ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಅರವಿಂದ್ ರವರ ಬ್ಲಾಗ್

ನಿಮ್ಮ ಅಭಿಮಾನಿ ಹುಡುಗ

ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.

ಅಂತರ್ಜಾತಿ ವಿವಾಹ

November 25, 2008 - 11:27am — ಅರವಿಂದ್
ಅಂತರ್ಜಾತಿ ವಿವಾಹ

ಮಾನ್ಯ ಹಿರಿಯರಾದ ಶ್ರೀಧರರವರ ಪ್ರೋತ್ಸಾಹದಿಂದ

ಗೆಳೆಯರೆ ಅಂತರ್ಜಾತಿ ವಿವಾಹಕ್ಕೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಸಮಾಜದ ಸ್ವಾಸ್ಥ್ಯ ಹಾಗು ನಮ್ಮ ಆರೋಗ್ಯಕಾರಕ ವಿಚಾರಗಳಿಗೆ ವೇದಿಕೆ ಅಷ್ಟೆ, ಇದರಲ್ಲಿ ಯಾರ ಮನ ನೋಯಿಸುವ ಉದ್ದೇಶ ಇಲ್ಲ, ನಿಮ್ಮ ಅಭಿಪ್ರಾಯಕ್ಕೆ ಸದಾ ಚಿರಋಣಿ.

ಜಾತಿ ವಿರೋದಿಯಾಗಿದ್ದೇ ನಿಜವಾದರೆ ನಿಮ್ಮಲ್ಲಿ ಎಷ್ಟು ಜನ ಅಂತರ್ಜಾತೀಯ ವಿವಾಹವಾಗಿದ್ದೀರಾ. ಪ್ರಾಮಾಣಿಕ ಉತ್ತರ ತಿಳಿಸಿ.

ಅವರವರ ಭಾವಕ್ಕೆ ಭಕುತಿಗೆ

  • ಅಂತರ್ಜಾತಿ ವಿವಾಹ ಪರ/ವಿರೋಧಕ್ಕೆ ತಿಳಿಸಿ.
~.~
  • ಅರವಿಂದ್ ರವರ ಬ್ಲಾಗ್
  • Login or register to post comments
  • 362 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 25, 2008 - 12:10pm — mahesha

ಉ: ಅಂತರ್ಜಾತಿ ವಿವಾಹ

mahesha's picture

ನನಗೆಒಬ್ಬರಿಗೊಬ್ಬರು ಇಶ್ಟಪಟ್ಟು ಮೆಚ್ಚಿಕೊಂಡು ನಡೆಯುವ ಮದುವೆಗೆ ಒಪ್ಪಿಗೆ ಮತ್ತು ನಲವಿದೆ.

( ಸದ್ಯಕ್ಕೆ ಗಂಡು-ಗಂಡು, ಹೆಣ್ಣು-ಹೆಣ್ಣುಗಳ ನಡುವೆಗಳ ಮದುವೆ ಬಿಟ್ಟು ಉಳಿದ ಎಲ್ಲಾ )

ನನ್ನಿ
-ಮಾಯ್ಸ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:13pm — makrumanju

