~
ನಿಮ್ಮ ಅಭಿಮಾನಿ ಹುಡುಗ
ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.
ಜೀವನದ ಗುರಿ
ಜೀವನದ ಗುರಿ
ಮೊನ್ನೆ ಶನಿವಾರ ನನ್ನ ಚಿಕ್ಕಪ್ಪನ ಮಗ ಮನೆಗೆ ಬಂದಾಗ ಈ ವಿಚಾರವಾಗಿ ನನ್ನ ಶಾಲೆಯಲ್ಲಿ ಚರ್ಚಾಸ್ಪರ್ಧೆಯ ವಿಷಯವಿದ್ದು, ನಾನು "ಜೀವನದ ಗುರಿ" ಎಂಬ ಶೀರ್ಷೆಕೆಯ ಅಡಿ ಮಾತನಾಡಬೇಕಾಗಿದೆ ಎಂದು ಹೇಳಿದ, ನನಗೆ ಉತ್ಸಾಹ ಹಾಗು ಅವನಿಗೆ ಉತ್ತೇಜನ ನೀಡುವ ಸಲುವಾಗಿ ನನ್ನ ಸಂಗ್ರಹದಲ್ಲಿದ್ದ ಎಲ್ಲ ರೀತಿಯ ಪುಸ್ತಕಗಳನ್ನು ತಿರುವಿಹಾಕಿ ಅವನಿಗೊಂದು ಎರಡು ಪುಟ ಬರೆದುಕೊಟ್ಟೆ, ನಂತರ ನನ್ನನ್ನು ನಾನೇ ಕೇಳಿಕೊಂಡ ಈ ಪ್ರಶ್ನೆಗೆ ಉತ್ತರ ಹೇಳ ಹೊರಟಾಗ ಕಾಡಿದ ಭಾವ ಅವರ್ಣನೀಯ, ಹಾಗೆ ಸುಮ್ಮನೆ...........
ಗೆಳಯರೆ ನಿಮ್ಮ ಜೀವನದ ಗುರಿ ಏನು ?
ದಯವಿಟ್ಟು ದುಡ್ಡು, ಅಧಿಕಾರ, ಪ್ರೀತಿ ಇದೆಲ್ಲವ ಬಿಟ್ಟು ಬೇರೆ ಹೊಸ ವಿಚಾರಗಳನ್ನು ತಿಳಿಸಿಕೊಟ್ಟರೆ ಸಂತೋಷ.........
ಜೀವನದ ಗುರಿ.

- ಅರವಿಂದ್ ರವರ ಬ್ಲಾಗ್
- Login or register to post comments
- 322 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಜೀವನದ ಗುರಿ
ಜೊತೆಯಲ್ಲಿರುವವರು ಯಾವಾಗಲೂ ಖುಷಿಯಾಗಿ ಇರುವಂತೆ ನಡೆದುಕೊಳ್ಳುವುದು...
ಅವರಿಗೆ ಎಂದೂ ದುಃಖ ಉಂಟು ಮಾಡದಿರುವುದು...
ಇದು ಸ್ವಲ್ಪ ಕಷ್ಟದ ಕೆಲಸ. ಆದರೂ ಪ್ರಯತ್ನ ಪಡಬಹುದು...
(ಇಲ್ಲಿ ಜೊತೆಯಲ್ಲಿರುವವರು ಅಂದರೆ, ತಂದೆ, ತಾಯಿ, ಅಣ್ಣ, ತಂಗಿ, ಸ್ನೇಹಿತರು, ಎಲ್ಲರೂ ಸೇರ್ತಾರೆ.)
-ಅನಿಲ್ ರಮೇಶ್.
ಉ: ಜೀವನದ ಗುರಿ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ
ಉ: ಜೀವನದ ಗುರಿ
ಏಕೆ ಈ ಪ್ರಶ್ನೆ ಕೇಳಿದ್ರಿ?
ನಿಮ್ಮ ಜೀವನ ಗುರಿ ಏನು ಅಂತ ಹೇಳ್ತೀರಾ?
-ಅನಿಲ್ ರಮೇಶ್.
