ಈಗಿನಂತೆ 4 ಸದಸ್ಯರು ಮತ್ತು 65 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸಮಯದ ಹಕ್ಕಿಯ ಹೆಗಲೇರಿ...
addoor's picture
ಅಡ್ಡೂರು ಕೃಷ್ಣ ರಾವ್
20
Feb
2012
ಲೇಖನ

 

ಕುಂದಾಪುರದಲ್ಲಿ ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ನಾನು ಕೇಳಿದ ಪ್ರಶ್ನೆ: "ನೀವು ಯಾವ ವಿಷಯದ ಪರಿಣತರಾಗ...

ಪ್ರತಿಕ್ರಿಯೆಗಳು: 10
ಹಿಟ್ಸ್ : 336
ಸಂಪದ ಹಾಗು ನೀವು
hpn's picture
ಹರಿ ಪ್ರಸಾದ್ ನಾಡಿಗ್
28
Jan
2011
ಬ್ಲಾಗ್ ಬರಹ

ಈಗಷ್ಟೆ ಮಂಗಳೂರು ತಲುಪಿದೆ.

ನಾಳೆ ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಂಪದವನ್ನು ಕುರಿತು ಮಾತನಾಡಲು ನನ್ನನ್ನು ಆಮಂತ್ರಿಸಿದ್ದಾರೆ.

 

ಸಂಪದ ಹೇಗೆ...

ಪ್ರತಿಕ್ರಿಯೆಗಳು: 26
ಹಿಟ್ಸ್ : 1,113
ಹೊಸ ವರ್ಷದ ಶುಭಾಶಯಗಳು!
hpn's picture
ಹರಿ ಪ್ರಸಾದ್ ನಾಡಿಗ್
01
Jan
2012
ಲೇಖನ

ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ಕನ್ನಡದ ಏಳಿಗೆಯಾಗಲಿ.

ಪ್ರತಿಕ್ರಿಯೆಗಳು: 8
ಹಿಟ್ಸ್ : 229
ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ
ramaswamy's picture
ಡಿ.ಎಸ್.ರಾಮಸ್ವಾಮಿ
21
Jun
2010
ಪುಟ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .

 

ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್....

ಪ್ರತಿಕ್ರಿಯೆಗಳು: 12
ಹಿಟ್ಸ್ : 977
ಸವಿ ಸವಿ ನೆನಪು
suresh nadig's picture
ಸುರೇಶ್ ನಾಡಿಗ್
10
May
2011
ಲೇಖನ

ಏಯ್ ಇದು ನಾನು ಓದಿದ್ದು ಶಾಲೆ ಕಣೇ, ಇವರು ನಮ್ಮ ಮೇಸ್ಟ್ರು, ಅದೇ ಅವತ್ತು ಹೇಳಿರಲಿಲ್ಲವಾ, ಬಹಳ ಹೊಡಿತಾ ಇದ್ರು ಅಂತ, ಇವನೇ, ಅದೇ, ನಾನು ಶ್ರೀಧನ್ ಅಂತಿರ್ತಿನಲ್ಲಾ, ಇಲ್ಲೇ ಕಣೇ...

ಪ್ರತಿಕ್ರಿಯೆಗಳು: 2
ಹಿಟ್ಸ್ : 572
ಕೃಷಿ ಸಂಪದ ನಾಲ್ಕನೇ ಸಂಚಿಕೆ, ಜನವರಿ ೨೦೧೦
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
01
Jan
2010
ಪುಟ

ಈ ಸಂಚಿಕೆಯಲ್ಲಿ:

  • ನರೂರಿನ ಹಕ್ಕಿಗಳು
  • ಕಾಯಕದಲ್ಲಿ ಹಣ್ಣಾದವರು: ಹೆಗಡೆ ಸುಬ್ಬಣ್ಣ
  • ಅಕೇಸಿಯಾ ದೂರು, ಕಳವೆ ಅಂಕಣ
  • ವಿಶ್ವ ತುಳು ಸಮ್ಮೇಳನ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,353
ಕೃತಜ್ಞತಾ ದಿನಾಚರಣೆ
gvmt's picture
26
Nov
2005
ಬ್ಲಾಗ್ ಬರಹ
೧೬೧೯ರ ಡಿಸೆಂಬರ್ ತಿಂಗಳು. ಹೊಸ ಬದುಕನ್ನರಸುತ್ತ ಇಂಗ್ಲೆಂಡಿನಿಂದ ಹೊರಟ ಕೆಲವು ಕುಟುಂಬಗಳನ್ನು ಹೊತ್ತ ನಾವೆಯೊಂದು ಅಮೇರಿಕೆಯ ದಡ ಮುಟ್ಟಿತು. ಛಳಿಗಾಲ. ನೂರಾರು ತಲೆಮಾರುಗಳಿಂದ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,534
ತೋಟದಾಚೆಯ ತೋಡು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
27
Jan
2012
ಬ್ಲಾಗ್ ಬರಹ
ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ...
ಪ್ರತಿಕ್ರಿಯೆಗಳು: 4
ಹಿಟ್ಸ್ : 269
ಮುಕೇಶ್, ಹಿಂದೀ ಚಲನಚಿತ್ರರಂಗದ ಹಿನ್ನೆಲೆ ಗಾಯಕ - ಒಂದು ಕಿರುಪರಿಚಯ
Iynanda Prabhukumar's picture
ಐನಂಡ ಪ್ರಭುಕುಮಾರ್
27
Aug
2011
ಲೇಖನ

ಇಂದಿಗೆ ಹಿಂದೀ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರಾದ...

