May 2, 2012 - 9:26pm
ಹತ್ತೂರ ಸರದಾರ ಪತ್ತು ಪೀತಾಂಬರ
ತೊಟ್ಟು ಗತ್ತಾಗಿ ಕುದುರೆ ಹತ್ತಿ ..
.
ಬಾಣ ಬಿರುಸಿನ ಜೊತೆಯಾಗಿ
ಗೆಲುವಿನ ನಗೆ ಬೀರುತ್ತಾ ಹೊರಟಿರಲು......
.
ದಾರಿಯಲಿ ಸುತ್ತೂರ ಜನ ನೆರೆದಿದ್ರು
ನೋಡಾಲು ಅರಸನ ಮೆರವಣಿಗೆ...
ಕಹಳೆಕೊಂಬು, ಬಾಜಭಜಂತ್ರಿ ಜೊತೆ
ಬಹುಪರಾಕ್ ಹೇಳುತ್ತಾ ನಡೆದಿದ್ರು
ಬಾಲ ಬಡುಕರು ಜೊತೆಯಾಗಿ ......
ಇಂತಿಪ್ಪ ದೊಂಬರಾಟ ಚಿತ್ತೈಸಿರಲು ,
ಅರಸನ ವೈಭೋಗ
ಕಂಡ ದೈವ ನಾಚಿತ್ತು...
ನಲುಗಿತ್ತು ಜನಹಿತ ಅರಸೊತ್ತಿಗೆಯ ಹಿಡಿತದಲ್ಲಿ .....
ಕಮಲಬೆಲಗೂರ್.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅರಸನ ಮೆರವಣಿಗೆ.:ಅಂದಿಗೂ -ಇಂದಿಗೂ ಅದೇ ಸ್ಥಿತಿ ಅದೇ ವ್ಯಥೆ:((???
ಅಂದಿಗೂ (ಅರಸ) ಇಂದಿಗೂ(ಜನ ನಾಯಕರು) ಅದೇ ಸ್ಥಿತಿ ಅದೇ ವ್ಯಥೆ...:((
ಆದರೆ ಇಂದು ಬಾಲ ಬಡುಕರು ಎಲ್ಲಿ ಹಸಿರು ಕಾಣಿಸುತ್ತೋ ಅಲ್ಲಿಗೆ ಸ್ಥಳ ಬದಲಾಯಿಸುವರು ನಾಮ ಬದಲು ಘೋಷಣೆ ಮಾತ್ರ ಅದೇ ಸವಕಲು..:(((
ಪುಟ್ಟ ಬರಹದಲಿ ಚೆನ್ನಾಗಿ ಬರೆದಿರುವಿರಿ ಪ್ರಜೆಗಳ ದೌರ್ಭಾಗ್ಯವನ್ನ.
ಕೆಲವೇ ಘಂಟೆಗಳ ಅಂತರದಲ್ಲಿ ಎಸ್ಟೆಲಾ ಬರಹ ಬರ್ವಿರಿ ನೀವು.,..
ಅದು ನನಗೆ !!!..??
>>> ಜಾಸ್ತಿ ಕೆಲ್ಸಾ ಒಟ್ಟಿಗೆ ಅಥವಾ ಒಂದರ ಹಿಂದೆ ಒಂದು ಶುರು ಹಚ್ಚಿಕೊಂಡಾಗ ಪ್ರತಿಭೆ ಮಂಕು ಆಗ ಬಹುದು ಎನ್ನವುದೂ ನನ್ನ ಭಾವನೆ..
ನೀವ್ ಏನಂತೀರಾ?...
ಶುಭವಾಗಲಿ...
ಉ: ಅರಸನ ಮೆರವಣಿಗೆ.:ಅಂದಿಗೂ -ಇಂದಿಗೂ ಅದೇ ಸ್ಥಿತಿ ಅದೇ ವ್ಯಥೆ:((???
ತಮ್ಮ ಅತ್ಯಮೂಲ್ಯ ಸಲಹೆಗಳಿಗೆ ಸ್ವಾಗತ .ಸಂಪದ ಬ್ಲಾಗ್ನಲ್ಲಿ ನನ್ನ ಆಲೋಚನೆಗಳಿಗೆ ಸಾಕಾರ ರೂಪ ಕೊಡುವ ಆತುರದಲ್ಲಿ ಈ ಬಗ್ಗೆ ಗಮನಹರಿಸಲಾಗಿಲ್ಲ ಕ್ಶಮೆ ಇರಲಿ . ವಂದನೆಗಳು.
ಉ: ಅರಸನ ಮೆರವಣಿಗೆ.....
ಕಮಲಾ ಅವರೆ,
ನಿಮ್ಮ ಕವಿತೆ ಚೆನ್ನಾಗಿ ಮೂಢಿ ಬಂದಿದೆ. ಸಪ್ತಗಿರಿಯವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ನನಗೆ ಜಿ.ಎಸ್. ಶಿವರುದ್ರಪ್ಪನವರ "ನುಡಿ ಕಿಡಿ" ಕವನ ಸಂಕಲನದ ಒಂದು ಚುಟುಕು ನೆನಪಿಗೆ ಬಂತು.
ಜನ ಸ್ವಾತಂತ್ರ್ಯಕ್ಕಾಗಿ ಎಷ್ಟೇ ಹೋರಾಡಿದರೂ,
ಹೊಸ ನಾಯಕನನ್ನಲ್ಲದೆ ಬೇರೇನನ್ನೂ ಪಡೆಯುವುದಿಲ್ಲ.
ಉ: ಅರಸನ ಮೆರವಣಿಗೆ.....
ಧನ್ಯವಾದಗಳು . ತಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ .
ಉ: ಅರಸನ ಮೆರವಣಿಗೆ.....
ಅರ್ಥವತ್ತಾದ ಕವನ ಚೆನ್ನಾಗಿದೆ ಕಮಲ ಅವರೆ,
ರಾಮಮೋಹನ
ಉ: ಅರಸನ ಮೆರವಣಿಗೆ.....
ಕವನ ಚೆನ್ನಾಗಿದೆ.
ಉ: ಅರಸನ ಮೆರವಣಿಗೆ.....
ಧನ್ಯವಾದಗಳು ಪ್ರೇಮ ಅವರೇ .
ಉ: ಅರಸನ ಮೆರವಣಿಗೆ.....
ಧನ್ಯವಾದಗಳು ರಾಮಮೋಹನ ರವರೆ .
ಉ: ಅರಸನ ಮೆರವಣಿಗೆ.....
ಅರಸನಿಗೆಕೊ ಕಳವಳ
ನಿಮ್ಮ ಕವನ ಕಂಡು,
ಸುಪರ್,
ಪದಗಳ ಜೊಡಣೆ ಚೆನ್ನಾಗಿದೆ,
ಉ: ಅರಸನ ಮೆರವಣಿಗೆ.....
ವಂದನೆಗಳು ಅಶೋಕ್ .