ಉ: ಅಂತರ್ಜಾತಿ ವಿವಾಹ

makrumanju's picture

ವಿವಾಹವೆಂಬುವುದು ಮನಸ್ಸು - ಮನಸ್ಸುಗಳ ನಡುವಿನ ಸಂಬಂಧ... ಇದರಲ್ಲಿ ಜಾತಿಯ ಪ್ರಶ್ನೆ ಬರುವುದಿಲ್ಲ.. ಅಂತರ್ಜಾತಿ ವಿವಾಹಕ್ಕೆ ನನ್ನ ಬೆಂಬಲವಿದೆ.. ಜಾತಿಯೆಲ್ಲಾ ನಾವು ಮಾಡಿಕೊಂಡಿರುವುದು ಅಷ್ಟೇ. ನಾವೆಲ್ಲಾ ಮಾನವ ಜಾತಿಯೆಂಬ ಅರ್ಥ ಮಾಡಿಕೊಂಡರೆ ಸಾಕು. ವಿವಾಹದಲ್ಲಿ ಜಾತಿಯ ವಿಷಯ ನಗರಗಳಲ್ಲಿ ಕಡಿಮೆಯಾಗುತ್ತಿದೆ. ಹಳ್ಳಿಯ ವಿಚಾರದಲ್ಲಿ ಕಷ್ಟ. ಜಾತಿಗೊಸ್ಕರ ಮಹಾಯುದ್ಧಗಳೇ ಜರುಗುತ್ತವೆ. ಸಂಪ್ರದಾಯವಾದಿಗಳಿಗೆ ಯಾವಾಗ ಬುದ್ದಿ ಬರುತ್ತೊ ಆವಾಗ ಜಾತಿ ನಿರ್ಮೂಲನೆಯಾಗುತ್ತೆ. ಮೂಡನಂಬಿಕೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಾನವನಿಗೆ ಜಾತಿ,ಕುಲದ ವಿಚಾರಗಳೇ ಪ್ರಾಮುಖ್ಯತೆ ಪಡೆದುಕೊಂಡಿವೆ. ಮೊದಲೇ ಹೇಳಿದಂತೆ ವಿವಾಹ ಮನಸ್ಸು-ಮನಸ್ಸುಗಳ ಭಾವನೆಯ ಸಂಬಂಧವಾಗಿ ಬೆಳೆಯಬೇಕು.

ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.blogspot.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:28pm — gurubaliga

ಉ: ಅಂತರ್ಜಾತಿ ವಿವಾಹ

gurubaliga's picture

ಪ್ರೇಮ ವಿವಾಹ ಮತ್ತು ಅಂತರ್ಜಾತೀಯ ವಿವಾಹಕ್ಕೆ ಬಹಳ ಸಂಬಂಧವಿದೆ. ಪ್ರೇಮ ವಿವಾಹಗಳಲ್ಲಿ ಹೆಚ್ಚಿನದು ಅಂತರ್ಜಾತೀಯ ಅಂತರ್ಧರ್ಮೀಯ.

ಆದರೆ "ಏರ್ಪಾಡು ಮದುವೆಗಳು" ಅಂತರ್ಜಾತೀಯ ಬಹಳ ಕಡಿಮೆ.

ಯಾವುದೇ ಜಾತಿಯವನಾಗಲಿ ಬೇರೊಂದು ಜಾತಿಯ ಹೆಣ್ಣನ್ನೇ ಮದುವೆಯಾಗಬೇಕೆಂದು ಏರ್ಪಡಿಸಲು ತೊಡಗಿದರೆ ಅವನಿಗೆ ಸೋಲಾಗುವುದು ಹೆಚ್ಚು.
ಎಲ್ಲ ಜಾತಿಗಳವರೂ ತಮ್ಮ ಜಾತಿ ಬಿಟ್ಟು ಹೊರಗಡೆ ಕೂಡು ಕಟ್ಟು ಮಾಡಿಕೊಳ್ಳಲು ಇನ್ನೂ ತಯಾರಿಲ್ಲ.

ನನ್ನ ಮಗನಿನ್ನೂ ಚಿಕ್ಕವ. ಆದರೆ ಮುಂದೊಂದು ದಿನ ಅವನು ಯಾವುದೇ ಜಾತಿಯ ಹೆಣ್ಣು ಮೆಚ್ಚಿ ಮದುವೆಯಾಗಲು ನಿರ್ಧರಿಸಿದಲ್ಲಿ ನನ್ನ ಬೆಂಬಲವಿದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:31pm — mahesha

ಉ: ಅಂತರ್ಜಾತಿ ವಿವಾಹ

mahesha's picture

ಒಡಂಬಟ್ಟ ಮದುವೆಗಳೂ ಕೂಡ ಒಳ್ಳೆಯ ಮದುವೆಗಳೇ.... ಆದರೆ ಅಲ್ಲಿ ಒತ್ತಾಯವಿರಬಾರದು.

ಕೆಲವೊಮ್ಮೆ ಒಲವು ಕುರುಡಾದಾಗ, ಕಾದು ಮದುವೆಯಾಗುವುದು ಒಳಿತು.