ಉ: ಜೀವನದ ಗುರಿ
ಅನಿಲ್
ನಾನೆನೋ ನೆನ್ನೆ ನನ್ನ ತಮ್ಮನಿಗೆ ಜೀವದ ಗುರಿ ಎಂಬ ವಿಚಾರವಾಗಿ ಶಾಲೆಯಲ್ಲಿ ಚರ್ಚಾಸ್ಪರ್ಧೆಗೆ ಎರಡು ಪುಟಗಳಿಗಾಗುವಷ್ಟು ವಿಷಯವನ್ನು ಬರೆದುಕೊಟ್ಟೆ (ಪುಸ್ತಕಗಳ ನೆರವಿನಿಂದ), ನನಗೆ ಈ ಯೋಚನೆ ಬಂದಾಗ ತುಂಬಾ ಕಸಿವಿಸಿಯಾಯಿತು ಮತ್ತು ಚಿಂತನೆಗೆ ದಾರಿ ತೋರಿಸಿತು.
ನನ್ನ ಜೀವನದ ಗುರಿ ಇಷ್ಟೆ ನನ್ನ ಜೀವನದ ಗುರಿಯಿರೋವರೆಗೂ ನನ್ನ ಜೀವದ ಗುರಿ ಮುಟ್ಟದಿರುವುದು ಅಂತ, ಆದರೆ ಅದೇ ಏನು ಅಂತ ಯೋಚಿಸಿ ತಿಳಿಸುತ್ತೇನೆ.
ಉ: ಜೀವನದ ಗುರಿ
ನೀವು ಕೇಳಿ ಒಳ್ಳೇ ಕೆಲ್ಸ ಮಾಡಿದಿರಿ .
ಜೀವನದ ಗುರಿ ಏನೆಂದು ಹುಡುಕುತ್ತಿರುವವರಿಗೆ ಇದರಿಂದ ನೆರವಾಗುವುದು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಜೀವನದ ಗುರಿ
ನಿಮ್ಮ ಬ್ಲಾಗ್ ನ ಕೊನೆಯ ಸಾಲುಗಳು "ದಯವಿಟ್ಟು ದುಡ್ಡು, ಅಧಿಕಾರ, ಪ್ರೀತಿ ಇದೆಲ್ಲವ ಬಿಟ್ಟು ಬೇರೆ ಹೊಸ ವಿಚಾರಗಳನ್ನು ತಿಳಿಸಿಕೊಟ್ಟರೆ ಸಂತೋಷ" ಎಂಬ ಮಾತುಗಳು ಹಿಡಿಸಿದವು, ಎಲ್ಲರಿಗೂ ಸಾಮಾನ್ಯವಾಗಿ ಈ ವಿಷಯದ ಗುರಿಗಳೇ ಇರುತ್ತವೆ. ಇವನ್ನು ಬಿಟ್ಟು ಅಲೌಕಿಕ ಗುರಿಗಳನ್ನು ಹೊಂದಿದವರು ಬಹಳ ಜನ ಉದಾಹರಣೆಗೆ ಸ್ವಾಮಿ ವಿವೇಕಾನಂದ ಮುಂತಾದವರು..... ಇವರ ಗುರಿ ಜಗತ್ತಿನ ಏಳ್ಗೆ ಹಾಗೂ ಉಧ್ಧಾರ..... ನಾವೂ ಹಾಗಾಗಲು ಪ್ರಯತ್ನಿಸೋಣ...... ಏನಂತಿರಿ.
ಉ: ಜೀವನದ ಗುರಿ
"ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ" - ಬಸವಣ್ಣ
--
PaLa
ಉ: ಜೀವನದ ಗುರಿ
ನಂ ನಂ ತನುವ ಸಂತೈಸಿಕೊಂಡ ಮೇಲೆ
- ನಮ್ನಮ್ಮ ಡೊಂಕನ್ನು ಮೊದಲು ತಿದ್ದುಕೊಳ್ಳುವಷ್ಟು ಸ್ವಾರ್ಥಿಯಾಗದೆ
ಅಥವಾ ಅದಕ್ಕೆ ಕಾಯದೆ
ಲೋಕದ ಡೊಂಕನ್ನು ಏಕೆ ತಿದ್ದಲು ಹೊರಡಬಾರದು ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಜೀವನದ ಗುರಿ
ನಮ್ಮಲ್ಲಿ ಡೊಂಕು ಇದೆ ಅಂತಾ ಗೊತ್ತಿದ್ದೂ ಲೋಕ ಡೊಂಕು ಅನ್ನೋದು ಸ್ವಾರ್ಥ ಅಲ್ವೆ
--
PaLa
ಉ: ಜೀವನದ ಗುರಿ
"ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ" - ಬಸವಣ್ಣ
ನೀವು ಹೇಳೋದು ನಿಜ, ಆದರೇ....
