದಕೂದಲಿನವನು ಬಂದಿದ್ದನೆಂದು ಅನುಮಾನಿಸುತ್ತಿದ್ದ; ಹಾಗೆಯೇ ಬಿಳಿ ಕೂದಲೇನಾದರೂ ಸಿಕ್ಕರೆ ಬಿಳೀಕೂದಲಿನವನು ಬಂದು ಹೋದನೆಂದು ತೀರ್ಮಾನಿಸುತ್ತಿದ್ದ. ಹೆಂಡತಿ ಎಷ್ಟೋ ಬಾರಿ ತಿಳಿ ಹೇಳಿದಳು; ನಮ್ಮ ಮನೆಯಲ್ಲಿ ಇರುವದು ನಾವಿಬ್ಬರೆ; ಇಲ್ಲಿಗೆ ಬೇರೆ ಯಾರಾದರೂ ಏಕೆ ಬರುತ್ತಾರೆ? ಅದೇನಿದ್ದರೂ ನಿಮ್ಮದು ಇಲ್ಲಾ ನನ್ನ ಕೂದಲೇ ಇರಬಹುದೆಂದು ತಿಳಿಸಿದಳು. ಊಹ್ಞೂ! ಗಂಡ ಒಪ್ಪಿದರೆ ಕೇಳಿ! ಹೆಂಡತಿಗೂ ಹೇಳಿ ಹೇಳಿ ಸಾಕಾಯ್ತು, ಇರಲಿ ಎಂದುಕೊಂಡು, ಒಂದು ದಿನ ಮನೆಯನ್ನೆಲ್ಲಾ ಒಂದೂ ಕೂದಲು ಸಿಗದಂತೆ ಸ್ವಚ್ಛ ಮಾಡಿದಳು. ಗಂಡ ಬಂದು ನೋಡುತ್ತಾನೆ, ಮನೆಯಲ್ಲಿ ಎಲ್ಲಿ ಹುಡುಕಿದರೂ ಒಂದೇ ಒಂದು ಕೂದಲು ಸಿಕ್ಕಲಿಲ್ಲ; ಹೆಂಡತಿ ಸಮಾಧಾನದ ನಿಟ್ಟಿಸುರು ತಂದು ಕೊಂಡು ಸಧ್ಯ ಈ ದಿವಸವಾದರು ಗಂಡ ಸುಮ್ಮನಿರುತ್ತಾನೆ ಎಂದುಕೊಂಡಳು. ಮಲಗುವ ಕೋಣೆಗೆ ಬಂದು ನೋಡಿದರೆ ಪತಿರಾಯ ಮತ್ತೆ ಚಿಂತೆಯಲ್ಲಿದ್ದಂತೆ ಕಂಡು ಬಂತು. ಕಾತರದಿಂದ ಹೆಂಡತಿ ವಿಷಯ ಏನೆಂದು ಕೇಳಿದಳು? ಗಂಡ ಶುರು ಮಾಡಿದ; "ಇಷ್ಟು ದಿವಸ ಕೂದಲಿರುವವರು ಮಾತ್ರ ಬರುತ್ತಾರೆಂದು ತಿಳಿದಿದ್ದೆ, ಈಗ ಬಾಲ್ಡಿಗಳೂ ಬರಲು ಆರಂಭಿಸಿದ್ದಾರೆ, ಅಯ್ಯೋ ದೇವ್ರೇ!" ಎಂದು ತಲೇಮೇಲೆ ಕೈಹೊತ್ತುಕೊಂಡು ಕುಳಿತ.
ಸರಣಿ:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಹೌದು
ಒಮ್ಮೆ ಅಮೇರಿಕದವರು ನೆಲ ಅಗಿದರಂತೆ ಅಲ್ಲೆಲ್ಲ ತಂತಿಗಳು ಕಂಬಗಳು ಸಿಕ್ಕವಂತೆ
ಅವರು "೫೦೦೦ ವರ್ಷಗಳ ಹಿಂದೆ ನಮ್ಮಲ್ಲಿ ಟೆಲಿಪೋನ್ ವ್ಯವಸ್ತ್ಯೆ ಇತ್ತು ಅಂತ ಬರೆದರು'
ಸರಿ ಅಂತ ಅದೇಕೊ ಭಾರತದಲ್ಲು ಅಗೆದರಂತೆ
ಏನು ಸಿಗಲಿಲ್ಲ !