ನನ್ನಿ
-ಮಾಯ್ಸ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:47pm — kannadakanda

ಉ: ಅಂತರ್ಜಾತಿ ವಿವಾಹ

kannadakanda's picture

ಇದು ವಿಚಾರ ಮಾಡತಕ್ಕ ವಿಷಯವೇ ಅಲ್ಲ. ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಮದುವೆಯಾಗಲು ಜಾತಿಯೇಕೆ ಅಡ್ಡ? ಜಾತಿ ಅಡ್ಡವಾಗಿದ್ದರೂ ಮದುವೆಯಾಗಲೇ ಬೇಕೆನ್ನುವವರು ಮಾದುವೆಯಾಗೇ ತೀರುತ್ತಾರೆ. ಹೆಣ್ಣುಗಂಡೊಲವು ಜಾತಿಯನ್ನು ಮೀಱಿದ್ದು. ಆದರೆ ದೈಹಿಕ ರಾಸಾಯನಿಕ ಸ್ರವಣವನ್ನು ಮೀಱುತ್ತದೆಯೋ ಇಲ್ಲವೋ ವಿಜ್ಞಾನಿಗಳೇ ಹೇೞಬೇಕು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:50pm — ಅರವಿಂದ್

ಉ: ಅಂತರ್ಜಾತಿ ವಿವಾಹ

ಅರವಿಂದ್'s picture

ಬಹುಶಃ ನಿಮ್ಮ ಗಮನಕ್ಕೆ ಕೆಲವು ವಿಚಾರಗಳು ಬಂದಿಲ್ಲವೆಂದು ಕಾಣುತ್ತದೆ. ನಿಮ್ಮ ಸುತ್ತ-ಮುತ್ತಲಿನ ಉದಾಹರಣೆಗಳು ನೋಡಿ ತಿಳಿಸಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:59pm — kannadakanda

ಉ: ಅಂತರ್ಜಾತಿ ವಿವಾಹ

kannadakanda's picture

ನನ್ನ ಸ್ನೇಹಿತನೊಬ್ಬನೇ ಅಂತರ್ಜಾತೀಯ ವಿವಾಹವಾಗಿದ್ದು ಆತನ ತಂದೆತಾಯಿಗಳು ಈ ವಿವಾಹವನ್ನೊಪ್ಪಿದ್ದರೂ ಅತ್ತೆ ಸೊಸೆ ಸಂಬಂಧದಲ್ಲಿ ಮಾಮೂಲಿನ ವಿವಾಹದಂತೆ ಒಡಕಿರುವುದಱಿಂದ ಅಂತರ್ಜಾತೀಯ ಅಥವಾ ಜಾತಿಯೊಳಗಿನ ವಿವಾಹ ಇವೆರಡಱಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:51pm — mahesha

ಉ: ಅಂತರ್ಜಾತಿ ವಿವಾಹ

mahesha's picture

"ಆದರೆ ದೈಹಿಕ ರಾಸಾಯನಿಕ ಸ್ರವಣವನ್ನು ಮೀಱುತ್ತದೆಯೋ ಇಲ್ಲವೋ ವಿಜ್ಞಾನಿಗಳೇ ಹೇೞಬೇಕು."

ದೈಹಿಕ ರಾಸಾಯನಿಕ ಸ್ರವಣವನ್ನೂ ಮೀರಿ ಬಿಟ್ಟರೇ ಪ್ರಣಯಕ್ಕೆ ಅನುವೆಲ್ಲಿ? Smiling

ನನ್ನಿ
-ಮಾಯ್ಸ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 12:58pm — prapancha

