20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಂಕ್ ಸ್ಕೇಪ್ (Inkscape) ಉಪಯೋಗಿಸಿ.

August 5, 2011 - 1:58pm
vijay pai

ನಮ್ಮೆಲ್ಲರಲ್ಲೂ ಕ್ರಿಯಾತ್ಮಕತೆ ಇದೆ. ಬಣ್ಣದೊಡನೆ ಆಡುವ ಮನಸಿದೆ..ಕಲ್ಪನೆಯನ್ನು ಚಿತ್ರರೂಪಕ್ಕಿಳಿಸುವ ಇಚ್ಛೆಯಿದೆ.. ಆದರೆ ನಿಜ ಬಣ್ನಗಳ ಸಹವಾಸವನ್ನು ಯಾವ್ಯಾವುದೋ ಕಾರಣಕ್ಕೆ ದೂರ ಇಟ್ಟಿದ್ದೇವೆ. ಇಷ್ಟಾಗಿಯೂ ಕಲೆಯ, ಕಲಾವಿದರ ಬಗ್ಗೆ ಯಾವಾಗಲೂ ನಮಗೊಂದು ಸುಂದರ ಅಸೂಯೆ!. 

ಬನ್ನಿ ನಮ್ಮೀ  ಅಸೂಯೆಯನ್ನು ಹರಿಯ ಬಿಡಲು ಒಂದು ದಾರಿ ಕಂಡುಕೊಳ್ಳೋಣ..ಪಿ.ಸಿ ಯನ್ನು ಉಪಯೋಗಿಸಿ ಬಣ್ಣಗಳ ಅಟವಾಡೋಣ..ಕಲ್ಪನೆಯನ್ನು ಹರಿಯಬಿಡೋಣ. ಇಲ್ಲಿ  ಇಂಕ್ ಸ್ಕೇಪ್ ತತ್ರಾಂಶ ಉಪಯೋಗಿಸಿ ನಾನು ಬಿಡಿಸಿದ ಕೆಲವು ಚಿತ್ರಗಳನ್ನು ಕೊಟ್ಟಿದ್ದೇನೆ.   ಇಂಕ್ ಸ್ಕೇಪ್ ಒಂದು ಒಪನ್ ಸೋರ್ಸ ತತ್ರಾಂಶ. ಬಳಸಲು ನೀವು ಹಣ ಕೊಡಬೇಕಾಗಿಲ್ಲ. ಇದು ನಾವು ಹಣ ಕೊಟ್ಟು ಕೊಳ್ಳ ಬೇಕಾದ ಕೊರೆಲ್ ಡ್ರಾ, ಇಲ್ಲಸ್ಟ್ರೇಟರ್ ತತ್ರಾಂಶಗಳಿಗೆ ಸಮಾನವಾದದ್ದು. ಆರಂಭದಲ್ಲಿ ಸ್ವಲ್ಪ ಗೊಂದಲ ಎನಿಸಿದರೂ, ಹತ್ತು ದಿನಗಳಲ್ಲಿ ನೀವು ಇಂಕ್ ಸ್ಕೇಪ್ ಅಂಗಳದಲ್ಲಿ ಆಟವಾಡಲು ಸುರು ಮಾಡುತ್ತೀರಿ. ನಿಮಗಿದನ್ನು ಕಲಿಸುವ ನಿಟ್ಟಿನಲ್ಲಿ ನೆಟ್ ನಲ್ಲಿ ಬೇಕಾದಷ್ಟು ಚಿತ್ರಸಮೇತ ಪಠ್ಯಗಳಿವೆ.

ಟ್ರೈ ಮಾಡಿ :). 

ಇಂಕ್ ಸ್ಕೇಪ್ ನ್ನು ಇಳಿಸಿಕೊಳ್ಳಲು ಕೊಂಡಿ.

http://inkscape.org/

butterfly

 ( ಮೇಲಿನ ಚಿತ್ರಗಳು ನನ್ನ ಮೌಸಕುಂಚದಿಂದ ಬಂದಂತವು..ಬೆಸಿಕ್ ಚಿತ್ರಗಳಿವು. ಸುಮಾರು ಇಪ್ಪತ್ತರಿಂದ-ಮೂವತ್ತು ನಿಮಿಷಗಳಲ್ಲಿ ಮುಗಿಸಬಹುದಾದಂತವು. ಒಮ್ಮೆ ನೀವು ಇಂಕ ಸ್ಚೇಪ್ ನಲ್ಲಿ ಕೊಂಚ ಪಳಗಿದ ಮೇಲೆ, ಸ್ವಲ್ಪ ತಾಳ್ಮೆ ಮತ್ತು ಸಮಯ ಬೇಡುವಂತಹ ಈ ಕೆಳಗಿನ ಚಿತ್ರದಂತವುಗಳನ್ನು ಬಿಡಿಸಬಹುದು. ಕೆಳಗಿನ ಚಿತ್ರ ಬನವಾಸಿಯ ಮಧುಕೇಶ್ವರ ದೇವಾಲಯದ್ದು. )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on

