19
June
2013

ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ

August 17, 2012 - 1:40pm
Chikku123

ಅತಿಥಿಗಳು ಮನೆಗೆ ಬಂದಾಗ ಸಾಮಾನ್ಯವಾಗಿ ಸ್ವಲ್ಪ ದಿನ ಇದ್ದು ಹೊರಡುತ್ತಾರೆ, ಮನೆ ಬಿಟ್ಟು ಹೊರಡುವಾಗ ಇನ್ನೊಮ್ಮೆ ಬನ್ನಿ ಎಂದು ಹೇಳುವುದುಂಟು. ಆದರಿಲ್ಲಿ ಹೊರಟು ನಿಂತವರನ್ನು ಮೂರೂ ದಿನದಿಂದ ಹೋಗಲೇಬೇಡಿ ಇಲ್ಲೇ ಇರಿ ಎಂದು ಸರ್ಕಾರದ ನಾಯಕರು ಗೋಗರೆಯುತ್ತಿದ್ದಾರೆ.

ಬರಗಾಲ ಬಂದಾಗ ಸುಮ್ಮನೆ ಪ್ಯಾಕೇಜ್ಗಳನ್ನ ಘೋಷಣೆ ಮಾಡುವ (ಸಂಬಂಧಪಟ್ಟವರನ್ನು ಅದು ತಲುಪದಿದ್ದರೂ), ರೈತರು ಆತ್ಮಹತ್ಯೆ ಮಾಡಿಕೊಂಡಾಗ ಹತ್ತಿರ ಹೋಗದ, ಪ್ರವಾಹ ಬಂದಾಗ ಬರೀ ವೈಮಾನಿಕ ಸಮೀಕ್ಷೆ ನಡೆಸಿ ಮರೆತುಹೋಗುವ ಇವರು ಹೊರಹೋಗುತ್ತಿರುವವರನ್ನು ಒಲಿಸಿಕೊಳ್ಳುವುದನ್ನ ನೋಡಿದರೆ ಇವರು ನಮ್ಮವರಿಂದ ಆರಿಸಿಬಂದವರೋ ಅಥವಾ ಹೊರಬಂದವರಿಂದ ಆರಿಸಿಬಂದವರೋ ಎಂಬ ಅನುಮಾನ ಕಾಡುತ್ತದೆ. ದಟ್ಟ ದಾರಿದ್ರ್ಯದ ನಡುವೆ ಬಟಾ ಬಯಲಾಗುತ್ತಿರುವ ಕುಟುಂಬಗಳೆಷ್ಟೋ. ಹಸಿವೆಯನ್ನ ತಾಳಲಾರದೆ ತನ್ನ ಕುಟುಂಬವನ್ನ ಸಲಹುವ ಸಲುವಾಗಿ ತನ್ನ ಹುಟ್ಟೂರನ್ನೇ ಬಿಟ್ಟು ಗುಳೇ ಹೋದವರೆಷ್ಟೋ. ಶೌಚಾಲಯವಿಲ್ಲದೆ ಹೀನ ಕೃತ್ಯಗಳಿಗೆ ಬಲಿಯಾಗುತ್ತಿರುವವರೆಷ್ಟೋ. ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on

>>ರಾಜಕೀಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ<< +100
ಇವರುಗಳು ಮನೆಗೆ ಮಾರಿ ಪರರಿಗೆ ಉಪಕಾರಿ ಗಳಿದ್ದಂತೆ ಚೇತನ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nanjunda on

ಚೇತನ್ ರವರೇ.... ರಾಜಕಾರಣಿಗಳು ಪ್ರಶ್ನಾತೀತ ನಾಯಕರು!?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ತ್ರಿವಿಷ್ಟಪದ ಅದೇ ಚಿಕ್ಕೂ ತಿಬೆಟ್ಟಿನಿಂದ ಹಿಡಿದು ಶ್ರೀಲಂಕಾ ತಮಿಳರವರೆಗೆ ಎಲ್ಲರಿಗೂ ನಾವು ಆಶ್ರಯದಾತರು ಮತ್ತು ಅವರ ಭಾಷೆ ಮತ್ತು ಸಂಸ್ಕ್ರುತಿಯ ರಕ್ಷಕರು, ನಮ್ಮ ಭಾಷೆಯನ್ನು ಮರೆತಾದರೂ ಅವರ ಭಾಷೆಯನ್ನು ಮಾತನಾಡುತ್ತೇವೆ. ನಮ್ಮ ಸಂಸ್ಕ್ಱುತಿಯನ್ನು ಮರೆತಾದರೂ ಅವರನ್ನು ಅನುಕರಿಸುತ್ತೇವೆ. ನಮಗೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಅವರನ್ನು ಉಪವಾಸ ಕೆಡವುದಿಲ್ಲ. ಇಂಥಾ ಭವ್ಯ ಪರಂಪರೆ ನಮ್ಮದು. ಇದನ್ನೇ ನಮ್ಮ ಈಗಿನ ಧುರೀಣರು ಮಾಡುತ್ತಿರುವುದು. ಛೇ ..ಛೇ..ಅವರ ಬಗ್ಗೆ ನೀ ,,,,ಹೀಗೆ ಮಾತಾಡೋದಾ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nanjunda on

ಹಿಂದೆ ಒಮ್ಮೆ ಪೇಪರ್ ನಲ್ಲಿ ಓದಿದ ಶ್ಲೋಕ ಇಂತಿದೆ.

ಕುಸ್ತಿಃ! ಪ್ರಜಾಭ್ಯಃ ಪರಿಪಾಲಯಂತಾಮ್
ಅನ್ಯಾಯ ಮಾರ್ಗೇಣ ಪ್ರಜಾಪ್ರಭುತ್ವಮ್|
ಪುಂಢಃ ಪುಡಾರೀ ಶುಭಮಸ್ತು ನಿತ್ಯಮ್
ಭ್ರಷ್ಟಃ ಫಟಿಂಗೋ ಸುಖಿನೋಃ ಭವಂತು ||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jokumar on

ಆತ್ಮವಿಲ್ಲದವರಿಗಾಗಿ (ಜಾರಕಾರಣಿಗಳು! ರಾಜಕಾರಣಿಗಳು) ನಾವೇಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು?
+1 ಡಿ ನಂಜುಂಡರ ಶ್ಲೋಕಕ್ಕೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

>>> ರಾಜಕೀಯ ನಾಯಕರು ಆತ್ಮಾವಲೋಕನ

ಚೇತನ್

ಮೊದಲ ಹಾಗು ಕಡೆಯ ಪದಗಳು ಒಂದಕ್ಕೊಂದು ವಿರುದ್ದವಲ್ಲವೆ ! ಆತ್ಮ ಇದ್ದಡೆಯಲ್ಲವೆ ಅವಲೋಕನದ ಪ್ರಶ್ನೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಪ್ರತಿಕ್ರಿಯಿಸಿದ ಸತೀಶವ್ರೆ, ನಂಜುಂಡವ್ರೆ, ಶ್ರೀಧರವ್ರೆ ಜೋಕುಮಾರವ್ರೆ, ಪಾರ್ಥವ್ರೆ ಧನ್ಯವಾದಗಳು
ಹೌದು ರಾಜಕಾರಣಿ - ಆತ್ಮಾವಲೋಕನ ದಾಯಾದಿ ಪದಗಳಾಗಿವೆ.
ಶ್ರೀಧರವ್ರೆ ಅಲ್ಲಿಗೆ ಉದ್ದಾರವಾಯಿತು ನಮ್ಮ ಚೆಲುವ ಕನ್ನಡ ನಾಡು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.