ಉ: ಅಂತರ್ಜಾತಿ ವಿವಾಹ

prapancha's picture

ಪ್ರಸ್ತುತದಲ್ಲಿ ಈ ಜಾತಿ ಪದ್ದತಿ ಸಮಾಜದ ಏಳಿಗೆಗೆ ಅನೇಕ ಅನಪೇಕ್ಷಿತ ಸಮಸ್ಯೆಗಳನ್ನ ತ೦ದೊಡ್ಡಿದೆ. ಹಾಗಾಗಿ ಇ೦ದು ಜಾತಿ ನಿರ್ಮೂಲನೆ ಬಹಳ ಅತ್ಯವಶ್ಯ. ಈ ನಿಟ್ಟಿನಲ್ಲಿ ಅ೦ತರ್ಜಾತಿ ವಿವಾಹ ಬಹಳ ಮುಖ್ಯವಾದುದು. ಸಮಜಾದ ಅನೇಕ ಸಮಸ್ಯೆಗಳನ್ನ ಏಕಕಾಲದಲ್ಲಿ ನಿವಾರಿಸಬಲ್ಲದು.
ಆದರೆ ಈ ವಿವಾಹಗಳು ಸಮಾನ ಮನಸ್ಕರುಗಳ ನಡುವೆ ಹಾಗೂ ಸಮಾನ ಅಭಿರುಚಿಯುಳ್ಳ ಕುಟು೦ಬಗಳ ನಡುವೆ ನಡೆದರೆ ಒಳ್ಳೆಯದು. ಉದಾಹರೆಣೆಗೆ ಒ೦ದು ಕುಟು೦ಬ ಕಟ್ಟುನಿಟ್ಟು ಸಸ್ಯಾಹಾರಿಗಳಾಗಿದ್ದು ಇನ್ನೊ೦ದು ಮಾ೦ಸಹಾರಿಗಳಾಗಿದ್ದರೆ ಜೀವನ ಸ್ವಲ್ಪ ಕಷ್ಟಕರವಾಗಬಹುದು. ಹೀಗೆ ಕೆಲವು ಅ೦ಶಗಳನ್ನ ಗಮನದಲ್ಲಿಟ್ಟುಕೊ೦ಡು ಅ೦ತರ್ಜಾತೀಯ/ಅ೦ತರ್ಮತೀಯ/ಅ೦ತರ್ಧರ್ಮೀಯ ವಿವಾಹಗಳು ನಡೆದರೆ ಸಮಾಜಕ್ಕೆ ಬಹಳ ಒಳ್ಳೆಯದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 1:01pm — kannadakanda

ಉ: ಅಂತರ್ಜಾತಿ ವಿವಾಹ

kannadakanda's picture

ಜಾತಿವ್ಯತ್ಯಾಸದ ಪರಿಕಲ್ಪನೆಯ ನಮ್ಮ ಮನಸ್ಸಿನಲ್ಲಿಲ್ಲದಿರುವುದಱಿಂದ ನಮಗೆ ಕಾಣಿಸುತ್ತಿರುವುದು ಎರಡೇ ಜಾತಿ ಗಂಡು ಹೆಣ್ಣು. ಉೞಿದುದೆಲ್ಲ ನಗಣ್ಯ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 2:15pm — gurubaliga

ಉ: ಅಂತರ್ಜಾತಿ ವಿವಾಹ

gurubaliga's picture

ನಿಮ್ಮದು ಉದಾತ್ತ ಅನಿಸಿಕೆ. ಆದರೆ ಅದು ಅಷ್ಟು ಸುಲಭವಲ್ಲ.

"ಏರ್ಪಾಡು ಮದುವೆ" ಎಲ್ಲಿಯವರೆಗೆ ಜಾತಿಗಳವರಿಗೆ ಒಪ್ಪಿಗೆ ಇಲ್ಲವೊ ಅಲ್ಲಿಯವರೆಗೆ ಇದು ಸಾಧ್ಯವಿಲ್ಲ. ಪ್ರತೀ ಜಾತಿಯಲ್ಲೂ ಹಲವು ಒಳ ಪಂಗಡಗಳಿದ್ದು ಪಂಗಡಗಳ ನಡುವೆಯೇ ಕೊಡು ಕೊಳ್ಳುವಿಕೆ ನಡೆಯದ ಈ ಕಾಲದಲ್ಲಿ "ಏರ್ಪಾಡು ಮದುವೆಗಳು" ಅಂತರ್ಜಾತೀಯ ಆಗುವುದು ದೂರದ ಮಾತು.