ಪ್ರತಿಕ್ರಿಯೆಗಳು: 17
ಹಿಟ್ಸ್ : 265
2011 ಶುಭಾಶಯಗಳು
bhaashapriya's picture
bhaashapriya CS
30
Dec
2010
ಲೇಖನ

ಹೊಸ ವರ್ಷ ತರಲಿ ಎಲ್ಲರಿಗೂ ಹರುಷ, ಸಂತಸವಿರಲಿ ಸಂಭ್ರಮವಿರಲಿ.
ಎಲ್ಲರಿಗೂ  ನನ್ನ ಶುಭಾಶಯಗಳು
-- ಭಾಷಪ್ರಿಯ

ಪ್ರತಿಕ್ರಿಯೆಗಳು: 7
ಹಿಟ್ಸ್ : 928

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಅರುಂಧತೀ ದರ್ಶನ

ಅರುಂಧತೀ ದರ್ಶನ

ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸಿನೊಳಗೇ ನಕ್ಕಿದ್ದೇನೆ ಕೂಡ!

ಹಾಗಂತ ನನ್ನ ಸಂಪ್ರದಾಯಗಳನ್ನ ಕಂಡ್ರೆ ಮೂಗುಮುರಿಯೋವ್ನು ಅಂತ ಅಂದ್ಕೋಬೇಡಿ. ಕೆಲವು ಸಂಪ್ರದಾಯಗಳು ಅವುಗಳ ಒಳ ಅರ್ಥಕ್ಕೆ ಚೆನ್ನು. ಇನ್ನು ಕೆಲವು, ಅವು ನಡೆಯುವ ಸೊಬಗಿಗೆ ಚೆನ್ನು. ಮತ್ತೆ ಕೆಲವು, ಯಾರೋ ಹಿರಿಯರಿಗೋ, ಬೇಕಾದವರಿಗೋ ಹಿತವಾಗುತ್ತೆ ಅನ್ನೋ ಕಾರಣಕ್ಕೆ ಚೆನ್ನು. ಅಂತೂ ಯಾರಿಗೂ ತೊಂದ್ರೆ ಆಗ್ದೇ ಇದ್ರೆ ಕೆಲವು ಸಂಪ್ರದಾಯಗಳನ್ನ ಹಾಗೇ ಇಟ್ಕೋಬಹುದು. ಇಲ್ಲ ಇದ್ಯಾಕಪ್ಪ ಅಂತ ಬಿಟ್ಬಿಡಬಹುದು. ಅವರವರ ಇಷ್ಟ ಅನ್ನಿ.

ಇರ್ಲಿ. ಅದೇನೋ ಎಲ್ಲಿಂದಲೋ ಎಲ್ಲೋ ಹೋದೆ. ಇನ್ನು ಅರುಂಧತೀ ದರ್ಶನಕ್ಕೆ ಬರೋಣ. ಪುರೋಹಿತರು ಮದುವೆಯ ಕಲಾಪಗಳ ನಡುವೆ ಗಂಡು ಹೆಣ್ಣಿಗೆ ಹೀಗೆ ಅರುಂಧತೀ ದರ್ಶನ ಮಾಡಿಸೋದರ ಹಿಂದೆ ಒಂದು ಆಸಕ್ತಿ ಮೂಡಿಸುವ ವಿಷಯವಿದೆ. ಪುರಾಣಗಳಲ್ಲಿ ವಸಿಷ್ಟ ಅರುಂಧತಿಯರ ಹೇಗೆ ಅವರು ಗಂಡ ಹೆಂಡತಿ ಒಬ್ಬರಿಗೊಬ್ಬರು ಇಂಬಾಗಿದ್ದರು, ಎಂತಹ ಅನುರೂಪ ದಾಂಪತ್ಯ ಅವರದ್ದು ಅನ್ನುವ ಬಗ್ಗೆ ಹೇಳಿದ್ದಾರಂತೆ. ಹಾಗಾಗಿ, ಆಕಾಶದಲ್ಲಿ ಇರುವ ಸಪ್ತರ್ಷಿ ಮಂಡಲದಲ್ಲಿ ಏಳು ಋಷಿಗಳನ್ನು ಗುರ್ತಿಸುವುದಿದ್ದರೂ, ಅವರಲ್ಲಿ ವಸಿಷ್ಠರಿಗೆ ಮಾತ್ರ ಜೊತೆಯಲ್ಲೇ ಪತ್ನಿ ಅರುಂಧತಿಯೂ ಇದ್ದಾಳೆ. ಇಂತಹ ಪತಿಪತ್ನಿಯರನ್ನು ಆಗಸದಲ್ಲಿ ನೋಡಿ, ಮದುವೆಯಾಗುತ್ತಿರುವ ವಧುವರರೂ ಹಾಗೇ ಬಾಳಲಿ ಅನ್ನುವ ಹಾರೈಕೆಯೇ ಇದರ ಮೂಲ ಉದ್ದೇಶ.

ಹಾಗಿದ್ದರೆ ನಾನು ನಕ್ಕಿದ್ದು ಏಕೆಂದಿರಾ? ಇನ್ನೇನು ಮಾಡೋಣ ಸ್ವಾಮೀ? ಹಾಡು ಹಗಲೇ ಮದುವೆ ಛತ್ರದ ಒಳಗೋ ಹೊರಗೋ ಎಲ್ಲೋ ನಿಂತ ಜೋಯಿಸರು ಎಲ್ಲೋ ಒಂದು ಕಡೆ ಕೈತೋರಿ, ಅರುಂಧತಿಯನ್ನು ನೋಡಿ ಎಂದಾಗ ನಗು ಬರದೇ ಇರುತ್ತದೆಯೇ? ತೋರಿಸುವ ಪುರೋಹಿತರಲ್ಲಿ ಅರ್ದ ಜನಕ್ಕೆ ಅರುಂಧತಿ ಆಕಾಶದಲ್ಲಿ ಎಲ್ಲಿದೆ ಅಂತ ಗೊತ್ತಿರೋದಿಲ್ಲ. ಬೆಪ್ಪು ಬೆಪ್ಪಾಗಿ ನೋಡುವ ಮದುಮಕ್ಕಳಲ್ಲಿ ಮುಕ್ಕಾಲು ಪಾಲು ಜನಕ್ಕೆ ವಸಿಷ್ಠನೂ ಗೊತ್ತಿರೋದಿಲ್ಲ ಅರುಂಧತಿಯೂ ಗೊತ್ತಿರೋದಿಲ್ಲ. ಅಷ್ಟೇ ಅಲ್ಲ, ಬೇಕಾಗೂ ಇರೋದಿಲ್ಲ!

