ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಅರವಿಂದ್ ರವರ ಬ್ಲಾಗ್

ನಿಮ್ಮ ಅಭಿಮಾನಿ ಹುಡುಗ

ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.

ತುಳು ಭಾಷೆ

November 28, 2008 - 3:01pm — ಅರವಿಂದ್

ನಿಮ್ಮಲ್ಲಿ ಯಾರಿಗಾದರೂ ತುಳು ಭಾಷೆ ಗೊತ್ತಿದ್ದರೆ ದಯವಿಟ್ಟು ಕಲಿಸಿಕೊಡಿ.

ನಾವು ಕನ್ನಡದಲ್ಲಿ ೧ನೇ ತರಗತಿಯಲ್ಲಿ ಕಲಿತ ಹಾಗೆ ಅವನು ರಾಮ, ಅವಳು ಕಮಲ, ರಾಮನ ಮಗ ಭೀಮ, ಹೀಗೆ ಹೇಳಿಕೊಡಲು ಸಾಧ್ಯವೇ ??

  • ತುಳು ಭಾಷೆ ಕಲಿಯಬೇಕಿದೆ ?
~.~
  • ಅರವಿಂದ್ ರವರ ಬ್ಲಾಗ್
  • Login or register to post comments
  • 425 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 28, 2008 - 3:25pm — Rakesh Shetty

ಉ: ತುಳು ಭಾಷೆ

Rakesh Shetty's picture

ರಾಕೇಶ್ ಶೆಟ್ಟಿ

ಯಾಕ್ರೀ ತುಳು, ಏನ್ ಸಮಾಚಾರ Smiling , ಕೆಲವು ಪದಗಳನ್ನು ಹೇಳ್ತೀನಿ
ನಾವು = ಯಂಕುಲು
ನಾನು = ಯಾನ್
ನನಗೆ = ಯಂಕ್
ನೀವು = ಈರ್ರ್
ನೀನು = ಈ
ನಿಮಗೆ =ಈರೆಗ್
ಎಲ್ಲ ಇಲ್ಲೇ ಕಲಿಸೋದು ಕಷ್ಟ ನಿಮಗೆ ಏನು ಹೇಳಬೇಕು ಅದನ್ನು ಹೇಳಿ , ಅದನ್ನು ಬರೆಯೋಣಾ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 3:40pm — ಅರವಿಂದ್

ಉ: ತುಳು ಭಾಷೆ

ಅರವಿಂದ್'s picture

ರಾಕೇಶ್

ನನಗೆ ತುಳು ಕಲಿಯಬೇಕೆಂದು ಹಂಬಲ ಅದಕ್ಕೆ ಈಗ ಯಾಕೆ ಎಂದರೆ ನನಗೆ ಈ ಸದ್ಯಕ್ಕೆ ಹೇಳಲಾಗುತ್ತಿಲ್ಲ, ಇದಕ್ಕೆ ನನಗೆ ಕೇವಲ ೩ ತಿಂಗಳ ಕಾಲಾವಕಾಶ ಇದೆ ಹೇಗಾದರೂ ಕಲಿತು ತುಳು ಮಾತನಾಡಬೇಕೆಂದು ಹಠ.

ಜೊತೆಗೆ ಆಡು ವಾಕ್ಯಗಳನ್ನು ಉದಾ: ಊಟ ಆಯ್ತ ? ಏನು ಅಡಿಗೆ ? ಹೀಗೆ...............

ಅರವಿಂದ್
http://aravindnimmava.wordpress.com
http://abhimanihuduga.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 3:44pm — mahesha

ಉ: ತುಳು ಭಾಷೆ

mahesha's picture

ನಿಮ್ಮ ಹುಡುಗಿ ತುಳು ಬ್ರಾಹ್ಮಣರಾದರೆ ’ಅಶನಾನ’ ಭಂಟರಾದರೆ ’ಒಣಸಾಂಡ’ Smiling

ಹೆ ಹೆ

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 3:47pm — ಅರವಿಂದ್

ಉ: ತುಳು ಭಾಷೆ

ಅರವಿಂದ್'s picture

ಮಹೇಶ್

ಅರ್ಥ ಆಗ್ಲಿಲ್ಲ.