ಪ್ರೇಮ ವಿವಾಹಗಳು ಹೆಚ್ಚಾಗಬೇಕು ಎಂದು ಹೇಳಿದರೆ ಹಾಸ್ಯಾಸ್ಪದವಾದೀತು. ಒಂದೇ ಜಾತಿಯ ಒಳಗೆ ಅದರಲ್ಲೂ ಒಂದೇ ಪಂಗಡದ ಒಳಗೂ ಪ್ರೇಮ ವಿವಾಹಕ್ಕೆ ಎಷ್ಟು ಬೆಂಬಲ ಇದೆ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 2:18pm — mahesha

ಉ: ಅಂತರ್ಜಾತಿ ವಿವಾಹ

mahesha's picture

ಪ್ರೇಮ ವಿವಾಹಕ್ಕಿಂತ ವಿವಾಹದಲ್ಲಿ ಪ್ರೇಮ ಇರಬೇಕ ಅದು ಮುಖ್ಯ ಅಲ್ವೇ?

ಪ್ರೇಮವಿವಾಹದ ಬಳಿಕ ಪ್ರೇಮ ಮಾಯೆ ಆದ ಸನ್ನಿವೇಶಗಳು ಬಲು ಇವೆ.

ನನ್ನಿ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 2:18pm — mahesha

ಉ: ಅಂತರ್ಜಾತಿ ವಿವಾಹ

mahesha's picture

ವಿವಾಹಜೀವನದಲ್ಲಿ ಪ್ರೇಮ ಇರಬೇಕ ಅದು ಮುಖ್ಯ ಅಲ್ವೇ?
ನನ್ನಿ
-ಮಹೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 2:43pm — prapancha

ಉ: ಅಂತರ್ಜಾತಿ ವಿವಾಹ

prapancha's picture

ಪ್ರೀತಿಯ ಬಾಳಿಗರವರೆ,
ಹಾಗೆ ನೋಡಿದರೆ ಹಿ೦ದೂ ದರ್ಮಿಗರು ಬದಲಾವಣೆಗೆ ಬಹಳ ಸಲೀಸಾಗಿ ಒ೦ದಿಕೊ೦ಡು ಹೋಗುವುದನ್ನು ಮೈಗೂಡಿಸಿಕೊ೦ಡಿದ್ದಾರೆ. ಆದ್ದರಿ೦ದ ಕೆಲವುಕಡೆ ಈ ಬದಲಾವಣೆಗಳಿಗೆ ಸ್ಪ೦ದಿಸುತ್ತಿರುವುದು ನಿದಾನಗತಿಯಲ್ಲಿರಬಹುದು ಆದರೆ ಖ೦ಡಿತ ಒ೦ದು ದಿನ ಜಾತಿರಹಿತ ಸಮಾಜ ಸಾದ್ಯವಿದೆ.
ಇ೦ದು ನಗರ ಪ್ರದೇಶದಲ್ಲಿ ಬಹುತೇಕ ಜಾತಿ ಮಾತು ಅಪ್ರಸ್ಥುತವಾಗಿರಬಹುದನ್ನ(ರಾಜಕಾರಣಿಗಳನ್ನ ಬಿಟ್ಟು) ನೀವು ಮನಗ೦ಡಿರಬಹುದು, ಹಾಗೇ ಗ್ರಾಮೀಣರಲ್ಲೂ ಒ೦ದು ದಿನ ಹೋಗುತ್ತದೆ. ಈ ಬದಲಾವಣೆಗೆ ಸ್ಪ೦ದಿಸದಿರುವವರು ಮು೦ದೊ೦ದು ದಿನ ಮೂಲೆಗು೦ಪಾಗುವುದು ಶತ ಸಿದ್ದ.

ದನ್ಯವಾದಗಳು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 25, 2008 - 8:13pm — hariharapurasridhar

ಉ: ಅಂತರ್ಜಾತಿ ವಿವಾಹ

hariharapurasridhar's picture

[ನನ್ನ ಗುರಿ -ಎಂಬ ವಿಚಾರಕ್ಕೆ ಅರವಿಂದರ ಪ್ರತಿಕ್ರಿಯೆ ನೋಡಿ ಅಲ್ಲಿ ಬರೆದಿದ್ದನ್ನೇ ಕಾಪಿ ಮಾಡಿರುವೆ.]