ತಕ್ಷಣ ಇವರು ಬರೆದರಂತೆ
"೫೦೦೦ ವರ್ಷಗಳ ಹಿಂದೆಯೆ ನಮ್ಮಲ್ಲಿ ತಂತಿರಹಿತ ತಂತ್ರಜ್~ಜಾನ ಅಂದರೆ ಮೊಬೈಲ್ ವ್ಯವಸ್ಥೆ ಇತ್ತು" ಎಂದು
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಪಾರ್ಥಸಾರಥಿಗಳೆ,
ಸಖತ್ತಾಗಿದೆ ನಿಮ್ಮ ಜೋಕ್; ಅದು ನಿಜವಲ್ವೇ ಮತ್ತೆ? ಕಂಸನಿಗೆ ಈ ಆಕಾಶವಾಣಿಯ ಮೂಲಕವಲ್ಲವೇ ಅವನ ಎಂಟನೆಯ ಸಂತಾನದಿಂದ ಸಾವು ಎಂದು ಗೊತ್ತಾಗಿದ್ದು. :))
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಊಟವಾದ ಮೇಲೆ ಬಂದು ಉಯ್ಯಾಲೆಯಲ್ಲಿ ಕೂತ ಗಂಡನಿಗೆ ಹೆಂಡತಿ ತಾಂಬೂಲವನ್ನು ಕೊಡುತ್ತಾ ಹೇಳ್ತಾಳೆ. "ರೀ ಮತ್ತೇನಂದ್ರೆ, ನಿಮ್ಮ ಗೆಳೆಯ ಪ್ರಕಾಶ್ ಮದುವೆಯಂತೆ. " ಹೌದು ಅವನು ತುಂಬಾ ದಿನದಿಂದ ಹೆಣ್ಣು ಹುಡುಕ್ತಾ ಇದ್ದ ಅಂತೂ ಹೆಣ್ಣು ಸಿಕ್ಕಿತು, ಸಂತೋಷದಲ್ಲಿದಾನೆ. "ರೀ ಏನು ಸಂತೋಷ, ಪ್ರಕಾಶ್ ಮದುವೆ ಆಗ್ತಿರೋದು ಪಕ್ಕದಮನೆ ಸೀತಾ ಇದಾಳಲ್ಲ ಅವಳ ತಂಗಿನ " ಆದ್ರೇನು? "ನೀವಾದ್ರೂ ಸ್ವಲ್ಪ ಬುದ್ಧಿ ಹೇಳ್ಬಾರ್ದ, ಅವ್ಳನ ಮದುವೆ ಮಾಡ್ಕೋಬೇಡ ಅಂತ, ಅವಳು ದೋಡ್ಡ ಬಜಾರಿ ಕಣ್ರಿ. " ನಾನೇಕೆ ಹೇಳ್ಲಿ ? ಅವನೇನಾದ್ರು ನಂಗೆ ಬುದ್ಧಿ ಹೇಳಕ್ಕೆ ಬಂದಿದ್ನಾ.... ಅನುಭವಿಸ್ಲಿ ಬಿಡು...
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಜೀವೋತ್ತಮ ರಾವ್ ಅವರೆ,
ನಿಮ್ಮ ಜೋಕೂ ಬಹಳ ಚೆನ್ನಾಗಿದೆ ಸರ್. ನನಗೆ ಮತ್ತೊಂದು ಜೋಕು ನೆನಪಿಗೆ ಬಂತು. ಅದೇನೆಂದರೆ ಸಾಯುವುದರಲ್ಲಿದ್ದ ಗುಂಡ ತನ್ನ ಹೆಂಡತಿಯನ್ನು ಹತ್ತಿರ ಕರೆದು ನಾನು ಸತ್ತ ಮೇಲೆ ಎದುರು ಮನೆಯ ಪರಮೇಶಿಯನ್ನು ನೀನು ಮದುವೆಯಾಗಬೇಕು ಎನ್ನುತ್ತಾನೆ. ಆಗ ಹೆಂಡತಿ ಅವನು ನಿಮ್ಮ ಬದ್ದ ಶತ್ರುವಲ್ಲ ವೆ? ಎಂದು ಪ್ರಶ್ನಿಸ್ಸುತ್ತಾಳೆ. ಆಗ ಗುಂಡ, ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕಾಗಿದೆ, ಅದಕ್ಕೇ ಅವನನ್ನು ನೀನು ಮದುವೆಯಾಗು ಎಂದದ್ದು ಎನ್ನುತ್ತಾನೆ.