ಉಪಯುಕ್ತ ಮಾಹಿತಿ!
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಧನ್ಯವಾದಗಳು ಸುರೇಶ ಹೆಗ್ಡೆ ಮತ್ತು ಶ್ರೀನಿವಾಸ ಮೂರ್ತಿಯವರಿಗೆ :). ಇಂಕ ಸ್ಕೇಪ್ ನಂತಹ svg ಎಡಿಟರ್ ಗಳಲ್ಲಿ ನಮ್ಮ ಕಲ್ಪನೆಯೆ ನಮಗೆ ಮಿತಿ. ಉಪಯೋಗಿಸಿ ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ನೀವು ಬರೆದ ಚಿತ್ರಗಳು ಮತ್ತು ಮಾಹಿತಿ ಬಹಳ ಚೆನ್ನಾಗಿದೆ. ಡ್ರಾಯಿಂಗ್ ಬಗ್ಗೆ ಒಲವಿರುವ ನನ್ನ ಮಗಳಿಗೆ ಈ ಮಾಹಿತಿಯಿಂದ ತುಂಬಾ ಉಪಯೋಗವಾಗುತ್ತೆ ಅದಕ್ಕಾಗಿ ನಿಮಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ಮನೋರಂಜನೆಗಾಗಿ ಹಾಗೂ ಉಪಯುಕ್ತ ಸಮಯ ಕಳೆಯಲು ನನ್ನಂತವರಿಗೆ ಇದು ಬಹಳ ಅನುಕೂಲವಾಗಿದೆ.

ವಂದನೆಗಳು/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಶ್ರೀಧರ ಬಂಡ್ರಿ ಮತ್ತು ರಮೇಶ್ ಕಾಮತರಿಗೆ ಧನ್ಯವಾದಗಳು.

ಇಂಕ ಸ್ಕೇಪ್ ನ ಮೊದಲ ಹಂತ ಮನರಂಜನೆಯಾದರೂ, ಇದಕ್ಕೆ ಕಮರ್ಶಿಯಲ್ ರಂಗದಲ್ಲೂ ಸಾಕಷ್ಟು ಮನ್ನಣೆಯಿದೆ.
ಇಂಕ ಸ್ಕೇಪನ ಜೊತೆಗೆ ನಿಮ್ಮ ಕಂಪ್ಯೂಟರನಲ್ಲಿ ಅಳವಡಿಸಿಕೊಳ್ಳಬಹುದಾದ ಇನ್ನೊಂದು ಉತ್ತಮ ತತ್ರಾಂಶವೆಂದರೆ ಗಿಂಪ್ (Gimp). ಇದು ಕೂಡ ಮುಕ್ತ ತತ್ರಾಂಶ (open source). ಬಳಸಲು, ಬದಲಿಸಲು ನಿರ್ಭಂಧವಿಲ್ಲ. ಹಣಕೊಟ್ಟು ಕೊಳ್ಳಬೇಕಾದ ಫೋಟೊಶಾಫ್ ತತ್ರಾಂಶಕ್ಕೆ ಸಮಾನವಾದದ್ದು. ಅವಶ್ಯವಾಗಿ ಬಳಸಿ ನೋಡಿ.
ಡೌನಲೋಡ ಮಾಡಿಕೊಳ್ಳಲು ಕೊಂಡಿ:
http://www.gimp.org/

ಏನಾದರೂ ಸಂದೇಹಗಳಿದ್ದಲ್ಲಿ ಬರೆಯಿರಿ. ಸಹಾಯ ಮಾಡಲು ಪ್ರಯತ್ನಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

---- ಪ್ರತಿಕ್ರಿಯೆ ಪುನರಾವರ್ತನೆಯಾಗಿದೆ ---

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ವಿಂಡೋಸ್ ೭ರಲ್ಲಿ ಅಳವಡಿಸಲಾಗುತ್ತಿಲ್ಲ!!! :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಸಂತೋಷ್..
1) ಇಂಕ್ ಸ್ಕೇಪ್ 0.48.1 ವರ್ಶನ್ ವಿಂಡೋಸ್ 7 ರಲ್ಲಿ ಅಳವಡಿಸಬಹುದು.
ಕೊಂಡಿ :
http://download.cnet...