ನಮ್ಮನ್ನು ನಾವು ತಿದ್ದಿಕೊಳ್ಳುತ್ತಲೇ ನಮ್ಮ ವಿಚಾರವನ್ನು ಹಂಚಿಕೊಂಡರೆ ತಪ್ಪಿಲ್ಲ ಅಲ್ವಾ? ಒಳ್ಳೆಯ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡವರು ಸ್ಥಿತಪ್ರಜ್ಞರಂತೆ ಸುಮ್ಮನಾಗಿಬಿಟ್ಟರೆ ಅವರಿಂದ ಸಮಾಜಕ್ಕೆ ಕೆಡುಕಾಗದಿದ್ದರೂ, ಅವರಂತೆ ಹತ್ತಾರು ಜನ ಒಳ್ಳೆಯವರಾಗುವುದಕ್ಕೆ ಅವಕಾಶ ತಪ್ಪಿದಂತಾಗುತ್ತದಲ್ಲವೇ? ಅಲ್ಲದೆ ಸುಮ್ಮನೆ ಪ್ರಚಾರಕ್ಕಾಗಿ ಬರೆಯುವವರು ಸಮಾಜಕ್ಕೆ ಬೇಡವಾದ ಸಮಾಜದ ಸ್ವಾಸ್ಥ್ಯ ಕೆಡಸುವ ಅನೇಕಸಂಗತಿಗಳನ್ನು ಬರೆದು,ಗೊಂದಲಕ್ಕೆ ಕಾರಣ ವಾಗುತ್ತಾರೆ. ಇಂತಹ ಸಮಯದಲ್ಲಿ ನಿಜವಾಗಿ ಸಮಾಜಕ್ಕೆ ಒಳಿತಾಗಬಲ್ಲ ಸಂಗತಿಗಳು ಒಬ್ಬರಲ್ಲಿದ್ದರೆ ಅದನ್ನು ಹಂಚಿಕೊಂಡರೆ ತಪ್ಪಾ?
ನನ್ನ ವಿಚಾರವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಸಂಕೋಚವಿಲ್ಲ. ನಮ್ಮ ಪೂರ್ವಜರು ನಮಗೆ ಒಂದು ಒಳ್ಳೆಯ ಸಂಸ್ಕೃತಿಯನ್ನು ಕೊಟ್ಟಿದ್ದಾರೆಂಬ ಹೆಮ್ಮೆ ಇದ್ದರೂ ಹಿಂದು ಸಮಾಜದಲ್ಲಿ ಕೆಲವರನ್ನು ದೂರವಿಟ್ಟ ಪರಿಣಾಮವಾಗಿ ಇಂದು ಹಿಂದು ಸಮಾಜದಲ್ಲಿ ದೊಡ್ಡ ಕಂದಕ ನಿರ್ಮಾಣ ವಾಗಿದೆ. ನನ್ನ ಐದು ದಶಕಗಳ ಜೀವನದಲ್ಲಿ ಕಣ್ಣಾರೆ ಅದೆಲ್ಲವನ್ನೂ ಕಂಡಿರುವುದರಿಂದ ನಿಸ್ಸಂಕೋಚವಾಗಿ ಸಮಾಜದ ಹಿತದೃಷ್ಟಿಯಿಂದ ಜಾತಿ-ಜಾತಿಗಳ ನಡುವಿನ ಕಂದಕ ಅಳಿಸಲು ಪ್ರಾಮಾಣಿಕವಾಗಿ ಮನಸ್ಸು ಬಯಸುತ್ತದೆ. ನಾನೇನೂ ರಾಜಕಾರಣಿಯಲ್ಲ. ಯಾರ ಬೆಂಬಲಕ್ಕಾಗೂ ಮಾತನಾಡಬೇಕಿಲ್ಲ. ಆದರೆ ಮುಂದಿನ ನಮ್ಮ ಮಕ್ಕಳು ಸುಖ ,ಶಾಂತಿ, ನೆಮ್ಮದಿಯಿಂದ ಇರಬೇಕಾದರೆ, ನಾವು ಜಾತಿ ಮಾತು ಬಿಡಲೇ ಬೇಕು. ಯಾರೂ ಶ್ರೇಷ್ಠರೂ ಅಲ್ಲ. ಯಾರೂ ಕನಿಷ್ಠರೂ ಅಲ್ಲ. ಎಲ್ಲಾ ಜಾತಿಗಳಲ್ಲೂ ಉತ್ತಮ ಸಂಸ್ಕಾರ ವಿರುವ ಜನರಿದ್ದಾರೆ.