ಅರವಿಂದ್
http://aravindnimmava.wordpress.com
http://abhimanihuduga.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:14pm — mahesha

ಉ: ತುಳು ಭಾಷೆ

mahesha's picture

ರಾಕೇಶ್

ಎಂಕುಲು, ಎಂಕ್, ಅಂತ ಇರಬೇಕು.. ’ಯ’ ಸರಿಯ?

ಜೋಕಲು ಅಂದರೆ ಮಕ್ಕಳು
ಆಕಳು ಅಂದರೆ ಅವರು
ಈಕಳು ಅಂದರೆ ಇವರು

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:17pm — ಅರವಿಂದ್

ಉ: ತುಳು ಭಾಷೆ

ಅರವಿಂದ್'s picture

ಮಹೇಶ್

ಉಡುಪಿ ತುಳು ಹೇಗೆ, ಮಂಗಳೂರು ತುಳು ಹೇಗೆ ? ಎಲ್ಲವೂ ಬೇರೆ ಬೇರೆಯೇ ?

ಅರವಿಂದ್
http://aravindnimmava.wordpress.com
http://abhimanihuduga.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:23pm — mahesha

ಉ: ತುಳು ಭಾಷೆ

mahesha's picture

ಹುಂರಿ..

ಕಾಸರಗೋಡಿನಿಂದ ಹಿಡಿದು ಕಾರವಾರದವರೆಗೂ ತುಳು ತಾಲ್ಲೂಕು ತಾಲ್ಲೂಕಿಗೂ ಕನ್ನಡದಂತೆ ಬದಲಾಗುತ್ತಾ ಹೋಗುತ್ತದೆ..

ಅದರ ಜತೆಗೆ ಬ್ರಾಹ್ಮಣರು, ಭಂಟರು, ಹೀಗೆ ಜಾತಿ ಜಾತಿಗೂ ಸಕ್ಕತ್ ವ್ಯತ್ಯಾಸ...

ನೀವು ಅದಕ್ಕೆ ’ಉಡುಪಿ ತುಳು’ ಎಂದು ಹೇಳಿ ಬಿಟ್ಟರೆ ಒಳ್ಳೇದಿತ್ತು.. ನೋಡಿ. Smiling

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:25pm — ಅರವಿಂದ್

ಉ: ತುಳು ಭಾಷೆ

ಅರವಿಂದ್'s picture

ಮಹೇಶ್
ಉಡುಪಿ ತುಳುನೇ ಬೇಕು

ಅರವಿಂದ್
http://aravindnimmava.wordpress.com
http://abhimanihuduga.blogspot.com

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:42pm — mahesha

ಉ: ತುಳು ಭಾಷೆ

mahesha's picture

Smiling ರಾಕೇಶ ಶೆಟ್ರೇ ಇಲ್ಲಿ ನೋಡಿ ವಸಿ...

ನಂಗೆ ತುಳು ಬರ್ಪಿಚ್ಚಿ Smiling

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:47pm — Rakesh Shetty

ಉ: ತುಳು ಭಾಷೆ

Rakesh Shetty's picture

ರಾಕೇಶ್ ಶೆಟ್ಟಿ

ಬರ್ಪಿಚ್ಚಿ ಅಲ್ಲ ಬರ್ಪುಜಿ Smiling

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:48pm — mahesha

ಉ: ತುಳು ಭಾಷೆ

mahesha's picture

ಅಲ್ಲ ಬರ್ಪುರ್ರಿ‍ Smiling

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2008 - 1:51am — bvenkatraya

ಉ: ತುಳು ಭಾಷೆ

bvenkatraya's picture

ಕಾಸರಗೋಡಿನಿಂದ ಬ್ರಹ್ಮಾವರದ ವರೆಗೆ ಮಾತ್ರ ತುಳುವಿರುವುದು. ಉಡುಪಿಯ ನಂತರ ತುಳು ಕಡಿಮೆಯಾಗಿ ಬ್ರಹ್ಮಾವರದ ನಂತರ ಇಲ್ಲಾ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2008 - 12:11am — ಗಣೇಶ