2) ಇನಸ್ಟಾಲೇಶನ್ ಹಂತದಲ್ಲೇ ತೊಂದರೆ ಇದ್ದರೆ, ನೀವು admin account ನಿಂದ ಲಾಗಿನ್ ಆಗಿ ಅಳವಡಿಸಲು ಪ್ರಯತ್ನಿಸಿ. user mode ಲ್ಲಿ ಇನಸ್ಟಾಲೇಷನ್ ರಿಸ್ಟ್ರಿಕ್ಷನ್ ಆಗಿರುವ ಸಾಧ್ಯತೆಯಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ಇಂಕ್ ಸ್ಕೇಪ್ ತಾಣದಿಂದ ಡೌನ್ ಲೋಡ್ ಮಾಡಲು ಯತ್ನಿಸಿದ್ದೆ. ಈ ಲಿಂಕನ್ನೂ ಪ್ರಯತ್ನಿಸುತ್ತೇನೆ! ಕೋರಲ್ ಡ್ರಾ ಇಷ್ಟವಾಗಿದ್ದ ಸಾಫ್ಟ್ ವೇರ್, ಅದರಂತೆ ಇರುವುದಾದರೆ ಇದನ್ನೂ ಬಳಸಬೇಕೆಂಬ ಆಶಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಸಂತೋಷ್..
>> ಕೋರಲ್ ಡ್ರಾ ಇಷ್ಟವಾಗಿದ್ದ ಸಾಫ್ಟ್ ವೇರ್, ಅದರಂತೆ ಇರುವುದಾದರೆ ಇದನ್ನೂ ಬಳಸಬೇಕೆಂಬ ಆಶಯ.<<
ಕೋರಲ್ ಡ್ರಾ ದಲ್ಲಿ text handling ಮತ್ತು multi page documentation ಸುಲಭ. ಪ್ರೋಫೆಶನಲ್ ತಂತ್ರಾಂಶ ಆಗಿರುವುದರಿಂದ ಅದು ಇನಸ್ಟಂಟ್ ಕಾಫಿ ಇದ್ದ ಹಾಗೆ :).

ಇಂಕ ಸ್ಕೇಪ್ ಮುಖ್ಯವಾಗಿ ವೆಕ್ಟರ್ ಗ್ರಾಫಿಕ್ಸ ಎಡಿಟರ್. ಟೆಕ್ಸ್ಟ ಎಡಿಟಿಂಗ್ ಇಲ್ಲಿ ಸುಲಭವಲ್ಲ. ನೀವು ಇಲ್ಲಸ್ಟ್ರೇಶನ್, ಐಕಾನ್/ಲೋಗೊ ಡಿಸೈನಿಂಗ್, ಕಾಮಿಕ್ ಮುಂತಾದವುಗಳನ್ನು ಚೆನ್ನಾಗಿ ಮಾಡಬಹುದು. ನಾನು ಇಂಕ ಸ್ಕೇಪ್ ಜೊತೆಗೆ ಗಿಂಪ್ ನ್ನು ಬಳಸುತ್ತೇನೆ.

ನೀವು ಕಾಫಿ ಪುಡಿ ಬಳಸಿ ನಿಮ್ಮ ರುಚಿಗೆ ತಕ್ಕಂತ ಕಾಫಿ ಮಾಡುವ ಶ್ರಮ ತೆಗೆದುಕೊಳ್ಳುವವರಾದರೆ ಇಂಕ ಸ್ಕೇಪ್ ನಿಜಕ್ಕೂ ಖುಷಿ ಕೊಡುವ ತಂತ್ರಾಂಶ.. ಮೇಲಾಗಿ ಇದು ಮುಕ್ತ ತಂತ್ರಾಂಶ!.

ಈ ಕೆಳಗಿನ ಕೊಂಡಿಗೆ ಬೆಟ್ಟಿ ಕೊಡಿ. ನೂರಕ್ಕೂ ಹೆಚ್ಚು ವಿಡಿಯೋ ಪಾಠಗಳಿವೆ.

http://screencasters...

ಇನ್ನೊಂದು ಉಪಯುಕ್ತ ಕೊಂಡಿ.

http://inkscapetutor...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamalap09 on

ವಿಜಯ್,

ಮಾಹಿತಿಯುಕ್ತ ಲೇಖನ

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಧನ್ಯವಾದ ಕಮಲ ಮತ್ತು ಗೋಪಾಲ್ ಅವರಿಗೆ :) .ಇಂಕಸ್ಕೇಪ್ ಬಳಸಿನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jokumar on