ಅದರಂತೆಯೇ ಸಂಸ್ಕಾರವಿಲ್ಲದವರೂ. ನಾನು ರಾಮಕೃಷ್ಣಾಶ್ರಮದ ಅನೇಕ ಭಕ್ತರ ಮನೆಗಳಿಗೆ, ಅಂತೆಯೇ ಅನೇಕ ಆರ್.ಎಸ್.ಎಸ್. ಕಾರ್ಯಕರ್ತರುಗಳ ಮನೆಗೆ ಹೋಗಿದ್ದೇನೆ.ಹುಟ್ಟಿನಿಂದ ಯಾವುದೇ ಜಾತಿ ಇರಬಹುದು, ಆದರೆ ಆ ಮನೆಗಲ್ಲಿರುವ ಸಂಸ್ಕಾರದಿಂದ ಎಂತಹಾ ಉತ್ತಮ ಕುಟುಂಬಗಳಾಗಿವೆ ಎಂದರೆ ನೂರಾರು ಜನರಿಗೆ ಆದರ್ಶವಾಗಿರುವ ಕುಟುಂಬಗಳನ್ನು ನೋಡಿ ಆನಂದಿಸಿದ್ದೇನೆ, ಅಂತಹಾ ಕುಟುಂಬಗಳ ಸಂಖ್ಯೆ ಹೆಚ್ಚ ಬೇಕೆಂಬುದು ನನ್ನ ಗುರಿ.
ಉ: ಜೀವನದ ಗುರಿ
ನಿಮ್ಮನ್ನು ತಿದ್ದಿಕೊಂಡು ನಿಮ್ಮ ಅಭಿಪ್ರಾಯ ಹಂಚಿಕೊಂಡರೆ ತಪ್ಪಿಲ್ಲ. ಆದರೆ ಅದರಲ್ಲಿ ನಾನು ಮಾಡಿದ್ದೇ ಸರಿ, ಇದೇ ಇತರರ ಜೀವನದ ಗುರಿ, ನಿಮ್ಮನ್ನ ನಾನು ಉದ್ಧಾರ ಮಾಡ್ತಾ ಇದೀನಿ ಅನ್ನೋ ಭಾವನೆ ಸರಿಯಲ್ಲ.
--
PaLa
ಉ: ಜೀವನದ ಗುರಿ
ಶ್ರೀಧರ್ರವರೆ,
ನಿಮ್ಮ ಅಭಿಪ್ರಾಯಕ್ಕೆ ನನ್ನ ಅನಂತ ವಂದನೆಗಳು.
ನೀವು ಹಿರಿಯರು ನನಗಿಂತ ಜೀವನದ ಅದಮ್ಯ ನೋಟವನ್ನು ನೋಡಿದವರು, ನನ್ನ ಅನುಭವಕ್ಕೆ ಹೇಳುವುದಾದರೆ, ನೀವು ಹೇಳಿದ ಜಾತಿ, ಮತ, ಎಲ್ಲವೂ ಮಾರಕ ಎಂದು ನನಗೂ ನನ್ನಂತಹ ನೂರಾರು ಗೆಳೆಯರಿಗೂ ತಿಳಿದಿದೆ. ಆದರೆ ನಾ ಕೇಳುವುದಿಷ್ಟೆ ಎಷ್ಟು ಜನ ಆ ಗುರಿಯ ಬೆನ್ನತ್ತಿ, ಸಮಾಜದ ಅದರಲ್ಲೂ ಜಾತಿಸ್ಥರದ ಮೂಢನಂಬಿಕೆಗಳನ್ನು ಮುರಿಯಲು ಇಚ್ಚಿಸಿದ್ದೀರಿ, ಹಾಗು ನಮ್ಮಲ್ಲೇ ಹುಟ್ಟುವ ನೂರಾರು ಮೌಢ್ಯಗಳಿಗೆ ಸಮಾಧಿ ಕಟ್ಟಿದ್ದೀರಿ ?
ವಾಸ್ತವದ ಅರಿವು ನೋಡಿದಾಗ ಎಷ್ಟು ಜನ ನನ್ನ ಗೆಳೆಯ ಗೆಳತಿಯರು ಅಂತರ್ಜಾತಿ ವಿವಾಹವನ್ನು (ಪ್ರೀತಿಸಿ ಅಲ್ಲ), ಕೋಮು ಸೌಹಾರ್ದವನ್ನು ಪ್ರೋತ್ಸಾಹಿಸಿ, ಅಂಥಹ ದಿವ್ಯ ಭವ್ಯ ಭಾರತಕ್ಕೆ ಕೊಡುಗೆಯಾಗಿದ್ದೀರಿ. ತಿಳಿಸಿ.
ನಿಮ್ಮ ಸುತ್ತ ಮುತ್ತಲಿನ ಜನರನ್ನೇ ಉದಾಹರಣೆಯಾಗಿ ನೋಡಿ.
ಜಾತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರು, ಒಂದೇ ಒಂದು ಸುಧಾರಣೆಗೆ ಮನಸ್ಸು ಮಾಡಿದ್ದರೆ ಅದರ ಗಮ್ಮತ್ತೇ ಬೇರೆ ಇತ್ತು. ಹಾಗೆ ಆ ರೀತಿಯ ಸುಧಾರಣೆ ಆಗಿಲ್ಲ ಅನ್ನುತ್ತಿಲ್ಲ, ಆಗಿದೆ, ಆಗುತ್ತಲಿದೆ,
ನಮಸ್ಕಾರಗಳು
ನನ್ನ ಅಭಿಪ್ರಾಯ ನಿಮಗೆ ನೊವುಂಟು ಮಾಡಿದ್ದರೆ, ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.
ಉ: ಜೀವನದ ಗುರಿ
ಅರವಿಂದ್,
ಅಂತರ್ಜಾತಿ ವಿವಾಹ ನಮ್ಮ ಮನೆಯಲ್ಲೇ ಆಗಿದೆ. ಚೆನ್ನಾಗಿಯೇ ಇದ್ದೀವಿ. ನೀವು ಕೇಳಿದ್ದಕ್ಕಷ್ಟೇ ಹೇಳಿದ್ದೀನಿ. ನಾನು ಮೊದಲ ಭಾರಿ ಹರಿಜನರೆಂದು ಕರೆಯುವ ಮಿತ್ರರ ಮನೆಯಲ್ಲಿ ಊಟ ಮಾಡಿದಾಗ ಅವರಲ್ಲಿ ಕಂಡ ಆನಂದ ವರ್ಣನಾತೀತ. ಆಗ ಮನೆಯಲ್ಲಿ ವಿರೋಧ ಎದುರಿಸಿದ್ದು ಹೌದು. ಆದರೆ ಕ್ರಮೇಣ ಮನೆಯವರು ನನಗೇ ಹೊಂದಿಕೊಂಡರು. ಇದು ನನಗೆ ದೊಡ್ಡ ವಿಚಾರವೆನಿಸುವುದೂ ಇಲ್ಲ. ನೀವು ಕೇಳಿದ್ದಕ್ಕೆ ಹೇಳಲೇ ಬೇಕಲ್ಲವೇ?
ಒಂದು ಮಾತು: ಯಾವುದೂ ಅದರಷ್ಟಕ್ಕೆ ಆಗಬೇಕು, ಇದಕ್ಕೆ ಹೋರಾಟ ಮಾಡಬೇಕಿಲ್ಲ. ಶ್ರೀಯುತ ಅರವಿಂದ ಮಾಲಗತ್ತಿ ಯವರು ಮೊನ್ನೆ ಪತ್ರಿಕೆಗಳಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಮಾಂಸಾಹಾರಿಗಳನ್ನು ಕೀಳಾಗಿ ನೋಡಲಾಗುತ್ತಿದೆ- ಎಂದು. ನಿಜವಾಗಲೂ ಇದೂ ತಪ್ಪೆ. ಸಸ್ಯಾಹಾರ ತಿಂದು ಮೃಗದಂತೆ ವರ್ತಿಸುವ ಜನರನ್ನೂ ನೋಡಿದ್ದೇನೆ. ಮಾಂಸಾಹಾರಿಗಳಲ್ಲಿ ಉದಾರಚರಿತರನ್ನೂ ನೋಡಿದ್ದೇನೆ. ಅದರಲ್ಲೇನಿದೆ? ಆದರೆ ನಾನು ಮಾಂಸಾಹಾರ ತಿನ್ನಲಾರೆ. ನನ್ನಂತವನಿಗೆ ಒತ್ತಾಯವಾಗಬಾರದಷ್ಟೇ.
