ಪುತ್ತೂರು-ಸುಳ್ಯ ನಡುವೆ "ಆನೆಗುಂಡಿ" ಎಂಬ ರುದ್ರ ರಮಣೀಯ ಸ್ಥಳ ಸಿಗುವುದು. ಅನೇಕ ಬಾರಿ ಈ ದಾರಿಯಲ್ಲಿ ಹೋಗಿ ಬಂದಿದ್ದರೂ, ನನಗೆ ಗೊತ್ತೇ ಇರಲಿಲ್ಲ. ಕಳೆದ ತಿಂಗಳ ಮೊದಲವಾರ ನಾನು ದಕ್ಷಿಣ ಕನ್ನಡದ ಟೂರ್ ಮುಗಿಸಿ ಬರುವಾಗ ಅದರ ಪರಿಚಯವಾಯಿತು.
ಹಿಂದಿನ ದಿನವೂ ಅದೇ ದಾರಿಯಲ್ಲಿ ಎರಡು ಬಾರಿ ನನ್ನ ಕಾರಲ್ಲಿ ಹೋಗಿ ಬಂದಿದ್ದೆ. ಆ ದಿನ ಮಳೆ ಸ್ವಲ್ಪ ಜೋರಾಗೇ ಇತ್ತು. ನಾನು ಕಾರಿನ ಸ್ಟೇರಿಂಗ್ ತಿರುಗಿಸುತ್ತಿದ್ದರೂ ತಿರುಗದೇ...ಬ್ರೇಕ್ ಸಹ ಹಿಡಿಯದೇ ನೇರ ಹೋಗಿ ಎದುರುಗಡೆಯಿಂದ ಬರುತ್ತಿದ್ದ ಬಸ್ಸಿಗೆ ಕಾರು ಗುದ್ದಿತು.
ನನಗೆ ಅರೆಕ್ಷಣ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ..ಒಂದು ತರಹ ಶಾಕ್ ಸ್ಥಿತಿಯಲ್ಲಿದ್ದೆ. (ನನ್ನ "ಡ್ರೈವಿಂಗ್ ಇತಿಹಾಸ"ದಲ್ಲೇ ಒಂದು ಸಣ್ಣ ಆಕ್ಸಿಡೆಂಟ್ ಸಹ ಮಾಡಿರಲಿಲ್ಲ. ಎಲ್ಲಿಗೆ ಹೋಗುವಾಗಲೂ ಗಾಡಿಯನ್ನು ಸರ್ವಿಸ್‌ಗೆ ಕೊಟ್ಟು ಉತ್ತಮ ಕಂಡೀಷನ್‌ನಲ್ಲೇ ತೆಗೆದುಕೊಂಡು ಹೋಗುವುದು. ಶಿರಾಡಿ ಘಾಟಿ ತೀರಾ ಹದಗೆಟ್ಟ ಸಮಯದಲ್ಲೇ, ರಾತ್ರಿ ಹೊತ್ತು ಕಾರು ಬಿಟ್ಟುಕೊಂಡು ಹೋಗಿದ್ದೆ. ಈಗ ನನ್ನಿಂದ ಆಕ್ಸಿಡೆಂಟ್!)
ಪಕ್ಕದ ಸೀಟಲ್ಲಿ ಕುಳಿತ ಮಗಳನ್ನು ನೋಡಿದೆ. ಗಾಬರಿಯಾಗಿದ್ದು ಬಿಟ್ಟು ಗಾಯವೇನೂ ಕಾಣಿಸಲಿಲ್ಲ. ಹಿಂದೆ ತಿರುಗಿ ನೋಡಿದಾಗ, ನಮ್ಮ ಜತೆ ಬಂದಿದ್ದ ಸಂಬಂಧಿಯೊಬ್ಬರಿಗೆ ಹಣೆಯಲ್ಲಿ ಗಾಯವಾಗಿ ರಕ್ತ ಸುರಿಯುತ್ತಿದ್ದುದು ಕಾಣಿಸಿತು. ಕೂಡಲೇ ಎದ್ದು ಹೊರಗೆ ಬಂದು (ಅವರೂ ಹೊರಗೆ ಬಂದರು) ಅವರಿಗೆ ಟವಲನ್ನು ಹಣೆಗೆ ಒತ್ತಿ ಹಿಡಿಯಲು ಕೊಟ್ಟೆ. ಆಗಲೇ ಬಸ್ಸಲ್ಲಿದ್ದವರೆಲ್ಲಾ ಓಡಿ ಬಂದರು. ಅವರು ಬಂದು ನನ್ನನ್ನು ವಿಚಾರಿಸಿದಾಗಲೇ, ನನಗೆ ಏನೂ ಆಗಿಲ್ಲ ಎಂಬ ಅರಿವಾಯಿತು.
