~
ನಿಮ್ಮ ಅಭಿಮಾನಿ ಹುಡುಗ
ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.
ಸಹಕರಿಸಿ - ಶಾರ್ಜದಲ್ಲಿ ಕೆಲಸ
ಪ್ರೀತಿಯ ಗೆಳೆಯರೆ,
ಮಧ್ಯಾಹ್ನ ಒಂದು ಕನ್ಸಲ್ಟೆಂಟ್ಸ್ ಮುಖಾಂತರ ಶಾರ್ಜಾದಲ್ಲಿನ ಡಿ.ಎ. ಡೆಸ್ಕ್ ಎಂಬ ಕಂಪನಿಯಲ್ಲಿ ನನಗೊಂದು ಕೆಲಸದ ಅವಕಾಶ ಬಂದಿದೆ. ಈ ಮಂಗಳವಾರ ಆದರ ಸಂದರ್ಶನ ಇದ್ದು, ನನಗೆ ತಿಳಿದವರು ಕೆಳಗಿನ ಪ್ರಶ್ನೆಗಳಿಗೆ ಸಮಾಧಾನ ನೀಡುತ್ತೀರಾ....... ಅಥವಾ ನಿಮ್ಮ ಸ್ನೇಹಿತರು ಯಾರಾದರು ಕೆಲಸ ಮಾಡುತ್ತಿದ್ದರೆ ಅವರ ಈ-ಅಂಚೆ ವಿಳಾಸವನ್ನು ತಿಳಿಸಿ.
೧. ಶಾರ್ಜಾದಲ್ಲಿ ಕೆಲಸದ ಖಾತರಿ ಹೇಗೆ ?
೨. ನಾನು ಮೇಲೆ ತಿಳಿಸಿರುವ ಕಂಪನಿ ನಿಜವಾದುದೇ ?
೩. ಅಲ್ಲಿನ ಕೆಲಸಗಾರರಿಗೆ ಸಿಗುವ ಸವಲತ್ತುಗಳನ್ನು ಕಂಪನಿ ತನ್ನ ಅಪಾಯಿಂಟಮೆಂಟ್ ಲೆಟ್ಟರ್ನಲ್ಲಿದ್ದಂತೆ ನೀಡುತ್ತದೆಯೇ ?
೪. ದ್ಯೆಹಿಕ ನ್ಯೂನತೆ ಅಥವಾ ಆರೋಗ್ಯ ವಿಚಾರದಲ್ಲಿ ಏನಾದರೂ ತೊಂದರೆ ಬಂದರೆ ಅಲ್ಲಿನ ಸವಲತ್ತುಗಳು ಹೇಗೆ ?
೫. ಈ ಅವಕಾಶವನ್ನು ಒಪ್ಪಬಹುದೇ ? ಇದರ ಸತ್ಯಾಸತ್ಯತೆ ಎಷ್ಟು ?
ದಯಮಾಡಿ ತಿಳಿಸಿ.

- ಅರವಿಂದ್ ರವರ ಬ್ಲಾಗ್
- Login or register to post comments
- 204 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ಪ್ರಿಯ ಅರವಿಂದರವರೆ, ?
ನಿಮ್ಮ ಪ್ರಶ್ನೆಗಳಲ್ಲಿ ೨ ನೇ ಪ್ರಶ್ನೆಗೆ ಮಾತ್ರ ಉತ್ತರ ಹೇಳಬಹುದು/ ಗೊತ್ತಿರುವುದರಿಂದ ಬರೆಯುತ್ತಿದ್ದೇನೆ.
ಮೇಲೆ ತಿಳಿಸಿರುವ ಕಂಪನಿ ನಿಜ
ಕೆಲಸದ ಖಾತರಿ? ಅದು ಸಂದರ್ಶನದ ನಂತರ ತಾನೆ ಗೊತ್ತಾಗುವುದು?