ಅರವಿಂದ್,
ಅಂತರ್ಜಾತಿ ವಿವಾಹ ನಮ್ಮ ಮನೆಯಲ್ಲೇ ಆಗಿದೆ. ಚೆನ್ನಾಗಿಯೇ ಇದ್ದೀವಿ. ನೀವು ಕೇಳಿದ್ದಕ್ಕಷ್ಟೇ ಹೇಳಿದ್ದೀನಿ. ನಾನು ಮೊದಲ ಭಾರಿ ಹರಿಜನರೆಂದು ಕರೆಯುವ ಮಿತ್ರರ ಮನೆಯಲ್ಲಿ ಊಟ ಮಾಡಿದಾಗ ಅವರಲ್ಲಿ ಕಂಡ ಆನಂದ ವರ್ಣನಾತೀತ. ಆಗ ಮನೆಯಲ್ಲಿ ವಿರೋಧ ಎದುರಿಸಿದ್ದು ಹೌದು. ಆದರೆ ಕ್ರಮೇಣ ಮನೆಯವರು ನನಗೇ ಹೊಂದಿಕೊಂಡರು. ಇದು ನನಗೆ ದೊಡ್ಡ ವಿಚಾರವೆನಿಸುವುದೂ ಇಲ್ಲ. ನೀವು ಕೇಳಿದ್ದಕ್ಕೆ ಹೇಳಲೇ ಬೇಕಲ್ಲವೇ?
ಒಂದು ಮಾತು: ಯಾವುದೂ ಅದರಷ್ಟಕ್ಕೆ ಆಗಬೇಕು, ಇದಕ್ಕೆ ಹೋರಾಟ ಮಾಡಬೇಕಿಲ್ಲ. ಶ್ರೀಯುತ ಅರವಿಂದ ಮಾಲಗತ್ತಿ ಯವರು ಮೊನ್ನೆ ಪತ್ರಿಕೆಗಳಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಮಾಂಸಾಹಾರಿಗಳನ್ನು ಕೀಳಾಗಿ ನೋಡಲಾಗುತ್ತಿದೆ- ಎಂದು. ನಿಜವಾಗಲೂ ಇದೂ ತಪ್ಪೆ. ಸಸ್ಯಾಹಾರ ತಿಂದು ಮೃಗದಂತೆ ವರ್ತಿಸುವ ಜನರನ್ನೂ ನೋಡಿದ್ದೇನೆ. ಮಾಂಸಾಹಾರಿಗಳಲ್ಲಿ ಉದಾರಚರಿತರನ್ನೂ ನೋಡಿದ್ದೇನೆ. ಅದರಲ್ಲೇನಿದೆ? ಆದರೆ ನಾನು ಮಾಂಸಾಹಾರ ತಿನ್ನಲಾರೆ. ನನ್ನಂತವನಿಗೆ ಒತ್ತಾಯವಾಗಬಾರದಷ್ಟೇ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 3:59am — lsiddappa