ಮಗಳ ಬದಿ ಬಾಗಿಲು ಜಾಮ್ ಆಗಿದ್ದರಿಂದ ಕಿಟಕಿಯ ಗಾಜನ್ನು ಒಡೆದು ಮಗಳನ್ನು ಜನ ಎತ್ತಿ ಹೊರತೆಗೆದರು. ಯಾರೋ ಒಬ್ಬರು ಫೋನ್ ಮಾಡಿ ಸಮೀಪದ ಊರಿನವರಿಗೆ ತಿಳಿಸಿದರು. ಕೂಡಲೇ ಖಾಲಿ ಜೀಪಲ್ಲಿ ಒಬ್ಬರು ಸ್ಥಳಕ್ಕೆ ಬಂದು, ಸಾಮಾನೆಲ್ಲಾ ಜೀಪಿಗೆ ಹಾಕಿ, ನನ್ನನ್ನು ಬಿಟ್ಟು ಉಳಿದವರೊಂದಿಗೆ ಪುತ್ತೂರಿಗೆ ಹೋದರು.
ನನ್ನ ಸಂಬಂಧಿಗಳಿಗೆ ವಿಷಯ ತಿಳಿಸಲು, ನನ್ನ ಮೊಬೈಲಲ್ಲಿ ರೇಂಜೇ ಸಿಗದಿದ್ದರಿಂದ, ಯಾರೋ ಒಬ್ಬರು ಅವರ ಮೊಬೈಲ್ ಕೊಟ್ಟರು.
ಕೆಲವರು ಕಾರಿನವರು ಸೈಡ್‌ಗೆ ತಂದು ನಿಲ್ಲಿಸಿ, ನೀರು/ಬಿಸ್ಕಿಟ್ ಇತ್ಯಾದಿ ಕೊಟ್ಟು ಏನಾದರೂ ಸಹಾಯ ಬೇಕಾ ಎಂದು ವಿಚಾರಿಸಿದರು. ಪುತ್ತೂರಿಗೆ ಹೋದವರೆಲ್ಲಾ ಕ್ಷೇಮವಾಗಿರುವರು, ಯಾರಿಗೂ ಗಂಭೀರ ಗಾಯಗಳಾಗಿಲ್ಲ, ನಮ್ಮ ಸಂಬಂಧಿಗಳು ಅಲ್ಲಿಗೆ ಬಂದಿರುವರು. ಅಲ್ಲಿನ ಬಗ್ಗೆ ಚಿಂತೆ ಬೇಡ. ಒಂದಿಬ್ಬರು ಸಂಬಂಧಿಗಳು ಸ್ಥಳಕ್ಕೆ ಬರುತ್ತಿದ್ದಾರೆ.ಚಿಂತಿಸಬೇಡಿ...ಎಂದು ಫೋನ್ ಬಂತು.
ಬಸ್ಸಿನವರದೇನೂ ತಪ್ಪಿಲ್ಲದಿರುವುದರಿಂದ, ಬಸ್ಸಿಗೆ ಹಾನಿಯೂ ಆಗದಿದ್ದುದರಿಂದ, ಬಸ್ಸನ್ನು ತೆಗೆಯಲು ಒಪ್ಪಿದೆ. ಜನರೆಲ್ಲಾ ಸೇರಿ, ಕಾರನ್ನು ಎತ್ತಿ ಸೈಡಿಗೆ ಇಟ್ಟರು. ಅಲ್ಲಿನವರ ಪ್ರಕಾರ ಅಲ್ಲಿ ಒಂದಲ್ಲ ಒಂದು ಆಕ್ಸಿಡೆಂಟ್ ಆಗುತ್ತಲೇ ಇದೆಯಂತೆ- http://www.daijiworld.com/news/news_disp.asp?n_id=77613&n_tit=Sullia%3A+Celebrations+Turn+into+Mourning+as+Groom%2C+Four+Others+Die+in+Accident
ಪರಿಹಾರಕ್ಕಾಗಿ ಹೋಮ ಸಹ ಮಾಡಿರುವರಂತೆ...