ಕೆಲಸ ಇರುವುದರಿಂದ ತಾನೆ ಕನ್ಸಲ್ಟೆಂಟರು ನಿಮ್ಮನ್ನು ಸಂಪರ್ಕಿಸಿದ್ದು
ಕೆಲಸಗಾರರಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿರುವ ಯಾರನ್ನಾದರೂ ವಿಚಾರಿಸಬೇಕು? ಸಾಧ್ಯವಾದಲ್ಲಿ ವಿಚಾರಿಸಿ ತಿಳಿಸುತ್ತೇನೆ.
ಬಶೀರ್ ಕೊಡಗು, ದುಬೈ
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ಅರವಿಂದ್, ಇಂಟರ್ವ್ಯೂ ಚೆನ್ನಾಗಿ ಆಗಲಿ ಅಂತ ಆಶಿಸುತ್ತೇನೆ.
Lakshdeep!!
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ತುಂಬಾ ಧನ್ಯವಾದಗಳು ಬಷೀರ್,
ನಿಮ್ಮ ಉತ್ತರಕ್ಕಾಗಿ ಕಾಯುವೆನು, ಅಲ್ಲಿನ ಕರೆನ್ಸಿ ಧಿನಾರ್ ಅಂತೆ, ನನಗೀಗ ಸಂಬಳ ಹಾಗು ನಿರ್ವಹಣಾ ವೆಚ್ಚ ಎಲ್ಲ ರೀತಿಯ ಭತ್ಯೆ ಸೇರಿ ೨೬೦೦ ಎಂದು ತಿಳಿಸಿದ್ದಾರೆ, ಆದರೆ ಅಲ್ಲಿನ ಖರ್ಚುಗಳ ಬಗ್ಗೆ ಮಾಹಿತಿ ಇದ್ದಲ್ಲಿ, ಹಾಗೂ ಈ ವರಮಾನದಲ್ಲಿ ಅಲ್ಲಿನ ಜೀವನ ಸರಿದೂಗಿಸಬಹುದೇ ಕೇಳಿ ನೋಡಿ.
ಧನ್ಯವಾದಗಳು.
.
ಅರವಿಂದ್
http://aravindnimmava.wordpress.com
http://abhimanihuduga.blogspot.com
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ಅಲ್ಲಿನ/ಇಲ್ಲಿನ ಕರೆನ್ಸಿ ದಿನಾರ್ ಅಲ್ಲ, ದಿರ್-ಹಂ Dirham (AED)
ಬಶೀರ್ ಕೊಡಗು, ದುಬೈ
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ಬಷೀರ್,
ತಪ್ಪಿಗೆ ಕ್ಷಮೆ ಇರಲಿ. ನಿಮ್ಮ ಸ್ನೇಹಿತರಿಂದ ಈ ಕೆಲಸದ ಬಗ್ಗೆ ಹಾಗು ಅಲ್ಲಿನ ಸ್ಥಳ ಪರಿಚಯದ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ.
ಅರವಿಂದ್
http://aravindnimmava.wordpress.com
http://abhimanihuduga.blogspot.com
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆಯನ್ನು ನನ್ನ ಮಿಂಚಂಚೆಗೆ ಕಳುಹಿಸಿ,
cherambane@yahoo.com
ಬಶೀರ್ ಕೊಡಗು, ದುಬೈ
ಉ: ಸಹಕರಿಸಿ - ಶಾರ್ಜದಲ್ಲಿ ಕೆಲಸ
ನನ್ನ ಖಾಸಗಿ ಮಿಂಚಂಚೆಯ ವಿಳಾಸ ಹಾಗೂ ನನ್ನ ಸಂವಹನ ಸಂಖ್ಯೆಯನ್ನು ನಿಮ್ಮ ಮಿಂಚಂಚೆ ವಿಳಾಸಕ್ಕೆ ಕಳುಹಿಸಿದ್ದೇನೆ.
ಅರವಿಂದ್
http://aravindnimmava.wordpress.com
http://abhimanihuduga.blogspot.com