ಉ: ಅಂತರ್ಜಾತಿ ವಿವಾಹ

lsiddappa's picture

ನನ್ನದೂ ಅಂತರ್ಜಾತಿ ವಿವಾಹವೇ, ನನ್ನ ಪತಿ ಕೇರಳದವರು, ನಾನು ಕನ್ನಡತಿ. ಪ್ರದೀಪ್ (ನನ್ನ ಪತಿ) ಬೆಂಗಳೂರಿನಲ್ಲಿ ಓದಿದ್ದು-ಬೆಳೆದಿದ್ದು, ಹಾಗಾಗಿ ಅವನ ಜೊತೆ ಮಾತಾಡಿದ ಯಾರಿಗೂ ಅವನು ಕನ್ನಡದವನಲ್ಲ ಎಂದು ಗುರುತಿಸಲಾಗುತ್ತಿರಲಿಲ್ಲ. ನಾವಿಬ್ಬರು ಒಟ್ಟಿಗೆ ಕಾಲೇಜ್ ಓದಿದ್ದು. ಕಾಲೇಜ್ ಮುಗಿದ 8 ವರ್ಷದ ನಂತರ ಪ್ರದೀಪ್ ಆವರ ತಂದೆ-ತಾಯಿಯನ್ನು ನಮ್ಮಿಬ್ಬರ ಮದುವೆಗೆ ಒಪ್ಪಿಸಿ, ನಮ್ಮ ಮನೆಗೆ ಕಳಿಸಿದ. ಅಮ್ಮ, ಭಾವ, ಅಕ್ಕ, ಎಲ್ಲರೂ ಒಪ್ಪಿ ನಮ್ಮ ಮದುವೆ ಮಾಡಿಸಿದರು. ನನ್ನ ಮಾವನವರು ಅವರ ನೆಂಟರೊಂದಿಗೆ ಹೇಳಿದ ಮಾತು ನನಗೆ ನನ್ನ ಅತ್ತೆಯವರಿಂದ ತಿಳಿಯಿತು, "ನಾವು ನಮ್ಮ ಜಾತಿಯಲ್ಲಿ ಹುಡುಕಿ ಮದುವೆ ಮಾಡಿದ್ದರೂ ಅಂತಹ ಒಳ್ಳೆ ಸೊಸೆ ಸಿಗುತ್ತಿರಲಿಲ್ಲ". ಹಾಗೆ, ನಮ್ಮ ಮನೆಯವರೂ ಪ್ರದೀಪ್ ಬಗ್ಗೆ ಹೇಳುತ್ತಲಿರುತ್ತಾರೆ. ನಮ್ಮ ವಿವಾಹ ಜೀವನ ತುಂಬಾ ಆನಂದ ವಾಗಿದೆ. ಆಗೊಮ್ಮೆ-ಹೀಗೊಮ್ಮೆ ಸಣ್ಣ ಪುಟ್ಟ ಜಗಳ ನಡಿತಿರತ್ತೆ, ಆದ್ರೆ ಎಲ್ಲ ವಿವಾಹದಲ್ಲಿ ಇದು ಇದ್ದಿದೇ ಅಲ್ವೇ. ನನಗೂ ಕೂಡ ನನ್ನ ಪ್ರದೀಪ್ ನನ್ನು ಪತಿಯಾಗಿ ಪಡೆದಿರುವ ಬಗ್ಗೆ ಪ್ರೌಡ್ ಇದೆ. ಅನ್ಥರ್ಜಾತಿಯ ವಿವಾಹಕ್ಕೆ ನನ್ನ ಬೆಂಬಲ ಇದೆ, ಆದರೆ ಮನೆಯವರನ್ನು ಬಿಟ್ಟು ಓಡಿಹೋಗಿ ಮದುವೆ ಆಗುವುದು ತಪ್ಪೆಂದು ನನ್ನ ಭಾವನೆ.
Lakshdeep!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 12:39pm — kannadakanda

ಉ: ಅಂತರ್ಜಾತಿ ವಿವಾಹ

kannadakanda's picture

ತುಂಬಾ ಸಂತೋಷ. ನಿಮ್ಮ ವೈವಾಹಿಕ ಜೀವನ ದೀರ್ಘ, ಸಮರಸ, ಸಂತುಷ್ಟ, ಸಂಪದ್ಬರಿತವಾಗಿಯೇ ಮುಂದುವರೆಯಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತ ಹಾರೈಸುತ್ತೇನೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 27, 2008 - 12:50pm — ಅರವಿಂದ್

ಉ: ಅಂತರ್ಜಾತಿ ವಿವಾಹ

ಅರವಿಂದ್'s picture

ನಿಮ್ಮೆಲ್ಲರ ಕಳಕಳಿಯ ಉತ್ತರಗಳಿಗೆ ನನ್ನ ಅನಂತ ಧನ್ಯವಾದಗಳು.

ಇಷ್ಟೆಲ್ಲಾ ಜಾತೀಕರಣವಾಗುತ್ತಿದ್ದರೂ, ನಮ್ಮ ನಮ್ಮಲ್ಲೇ ಏಕೆ ಜಾತಿ ಜಗಳ, ಬಹುಶಃ ನಮ್ಮ ಯುವ ಜನಾಂಗ ಈ ಹೋರಾಟಕ್ಕೆ ಮುನ್ನುಡಿಯ ಬರೆದಿದ್ದಾಗಿದೆ, ಆದರೆ ಈ ಆಲೋಚನೆಗಳು ಎಷ್ಟು ಜನ ತಂದೆ-ತಾಯಿಯರಲ್ಲಿ ಮೂಡಿದೆ, ಇಂದಿನ ಸಮಾಜದ ಸ್ವಾಸ್ಥ್ಯ ಕೆಂಗೆಡಿಸುತಿರುವ ಆ ವಿಚಾರ ಯಾವುದು, ಯಾವ ದೌರ್ಬಲ್ಯ ನಮ್ಮನ್ನು ಹೀಗೆ ಮೂಢನಂಬಿಕೆಗೆ ಕುತ್ತಿಗೆ ಕೊಟ್ಟಿದೆ,