ನನ್ನ ತಂದೆಯ ಚಿಕ್ಕ ತಮ್ಮನವರು ಬಂದು, ಕಾರನ್ನು ಸಾಗಿಸುವುದು... ಇತ್ಯಾದಿ ಎಲ್ಲಾ ವ್ಯವಸ್ಥೆ ಮಾಡಿದರು. ನನ್ನ ಬಾವಂದಿರೂ ಸಹ ಸಹಾಯಕ್ಕೆ ಬಂದರು. ನಮ್ಮವರನ್ನು ಕರಕೊಂಡು ಹೋಗಿದ್ದ ಜೀಪಿನವರು, ಸಂಬಂಧಿಗಳು ಬಂದ ಮೇಲೆ ಜೀಪಲ್ಲಿದ್ದ ಸಾಮಾನೆಲ್ಲಾ ಅವರ ಕಾರಿಗೆ ವರ್ಗಾಯಿಸಿ,ಹಿಂದೆ ಬಂದು ಅಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಸಮಾಧಾನ ಹೇಳಿ ಹೋದರು.
ಇನ್ನು ಆಕ್ಸಿಡೆಂಟ್ ಆದ ಸ್ಥಳದ ಬಗ್ಗೆ- ಅಂತಹ ಕಷ್ಟದ ತಿರುವೇನೂ ಅಲ್ಲ. ರಸ್ತೆ ಸಹ ಅಗಲವಾಗಿದೆ. ಡಾಮರ್ ಹಾಕಿದ ಇಳಿಜಾರಿನ ರೀತಿ ಸರಿಯಿರಲಿಕ್ಕಿಲ್ಲ ಅನಿಸುತ್ತದೆ. ಯಾಕೆಂದರೆ-ನನ್ನ ಕಾರು ಆಕ್ಸಿಡೆಂಟ್ ಆದ ಸ್ವಲ್ಪ ಸಮಯದ ನಂತರ ಇನ್ನೊಂದು ಕಾರೂ ಸಹ ಅದೇ ರೀತಿ ಬಂದಿತು...ಪುಣ್ಯಕ್ಕೆ ಸರಿಯಾದ ಸಮಯಕ್ಕೆ ಬ್ರೇಕ್ ಹಿಡಿದು ಸೈಡಿಗೆ ತೆಗೆದುಕೊಂಡ. ಹಲಸಿನಹಣ್ಣು +ನನ್ನ ( :) ) ಭಾರ..ಕಾರಿಗೆ ಲೋಡ್ ಜಾಸ್ತಿ ಆಯ್ತು ಕಾಣುತ್ತದೆ. ಅಲ್ಲಿ ಆದ ಇನ್ನೆರಡು ಆಕ್ಸಿಡೆಂಟ್ ಸಹ (ಕೊಂಡಿಯಲ್ಲಿ ಕೊಟ್ಟದ್ದು) ಒಂದು ಮದುವೆ ಪಾರ್ಟಿ(ಲೋಡ್ ಇರಲೇಬೇಕಲ್ಲಾ..) ಇನ್ನೊಂದು ಭಾರೀ ವಾಹನ.
ನನಗೆ ಆ ಸಮಯದಲ್ಲಿ ಸಹಾಯ ಮಾಡಿದ ಬಸ್ಸಿನ ಡ್ರೈವರ್( ಕಾರು ಕಂಟ್ರೋಲ್ ತಪ್ಪಿರುವುದನ್ನು ಗಮನಿಸಿ ಬಸ್ಸನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದ)ನಿಂದ ಹಿಡಿದು ಎಲ್ಲರಿಗೂ ನನ್ನ ತುಂಬು ಹೃದಯದ ಕೃತಜ್ಞತೆಗಳು.
-ಗಣೇಶ.









ಪ್ರತಿಕ್ರಿಯೆಗಳು
ಉ: ಆಕ್ಸಿಡೆಂಟ್
ಗಣೇಶ್'ಜಿ
ಗಣೇಶನ ದಯೆಯಿಂದ ನಿಮಗೂ ನಿಮ್ಮ ಕಾರಿನಲ್ಲಿದ್ದವರಿಗೂ ಹೆಚ್ಚು ತೊಂದರೆ ಆಗದೆ ಪಾರಾಗಿದ್ದೀರಿ ... ಅದೇ ನೆಮ್ಮದಿಯ ವಿಚಾರ ...
ಹುಷಾರಾಗಿರಿ :)
<<ಪರಿಹಾರಕ್ಕಾಗಿ ಹೋಮ ಸಹ ಮಾಡಿರುವರಂತೆ... >> ????
ಉ: ಆಕ್ಸಿಡೆಂಟ್
ಭಲ್ಲೇಜಿ,
>>ಪರಿಹಾರಕ್ಕಾಗಿ ಹೋಮ ಸಹ ಮಾಡಿರುವರಂತೆ... >> ????
