ಅಪ್ಪ‌ ಅಮ್ಮ‌ ಯಾರು ಹಿತವರು ನಿನಗೆ?

ಅಪ್ಪ‌ ಅಮ್ಮ‌ ಯಾರು ಹಿತವರು ನಿನಗೆ?

 

 ಮಕ್ಕಳಿಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆ -ನಿನಗೆ ಅಪ್ಪ ಇಷ್ಟಾನೋ?ಅಮ್ಮ ಇಷ್ಟಾನೋ?ಅಂತ!ಮಗು ಈ ಪ್ರಶ್ನೆಗೆ ಉತ್ತರ ಕೊಡೋದಿಲ್ಲ.ಜಾಣ ಮಕ್ಕಳಾದರೋ ಇಬ್ಬರೂ ಇಷ್ಟ ಅನ್ನುತ್ತಾರೆ.ಅವರಿಗೆ ಗೊತ್ತು ಅಪ್ಪ ಅಮ್ಮನ ಮನಸ್ಸು ನೋಯಿಸಬಾರದು ಎಂದು.ಅಕಸ್ಮಾತ್ ಅವರು ತಮ್ಮ ಇಷ್ಟವನ್ನು ತಿಳಿಸಿದರೆ  ನಂತರದ ಪರಿಣಾಮ ಏನಾಗಬಹುದು ಎಂಬುದು ಸಹಾ ಆ ಮಕ್ಕಳ ಮನಸ್ಸಿಗೆ ಗೊತ್ತು.
ತಾಯಿಯಾದವಳು ಮಗುವನ್ನು ಹೊತ್ತು ಹೆತ್ತು ಸಾಕಿ ಸಲಹುತ್ತಾಳೆ.ಹಾಗೆಂದ ಮೇಲೆ ಎಲ್ಲ ಮಕ್ಕಳೂ ಆಕೆಯನ್ನೆ ಇಷ್ಟಪಡುವುದಿಲ್ಲ.ಕಾರಣ ಏನಾದರಿರಲಿ. ಮಕ್ಕಳು ತಂದೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದರೆ ತಾಯಿಗೆ ಖುಷಿಯಾದರೂ ಸಹ ಮಾನಸಿಕ ವೇದನೆ ಅಷ್ಟಿಷ್ಟಲ್ಲ.
ವೊಟ್ಟವೊದಲು ಮಗಳ ಮನೆಗೆ ತಾಯಿ ತಂದೆ ಹೋದ ಸಂಭ್ರಮ.ಅಲ್ಲಿಯೇ ಉಳಿದು ಮಗಳ ಸಂಸಾರ ನೋಡಿ ಖುಷಿ.ನೆರೆ ಹೊರೆಯವರು ಮಗಳನ್ನು ತಮ್ಮ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.ಎಂತಹ ಸ್ನೇಹ ಗಳಿಸಿದ್ದಾಳೆ ಮಗಳು-ತಾಯಿಗೆ ಸಂತಸ. ನೆರೆಯ ಮನೆಯೊಡತಿಗೆ ತಂದೆತಾಯಿಯನ್ನು ಮಗಳು ಪರಿಚಯಿಸುತ್ತಾಳೆ.ನೆರೆಮನೆಯಾಕೆ ನೀವೂ ಸಹಾ ಈ ಊರಿಗೇ ಬಂದು ಬಿಡಿ .ಮಗಳು ನಿಮ್ಮನ್ನು ತುಂಬಾ ಮಿಸ್ ಮಾಡ್ತಾಳೆ.ರಾತ್ರಿಯವರೆಗೂ ದುಡಿದು ಸುಸ್ತಾಗಿ ಬರ್ತಾಳೆ ಎಂದೆಲ್ಲಾ ಹೇಳುತ್ತಾ, ಅವಳಿಗೆ ಅಪ್ಪನ ಮೇಲೆ ವಿಪರೀತ ಪ್ರೀತಿಯಂತೆ.ಅಮ್ಮಂಗಿಂತ ಅಪ್ಪಾನೇ ಇಷ್ಟ ಅಂತೆ-ಎಂದೆಲ್ಲಾ ಮಗಳು ತಂದೆಯ ಮೇಲಿಟ್ಟಿvರುವ ಪ್ರೀತಿಯ ಗುಣಗಾನ ಮಾಡಿ ಹೊರಟಿದ್ದಾಯ್ತು.
ಆ ಕ್ಷಣದಲ್ಲಿ ತಾಯಿಗೆ ಭೂಮಿ ಇಲ್ಲೇ ಬಿರಿಯಬಾರದೇಕೆ ? ನಾ ತಾಯಿಯಾಗಿ ನನ್ನ ಕರ್ತವ್ಯ ಸರಿಯಾಗಿ ನಿರ್ವಹಿಸಿಲ್ಲ,ಮಗಳಿಗೆ ನನ್ನ ಪ್ರೀತಿ ಸಾಲದಾಗಿದೆ ಎಂಬ ಪಾಪಪ್ರಜ್ಞೆ ಕಾಡಲು ಶುರುವಾಯ್ತು.ಭಾರವಾದ ಹೃದಯ,ಕಣ್ಣಾಲೆಗಳು ತುಂಬಿವೆ.ನಂತರದಲ್ಲಿ ಖಿನ್ನತೆ,ನಿದ್ರಾಹೀನತೆ,ನಾನು ನಿಷ್ಪ್ರಯೋಜಕಳು ಎಂಬ ಮನೋಭಾವ.
ಇದಕ್ಕೆ ಪರಿಹಾರ?
ಮಗಳಿಗೆ ಈ ಬಗ್ಗೆ ತಿಳಿದರೆ ಅವಳ ಮನಸ್ಸು ನೋಯುವುದೆಂದು ಈ ನೋವನ್ನು ಯಾರೊಡನೆಯೂ ಹಂಚಿಕೊಳ್ಳದ ಆಕೆಯ ಮನಸ್ಸು ವೋಡಕವಿದಂತಾಗಿದೆ.ಈ ದೀಪಾವಳಿ ಆಕೆಯ ಮನಸ್ಸಿನಲ್ಲಿರುವ ನೋವನ್ನು ಸರಿಸಿ ಬೆಳಕನ್ನು ಚೆಲ್ಲಲಿ.
ಮಕ್ಕಳನ್ನು ಹೊತ್ತು ಹೆತ್ತಿರಬಹುದು.ಅವರು ನಮ್ಮ ಆಸ್ತಿಯಲ್ಲ. ಆತ್ಮವೊಂದು ಪ್ರಪಂಚಕ್ಕೆ ಬರಲು ಆಕೆ ಕೇವಲ ವಾಹಕಿಯಷ್ಟೆ.
ಎಲ್ಲರೂ ನಮ್ಮ ಮಕ್ಕಳೇ.ನಾವು ಯಾವುದಕ್ಕೆ ಅರ್ಹರೋ ಅದನ್ನು ಭಗವಂತ ನಮಗೆ ಕೊಡುತ್ತಾನಲ್ಲದೇ ನಾವು ಬಯಸಿದ್ದನ್ನು ಕೊಡುವುದಿಲ್ಲ!ಎಂಬುದನ್ನು ನಾವು ತಿಳಿದಲ್ಲಿ ಇಂಥಹ ನೋವನ್ನು ದೂರ ಸರಿಸಬಹುದಲ್ಲವೇ?
 
Rating
No votes yet