ಉ: ಜೀವನದ ಗುರಿ
ನನ್ನ ಜೀವನದ ಗುರಿ ಬೆಟ್ಟದಷ್ಟು... ನಿಮ್ಮ ಗುರಿಯನ್ನೇ ಹೇಳಿಲ್ಲವಲ್ಲ...
ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.blogspot.com/
ಉ: ಜೀವನದ ಗುರಿ
ಮಂಜುರವರೆ,
ಖಂಡಿತ ಬರೆಯುತ್ತೇನೆ ಸ್ವಲ್ಪ ಸಮಯ ಕೊಡಿ ದೇವ್ರು
ಉ: ಜೀವನದ ಗುರಿ
ಅರವಿಂದ್ ರವರೆ, ದುಡ್ಡು, ಅಧಿಕಾರ, ಪ್ರೀತಿ ಈ ತರಹದ ಗುರಿ ಇರೋದು ತಪ್ಪಾ ? ಯಾಕೆ ಅಂದ್ರೆ ನನ್ನ ಗುರಿನೂ ದುಡ್ಡು, ಅಧಿಕಾರ, ಪ್ರೀತಿನೆ. ನನಗೆ ದುಡ್ಡು, ಅಧಿಕಾರ ಎರಡು ಬೇಕು. ಅದರ ಜೊತೆಗೆ ಎಲ್ಲಾರ ಪ್ರೀತಿನು ಗಳಿಸಬೇಕು. ನನ್ನ ಪ್ರಕಾರ ಈ ವಯಸಲ್ಲಿ ನಮಗೆ ಇರಬೇಕಾದದ್ದು ಲೌಕಿಕ ಗುರಿಗಳೆ ವಿನಹ: ಅಲೌಕಿಕ ಗುರಿಗಳಲ್ಲ... ಲೌಕಿಕ ಗುರಿಗಳಿಂದ ಮಾತ್ರ ನಮ್ಮ ಮತ್ತು ದೇಶದ ಉನ್ನತಿ ಸಾದ್ಯ.. ಬೇರೆಯವರಿಗೂ ನಾನು ಇದೇ ತರಹದ ಗುರಿ ಇಟ್ಕೊಳೊದಕ್ಕೆ ನಾನು ಪ್ರೋತ್ಸಾಹಿಸುತ್ತೇನೆ... ಆದ್ರೆ ಇದು ನನ್ನ ಅಭಿಪ್ರಾಯ ಮಾತ್ರ ...
ಉ: ಜೀವನದ ಗುರಿ
ಪ್ರಿಯ ಮಿತ್ರ ಹರ್ಷ
ದುಡ್ಡು, ಅಧಿಕಾರ, ಪ್ರೀತಿ ಇದು ಜೀವನದ ಗುರಿ ಅಲ್ಲ, ಅದು ನಮ್ಮ ನಿತ್ಯದ ಬದುಕು, ಅದರಲ್ಲಿ ಒಮ್ಮೆ ಹೆಚ್ಚು ಅಥವಾ ಕಡಿಮೆ ಎರಡು ಇರಬಹುದು, ಆದರೆ ಜೀವನದ ಗುರಿ ನನ್ನ ಮಟ್ಟಿಗೆ ಅದಲ್ಲ, ನಿಮ್ಮ ಅಭಿಪ್ರಾಯಕ್ಕೆ ನನ್ನ ಹುತ್ಪೂರ್ವಕ ಅಭಿನಂದನೆಗಳು.
ಉ: ಜೀವನದ ಗುರಿ
ನನ್ನನ್ನು ನಾನು ಸರಿಯಾಗಿ ಅಱಿಯುವುದೇ ನನ್ನ ಗುಱಿ. ಕನ್ನಡದಲ್ಲಿ ಇನ್ನೂ ಚೆನ್ನಾಗಿ ಅಧ್ಯಯನ ಮಾಡಬೇಕೆಂಬುದೇ ಅಷ್ಟೇ ಇನ್ನೊಂದು ಮುಖ್ಯವಾದ ಗುಱಿ.
ಉ: ಜೀವನದ ಗುರಿ
ನೀವು ಬರೆದದ್ದು ತುಂಬಾ ಚೆನ್ನಾಗಿದೆ. ಹೀಗೆಯೆ ಬರೆಯುತ್ತಿರಿ.
- ಹರ್ಷ V. (ವಿ.ಹೆಚ್.)