ನಿರಂತರ ೯-೧೦ ಆಕ್ಸಿಡೆಂಟ್ ಆದುದರಿಂದ ಅಲ್ಲಿನವರು ಪರಿಹಾರಕ್ಕಾಗಿ ಕೆಲ ದಿನಗಳ ಮೊದಲು ಹೋಮ ಸಹ ಮಾಡಿರುವರು ಎಂದು ಕೆಲವರು ಹೇಳಿದರು.
>>ಗಣೇಶನ ದಯೆಯಿಂದ..
ನಿಜ.
ಇನ್ನೂ ಹುಷಾರಾಗಿರುವೆ.
ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಗಣೇಶ್..ಜಿ,
ಭಲ್ಲೆಯವರು ಹೇಳಿದಂತೆ ನಿಜಕ್ಕೂ ಭಗವಂತನ ದಯೆ ನಿಮ್ಮ ಮೇಲಿದೆ. ಆದ್ದರಿಂದ ಹೆಚ್ಚೇನೂ ಅಪಾಯವಿಲ್ಲದಂತೆ ಅಪಘಾತದಿಂದ ಪಾರಾಗಿದ್ದೀರ. ಮಾನವತೆಯನ್ನು ಮೆರೆದ ಆ ಬಸ್ಸಿನ ಜನರು ನಿಜಕ್ಕೂ ಅಭಿನಂದಾರ್ಹರು.
ಆಕ್ಸಿಡೆಂಟ್ ತಪ್ಪಿಸಲು ಹೋಮ ಹವನ ಮಾಡಿಸಿರುವರಂತೆ ಎಂದು ತಿಳಿಸಿದ್ದೀರ ಆದರೂ ಅದು ನಿಂತಿಲ್ಲವೆಂದರೆ; ಒಂದು ನೀವೆ ಪ್ರಸ್ತಾಪಿಸಿರುವಂತೆ ರಸ್ತೆಯ ಆ ಭಾಗದಲ್ಲಿ ಸರಿಯಾಗಿ ಇಲ್ಲದೇ ಇರುವುದು ಆಗಿರಬೇಕು. ಅದನ್ನು ಮೊದಲು ಸರಿಪಡಿಸಬೇಕು. ಮತ್ತು ಆ ಭಾಗದಲ್ಲಿ ಪ್ರಚಲಿತವಿರುವಂತೆ ಯಾವುದಾದರೂ ಭೂತಗಳಿಗೆ ಶಾಂತಿ ಕೂಡಾ ಮಾಡಿಸಬೇಕೇನೋ, ಆಲೋಚಿಸಿ?
ಉ: ಆಕ್ಸಿಡೆಂಟ್
ಶ್ರೀಧರ್‌ಜಿ,
>>ಆ ಭಾಗದಲ್ಲಿ ಪ್ರಚಲಿತವಿರುವಂತೆ ಯಾವುದಾದರೂ ಭೂತಗಳಿಗೆ ಶಾಂತಿ ಕೂಡಾ ಮಾಡಿಸಬೇಕೇನೋ
- ನನಗೆ ಏನೂ ಆಗದಿದ್ದರಿಂದ ಪುನಃ ಇನ್ನೊಂದು ಕಾರು ಮೂಲಕ ಪ್ರಯತ್ನಿಸಿತು. ಯಾರದೋ ನನಗೆ ಬಲವಾದ ರಕ್ಷಣೆ ಇದೆ ಅಂತಲೂ ಹೇಳಿದರು. ಒಮ್ಮೊಮ್ಮೆ ಮೂಢನಂಬಿಕೆ ಅನಿಸಿದರೂ ಒಮ್ಮೊಮ್ಮೆ ನಿಜವಿರಬಹುದೇ ಅನಿಸುವುದು.
ನಿಮ್ಮ ಕಳಕಳಿಗೆ ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಒಂದು ದೊಡ್ಡ ಗಂಡಾಂತರ ಕಳಯಿತು ಬಿಡಿ, ಯಾಕೆಂದರೆ ಕೆಲವು "ಜಾಗ"ಗಳೆ ಹಾಗೆ ಅಲ್ಲಿ ಅವಘಡಗಳು ಸಂಭವಿಸುತ್ತಲೆ ಇರುತ್ತವೆ
ಅದು ತಿಳಿದಾಗ ಅಂತಹ ಕಡೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಅಷ್ಟೆ.