ಜೋಕನ್ನು ಆನಂದಿಸಿ ಮತ್ತೊಂದು ಜೋಕನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಚೆನ್ನಾಗಿದೆ ಜೋಕ್ ಹಾಗೆ ಒಮ್ಮೆ ಹೆಂಡತಿ ಗಂಡನಿಗೆ ಹೇಳಿದಳಂತೆ ರೀ .. ವಿಷಯ ಗೊತ್ತಾಯಿತಾ ನಮ್ಮ ಮದುವೆ ಮಾಡಿಸಿದ್ರಲ್ಲ ಆ ಪುರೋಹಿತರು ಸತ್ತು ಹೋದರಂತೆ ಅದಕ್ಕೆ ಗಂಡ ಅದ್ನಂತೆ ಮತ್ತೆ ಮಾಡಿದ ಪಾಪ ಸುಮ್ಮನೆ ಬಿಡುತ್ತ ಅಂತ ಧನ್ಯವಾದಗಳೊಂದಿಗೆ
...ಸತೀಶ್
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಹ್ಹ....ಹ್ಹ..ಹ್ಹಾ..ಸಖತ್ ಜೋಕ್. ಪ್ರತಿಜೋಕು ಹೇಳುವುದರ ಮೂಲಕ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು, ಸತೀಶ್.
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಆತ್ಮೀಯ ಬಂಡ್ರಿ ಯವರೇ,
ನನ್ನ ಅನುಮಾನವೇ ಬೇರೆ ಇತ್ತು. ಹೋಗಲಿ ಬಿಡಿ ಸುಮ್ಮನೆ ಗುಂಡ ಹೇಳಿದ್ದನ್ನೇ ಒಪ್ಪಿಕೊಂಡರಾಯಿತು. ತಂಟೆ ಇಲ್ಲ ತಕರಾರು ಇಲ್ಲ. ಏನಂತೀರಿ?..........
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಪ್ರಕಾಶ್ ರವರೆ, ಈಗ ನೀವು ನಿಜವಾಗಲೂ ಜೋಕ್ ಮಾಡಿದ್ದೀರ :-)
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಪ್ರಕಾಶರೆ,
ನಿಮ್ಮ ಪ್ರಕಾರ ಹೆಂಡತಿ ಗಂಡನ ಅನುಮಾನವನ್ನು ನಿಜ ಮಾಡಿ ಮನೆಯನ್ನು ಚೊಕ್ಕಟವಾಗಿಟ್ಟಳೆನ್ನುವುದೇ....ಹ್ಹ...ಹ್ಹಾ! ಹೀಗೂ ಆಗಬಹುದು; ಕೆಲವೊಮ್ಮೆ ಗಂಡಂದಿರ ಕಾಟ ತಾಳಲಾರದೆ :((
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಆತ್ಮೀಯ ಶ್ರೀಧರ್ ಬಂಡ್ರಿಯವರೇ,
" ಈ ಕೂದಲಿನ ಕಾಟವೇ ಬೇಡ ಎಂದು ಬೇರೆ ಕಡೆಗೆ ಹೋಗಲು ಪ್ರಾರಂಭಿಸಿ ಬಿಟ್ಟಲೆ? " ಎಂದು ತಲೆಯ ಮೇಲೆ ಕೈಹೊತ್ತು ಕೂತುಬಿಟ್ಟ ನಮ್ಮ ಗುಂಡ.
ಅನುಮಾನದ ಪಿಶಾಚಿ ಒಮ್ಮೆ ಹೊಕ್ಕಿ ಬಿಟ್ಟರೆ ನೂರೆಂಟು ಸಂಶಯಗಳು ಒಮ್ಮೆಲೇ ಧಾಳಿ ನಡೆಸುತ್ತವೆ. ನಿಮ್ಮ ಹೊಸ ಅನುಮಾನ ಕೂಡ ಮತ್ತೊಂದು.
ಧನ್ಯವಾದ
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
:))
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಸಕತ್
ಶ್ರೀಧರವ್ರೆ ಅದೆಲ್ಲಿ ಇಟ್ಟಿದೀರಾ ನಿಮ್ಮ ಜೋಕ್ಸ್ಗಳ ಗಂಟು!!!
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ಎಲ್ಲೋ ತಲೆಯ ಮೂಲೆಯಲ್ಲಿ ಹುದುಗಿ ಹೋಗಿವೆ ಚಿಕ್ಕೂ; ನಿಮ್ಮಂಥಹವರು ತೋರುವ ಪ್ರತಿಕ್ರಿಯೆಯಿಂದಾಗಿ ಅವು ಆಟೋಮೆಟಿಕ್ ಆಗಿ ಡೌನ್ ಲೋಡ್ ಆಗಿಬಿಡುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಅನುಮಾನದ ಪರಿ! - ಜಮಾನಾದ ಜೋಕುಗಳು ೧೨
ನಿಮ್ಮ ಹಾಸ್ಯ ಹಾಗೂ ಪ್ರತಿಕ್ರಿಯೆಗಳೂ ಸಹ ಉತ್ತಮ ಹಾಸ್ಯಗಳ ಸರಮಾಲೆಯಾಗಿದ್ದು ಸೊಗಸಾಗಿವೆ. :))