20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಲೆದಾಟ

July 26, 2012 - 12:57pm
Chikku123

ಭಾವನೆಗಳ ಹೂದೋಟದಲ್ಲಿ ಬಯಕೆಯ
ಬೇಲಿಯೊಳಗೆ ವಿಹರಿಸುತಿರುವೆ ನಾನು

ಮಕರಂದ ಹೀರಲು ಬರುವ ದುಂಬಿಯಂತೆ
ಅಲೆಯುತಿರುವೆ ನೀನು

ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ
ಸಾಗುತಿರುವೆ ನಾನು

ನೆನಪುಗಳ ಕಡಲಿನಲಿ
ಅಲೆಗಳಂತೆ ಅಪ್ಪಳಿಸುತಿರುವೆ  ನೀನು

ಪಯಣದ ಹಾದಿಯಲಿ ಸಂಚಾರಿಯಂತೆ
ಸಾಗುತಿರುವೆ ನಾನು

ದಾರಿಯಲಿ ಸಿಗುವ ಝರಿಯಂತೆ
ಬಂದು ಹೋಗುತಿರುವೆ ನೀನು

ಎಲೆಯ ಮೇಲಿರುವ
ಇಬ್ಬನಿಯಾಗಿರುವೆ ನಾನು

ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on

ಸುಂದರವಾದ ಕಲ್ಪನೆ ಚೇತನ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಧನ್ಯವಾದ ಸತೀಶವ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು"

ಚ್ಹೆನ್ನಾಗಿದೆ...
ಹೌದು 'ನೀನು' ?????

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಉತ್ತಮವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಹೌದು 'ನೀನು' ?????

ಚೇತನ ಪಾಪ ಈ ಪ್ರಶ್ನೆಗೆ ಉತ್ತರಿಸಲು ಕಷ್ಟ ಅಲ್ಲವೆ !

ಸಪ್ತಗಿರಿ ಮದುವೆಯಾದವರಿಗೆಲ್ಲ ಇಂತ ಪ್ರಶ್ನೆ ಕೇಳಬಾರದು ಅಂತ ತಿಳಿಯದೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಹೌದು ಏನ್ರೀ ಸಗಿಯವ್ರೆ ಅವೆಲ್ಲ ಕೇಳ್ಬಾರ್ದು!!!!!

ಧನ್ಯವಾದ ಸಗಿಯವ್ರೆ, ಪ್ರೇಮಾವ್ರೆ, ಪಾರ್ಥವ್ರೆ (ಸಹಾಯಕ್ಕೆ!)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

<<ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು>>
ಏಕೆ ಚಿಕ್ಕೂ ಕೈಕೊಟ್ಟಳೇ ಅಥವಾ ಹಿಡಿಯಲಿಲ್ಲವೇ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :)
ಹಿಡಿದಾಗಿದೆ ಶ್ರೀಧರವ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು

" ಅಲೆದಾಟ " ಒಂದು ಸರಳ ಸುಂದರ ಅರ್ಥಪೂರ್ಣ ಕವನ, ಧನ್ಯವಾದಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.