ಆದ್ರೆ, ಒಂದುವೇಳೆ ನಿಮಗೆ ಅರುಂಧತೀ ದರ್ಶನ ನಿಜವಾಗಿ ಮಾಡ್ಬೇಕಂದ್ರೆ ನಾನು ಮಾಡಿಸ್ತೀನಿ ಕೇಳಿ. ಬಹಳ ಕಷ್ಟ ಏನಿಲ್ಲ!


                                                       (ಕೆಳಗಿನ ಚಿತ್ರ: ಆಕಾಶದಲ್ಲಿ ಸಪ್ತರ್ಷಿ ಮಂಡಲ - ಮೇಲೆ ಚಿಟಕಿಸಿದರೆ ಪೂರ್ತಿ ಚಿತ್ರ ತೆರೆದುಕೊಳ್ಳುತ್ತೆ.)

 

 

 

 

 

 

 

 

 

 

 

 

 

 

 

 

 

 

 

 

 

ಕರ್ನಾಟಕದಲ್ಲಿ ವರ್ಷದ ಆರು ತಿಂಗಳು (ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ) ಒಂದು ಕತ್ತಲ ರಾತ್ರಿಯಲ್ಲಿ ಹೊರಕ್ಕೆ ಹೋಗಿ, ಉತ್ತರ ದಿಕ್ಕಿನಲ್ಲಿ ನೋಡಿದರೆ, ನಿಮಗೆ ಸಪ್ತರ್ಷಿ ಮಂಡಲವನ್ನು ಗುರುತಿಸೋದು ಬಹಳ ಸುಲಭ. ಆ ಸುತ್ತಮುತ್ತಲಿನಲ್ಲಿ, ನಾಲ್ಕು ನಕ್ಷತ್ರಗಳ ಚೌಕೋನ, ಮತ್ತೆ ಅದರ ಬಾಲದಂತಿರುವ ಮೂರು ನಕ್ಷತ್ರಗಳು, ಒಟ್ಟಿನಲ್ಲಿ ಒಂದು ತರಹ ಆಕಾಶದ ಗಾಳಿಪಟ ಅನ್ನಿ, ಚೆನ್ನಾಗಿಯೇ ಎದ್ದು ಕಾಣುತ್ತವೆ. ಇನ್ನುಳಿದ ತಿಂಗಳುಗಳಲ್ಲೂ ಕಾಣುತ್ತೆ, ನೀವು ಬೆಳಗಿನ ಜಾವ ಎದ್ದು ನೋಡಬೇಕಾಗಬಹುದು ಅಷ್ಟೇ. ಒಂದುವೇಳೆ ನೀವೇನಾದರೂ ೪೦ ಡಿಗ್ರೀ ಅಕ್ಷಾಂಶಕ್ಕೂ ಉತ್ತರದಲ್ಲಿದ್ದರೆ, ನಿಮಗೆ ಇದು ವರ್ಷ ಪೂರ್ತಿ , ರಾತ್ರಿಯ ಯಾವುದೇ ಹೊತ್ತಲ್ಲಾದರೂ ಕಾಣುತ್ತೆ. ಹಾಗೇ ನೀವು ದಕ್ಷಿಣಾರ್ಧಗೋಳದಲ್ಲಿ ೪೦ ಡಿಗ್ರಿಗೂ ದಕ್ಷಿಣದಲ್ಲಿ ಇದ್ದರೆ ನೀವು ಇದನ್ನ ನೋಡೋ ಆಸೆಯನ್ನ ಬಿಡಿ.

ಅಂದಹಾಗೆ ಸಪ್ತರ್ಷಿಮಂಡಲ ಅನ್ನೋದು ಭಾರತದಲ್ಲಿ, ಸಾವಿರಾರು ವರ್ಷಗಳ ಹಿಂದೆಯೇ ಕೊಟ್ಟಿರೋ ಹೆಸರು. ಬೇರೆ ಕಡೆಗಳಲ್ಲಿ ಇದಕ್ಕೆ Big Dipper ಎಂಬ ಹೆಸರಿದೆ. ಆದರೆ, ಇದೇ ಒಂದು ತಾರಾಪುಂಜ (constellation) ಅಂತ ಪರಿಗಣಿಸೋದಿಲ್ಲ. ಬದಲಿಗೆ ಇದು Ursa Major (Great Bear) ಎಂಬ ತಾರಾ ಪುಂಜದ ಭಾಗ. ಆದರೆ Ursa Major ನ ಉಳಿದ ನಕ್ಷತ್ರಗಳೆಲ್ಲ ಇನ್ನೂ ಕಡಿಮೆ ಪ್ರಕಾಶವನ್ನು ಹೊಂದಿರೋದ್ರಿಂದ, ಅಲ್ಲಿ ಈ ಸಪ್ತರ್ಷಿ ಮಂಡಲಕ್ಕೆ ಸೇರೋ ಏಳು ನಕ್ಷತ್ರಗಳೇ ಎದ್ದು ಕಾಣುತ್ತವೆ ಅನ್ನಿ.

ಗಾಳಿಪಟದ ಬಾಲದ ತುಂದಿಯಿಂದ ಹೋದಿರಾದರೆ, ನಕ್ಷತ್ರಗಳ ಹೆಸರು ಹೀಗಿವೆ: ಮರೀಚಿ, ವಸಿಷ್ಟ, ಆಂಗೀರಸ, ಅತ್ರಿ, ಪುಲಸ್ತ್ಯ, ಪುಲಹ ಮತ್ತು ಕ್ರತು. ಈ ಕೊನೆಯ ಎರಡು ನಕ್ಷತ್ರಗಳಿವೆಯಲ್ಲ, ಪುಲಹ (ಚಿತ್ರದಲ್ಲಿ ಇದರ ಪಕ್ಕ M ಎಂಬ ಅಕ್ಷರ ಇದೆ ನೋಡಿ) -ಮತ್ತು-ಕ್ರತು (ಪುಲಹ ನಿಂದ ನೇರ ಕೆಳಗಿನ ನಕ್ಷತ್ರ ಇದು) , ಅವುಗಳನ್ನ pointers, ಅಂದರೆ ದಿಕ್ಸೂಚಿ ಅಂತಲೂ ಅಂತಾರೆ. ಯಾಕಂದರೆ, ಈ ಎರಡು ನಕ್ಷತ್ರಗಳನ್ನ ಸೇರಿಸಿ ಕೆಳಕ್ಕೆ ಹೋದರೆ ನಿಮಗೆ ಧ್ರುವ ನಕ್ಷತ್ರ ಸಿಗುತ್ತೆ! ಚಿತ್ರದ ಕೆಳ ಮೂಲೆಗೆ ಹತ್ತಿರವಾದ ನಕ್ಷತ್ರವೇ ಧ್ರುವ (Pole Star). ಇದು ಯಾಕೆ ಧ್ರುವ ಅನ್ನೋದರ ಬಗ್ಗೆ ಇನ್ನೊಮ್ಮೆ ಮಾತಾಡೋಣ. ಸದ್ಯಕ್ಕೆ, ಇದು ಎಲ್ಲಿನಿಂದ ನೋಡಿದರೂ ನಿಜ-ಉತ್ತರದಿಕ್ಕಿನಲ್ಲೇ (True-North) ಇರುತ್ತೆ ಅಂತ ತಿಳಿದರೆ ಸಾಕು.

ಅರುಂಧತೀನ ಬಿಟ್ಟೇ ಬಿಟ್ಟೆನಲ್ಲ ಅನ್ಬೇಡಿ. ಚಿತ್ರದಲ್ಲಿ ಒಂದು ನಕ್ಷತ್ರದ ಸುತ್ತ ಒಂದು ಬಿಳೀ ಆವರಣ ಇದೆಯಲ್ಲ, ಅದೇ ನಕ್ಷತ್ರ ವಸಿಷ್ಠ. ಗುರುತಿಸೋಕೆ ಸುಲಭವಾಗಲಿ ಅನ್ನೋ ಕಾರಣಕ್ಕೆ ಹಾಗೆ ತೋರಿಸಿದೇನೆ. ಅಲ್ಲೇ ಕಣ್ಣಿಟ್ಟು ನೋಡಿದರೆ (ಇಲ್ಲಿ ಚಿತ್ರದಲ್ಲಿ ಅಲ್ಲ ಸ್ವಾಮೀ, ಆಕಾಶದಲ್ಲಿ ವಸಿಷ್ಠನನ್ನು ಗುರುತಿಸಿದ ಮೇಲೆ, ಅಲ್ಲಿ!) ಕೆಳಗೇ ಇನ್ನೊಂದು ಬಹಳ ಮಬ್ಬಾದ ಒಂದು ನಕ್ಷತ್ರ ಕಾಣುತ್ತೆ. ಹೇಗೆ ಅನ್ನೋದಕ್ಕೆ ಇಲ್ಲಿ ಕ್ಲಿಕ್ಕಿಸಿ, ವಿಕಿಪೀಡಿಯಾದಲ್ಲಿ ಇರುವ ಚಿತ್ರ ಇದನ್ನ ಚೆನ್ನಾಗಿ ತೋರಿಸಿದೆ.

ಅಂದರೆ, ಅರುಂಧತಿ. ಜೀವನದಲ್ಲಿ ಹೇಗೋ, ಆಗಸದಲ್ಲಿಯೂ ವಸಿಷ್ಠನ ಪಕ್ಕದಲ್ಲೇ ಅರುಂಧತಿ ಇದ್ದಾಳೆ ಅನ್ನುವುದೇ ಇಲ್ಲಿಯ ಒಂದು ಹೆಚ್ಚಾಯ. ಇನ್ನೂ ಸರಿಯಾಗಿ ನೋಡಿದರೆ, ಹೀಗೆ ಒಂದು ಪಕ್ಕದಲ್ಲೇ ಇರುವ ನಕ್ಷತ್ರ ಇದೆ ಎನ್ನುವ ಕಾರಣಕ್ಕೇ, ಈ ಬಾಲಂಗೋಚಿಯ ನಡುವಿನ ನಕ್ಷತ್ರಕ್ಕೆ ವಸಿಷ್ಠ ಎಂಬ ಹೆಸರನ್ನಿಟ್ಟರು ಅಂತ ಊಹಿಸಬಹುದು.

ಇನ್ನೊಂದು ವಿಶೇಷ ಇದೆ ಇಲ್ಲಿ - ಅದೊಂದು ಹೇಳಿ ಈ ಹರಟೆಯನ್ನ ಮುಗಿಸಿಬಿಡುವೆ. ಆಕಾಶದಲ್ಲಿ ಅಕ್ಕ ಪಕ್ಕದಲ್ಲಿ ಕಾಣುವ ನಕ್ಷತ್ರಗಳು ನಿಜವಾಗಿ ಒಂದಕ್ಕೊಂದು ಬಹಳ ದೂರ (ನೂರಾರು ಸಾವಿರಾರು ಬೆಳಕಿನವರ್ಷದಷ್ಟೂ) ಇರಬಹುದು. ಅವು ನಾವು ನೋಡುತ್ತಿರುವ ಎಡೆಯಿಂದ ಒಂದೇ ಸಾಲಿನಗುಂಟ ಇರುವುದರಿಂದ ಹಾಗೆ ಪಕ್ಕಪಕ್ಕದಲ್ಲಿ ಕಾಣುತ್ತಿರುತ್ತವೆ, ಸಾಮಾನ್ಯವಾಗಿ. ಆದರೆ, ಇಲ್ಲಿ ಮಾತ್ರ ಹಾಗಲ್ಲ. ವಸಿಷ್ಠ (Mizar) ಮತ್ತು ಅರುಂಧತಿ (Alcor), ನಿಜವಾಗಿ ಒಂದು ತಾರಾಜೋಡಿ. ಅಂದರೆ, ಸೂರ್ಯನ ಸುತ್ತ ಭೂಮಿ, ಇತರ ಗ್ರಹಗಳೂ ಸುತ್ತುವ ಹಾಗೆ, ವಸಿಷ್ಠನ ಸುತ್ತ ಅರುಂಧತಿ ಸುತ್ತುತ್ತಲಿದೆ. ಆದರೆ, ಇನ್ನೂ ಒಂದು ಹೆಚ್ಚಿನ ಗಮ್ಮತ್ತಿದೆ ಇದರಲ್ಲಿ. ಯಾಕಂದ್ರೆ, ವಸಿಷ್ಠ ಅಂತ ನಾವು ಯಾವುದಕ್ಕೆ ಹೇಳುತ್ತೀವೋ, ಅದು ಒಂದು ಜೋಡಿತಾರೆ (Binary) - ಅಂದರೆ ಎರಡು ನಕ್ಷತ್ರಗಳ ಒಂದು ಕೂಟ. ಚಿಕ್ಕ ದೂರದರ್ಶಕಗಳಲ್ಲೂ, ಇದನ್ನು ಎರಡಾಗಿ - Mizar A ಮತ್ತು Mizar B - ನೋಡಬಹುದು. ಅದೇ ರೀತಿ, ಅರುಂಧತಿ ಕೂಡ ಒಂದು ಜೋಡಿ ತಾರೆ. ಇಷ್ಟು ಸಾಲದು ಅಂತ Mizar-A ಮತ್ತು Mizar-B ಗಳು ಕೂಡ ಜೋಡಿಗಳೇ. ಇದನ್ನ ದೂರದರ್ಶಕದಲ್ಲಿ ಕಾಣೋಕಾಗೋಲ್ಲ, ಆದರೆ ವರ್ಣಪಟಲದ (Spectroscope) ಸಹಾಯದಿಂದ ಇದನ್ನ ಪತ್ತೆ ಹಚ್ಚಿದ್ದಾರೆ. ಹಾಗಾಗಿ, ನಮಗೆ ಕಾಣೋ ಈ ವಸಿಷ್ಠ-ಅರುಂಧತಿಯಲ್ಲಿ ಇರೋದು ಆರು ತಾರೆಗಳ ಒಂದು ಕೂಟ!

ಇನ್ಯಾಕೆ ತಡ? ಕತ್ತಲಾದ ಮೇಲೆ ಹೊರಗಡೆ ಹೋಗಿ ನೋಡ್ತೀರಲ್ಲ? ಯಾರಾದ್ರೂ ಎಲ್ಲೋ ತೋರಿಸಿ, ನೋಡಿ ಇದು ವಸಿಷ್ಠ , ಇದು ಅರುಂಧತಿ ಅಂತ ತಪ್ಪು ತಪ್ಪಾಗಿ ತೋರಿಸಿದರೆ ತಿಳಿಸಿ ಹೇಳ್ತೀರಲ್ಲ?

-ಹಂಸಾನಂದಿ

Average: 4.3 (3 votes)
578 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
gopaljsr's picture
03
Aug
2011
10:34

ಉ: ಅರುಂಧತೀ ದರ್ಶನ

ಉತ್ತಮ ಮಾಹಿತಿಗೆ ಧನ್ಯವಾದಗಳು

Jayanth Ramachar's picture
03
Aug
2011
11:36

ಉ: ಅರುಂಧತೀ ದರ್ಶನ

ನಿಜವಾಗಿಯೂ ಅರುಂಧತಿ ನಕ್ಷತ್ರ ತೋರಿಸುವ ಕಾರಣ ತಿಳಿದಿರಲಿಲ್ಲ. ಉತ್ತಮ ಮಾಹಿತಿಗೆ ಧನ್ಯವಾದಗಳು

sathishnasa's picture
03
Aug
2011
12:18

ಉ: ಅರುಂಧತೀ ದರ್ಶನ

ಒಂದು ಉತ್ತಮವಾದ ಮಾಹಿತಿ ನೀಡಿದ್ದೀರಿ ಇಂದು ರಾತ್ರಿಯೆ ನೋಡಲು ಪ್ರಯತ್ನಿಸುತ್ತೇನೆ, ಧನ್ಯವಾದಗಳು

srimiyar's picture
03
Aug
2011
1:17

ಉ: ಅರುಂಧತೀ ದರ್ಶನ

ಮಾಹಿತಿಪೂರ್ಣ ಲೇಖನ. ವಂದನೆಗಳು

Chikku123's picture
03
Aug
2011
2:56

ಉ: ಅರುಂಧತೀ ದರ್ಶನ

ಒಳ್ಳೆಯ ಲೇಖನ.
ನನಗೂ ಇದು ಕುತೂಹಲಕ್ಕೆ ಹಚ್ಚುವಂತಹ ವಿಷಯವೇ.
ಎಲ್ಲರ ಮದುವೆಯಲ್ಲಿ ಹಗಲು ಹೊತ್ತಿನಲ್ಲಿ ನಕ್ಷತ್ರ ತೋರಿಸ್ತಾರೆ, ಅದೆಲ್ಲಿ ಕಾಣತ್ತೋ ದೇವ್ರೇ ಬಲ್ಲ.
ನನ್ನ ಗೆಳೆಯನ ಮದುವೆಯಲ್ಲಿ ಹೀಗೆ ತೋರಿಸ್ತಿದ್ದಾಗ ನಾನು 'ಏನೋ, ಕಾಣತ್ತೇನೋ ಅದೂ ಹಗಲು ಹೊತ್ತಲ್ಲಿ' ಅಂದಾಗ ಅವ್ನು 'ಅದು ಮದ್ವೆಯಾದೋರಿಗೆ ಮಾತ್ರ ಕಾಣೋದು' ಅಂದಿದ್ದ.

sasi.hebbar's picture
03
Aug
2011
4:50

ಉ: ಅರುಂಧತೀ ದರ್ಶನ

ಅಧ್ಭುತವಾದ ಮಾಹಿತಿ ಮತ್ತು ವಿವರಗಳು! ಸಪ್ತರ್ಷಿಗಳ ಹೆಸರುಗಳನ್ನು ಮತ್ತೆ ನೆನಪಿಸಿದ್ದೀರಾ. ಈ ಮಂಡಲವನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದವರು ಗುರುತಿಸಿದ್ದು ಈಗಲೂ ಒಂದು ಅಚ್ಚರಿಯ ವಿಚಾರ. ಜೊತೆಗೆ, ವಸಿಷ್ಠ ಮತ್ತು ಅರುಂಧತಿ ನಕ್ಷತ್ರಗಳು ಜೋಡಿ ನಕ್ಷತ್ರಗಳು ಎಂದು ನೀವು ಮಾಹಿತಿ ನೀಡಿದ ಮೇಲೆ,ಅನಿಸಿದ್ದು, ಆ ಮಾಹಿತಿ ನಮ್ಮ ದೇಶದವರಿಗೆ ಆ ಕಾಲದಲ್ಲೂ ಇತ್ತಾ? ವಸಿಷ್ಠನ ಸುತ್ತಲೂ ಅರುಂಧತಿ ಸುತ್ತುವ ವಿಚಾರವಂತೂ ತುಂಬಾ ಅರ್ಥಪೂರ್ಣ ಅನ್ನಿಸುತ್ತಿಲ್ಲವೆ? ಈ ನಕ್ಷತ್ರಗಳ ಕುರಿತು,ನಮ್ಮ ಪುರಾಣಗಳಲ್ಲಿಇನ್ನೂ ಒಂದು ಕತೆ ಇದೆ ಎಂದು ಕೇಳಿದ ನೆನಪು ಅಸ್ಪಷ್ಟವಾಗಿದೆ - ಅದೆಂದರೆ, ಯಾವುದೋ ಒಂದು ನಕ್ಷತ್ರಕ್ಕೆ ಋಷಿಯೋರ್ವರು ಪಯಣಿಸಿ, ವಾಪಸು ಬಂದದ್ದು. ಈ ಕತೆಯ ವಿವರ ಗೊತ್ತಿದ್ದರೆ ತಿಳಿಸುವಿರಾ?

hamsanandi's picture
03
Aug
2011
11:00

ಉ: ಅರುಂಧತೀ ದರ್ಶನ

ಟಿಪ್ಪಣಿಸಿದವರಿಗೆಲ್ಲ ಧನ್ಯವಾದಗಳು.

>> ಈ ಮಂಡಲವನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ದೇಶದವರು ಗುರುತಿಸಿದ್ದು ಈಗಲೂ ಒಂದು ಅಚ್ಚರಿಯ ವಿಚಾರ.
ಸಪ್ತರ್ಷಿ ಒಂದೇ ಅಲ್ಲ, ಹಲವಾರು ತಾರಾ ಪುಂಜಗಳ ಹೆಸರು ಸಾವಿರಾರು ವರ್ಷ ಹಿಂದಿನವೇ. ರಾಶಿ ಚಕ್ರದಲ್ಲಿರುವ ಮೇಷ ವೃಷಭ ಮೊದಲಾದ ಹೆಸರುಗಳು ಪಶ್ಚಿಮದಿಂದ ಭಾರತಕ್ಕೆ ಬಂದವು ಎಂದಿದ್ದರೂ, ಅವೂ ಕೂಡ ಸುಮಾರು ೨೦೦೦ ವರ್ಷಗಳ ಹಿಂದಿನಿಂದಲೇ ಬಂದಿವೆ.

ಶಶಿಧರ ಅವರೆ,

>> ವಸಿಷ್ಠ ಮತ್ತು ಅರುಂಧತಿ ನಕ್ಷತ್ರಗಳು ಜೋಡಿ ನಕ್ಷತ್ರಗಳು ಎಂದು ನೀವು ಮಾಹಿತಿ ನೀಡಿದ ಮೇಲೆ,ಅನಿಸಿದ್ದು, ಆ ಮಾಹಿತಿ ನಮ್ಮ ದೇಶದವರಿಗೆ ಆ
>> ಕಾಲದಲ್ಲೂ ಇತ್ತಾ?

ನಾವು ಯಾವುದನ್ನ ಬೈನರೀ ಎಂದು ಕರೆಯುತ್ತೇವೆಯೋ ಹಾಗಿವೆ ಅನ್ನುವ ಮಾಹಿತಿ ಅವತ್ತೇ ಇತ್ತು ಎಂದು ಖಡಾಖಂಡಿತವಾಗಿ ಹೇಳಲಾಗದು. ವಸಿಷ್ಠ ಮತ್ತು ಅರುಂಧತಿ ಕಣ್ಣಿಗೆ ಬಹಳ ಹತ್ತಿರವಾಗಿ ಕಾಣುವುದರಿಂದ ಹೀಗೆ ಹೆಸರಿಡಲಾಯಿತು ಎಂದು ತಿಳಿಯಬಹುದು.

>> ವಸಿಷ್ಠನ ಸುತ್ತಲೂ ಅರುಂಧತಿ ಸುತ್ತುವ ವಿಚಾರವಂತೂ ತುಂಬಾ ಅರ್ಥಪೂರ್ಣ ಅನ್ನಿಸುತ್ತಿಲ್ಲವೆ?

ಖಂಡಿತ! ಆದರೆ ಅದು ಬೃಹತ್ ಸಂಹಿತೆಯ ಕಾಲಕ್ಕೋ ವೇದಾಂಗ ಜ್ಯೋತಿಷದ ಕಾಲಕ್ಕೋ ಗೊತ್ತಿತ್ತು ಅಂತ ನಾವು ಇದಮಿತ್ಥಂ ಎಂದು ಹೇಳುವುದು ಕಷ್ಟ.

-ಹಂಸಾನಂದಿ

asuhegde's picture
04
Aug
2011
9:32

ಉ: ಅರುಂಧತೀ ದರ್ಶನ

ಮದುವೆಯಾಗಿ ಇಪ್ಪತ್ತೆರಡು ವರುಷ, ಎರಡು ತಿಂಗಳು ಹಾಗೂ ಇಪ್ಪತ್ತನಾಲ್ಲ್ಕು ದಿನಗಳ ನಂತರ ಅರುಂಧತಿ ದರ್ಶನ ಆಯ್ತು ನನಗೂ...!
ಧನ್ಯವಾದಗಳು!
-ಆಸು

vidyavilas's picture
04
Aug
2011
11:04

ಉ: ಅರುಂಧತೀ ದರ್ಶನ

ಮದುವೆ ಮನೆಯಲ್ಲಿ ವರನು ವಧುವಿಗೆ ದಿನದಲ್ಲಿ ನಕ್ಷತ್ರವನ್ನು ತೋರಿಸುವಾಗ ನಾವು ಗೆಳತಿಯರು ಯಾವಾಗ್ಲೂ ''ವೋ ದೇಖೊ ವೋ ಅಪನೀ ಪತ್ನಿ ಕೋ ದಿನ್ ಮೇ ತಾರೇ ದಿಖಾರಹಾ ಹೇ " ಅಂತ ಹಾಸ್ಯ ಮಾಡಿ ನಗ್ತಾ ಇದ್ವಿ. ಮುಂದೆ ನನ್ನ ಮದ್ವೆಯಲ್ಲೂ ನಮ್ಮೆಜ್ಮಾನ್ರು ಆ ನಕ್ಷತ್ರ ನನಗೆ ತೋರ್ಸೀದ್ರು
ಆವಾಗ ಅದಕ್ಕೆ ಆಚಾರ್ಯರು ಈ ನಕ್ಷತ್ರವನ್ನು ಏಕೆ ನೋಡಬೇಕು ಎಂಬ ಕಾರಣವನ್ನೂ ಹೇಳಿದ್ದರು...ಮದುವೆಯ ಸಂಭ್ರಮ ನೋಡಿ ಕಿವಿ ಮೇಲೆ ಬಿದ್ದಿರ್ಲಿಲ್ಲ ಅನ್ಸುತ್ತೆ:). ಈ ಲೇಖನ ಓದಿದ ಮೇಲೆ ಅದರ ಅರಿವಾಯಿತು...ಅದೂ ಮದುವೆಯಾಗಿ ಏಳು ವರ್ಷದ ನಂತರ....

ಜ್ಞಾನಪೂರ್ಣ ಮಾಹಿತಿಗಾಗಿ ಧನ್ಯವಾದಗಳು ಹಂಸಾನಂದಿಯವರೇ.

abdul's picture
04
Aug
2011
11:27

ಉ: ಅರುಂಧತೀ ದರ್ಶನ

ಎಂದಿನಂತೆ ಒಂದು ಮಾಹಿತಿ ಪೂರ್ಣ ಸೊಗಸಾದ ಲೇಖನ ಪುಟಿಯಿತು ಹಂಸಾ ರವರ ಕೀಲಿ ಮಣೆಯಿಂದ. ಈಗ ಅರುಂಧತಿ ನೋಡುವುದಕ್ಕಿಂತ ಹೆಚ್ಚಿನ ಉತ್ಸಾಹ ಆರುಂಧತಿ ತರುವ ಗಂಟಿನ ಕಡೆ.

thesalimath's picture
04
Aug
2011
11:49

ಉ: ಅರುಂಧತೀ ದರ್ಶನ

ಅರುಂಧತಿ ನಕ್ಷತ್ರವನ್ನು ತೋರಿಸುವುದು ಮಧುರ ದಾಂಪತ್ಯಕ್ಕಲ್ಲ. ಶಾಸ್ತ್ರದ ಹಿಂದಿನ ತಿಳಿಮೆ ಬೇರೆಯೇ ಇದೆ.

ವಶಿಷ್ಟರು ಬಹಳ ಸ್ವಾಭಿಮಾನಿಗಳಂತೆ. ಯಾವತ್ತೂ ಸಹ ಯಾರ ಮುಂದೆಯೂ ಕೈಚಾಚಿದವರಲ್ಲ. ಶಿಷ್ಯರಿಂದ ಧರ್ಬೆ ಆಸನ ಸಿದ್ಧಪಡಿಸಿಕೊಳ್ಳುವ ಸೇವೆಯನ್ನೂ ಮಾಡಿಸಿಕೊಳ್ಳುತ್ತಿರಲಿಲ್ಲವಂತೆ.
ಈ ಶಾಸ್ತ್ರದ ಅರಿಮೆ ಗಂಡ ತನ್ನ ಹೆಂಡತಿಗೆ ಆ ಜೋಡಿಯನ್ನು ತೋರಿಸಿ ನಾನೂ ವಶಿಷ್ಟರಂತೆ ಸ್ವಾಭಿಮಾನಿಯಾಗಿ ಬದುಕಬೇಕು; ಅದಕ್ಕೆ ಅರುಂದತಿ ತನ್ನ ಗಂಡನಿಗೆ ನೀಡಿದಂತೆ ನಿನ್ನ ಸಹಕಾರ ಎಂದಿಗೂ ನನಗೆ ಬೇಕು ಎಂದು ಸೂಚ್ಯವಾಗಿ ಹೇಳುವುದೇ ಆಗಿದೆ. ಮದುವೆಯ ಸಮಯದಲ್ಲಿ ಖಗೋಳ ಶಾಸ್ತ್ರ ಬೋಧಿಸಲು ಯಾರೂ ಬಯಸುವುದಿಲ್ಲ.
ಯೋಚನೆ ಮತ್ತು ಬೋಧನೆ ಇಷ್ಟು ಉದಾತ್ತವಾಗಿರುವುದರಿಂದ ನಕ್ಷತ್ರವನ್ನು ತೋರಿಸುವ ವಿಧಾನ ಮತ್ತು ಸಮಯ ನಗಣ್ಯವೆನಿಸಿಬಿಡುತ್ತದೆ.

ಹಂಸಾನಂದಿಯವರು ಇನ್ನು ಸ್ವಲ್ಪ ಆಳಕ್ಕಿಳಿಯಬೇಕಿತ್ತು ಎನಿಸುತ್ತದೆ.

hamsanandi's picture
05
Aug
2011
6:59

ಉ: ಅರುಂಧತೀ ದರ್ಶನ

ಆಗಲಿ ಶ್ರೀಹರ್ಷ ಅವರೆ. ಒಂದು ಹೊಸ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ನಾನು ಆಭಾರಿ.

anil_harihar's picture
16
Aug
2011
3:18

ಉ: ಅರುಂಧತೀ ದರ್ಶನ

ಈ ವಿಷಯ ಇಂದಿನ ದಿನದ ಸಾಮಾಜಿಕ ಆರೋಗ್ಯಕ್ಕೆ ಏಷ್ಟು ಪ್ರಸ್ತುತ ಯೆನ್ನವುದರ ಬಗ್ಗೆ ಒತ್ತಿ ಹೇಳುವುದು ಉತ್ತಮ

ಗಣೇಶ's picture
04
Aug
2011
11:52

ಉ: ಅರುಂಧತೀ ದರ್ಶನ

>>>ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ.
-ಒಂದು ಬ್ಲಾಗ್‌ನಲ್ಲಿ ಭಾವನಾ ಎಂಬವರು ಇದನ್ನು ಸುಂದರವಾಗಿ ವಿವರಿಸಿದ್ದಾರೆ- http://blogs.jnanako...
-ಗಣೇಶ.

venkatesh's picture
06
Aug
2011
6:49

ಉ: ಅರುಂಧತೀ ದರ್ಶನ

ಹೌದು, ಹಂಸಾನಂದಿಯವರೆ,

ನಾನು ಮದುವೆಯಾದಾಗ ೩೭ ವರ್ಷಗಳ ಹಿಂದೆ, ಅರುಂಧತಿ ನಕ್ಷತ್ರ ತೋರಿಸಿದಾಗ ನೋಡಿದೆಯೆಂದು ಗೋಣು ಹಾಕಿದ್ದೆ. ನಿಜವಾಗಿ ಅದನ್ನು ನೋಡಿದ್ದು ಜ್ಞಾಪಕ ಇಲ್ಲ. ನಿಮ್ಮ ಲೇಖನ ಒಳ್ಳೆ ಕೆಲಸಮಾಡಿದೆ. ನಾಳಿನ ಮದುವೆಗಳಿಗೆ ಒಂದು ನಿಮ್ಮ ಈ ಇ- ಮೇಲ್ ಬಹಳ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ. !

ramvani's picture
10
Aug
2011
7:09

ಉ: ಅರುಂಧತೀ ದರ್ಶನ

ಮಾಹಿತಿ ಪೂರ್ಣ ಲೇಖನ. ವಂದನೆಗಳು.
ವಾಣಿ

indiresh's picture
18
Aug
2011
10:58

ಉ: ಅರುಂಧತೀ ದರ್ಶನ

ಸ್ವಾರಸ್ಯಕರವಾಗಿದೆ ನಿಮ್ಮ ಹರಟೆ.ತುಂಬಾ ಗಂಭೀರವಾಗಿಯೇ ವಿಷಯ ಸ್ಪಷ್ಟ ಪಡಿಸಿದ್ದೀರ. ಥ್ಯಾಂಕ್ಸ್.
ನಾನಿದನ್ನು ನನ್ನ ಮದುವೆ(೧೯೭೫)ಕಾಲ ದಿಂದಲೂ ನನ್ನ ಮಿತ್ರ ರೊಂದಿಗೆ ಈ ವಿಷಯಕ್ಕೆ ಹೇಳುವದೆನೆಂದರೆ ಗಂಡ ತನ್ನ ಹೆಂಡತಿಗೆ ಹೇಳುವ ಮೊದಲ ಸುಳ್ಳು.