ಉ: ತುಳು ಭಾಷೆ

ಗಣೇಶ's picture

ಎಂಕುಲು ಎಂದಾಗ ಒಂದು ಜೋಕು (ತುಳು ನಾಟಕದಲ್ಲಿ ನೋಡಿದ್ದು) -
ರಾಜಕಾರಣಿಯೊಬ್ಬ ತನಗೆ ಓಟು ಹಾಕುವವರು ಯಾರು? ಗೆಲ್ಲಿಸುವವರು ಯಾರು? ಮಂತ್ರಿ ಮಾಡುವುದು ಯಾರು?..ಹೀಗೆ ಪ್ರಶ್ನೆ ಕೇಳುತ್ತಾ ಹೋಗುತ್ತಾನೆ. ಅದಕ್ಕೆ ಸಭಿಕರು ಎಂಕುಲು, ಎಂಕುಲು ಎನ್ನುತ್ತಾ ಇರುತ್ತಾರೆ. ನಂತರ-

ಗೆಂದಿ ಬೊಕ್ಕ ಮದಿಮೆ ಆಪೆ ಐಕು ಕಾರಣ ಯೇರು?..ಎಂಕುಲು.
ಮದಿಮೆ ಆಯಿ ಬೊಕ್ಕ ಜೋಕುಳು ಆಪ. ಅಯ್ಕು ಕಾರಣ ಯೇರು? ..
ಮಹೇಶರೆ ನಿಮ್ಮ ತುಳು ಓದಲು ಖುಷಿಯಾಗುತ್ತದೆ. ಅವರು-ಅಕುಲು/ಅಕುಳು/ಆಕ್‌ಳು
ಜೋಕುಲು/ಜೋಕುಳು/ಜೋಕ್‍ಳು
-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2008 - 12:26am — gurubaliga

ಉ: ತುಳು ಭಾಷೆ

gurubaliga's picture

ಜೋಕ್ ಲು ಮತ್ತು ಜೋಕುಲು ಎರಡಕ್ಕೂ ವ್ಯತ್ಯಾಸವಿದೆ.

ರಾಂಪ ಜೋಕ್ಸ್ ಕುಖ್ಯಾತಿಯ ರಾಂಪಣ್ಣ ಪೋಲಿಸ್ಗೆ ದೂರು ಕೊಟ್ಟರಂತೆ
"ಎನ್ನ ಪುದರಡ್ ಜೋಕುಲು ಮಾಲ್ಪುವೆರ್"
= ನನ್ನ ಹೆಸರಿನಲ್ಲಿ ಜೋಕ್ಸ ಮಾಡ್ತಾರೆ" ಅಂತ

ಜೋಕುಲು = ಮಕ್ಕಳು ಅಂತಲೂ ಇದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 8:31pm — bvenkatraya

ಉ: ತುಳು ಭಾಷೆ

bvenkatraya's picture

ರಾಕೇಶ್ ಶೆಟ್ರೇ,

ಮೊಕೆದ ಪಾತೆರಾ ಕಲ್ಪಾಲೆ. ಆರೆಗ್ ಅಯ್ತಾ ಅಗತ್ಯ ಉಂಡು ಪಾಂಡದ ತೋಜುಂಡು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 3:33pm — gurubaliga

ಉ: ತುಳು ಭಾಷೆ

gurubaliga's picture

ಅವನು ರಾಮ, ಅವಳು ಕಮಲ, ರಾಮನ ಮಗ ಭೀಮ.

ಆಯೆ ರಾಮೆ, ಆಲ್ ಕಮಲ, ರಾಮೆನ ಮಗೆ ಭೀಮೆ.

ಏನು ತಿಳೀತು?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 3:50pm — Rakesh Shetty

ಉ: ತುಳು ಭಾಷೆ

Rakesh Shetty's picture

ರಾಕೇಶ್ ಶೆಟ್ಟಿ

ಊಟ ಆಯ್ತಾ = ವೋನಸ್ ಆಂಡಾ
ಹೇಗಿದ್ದೀಯ = ಎಂಚ ಉಲ್ಲ
ಮನೆಯಲ್ಲಿ ಎಲ್ಲ ಹೇಗಿದ್ದಾರೆ = ಇಲ್ಲದ ಪೂರ ಎಂಚ ಉಲ್ಲೆರ್ರ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:13pm — mahesha

ಉ: ತುಳು ಭಾಷೆ

mahesha's picture

ರೀ

ಊಟ ಆಯ್ತ = ಅಶನ ಆನ ಕೂಡ

ಬೋತ್ರಿ, ಬೋಡ್ಚಿ

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 4:40pm — Rakesh Shetty

ಉ: ತುಳು ಭಾಷೆ

Rakesh Shetty's picture

ರಾಕೇಶ್ ಶೆಟ್ಟಿ

ಮಾಯ್ಸ
ನಂಗೆ ಗೊತ್ತಿರೋದು ಭಂಟರ ತುಳು , ಉಳಿದ ತುಳು ಶೈಲಿ ನನಗೆ ಗೊತ್ತಿಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 9:42pm — kannadakanda

ಉ: ತುಳು ಭಾಷೆ

kannadakanda's picture

ಒಂದನ್ನು ಗಮನಿಸಿದೆ. ಹೞಗನ್ನಡ ಅವನ್, ರಾಮನ್, ಭೀಮನ್ ಶಬ್ದಗಳ ನ್ ’ಎ’ ಆಗುತ್ತಿದೆ. ಯಾಕೆಂದರೆ ಹೞಗನ್ನಡದ ಅಮ್ಮನ್=ಅಪ್ಪ ತುಳುವಿನಲ್ಲಿ ಅಮ್ಮೆ, ಹಾಗೆಯೇ ರಾಮಂ(ನ್)=ರಾಮೆ. ಭೀಮೆ ಇತ್ಯಾದಿ. ಅವನ್, ಅವಳ್ ಇವುಗಳಲ್ಲಿ ’ಅವ’ ರೂಪ ಆ ಆಗಿ ಕೊನೆಯ ನ್ ’ಎ’ಯಾಗಿ ಪುಲ್ಲಿಂಗದಲ್ಲಿ ಆಯೆ, ಳ್ ಸಾಮಾನ್ಯವಾಗಿ ತುಳುವಿನಲ್ಲಿ ’ಲ್’ ಆಲ್=ಅವಳ್(ಅವಳು) ಇದೇ ನಿಟ್ಟಿನಲ್ಲಿ ಯೋಚಿಸಿದರೆ ಈಯೆ=ಇವನು(ಇವನ್) ಈಲ್=ಇವಳು ಸರಿಯೇ ವೆಂಕಟ್ರಾಯರೆ ಮತ್ತು ರಾಕೇಶ್ ದಯವಿಟ್ಟು ತಿಳಿಸಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 11:13pm — ಗಣೇಶ

ಉ: ತುಳು ಭಾಷೆ

ಗಣೇಶ's picture

ವಾಹ್ ಕನ್ನಡಕಂದರೆ,

ತುಳು ಶಬ್ದಗಳನ್ನೂ ಕನ್ನಡದಷ್ಟೇ ಅಕ್ಕರೆಯಿಂದ ಗಮನಿಸುತ್ತಿದ್ದೀರಿ.
ನೀವು ಹೇಳಿದ್ದು ಈಯೆ ವರೆಗೆ ಸರಿ ಇದೆ.

ಆದರೆ ಈಯೆ=ನೀನೆ.

ಇವನು=ಇಂಬೆ/ಇಂಬ್ಯೆ
ಇವಳು=ಇಂಬಲು,ಮೋಲು.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 12:08am — kannadakanda

ಉ: ತುಳು ಭಾಷೆ

kannadakanda's picture

ಈಗ ನೆನಪಿಗೆ ಬಂತು ಯಾನ್=ನಾನು ಎಂಕಲು=ನಾವು, ನಾವುಗಳು, ಈಯೆ=ನೀನು, ಇಂಕಲು=ನೀವು
ಪದದ ಮೊದಲಿನ ನ್ ಲೋಪವಾಗುವುದು ತುಳುವಿನ ಒಂದು ಸ್ವಭಾವ. ಉದಾ:- ನೀರ್=ಈರ್=ನೀರು.
ಇಂಬ್ಯೆ=ಇವನು ಇಂಬಲು =ಇವಳು. ಇನ್ನೂ ಕೆಲವು ವಿಚಾರಗಳನ್ನು ಗಮನಿಸಿದ್ದೇನೆ. ಕನ್ನಡದ ಱ->ದ/ತ, ೞ->ರ ಳ->ಲ
ಉದಾಹರಣೆಗೆ ತೊಱೆ=ಸಣ್ಣ ನದಿ ತುಳುವಿನಲ್ಲಿ ತುದೆ ಹಾಗೆಯೇ ನೂಱು=ನೂದು, ಪೊಱಗೆ(ಹೊಱಗೆ)=ಪಿದಾಯ್, ಒಳಗೆ=ಉಲಾಯ್, ಬೇಱೆ=ಬೇತ್ ಬೇಱೊಂದು=ಬೇತೊಂಜಿ
ಗುೞಿ->ಗುಱಿ
ಬಾೞೆ=ಬಾರೆ ಬಾೞೆಯ ಹಣ್ಣು =ಬಾರೆದ ಪರಂದು (ಪೞಂ->ಪರಂದು)
ಕಿೞಂಗು(ಗೆೞಸು/ಗೆಣಸು)=ಕೆರಂಗ್ ಇತ್ಯಾದಿ ಇತ್ಯಾದಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 12:25am — kannadakanda

ಉ: ತುಳು ಭಾಷೆ

kannadakanda's picture

ಗುೞಿ(ಕನ್ನಡ)=ಗುರಿ(ತುಳು)=ಗುಂಡಿ ಎಂದು ತಿದ್ದಿಕೊಳ್ಳಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 12:25am — kannadakanda

ಉ: ತುಳು ಭಾಷೆ

kannadakanda's picture

ಗುೞಿ(ಕನ್ನಡ)=ಗುರಿ(ತುಳು)=ಗುಂಡಿ ಎಂದು ತಿದ್ದಿಕೊಳ್ಳಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 12:25am — kannadakanda

ಉ: ತುಳು ಭಾಷೆ

kannadakanda's picture

ಗುೞಿ(ಕನ್ನಡ)=ಗುರಿ(ತುಳು)=ಗುಂಡಿ ಎಂದು ತಿದ್ದಿಕೊಳ್ಳಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 12:08am — kannadakanda

ಉ: ತುಳು ಭಾಷೆ

kannadakanda's picture

ಈಗ ನೆನಪಿಗೆ ಬಂತು ಯಾನ್=ನಾನು ಎಂಕಲು=ನಾವು, ನಾವುಗಳು, ಈಯೆ=ನೀನು, ಇಂಕಲು=ನೀವು
ಪದದ ಮೊದಲಿನ ನ್ ಲೋಪವಾಗುವುದು ತುಳುವಿನ ಒಂದು ಸ್ವಭಾವ. ಉದಾ:- ನೀರ್=ಈರ್=ನೀರು.
ಇಂಬ್ಯೆ=ಇವನು ಇಂಬಲು =ಇವಳು. ಇನ್ನೂ ಕೆಲವು ವಿಚಾರಗಳನ್ನು ಗಮನಿಸಿದ್ದೇನೆ. ಕನ್ನಡದ ಱ->ದ/ತ, ೞ->ರ ಳ->ಲ
ಉದಾಹರಣೆಗೆ ತೊಱೆ=ಸಣ್ಣ ನದಿ ತುಳುವಿನಲ್ಲಿ ತುದೆ ಹಾಗೆಯೇ ನೂಱು=ನೂದು, ಪೊಱಗೆ(ಹೊಱಗೆ)=ಪಿದಾಯ್, ಒಳಗೆ=ಉಲಾಯ್, ಬೇಱೆ=ಬೇತ್ ಬೇಱೊಂದು=ಬೇತೊಂಜಿ
ಗುೞಿ->ಗುಱಿ
ಬಾೞೆ=ಬಾರೆ ಬಾೞೆಯ ಹಣ್ಣು =ಬಾರೆದ ಪರಂದು (ಪೞಂ->ಪರಂದು)
ಕಿೞಂಗು(ಗೆೞಸು/ಗೆಣಸು)=ಕೆರಂಗ್ ಇತ್ಯಾದಿ ಇತ್ಯಾದಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 2, 2008 - 9:36am — Rakesh Shetty

ಉ: ತುಳು ಭಾಷೆ

Rakesh Shetty's picture

ರಾಕೇಶ್ ಶೆಟ್ಟಿ

ಇವನು = ಇಮ್ಬೆ
ಇವಳು = ಉಮ್ಬೋಲು

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 3:50pm — srivathsajoshi

ಉ: ತುಳು ಭಾಷೆ

srivathsajoshi's picture

ಅರವಿಂದ್,

ನಿಮಗೆ ಇದು ನೆರವಾಗಬಹುದೆಂದು ಎಣಿಸಿದ್ದೇನೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 7:42pm — ASHOKKUMAR

ಉ: ತುಳು ಭಾಷೆ

ASHOKKUMAR's picture

ಜೋಷಿಯವರ ಕೊಂಡಿ ಚೆನ್ನಾಗಿದೆ.
ವ್ಯವಹಾರದಲ್ಲಿ ಪರಸ್ಪರ ಮಾತಾಡುವಾಗ ಬಳಸುವ ತುಳು ಅದರಲ್ಲಿದೆ.

*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 7:53pm — anil.ramesh

ಉ: ತುಳು ಭಾಷೆ

anil.ramesh's picture

ಕನ್ನಡ version ನನಗೆ ಓದಕ್ಕೆ ಆಗ್ತಿಲ್ಲ... Sad

ಇಂಗ್ಲೀಷ್ version ಓದಿದೆ.

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 10:35pm — kishoreyc

ಉ: ತುಳು ಭಾಷೆ

kishoreyc's picture

ನಮ್ಮ ನಾಡಿನ ನುಡಿಗಳನ್ನು ಶಾಲೆಯಲ್ಲಿ ಹೇಳಿಕೊಡುತ್ತಿಲ್ಲ. ಹಿ೦ದಿಯನ್ನು ಕನ್ನಡದ ಕ೦ದಮ್ಮಗಳ ಮೇಲೆ ಹೇರಿ ಕರ್ನಾಟಕದ ನುಡಿಗಳಬಗ್ಗೆ ಪರಿಚಯ ಮಾಡಸುತ್ತಿಲ್ಲ. ತುಳು ಕಲಿಯದಿದ್ದರೆ ಅದರ ಸಾಹಿತ್ಯಕ್ಕೆ ಶಕ್ತಿತು೦ಬುವುದಕ್ಕೆ ಆಗುವುದಿಲ್ಲ. ಇ೦ದಿನ ಶಾಲಾ ವ್ಯವಸ್ಠೆಯಲ್ಲಿರುವ ಅನಗತ್ಯವಾದ ಹಿ೦ದಿಯನ್ನು ತೆಗೆದುಹಾಕಿ ಕನ್ನಡದ ಜೊತೆ ತುಳು, ಕೊ೦ಕಣಿ, ಕೊಡವ ಭಾಷೆಗಳನ್ನು ಕಲಿಯಲು ಆಯ್ಕೆ ಇರಬೇಕು. ಕಾಲೇಜಿನಲ್ಲ೦ತೂ ಸ೦ಸ್ಕೃತದ ಜೊತೆಗೆ ಕರ್ನಾಟಕದ ನುಡಿಗಳನ್ನು ಕಲಿಯಲು ಅವಕಾಶ ಸಿಗಬೇಕು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2008 - 2:21am — bvenkatraya

ಉ: ತುಳು ಭಾಷೆ

bvenkatraya's picture

ಎಂಕ್(ನನಗೆ) ತುಲು (ತುಳು) ಕಲ್ಪೊಡ್ (ಕಲಿಯ)ಪಾಂಡದ್ (ಬೇಕೆಂದು) ಆಸೆ (ಹಂಬಲ) ಆಯಿಕ್ (ಅದಕ್ಕೆ)ಇತ್ತೆ (ಈಗ)ದಾಯೆ (ಯಾಕೆ) ಪಾಂಡಾ (ಎಂದರೆ) ಎಂಕ್ (ನನಗೆ) ಇತ್ತೆ (ಈ) ಸದ್ಯಕ್ (ಸದ್ಯಕ್ಕೆ) ಪಾಣೆರೆ (ಹೇಳಲು) ಆಪುಜಿ (ಆಗುತ್ತಿಲ್ಲ,). ಇಂದೆಕ್ (ಇದಕ್ಕೆ)ಎಂಕ್ (ನನಗೆ) ಬಜೀ (ಕೇವಲ) ಮೂಜಿ ( ೩)ತಿಂಗಳ್ (ತಿಂಗಳ) ಸಮಯ (ಕಾಲಾವಕಾಶ) ಉಂಡು ( ಇದೆ) ಎಂಚಾಂಡಲಾ (ಹೇಗಾದರೂ) ಕಲ್ತದ್ (ಕಲಿತು) ತುಲು (ತುಳು) ಪಾತೆರೊಡು (ಮಾತನಾಡಬೇಕು) ಪಾಂಡದ್ (ಎಂದು) ಹಟ. (ಹಠ.)

ಜೊತೆಗೆ (ಜತೆಕ)ಆಡು (ಪಾತೆರೊನಾ) ವಾಕ್ಯಗಳನ್ನು (ವಾಕ್ಯೊಲುನು) ಉದಾ: ಊಟ ಆಯ್ತ ? (ಒಣಸ (ವಣಸ್) ಆಂಡಾ?)ಏನು ಅಡಿಗೆ ? (ಯೆಂಚಿನ ಅಟಿಲ?) ಏನು ಪಲ್ಯ? (ಯೆಂಚಿನ ಕಚ್ಪು) ಹೀಗೆ (ಇಂಚಾ)
ಇಲ್ಲಿ ಎಲ್ಲಾ ಶಬ್ದಗಳಿಗೆ ತುಳು ಶಬ್ಧಗಳು ನನಗೆ ಸಿಕ್ಕಿಲ್ಲಾ.

ಉಳ್ಲಿದ ವಿಷಯಗಳನ್ನು ನಾಳೆ ಹೇಳುತ್ತೇನೆ. (ಬಾಕಿದಾ ವಿಷಯೊ ಯೆಲ್ಲೆ ಪಾಣ್ಪೆ)
ಇತ್ತೆ ನಿದ್ರೆ (ನಿದ್ದೆ) ಬರ್ಪುಂಡು. (ಎರಡೂ ಶಬ್ಧಗಳನ್ನು ಹೇಳುತ್ತಾರೆ. ತಪ್ಪು ಇರಲು ಸಾಕು. ರಾಕೇಶ್ ಶೆಟ್ಟಿಯವರನ್ನು ಕೇಳಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 9:53am — Rakesh Shetty

ಉ: ತುಳು ಭಾಷೆ

Rakesh Shetty's picture

ರಾಕೇಶ್ ಶೆಟ್ಟಿ

ವೆಂಕಟರಾಯರೇ
ಪೂರ ಸರಿನೇ ಉಂಡತೆ (ಎಲ್ಲ ಸರಿಯಾಗಿ ಇದೆ)
ಆಂಡ (ಆದರೆ) "ಆಯಿಕ್ (ಅದಕ್ಕೆ)" ನೂ ಯಂಕುಲು (ನಾವು) ಅವೇಕ್ (ಅದಕ್ಕೆ) ಅನ್ದು (ಅಂತ) ಪನ್ಪ (ಹೇಳ್ತಿವಿ)

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
December 1, 2008 - 8:19pm — bvenkatraya

ಉ: ತುಳು ಭಾಷೆ

bvenkatraya's picture

ರಾಕೇಶ್ ಶೆಟ್ರಿಗೆ,

ನನ್ನಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2008 - 5:11am — kannadakanda

ಉ: ತುಳು ಭಾಷೆ

kannadakanda's picture

ತೆಂಕುತಿಟ್ಟು (ದಕ್ಷಿಣ, ಕಾಸರಗೋಡು, ಮಂಗಳೂರು ತುಳು), ಬಡಗುತಿಟ್ಟು(ಉತ್ತರ, ಉಡುಪಿ ತೆಲುಗು) ಹಾಗೆಯೇ ಇವುಗಳಲ್ಲೇ ಬ್ರಾಹ್ಮಣರ ತುಳು, ಜೈನರ ತುಳು ಹಾಗೂ ಇತರರ ತುಳು ಇತ್ಯಾದಿ ಹಲ ಭೇದಗಳು. ಉದಾಹರಣೆಗೆ: ಎರಡ್=ಎರಡು (ಬ್ರಾಹ್ಮಣ ತುಳು) ರಡ್ (ಇತರರ ತುಳು) ಬೊತ್ರಿ=ಬೇಡ(ಬ್ರಾಹ್ಮಣ ತುಳು) ಬೊಡ್ಚಿ=ಬೇಡ (ಇತರರ ತುಳು). ಈ ವ್ಯತ್ಯಾಸವೆಲ್ಲಾ ಕೆಲವೇ ಪದಗಳಿಗೆ ಮೀಸಲು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?
  • ತುಳು ಎಂಬ ಕನ್ನಡ ಮಣ್ಣಿನ ನುಡಿ!
  • ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
  • ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ
  • ಕನ್ನಡ
Syndicate content

ಲೇಖಕರು

ಅರವಿಂದ್'s picture

ಪೂರ್ಣ ಹೆಸರು
ಅಭಿಮಾನಿ ಹುಡುಗ

ಪರಿಚಯ

ನಮಸ್ಕಾರ ಗೆಳೆಯರೆ,

ನಾನು ಅರವಿಂದ್, ಕನ್ನಡಿಗ, ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವವ. ನಾನಿರುವುದು ಬೆಂಗಳೂರಿನ ರಾಜಾಜಿನಗರದ ೨ನೇ ಹಂತದಲ್ಲಿ ನನ್ನ ವಾಸ. ನಾನು ವೃತ್ತಿಯಲ್ಲಿ ಹಣಕಾಸಿನ ಕಿರಿಯ ಅಧಿಕಾರಿಯಾಗಿದ್ದು, ಬೆಂಗಳೂರಿನ ಖಾಸಗಿ ಸಂಸ್ಠೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.

ನನ್ನ ಹವ್ಯಾಸಗಳು : ಕವನ, ಲೇಖನ ಬರೆಯುವುದು, ಅಂತರ್ಜಾಲದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿಯುವುದು.

ನಿಮ್ಮೆಲ್ಲರಿಗೂ ನನ್ನ ಹುತ್ಪೂರ್ವಕ ಅಭಿನಂದನೆಗಳು.

ಇಂತಿ ನಿಮ್ಮವ
ಅರವಿಂದ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 144 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator