ಈಗಿನಂತೆ 3 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಚೈನ್ ಮೈಲ್‍ಗಳು
tvsrinivas41's picture
31
May
2006
ಪುಟ
ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,725
ಈ ಹೆಣ್ಮಗಳ ಹೋರಾಟಕ್ಕೆ ಕೊನೆ ಎಂದು?
rashmi_pai's picture
Rashmi Pai
24
Oct
2011
ಬ್ಲಾಗ್ ಬರಹ

 ಶ್ವರ್ಯಾ ರೈ ನವಂಬರ್ ತಿಂಗಳಲ್ಲಿ ಯಾವ ದಿನಾಂಕ ಮಗುವಿಗೆ ಜನ್ಮ ನೀಡುತ್ತಾಳೆ? ಅದು ಹೆಣ್ಣೋ, ಗಂಡೋ? ಅಥವಾ ಅವಳಿಯೋ? ಐಶ್ವರ್ಯಾ ರೈಯ ಹೆರಿಗೆ ದಿನಾಂಕಕ್ಕೂ ಜನ...

ಪ್ರತಿಕ್ರಿಯೆಗಳು: 13
ಹಿಟ್ಸ್ : 351
"ಹಂಸನಾದ" ಪುಸ್ತಕ ಬಿಡುಗಡೆ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
16
Jul
2011
ಲೇಖನ

ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,059
ಮಹಾಭಾರತದಲ್ಲಿ ಭಾಗೀರಥಿ !
bhalle's picture
ಶ್ರೀನಾಥ್ ಭಲ್ಲೆ
11
Jul
2011
ಲೇಖನ

ನೀರಿನ ಮಹಿಮೆಯನ್ನು ಎಷ್ಟು ನುಡಿದರೂ ಕಡಿಮೆಯೇ. ನೀರು ಪ್ರಕೃತಿದತ್ತವಾದ ವರ. ನೀರು ಜೀವಿಗಳಿಗೆ ಮಹದುಪಕಾರಿ. ಇದೇ ನೀರು ಮುನಿದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು...

ಪ್ರತಿಕ್ರಿಯೆಗಳು: 26
ಹಿಟ್ಸ್ : 800
ಇಂದಿಗೂ ಪ್ರಸ್ತುತವಾಗಿರುವ ಬಸವಣ್ಣನವರ ವಚನಗಳು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
16
May
2010
ಪುಟ

  (ಇಂದು ಬಸವ ಜಯಂತಿ. ತನ್ನಿಮಿತ್ತ ಈ ಲೇಖನ)  

  ಇಂದಿಗೆ ಒಂಬತ್ತು ಶತಮಾನಗಳ ಹಿಂದೆ ಬುವಿಯ ಭಾಗ್ಯವಾಗಿ ಬಂದವರು ಬಸವಣ್ಣನವರು. ಅವರು ಅಂದು ಸಾರಿದ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,450
ಅಂತರಜಾಲಕ್ಕೆ ಅಂಕುಶದ ವಿರುದ್ಧ ವಿಕಿಪೀಡಿಯ ಪ್ರತಿಭಟನೆ
uniquesupri's picture
ಸುಪ್ರೀತ್.ಕೆ.ಎಸ್
18
Jan
2012
ಲೇಖನ

ಅಂತರಜಾಲವನ್ನು ಪ್ರಬುದ್ಧ ಹಾಗೂ ಪರಿಣಾಮಕಾರಿ ಸುದ್ದಿ ಮಾಧ್ಯಮವಾಗಿ ಸರಕಾರಗಳು ಗುರುತಿಸಲು ಶುರುಮಾಡಿದ್ದು ಇತ್ತೀಚೆಗಷ್ಟೇ. ಅರಬ್ ಸ್ಪ್ರಿಂಗ್ ಎಂದು ಖ್ಯಾತವಾದ ಅರಬರ ನಾಡಿನ...

ಪ್ರತಿಕ್ರಿಯೆಗಳು: 8
ಹಿಟ್ಸ್ : 296
ತಾವರೆಯ ಗಿಡ ಹುಟ್ಟಿ......
shreeshum's picture
ಆರ್.ಶರ್ಮಾ.ತಲವಾಟ
06
Aug
2010
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 9
ಹಿಟ್ಸ್ : 797
ಸಂಸಾರ ತಾಪತ್ರಯಗಳು
hamsanandi's picture
ಹಂಸಾನಂದಿ
24
Apr
2011
ಬ್ಲಾಗ್ ಬರಹ

ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ...

ಪ್ರತಿಕ್ರಿಯೆಗಳು: 8
ಹಿಟ್ಸ್ : 724
ಕರ್ನಾಟಕದ ಭಗೀರಥ ಎಚ್ ಎನ್ ನಂಜೇಗೌಡರನ್ನು ಮರೆಯುವುದುಂಟೇ?
arkalgudjayakumar's picture
Arkalgud Jayakumar
18
Dec
2010
ಲೇಖನ

ಅದು ಕಾವೇರಿ ನದಿ ನೀರಿನ ವಿವಾದ ಭುಗಿಲೆದ್ದ ಸಂಧರ್ಭ, ಸಲ್ಲದ ಕ್ಯಾತೆ ತೆಗೆಯುತ್ತಿದ್ದ...
ಪ್ರತಿಕ್ರಿಯೆಗಳು: 2
ಹಿಟ್ಸ್ : 376
ಅಂಗಿ
ramaswamy's picture
ಡಿ.ಎಸ್.ರಾಮಸ್ವಾಮಿ
03
Oct
2010
ಪುಟ

ಅಂಗಿ

ಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ
ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ
ಅಥವ
ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗ
...

ಪ್ರತಿಕ್ರಿಯೆಗಳು: 2
ಹಿಟ್ಸ್ : 775

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಆ ದಿನಗಳನೆಂತು ಮರೆಯಲಿ ನಾನು 4

ಆ ದಿನಗಳನೆಂತು ಮರೆಯಲಿ ನಾನು 4

          ಹಾದಿಯಲ್ಲಿ ಬಿದ್ದ ಹೆಂಚಿಪಿಕ್ಕ ಹುಡುಕಿತಂದು

ಕುಂಟಬಿಲ್ಲೆಗೆಂದು ಉಜ್ಜಿ ಉಜ್ಜಿ ಬಚ್ಚೆಗೈದು

ಮನೆಯ ಬರೆದು ಅಚೆ ನಿಂತು ಬಚ್ಚೆ ಚಿಮ್ಮಿ

ಗೆರೆಯ ತುಳಿಯದಂತೆ ಕುಂಟಿ ಮುಂದೆ ಸಾಗಿ

ಗೆರೆತುಳಿಯೆ ಔಟೌಟೆನುತಲೆಲ್ಲ ಒಗ್ಗೊರಳಲಿ ಕೂಗಿ

ಗೆರೆಯ ತುಳಿಯದಂತೆ ಮನೆಯನೆಲ್ಲ ದಾಟಿ

ಗೆದ್ದೆವೆಂದು ಕುಣಿದು ಕುಪ್ಪಳಿಸಿ ಹರ್ಷಸಿ ನಲಿದ

ನಲವಿನಾ ದಿನಗಳನೆಂತು ಮರೆಯಲಿ ನಾನು

ಚಿಣ್ಣರೊಡನೆ ಕೂಡಿ ಚಿನ್ನಿಕೋಲು, ಬುಗುರಿ,

ಗೋಲಿ, ಮರಕೋತಿಯಾಟವಾಡಿ

ಸಂಜೆ ಕಳೆಯೆ ಮನೆಗೆ ಬಂದು ಶ್ಲೋಕ ಪಠಿಸಿ,

ಭಜನೆಮಾಡಿ ದೇವಗೊಂದಿಸಿ

ವಾರ, ಮಾಸ, ತಿಥಿ, ನಕ್ಷತ್ರ, ಸಂವತ್ಸರ,

ಮಗ್ಗಿಯೊಂದನುಬಿಡದೆ ಬಾಯಿ ಪಾಠಹೇಳಿ

ಅಜ್ಜಿ ಸುತ್ತಾ ನಾವು ಕುಳಿತು

ಸವಿಯ ತುತ್ತಿಗಾಗಿ ಕೈಯ ಒಡ್ಡಿ ಹೊಟ್ಟೆಬಿರಿಯೆ ತಿಂದು

ಕೊನೆಯ ತುತ್ತಿಗಾಗಿ ನಾವು ಕಾದಾಡಿದ

ಆ ದಿನಗಳನೆಂತು ಮರೆಯಲಿ ನಾನು

ರವಿವಾರ ನಮ್ಮೂರ ಸಂತೆ, ಸೋಮವಾರ ಆಚೆಯೂರ ಸಂತೆ,

ಗುರುವಾರ ನೆರೆಯೂರ ಸಂತೆ, ಶನಿವಾರ ಮತ್ತೊಂದೂರ ಸಂತೆ,

ಸಂತೆಯೆಂದೊಡನೆ ಶಾಲೆಬಿಟ್ಟು ಅಪ್ಪನೊಡನೆ ಗಾಡಿಯೇರಿ ಸಾಗಿ

ಜನರನಡುವೆ ನುಸುಳಿ ತೂರಿ ಅಜ್ಜಿಗೆ, ಅಜ್ಜಗೆ, ಅಮ್ಮಗೆ, ಅಕ್ಕಗೆ,

ಅಣ್ಣಗೆ, ತಮ್ಮಗೆ, ತಂಗಿಗೆಂದು ಕಂಡುದೆಲ್ಲಾಯ್ದು ಕೊಂಡುತಂದು

ಎಲ್ಲರಿಗೆ ಕೊಟ್ಟು ತೃಪ್ತಿಪಟ್ಟ ಆ ದಿನಗಳನೆಂತು ಮರೆಯಲಿ ನಾನು

 

ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ

ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?

ಬೇಗ ಬರಲಿ ಆ ಮಧುರ ಕ್ಷಣ

ನಾ ಮರೆಯಲಾಗದಾ ದಿನ.

Average: 3 (2 votes)
52 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
H A Patil's picture
04
Feb
2012
12:59

ಉ: ಆ ದಿನಗಳನೆಂತು ಮರೆಯಲಿ ನಾನು 4

ಮೇಡಂ ವಂದನೆಗಳು

ನಿಮ್ಮ ಬಾಲ್ಯದ ನೆನಪುಗಳನ್ನು ಬಹಳ ಚೆನ್ನಾಗಿ ದಾಖಲಿಸಿದ್ದೀರಿ, ಇದು ನಿಮ್ಮ ಬಾಲ್ಯದ ನೆನಪು ಮಾತ್ರ ಅಲ್ಲ ಎಲ್ಲರ ಬಾಲ್ಯದ ನೆಪುಗಳು ಕೂಡ. ಧನ್ಯವಾದಗಳು.

padma.A's picture
04
Feb
2012
9:56

ಉ: ಆ ದಿನಗಳನೆಂತು ಮರೆಯಲಿ ನಾನು 4

ಪಾಟೀಲರೇ ನಿಮ್ಮ ಪ್ರತಿಕ್ರಿಯೆಯನ್ನು ಓದಿದೆ ನೀವು ಹೇಳಿರುವುದು ನಿಜ, ಇದು ಒಂದು ಪೀಳಿಗೆಯವರಗಿನ ಎಲ್ಲರ ಬಾಲ್ಯದ ನೆನಪುಗಳು ಕೂಡ. ನೆನೆಯುತ್ತಾ ಹೋದರೆ ಕೊನೆಯಿಲ್ಲವೆನಿಸುತ್ತದೆ.
ಇಂದಿನ ಮಕ್ಕಳು ಅತಿಶಯವಾಗಿ ಏನೇನೋ ಪಡೆಯುತ್ತಿದ್ದಾರೆ ಆದರೆ ಇವುಗಳಿಂದ ವಂಚಿತರಾಗುತ್ತಿದ್ದಾರೆ ಅನ್ನಿಸುತ್ತದೆ.
ಧನ್ಯವಾದಗಳು.

venkatb83's picture
04
Feb
2012
10:30

ಉ: ಆ ದಿನಗಳನೆಂತು ಮರೆಯಲಿ ನಾನು 4

ಹಿರಿಯರೇ

ನಿಮ್ಮ 'ನಾ ಎಂತು ಮರೆಯಲಿ' ೪ ನೇ ಕಂತು ಸೊಗಸಾಗಿದ್ದು,
ನನಗೆ ನನ್ನ ೧೫ ವರ್ಷ ಹಿಂದಿನ ನನ್ನ ನೆನಪಿಗೆ ಕರ್ದೊಯ್ತು(ಮರ ಕೋತಿಯಾಟ- ಗಿಲ್ಲಿ ದಾಂಡು- ಕಬ್ಬಡ್ಡಿ ಇತ್ಯಾದಿ)...
ನಾವೆಲ್ಲ ಹಾಗೊಮ್ಮೆ ಬೇರೆ ಇನ್ಣೇನೇನಾರಾ ಬೇಡ ಅಂದೆವೂ,
ಆದರೆ ಬಾಲ್ಯ ಮರಳಿ ಬರ್ವ ಹಾಗಿದ್ದರೆ ಅದು ಎಲ್ಲರ್‍ಗೂ ಬೇಕೇ ಬೇಕು ಅನ್ಸುತ್ತೆ..
ವಂದನೆಗಳು...

padma.A's picture
04
Feb
2012
11:04

ಉ: ಆ ದಿನಗಳನೆಂತು ಮರೆಯಲಿ ನಾನು 4

ನಿಜ ಸಪ್ತಗಿರಿ
ಯಾವ ಜಂಜಾಟ, ಜವಾಬ್ದಾರಿಯೂ ಇಲ್ಲದೆ ಸಂತಸದಿ ಆಡಿನಲಿಯುವ ಆದಿನ ಯಾರಿಗೆ ಬೇಡ ಹೇಳಿ?
ಧನ್ಯವಾದಗಳು