....ಸತೀಶ್
ಉ: ಆಕ್ಸಿಡೆಂಟ್: ನಿಜ ಘಟನೆ ಮತ್ತು ಗಣೆಶ್ ಅಣ್ನ
+1
ಗಣೆಶ್ ಅಣ್ಣ ಆ ನಿಜ ಘಟನೆಯನ್ನು ಹಾಸ್ಯ ಮಯವಾಗಿ ಹೆಳಿದ್ದು ನಿಮಗೆ ಮಾತ್ರ ಸಾಧ್ಯ...
ನಾವ್ ಆಗಿದ್ದರೆ?
ಈಗಲು ನಮ್ಮ ಕೈ ಕಾಲು ಗಡ ಗಡ ನಡುಗುತ್ತಿದ್ದವು...!!
ಶುಭವಾಗಲಿ...
ಉ: ಆಕ್ಸಿಡೆಂಟ್: ನಿಜ ಘಟನೆ ಮತ್ತು ಗಣೆಶ್ ಅಣ್ನ
ಸಪ್ತಗಿರಿವಾಸಿಯವರೆ,
ಇದೇ ಘಟನೆ ಬೆಂಗಳೂರಲ್ಲಿ ಆಗಿರುತ್ತಿದ್ದರೆ-
ಡ್ರೈವರ್ ಬಂದು-" ಸಾಯಲು ನಿನಗೆ ನನ್ನ ಬಸ್ಸೇ ಆಗಬೇಕಿತ್ತಾ?" ಎಂದು ಜಗಳಕ್ಕೆ ನಿಲ್ಲುತ್ತಿದ್ದ, ಜನ ಸುತ್ತಾ ನಿಂತು ಮೋಜು ನೋಡುತ್ತಿದ್ದರು..:)
>>ನಾವ್ ಆಗಿದ್ದರೆ?
ಯಾರಿಗೂ ಆಗುವುದು ಬೇಡ.
ಒಂದು ಮಾತು- ನಾವು ಕಷ್ಟದಲ್ಲಿದ್ದವರಿಗೆ ನೆರವಾದರೆ(ಪ್ರತಿಫಲಾಪೇಕ್ಷೆಯಿಂದ ಮಾಡಿರಬಾರದು) , ನಮಗೆ ಅದರ ಪ್ರತಿಫಲ ಇನ್ನೊಂದು ಕಡೆ ಖಂಡಿತಾ ಸಿಗುವುದು. ದೊಡ್ಡ ಗಂಡಾಂತರಗಳು ಸಣ್ಣದರಲ್ಲೇ ಹೋಗುವುದು.
ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಸತೀಶ್ ಅವರೆ,
>>ಅದು ತಿಳಿದಾಗ ಅಂತಹ ಕಡೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಅಷ್ಟೆ
- ತಿರುವುಗಳು ಜಾಸ್ತಿ. ಆದ್ದರಿಂದ ಜಾಗ್ರತೆ ಬಿಡಬೇಕು ಎಂದು ಎಲ್ಲರಿಗೂ ಬುದ್ಧಿ ಹೇಳುತ್ತಿದ್ದವ-ನಾನೇ ತಪ್ಪಿದೆ. :)
ನಿಜಕ್ಕೂ ಗಂಡಾಂತರ ತಪ್ಪಿತು. ಹೆಚ್ಚಿನ ಏಟನ್ನು ಕಾರು ತೆಗೆದುಕೊಂಡು ನಮ್ಮನ್ನು ಉಳಿಸಿತು.
ತಮ್ಮ ಪ್ರೀತಿಪೂರಿತ ಎಚ್ಚರಿಕೆಗೆ ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಆಗುವುದೆಲ್ಲ ಒಳಿತೆ ಆಯಿತು.
ನೀವು ಮತ್ತು ನಿಮ್ಮವರೆಲ್ಲ ಸುರಕ್ಷಿತರಾಗಿದ್ದಿರಲ್ಲ ಅದೇ ಸಮಾದಾನ!
ಆದರು (ಕೋಪಮಾಡಬೇಡಿ)
ನನಗೆ ಒಂದೆ ಡೌಟ್
ಗಣೇಶರಂತ ಗಣೇಶರೆ ಡಿಕ್ಕಿ ಇಟ್ಟರು ಆ ಸರ್ಕಾರಿ ಬಸ್ ಗೆ ಏನು ಆಗಲಿಲ್ಲವಲ್ಲ ಅನ್ನುವುದು ಆಶ್ಚರ್ಯ! (ನಕ್ಕುಬಿಡಿ)
ದೇವರು ದೊಡ್ಡವನು !