ಒಂದು ದಿನ............., ಒಕಟಿ ರೋಜು..........,
ಒರು ದಿನಂ............., ಏಕ್ ದಿನ್...............,
ಎಲ್ಲಾ ಒಂದೇ ..........
ಚಟ್ಟದ ಮೇಲೆ ಮಲಗೋ ಮುಂದೆ,
ನಾನು ಹಿಂದು, ನಾನು ಮುಸ್ಮ್ಲಿಂ,
ಸಾಯೋವಾಗ ಬರೊಲ್ಲ
ಯಾರ ಜಾತಿ ಹಿಂದು ಮುಂದು,
ನಾನು ಶ್ರೇಷ್ಠ, ನಾನು ಶ್ರೇಷ್ಠ,
ಆದ್ರೆ ನಾವೆಲ್ಲಾ ನಿಕೃಷ್ಟ,
ತೊಡೆದು ಹಾಕಿ, ಸಂಕಟಕ್ಕೆ ಆಗೋನೆ ಶ್ರೇಷ್ಠ.

ಜಾತೀಕರಣ
ಅರವಿಂದ್
http://aravindnimmava.wordpress.com
http://abhimanihuduga.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 3, 2008 - 6:22am — lsiddappa

ಉ: ಅಂತರ್ಜಾತಿ ವಿವಾಹ

lsiddappa's picture

ಧನ್ಯವಾದಗಳು.
Lakshdeep!!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಂತರ್ಜಾತಿ ವಿವಾಹ
  • ನಿಮ್ಮ ಊರಿನಲ್ಲಿ ನಡೆಯುವ ವಿಶೇಷ ಘಟನೆಗಳು, ವಿಶೇಷ ವ್ಯಕ್ತಿಗಳು, ಇದ್ದರೆ ನಮಗೆ ತಿಳಿಸಿ 0-98454 89452
  • ಉಡುಪಿಯ ಬಗ್ಗೆ ಮಾಹಿತಿ ಬೇಕಿದೆ ?
  • ಸಹಕರಿಸಿ - ಶಾರ್ಜದಲ್ಲಿ ಕೆಲಸ
  • ದಿನಕ್ಕೆ ನೂರು ಪದ ಬರೆಯಿರಿ!
Syndicate content

ಲೇಖಕರು

ಅರವಿಂದ್'s picture

ಪೂರ್ಣ ಹೆಸರು
ಅಭಿಮಾನಿ ಹುಡುಗ

ಪರಿಚಯ

ನಮಸ್ಕಾರ ಗೆಳೆಯರೆ,

ನಾನು ಅರವಿಂದ್, ಕನ್ನಡಿಗ, ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವವ. ನಾನಿರುವುದು ಬೆಂಗಳೂರಿನ ರಾಜಾಜಿನಗರದ ೨ನೇ ಹಂತದಲ್ಲಿ ನನ್ನ ವಾಸ. ನಾನು ವೃತ್ತಿಯಲ್ಲಿ ಹಣಕಾಸಿನ ಕಿರಿಯ ಅಧಿಕಾರಿಯಾಗಿದ್ದು, ಬೆಂಗಳೂರಿನ ಖಾಸಗಿ ಸಂಸ್ಠೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.

ನನ್ನ ಹವ್ಯಾಸಗಳು : ಕವನ, ಲೇಖನ ಬರೆಯುವುದು, ಅಂತರ್ಜಾಲದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿಯುವುದು.

ನಿಮ್ಮೆಲ್ಲರಿಗೂ ನನ್ನ ಹುತ್ಪೂರ್ವಕ ಅಭಿನಂದನೆಗಳು.

ಇಂತಿ ನಿಮ್ಮವ
ಅರವಿಂದ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • savithasr
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:14am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 178 ಅತಿಥಿಗಳು ಆನ್ಲೈನ್ ಇರುವರು.


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator