September 6, 2011 - 10:37am
ಬುದ್ದಿ ವಿವೇಕಗಳನು ಅಪಹರಣ ಮಾಡಿ
ಮನವ ಅಧಃಪತನದ ದಾರಿಯಲಿ ದೂಡಿ
ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ
ಮನುಜರ ಬುದ್ದಿಯ ಕೆಡೆಸಿಹುದು ಕದಡಿ
ಕಾಮ,ಕ್ರೋಧ,ಮದ,ಮಾತ್ಸರ್ಯ, ಲೋಭ
ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು
ಸಾಧನೆಯ ಹಾದಿಯಲಿ ಶತ್ರುಗಳೆನಿಸಿಹುದು
ಇವುಗಳನು ನಿಗ್ರಹಿಸೆ ಅಭ್ಯಾಸ ಬೇಕಿಹುದು
ಅರಿಷಡ್ವರ್ಗಗಳ ಮಾಯೆಯನು ಜಯಿಸಿಬೇಕು ಮನಸು
ನಮ್ಮೆಲ್ಲರನು ಸರಿದಾರಿಯಲಿ ಶ್ರೀ ನರಸಿಂಹ ನೀ ನಡೆಸು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ನಿತ್ಯ ಸತ್ಯ.
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ಧನ್ಯವಾದಗಳು ನಾಗರಾಜ್ ರವರೇ
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
<<ಬುದ್ದಿ ವಿವೇಕಗಳನು ಅಪಹರಣ ಮಾಡಿ
ಮನವ ಅಧಃಪತನದ ದಾರಿಯಲಿ ದೂಡಿ
ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ
ಮನುಜರ ಬುದ್ದಿಯ ಕೆಡೆಸಿಹುದು ಕದಡಿ
ಕಾಮ,ಕ್ರೋದ,ಮದ,ಮಾತ್ಸರ್ಯ, ಲೋಭ
ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು
ಸಾದನೆಯ ಹಾದಿಯಲಿ ಶತೃಗಳೆನಿಸಿಹುದು
ಇವುಗಳನು ನಿಗ್ರಹಿಸೆ ಅಭ್ಯಾಸ ಬೇಕಿಹುದು
ಅರಿಷಡ್ವರ್ಗಗಳ ಮಾಯೆಯನು ಜಯಿಸಿಬೇಕು ಮನಸು
ನಮ್ಮೆಲ್ಲರನು ಸರಿದಾರಿಯಲಿ ಶ್ರೀ ನರಸಿಂಹ ನೀ ನಡೆಸು>>
ಬುದ್ಧಿ
ಕ್ರೋಧ,
ಸಾಧನೆಯ
ಶತ್ರುಗಳೆನಿಸಿಹುದು
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ಬುದ್ದಿಯನ್ನು ತಿದಿದಕೊಳ್ಳುವ ಅವಕಾಶ ನಮಗಿರುವುದರಿಂದ ಅದು ಸಾದನೆಗೆ ಶತ್ರುವಾಗುವುದಿಲ್ಲ ಎಂಬುದು ನನ್ನ ಭಾವನೆ , ಬುದ್ದಿಯಿಂದಲೇ ಮನಸ್ಸನ್ನು ಸರಿ ದಾರಿಯಲ್ಲಿ ಇರಿಸಬೇಕು ಅಲ್ಲವೆ, ಪ್ರತಿಕ್ರಿಯೆಗೆ ಧನ್ಯವಾದಗಳು ಅನು ಹೆಗ್ಡೆ ರವರೇ
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ಇಲ್ಲಿ ನಾನು ತಾವು ಬಳಸಿರುವ ನಾಲ್ಕು ಪದಗಳಲ್ಲಿನ ತಪ್ಪುಗಳನ್ನು ತಿದ್ದಿ, ತಮಗೆ ಒಪ್ಪಿಸಿದ್ದೆ ಅಷ್ಟೇ.
:)
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ತಮ್ಮ ಸಲಹೆಯಂತೆ ಪರಿಶೀಲಿಸಿ ತಿದ್ದುಪಡಿ ಮಾಡಿರುತ್ತೇನೆ, ಧನ್ಯವಾದಗಳೊಂದಿಗೆ