ನಿಮ್ಮ ಶಕ್ತಿ ಎಲ್ಲ ಏನಾಯಿತು.
ಪಾರ್ಥಸಾರಥಿ
ಉ: ಆಕ್ಸಿಡೆಂಟ್
ಪಾರ್ಥಸಾರಥಿಯವರೆ,
>>>ಆಗುವುದೆಲ್ಲ ಒಳಿತೆ ಆಯಿತು
-ಇದು ನನ್ನ ಮಂತ್ರ. ಆ ಕ್ಷಣಕ್ಕೆ ಕಷ್ಟ ಎಂದು ತೋರಿದರೂ ಅದು ನಮ್ಮ ಒಳ್ಳೆಯದಕ್ಕೇ ಆಗಿರುವುದು. ಇಲ್ಲಾ ದೊಡ್ಡ ಗಂಡಾಂತರ ಚಿಕ್ಕದರಲ್ಲಿ ಹೋಗುವುದು.
>>>ಗಣೇಶರಂತ ಗಣೇಶರೆ ಡಿಕ್ಕಿ ಇಟ್ಟರು ಆ ಸರ್ಕಾರಿ ಬಸ್ ಗೆ ಏನು ಆಗಲಿಲ್ಲವಲ್ಲ ಅನ್ನುವುದು ಆಶ್ಚರ್ಯ!
-:) :) ಅದೇ ಆಶ್ಚರ್ಯ! ಅಲ್ಲ- ಬಸ್ಸಲ್ಲಿ ಜಾಸ್ತಿ ಜನವಿದ್ದರಲ್ಲ..ನಮ್ಮ ಶಕ್ತಿ ಪ್ರದರ್ಶಿಸಲು ಹೋಗಲಿಲ್ಲ. :)
ನಿಮ್ಮೆಲ್ಲರೊಂದಿಗೆ ಕೋಪದ ಪ್ರಶ್ನೆಯೇ ಇಲ್ಲ.
ಧನ್ಯವಾದ.
-ಗಣೇಶ.
ಉ: ಆಕ್ಸಿಡೆಂಟ್
ಗಣೇಶ್ ಅವರೆ,
ತಮಗೊದಗಿದ ಈ ಅನಿರೀಕ್ಷಿತ ಘಟನೆಯಿಂದಾದ ಮಾನಸಿಕ ಹಾಗು ದೈಹಿಕ ಅಘಾತದಿಂದ ಈಗ ಸಂಪೂರ್ಣ ಚೇತರಿಕೊಂಡಿದ್ದೀರೆಂದು ಭಾವಿಸುತ್ತೇನೆ.
ಭಗವಂತನ ಕೃಪೆ ಸದಾ ತಮಗಿರಲಿ
ವಂದನೆಗಳು
ಉ: ಆಕ್ಸಿಡೆಂಟ್
ಪಾಟೀಲರೆ,
ಕೆಲವೊಮ್ಮೆ -ಯಾಕೆ ಹಾಗಾಯಿತು? ಎಂಬ ಯೋಚನೆ ಬರುವುದು. ಒಂದು ದಿನ ರಜೆ ಮಾಡಿ ಕುಳಿತುಕೊಳ್ಳುವುದೆಂದರೆ ನನಗಾಗುವುದಿಲ್ಲ. ಸಂಡೆ ಸಹ ತಡವಾಗಿ ಏಳಲಾರೆ. ಮನೆಯಲ್ಲಿ ಕುಳಿತುಕೊಳ್ಳುವ ಹಾಗೇ ಆಗಲಿಲ್ಲವಲ್ಲಾ ಎಂಬ ಸಮಾಧಾನ.
ತಮ್ಮ ಶುಭ ಹಾರೈಕೆಗೆ ತುಂಬಾ ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಕೂದಲೇಳೆಯ ಅಂತರದಲ್ಲಿ ಆಗಬಹದಾದ ದೊಡ್ಡ ದುರಂತದಿಂದ ಪಾರಾಗಿದ್ದೀರಿ,ಗಣೇಶ್ ಅವರೆ.ದೇವರು ದೊಡ್ಡವನು! ನಿಮಗೂ ಹಾಗು ತಮ್ಮ ಕುಟುಂಬದ ಇತರರಿಗೂ ನನ್ನ ಈ ಶುಭ ಹಾರೈಕೆ.
ಆ ಘಳಿಗೆಯಲ್ಲಿ ಅಲ್ಲಿ ನೆರದ ಜನ ಮಾನವೀಯತೆಯನ್ನು ಮೆರೆದಿದ್ದಾರೆ. ಅವರಿಗೂ ನಾನು ವಂದಿಸುತ್ತೇನೆ.
ವಂದನೆಗಳು
ಉ: ಆಕ್ಸಿಡೆಂಟ್
ಕಾಮತ್ ಅವರೆ,
ತಮ್ಮ ಪ್ರೀತಿ ತುಂಬಿದ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಗಣೇಶಣ್ಣ ಭಗವ೦ತನ ದಯೆಯಿ೦ದ ನೀವು ಮತ್ತು ಕುಟು೦ಬದವರು ಸುರಕ್ಷಿತವಾಗಿ ಬ೦ದಿರಲ್ಲ ಅಷ್ಟು ಸಾಕು..
ಉ: ಆಕ್ಸಿಡೆಂಟ್
ನಿಜ ಜಯಂತ್,
ಒಬ್ಬರಿಗೆ ಜಾಸ್ತಿ ಏಟಾಗುತ್ತಿದ್ದರೂ, ನನ್ನಿಂದಾಗಿ ಆಯಿತಲ್ಲಾ ಎಂದು ನನ್ನ ಜೀವನ ಪೂರ್ತಿ ಕೊರಗುತ್ತಿದ್ದೆನೋ ಏನೋ..
ಧನ್ಯವಾದ.
-ಗಣೇಶ.
ಉ: ಆಕ್ಸಿಡೆಂಟ್
ಏಕೆ ಹೀಗಾಯ್ತು..??!!?? ನಮ್ಮ ಅರಿವಿಗೆ ಬರುವುದು ಕಷ್ಟ .. ಆದರೆ ಇಷ್ಟರಲ್ಲೇ ಮುಗಿತಯಿತಲ್ಲ ಅದಕ್ಕೆ ದೇವರಿಗೆ ವಂದಿಸಬೇಕು. ನಿಮ್ಮ ಅನುಭವದಲ್ಲಿ ಇದೊಂದು ಘಟನೆ ಅಷ್ಟೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಿಮಗೆ ಬೇಕೆನಿಸಿದರೆ ಕರೆ ಮಾಡಿ 9448338213.
ದನ್ಯವಾದಗಳು, ಗಣೇಶ್ ಜಿ. ರಾಮಮೋಹನ.
ಉ: ಆಕ್ಸಿಡೆಂಟ್:ರಾಮ ಮೋಹನ್ ಅವ್ರೆ
ರಾಮ ಮೋಹನ್ ಅವ್ರೆ- ಅದು ನಿಮ್ಮ ನಂಬರ್ರೇ?
ಗಣೇಶ್ ಅಣ್ಣ ಕಾಲ್ ಮಾಡುವರು ಅನ್ನಿಸುವುದೇ?
ಮಾಡಿದರೆ ಆ ಬಗ್ಗೆ ಬರಹ ಬರೆಯಿರಿ...!!
ಕಾಯ್ತಿರುವೆ.. ಓದಲು...
ಶುಭವಾಗಲಿ..
\|/
ಉ: ಆಕ್ಸಿಡೆಂಟ್:ರಾಮ ಮೋಹನ್ ಅವ್ರೆ
:) :)
ಸಪ್ತಗಿರಿವಾಸಿಯವರೆ,
ಕಾಲ್ ಮಾಡಿದ್ದು ಗಣೇಶ ಅಂದು ರಾಮಮೋಹನರು ಹೇಗೆ ಪತ್ತೆಹಚ್ಚುವರು?
-ಗಣೇಶ.
ಉ: ಆಕ್ಸಿಡೆಂಟ್:ಗಣೆಶ್ ಅಣ್ನ
ಗಣೆಶ್ ಅಣ್ಣ , ಅದ್ ನಿಜವೆ?.....
ನಿವೆ ಅನ್ತ ಅವ್ರಿಗ್ ಗೊತ್ತಾಗೊದು ಹೆಗೆ?....
ಪಾಪ.........ರಾಮೊ'ರೆ..:((((\\\\\
\|/
ಉ: ಆಕ್ಸಿಡೆಂಟ್
ರಾಮಮೋಹನರೆ,
ತಮಗೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಸ್ನೇಹ ಬೇಕೆ ಬೇಕು. ಕರೆ ಮಾಡುವೆ.
-ಗಣೇಶ.
ಉ: ಆಕ್ಸಿಡೆಂಟ್
ಮಾಡಿದ ಎಲ್ಲಾ ಪುಣ್ಯಗಳೂ ಸೇರಿ ದೊಡ್ಡ ಅಪಘಾತದಿಂದ ಬಚಾವಾದಿರಿ. ಕೇರ್ಫುಲ್ ಗಣೇಶಣ್ಣ.
<ಕಾರು ಕಂಟ್ರೋಲ್ ತಪ್ಪಿರುವುದನ್ನು ಗಮನಿಸಿ ಬಸ್ಸನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದ> ಪುಣ್ಯಾತ್ಮ.
ಮಾರಿಮುತ್ತುನಾ ಜಾಸ್ತಿ ನೆನಪಿಸ್ಕೊಬೇಡಿ!!!
ಉ: ಆಕ್ಸಿಡೆಂಟ್
:)
>>ಮಾರಿಮುತ್ತುನಾ ಜಾಸ್ತಿ ನೆನಪಿಸ್ಕೊಬೇಡಿ!!!
ಚಿಕ್ಕೂ ಅದು "ಭಾರಿಮುತ್ತು". :) (ಪಾರ್ಥಸಾರಥಿಯವರು "ಚಲೋ ಮಲ್ಲೇಶ್ವರ"ದಲ್ಲಿ ಎತ್ತಿಕೊಂಡು ಬಂದ ಭಾರೀ ಮಹಿಳೆ)
-ಗಣೇಶ.
ಉ: ಆಕ್ಸಿಡೆಂಟ್
<<ಗಣೇಶ್'ಜಿ
ಗಣೇಶನ ದಯೆಯಿಂದ ನಿಮಗೂ ನಿಮ್ಮ ಕಾರಿನಲ್ಲಿದ್ದವರಿಗೂ ಹೆಚ್ಚು ತೊಂದರೆ ಆಗದೆ ಪಾರಾಗಿದ್ದೀರಿ ... ಅದೇ ನೆಮ್ಮದಿಯ ವಿಚಾರ ...
ಹುಷಾರಾಗಿರಿ :) >>
++1
ಉ: ಆಕ್ಸಿಡೆಂಟ್
ಧನ್ಯವಾದಗಳು ಶ್ರೀನಿವಾಸ ಮೂರ್ತಿಯವರೆ.
-ಗಣೇಶ.
ಉ: ಆಕ್ಸಿಡೆಂಟ್
ತಪ್ಪಿದ ಗಂಡಾಂತರ!! ಒಳ್ಳೆಯದಾಗಲಿ.
ಉ: ಆಕ್ಸಿಡೆಂಟ್
ಕವಿನಾಗರಾಜರೆ,
ಗಂಡಾಂತರ ತಪ್ಪಿತು.
ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.
-ಗಣೇಶ.
ಉ: ಆಕ್ಸಿಡೆಂಟ್
ಯೋಚಿಸುವಂತೆ ಮಾಡಿದ ಬರಹ!
ಉ: ಆಕ್ಸಿಡೆಂಟ್
ಶ್ರೀಕರ್ ಅವರೆ,
ಆಕ್ಸಿಡೆಂಟ್ ಆದ ಮೇಲೆ ಆಕ್ಸಿಡೆಂಟ್ ಬಗ್ಗೆ ಯೋಚಿಸುವಂತೆ ಮಾಡಿತು.
ಕರ್ನಾಟಕದಲ್ಲಿ ಆದ ಅಪಘಾತಗಳ ಬಗ್ಗೆ, ಯಾವ ಏರಿಯಾದಲ್ಲಿ ಜಾಸ್ತಿ ಆಗುವುದು, ಇತ್ಯಾದಿ ಮಾಹಿತಿಗಳ ಬಗ್ಗೆ ನೆಟ್‌ನಲ್ಲಿ ಹುಡುಕಿದ್ದೆ.
ಒಂದೆರಡು ವಿವರ ಸಿಕ್ಕಿತ್ತು ಅಷ್ಟೇ..
http://www.arrivesaf...
ಅಪಘಾತವಾದಾಗ ತನಿಖೆ ಪ್ರಗತಿಯಲ್ಲಿದೆ ಎಂದು ಪತ್ರಿಕೆಯಲ್ಲಿ ಹಾಕಿಬಿಟ್ಟರಾಯಿತು.
"ಅಪಘಾತ"ವಾಗದಂತೆ ಜಾಗ್ರತೆವಹಿಸಲು ಬರೆದ ಕವನ -ನಮ್ಮ ಪ್ರಶಸ್ತಿಯವರಿಂದ- http://sampada.net/%...
ನನ್ನಿ,
ಗಣೇಶ.