ನಾನು ಕೋರಲ್ ಡ್ರಾ ಹಾಗು ಇಲುಸ್ಟ್ರೇಟರ್ ನ ಭಕ್ತ! ಆದರೆ ನನ್ನಲ್ಲಿ ಉಬುಂಟು ವಿನಲ್ಲಿ ಇದನ್ನು ಡೌನ್ ಲೋಡ ಮಾಡಿ ಸುಮ್ಮನೆ ಇಟ್ಟಿದ್ದೆ ನಿಮ್ಮ ಚಿತ್ರಗಳನ್ನು ನೋಡಿದ ಮೇಲೆ ನಾನು ಒಂದು ಕೈ ನೋಡೋಣವೆಂದು ಈಗ ಸೆವೆನ್ ನಲ್ಲಿ ಡೌನ್ ಲೋಡ ಗಾಗಿ ಹಾಕಿದ್ದೇನೆ, ಇದನ್ನು ಲಿಬ್ರೆ ಜೊತೆ ಬಳಸಿ ಇಮೇಜಗಾಗಿ ಜಿಂಪ್ ಬಳಸಿದರೆ ನಮಗೆ ಕೋರಲ್ ಡ್ರಾ, ಫೋಟೋಶಾಪ್, ಇಲ್ಲುಸ್ಟ್ರೇಟರ್ ಬೇಕಾಗಿಲ್ಲ.
ಇದನ್ನು ಪರಿಚಿಯಸದಕ್ಕಾಗಿ ತುಂಬ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by jokumar on

ಸಂಪದಿಗರಿಗೆ ಇಂಕಸ್ಕೇಪ್ ಹಾಗು ಜಿಂಪ್ ಡೌನ ಲೋಡ ನಲ್ಲಿ ತೊಂದರೆಯಾಗುತ್ತಿದ್ದರೆ ಈ ಕೆಳಗಿನ ಲಿಂಕ್ ನಿಂದ ನೇರವಾಗಿ ಬೇಗನೆ ಡೌನ್ ಲೋಡ್ ಮಾಡಿಕೊಳ್ಳಬಹುದು

http://www.filehippo...
http://www.filehippo...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಜೋಕುಮಾರ..ಇನ್ನೆರಡು ಡೌನಲೋಡ ಲಿಂಕಗಳನ್ನು ಸೇರಿಸಿದ್ದಕ್ಕೆ ಧನ್ಯವಾದ.
ನೀವು ಮಾಡೆಲ್ ಡಿಸೈನ್, 3D ಕಂಟೆಂಟ್ ಕ್ರಿಯೇಶನ್ ಮಾಡುವವರಾದರೆ ಇಂಕ ಸ್ಕೇಪ್, ಗಿಂಪ್ ನ ಜೊತೆಗೆ ಬ್ಲೆಂಡರ್ ಅನ್ನು ಬಳಸಿ. ಇದು ಕೂಡ ಮುಕ್ತ ತಂತ್ರಾಂಶ. ಬಹಳ ಚೆನ್ನಾಗಿದೆ.
----
ನಿಮಗೆ ಇಂಕಸ್ಕೇಪ್ ನಲ್ಲಿ ಇನ್ನಷ್ಟು ಉತ್ಸುಕತೆ ಬರಲೆಂದು ಐಸ್ ಕ್ಯಾಂಡಿಯ ಚಿತ್ರವೊಂದನ್ನು ಹೊಸದಾಗಿ ಸೇರಿಸಿದ್ದೇನೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>ನಿಮಗೆ ಇಂಕಸ್ಕೇಪ್ ನಲ್ಲಿ ಇನ್ನಷ್ಟು ಉತ್ಸುಕತೆ ಬರಲೆಂದು ಐಸ್ ಕ್ಯಾಂಡಿಯ ಚಿತ್ರವೊಂದನ್ನು ಹೊಸದಾಗಿ ಸೇರಿಸಿದ್ದೇನೆ :)
ವಿಜಯ್,
ನಾನು ಬರುವುದರೊಳಗೆ ಐಸ್‌ಕ್ಯಾಂಡಿಯನ್ನು ಯಾರೋ ತಿಂದು ಮುಗಿಸಿದ್ದಾರೆ :(
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಗಣೇಶಣ್ಣ..
ಬಹುಶಃ ಕರಗಿ ಹೋಗಿರಬೇಕು!..ಈಗ ಮತ್ತೊಂದು ಕ್ಯಾಂಡಿ ಇಟ್ಟಿದ್ದೀನಿ..ನಿಮಗಾಗಿ :). ಅಂದಹಾಗೆ ಚೌತಿನೂ ಬಂತಲ್ವಾ? ಆದ್ದರಿಂದ ನಿಮಗೊಂದಿಷ್ಟು ಹೂವು ಇಟ್ಟಿದ್ದಿನಿ..ಸ್ಯಾಂಪಲ್ ಗಂತ. ಜ್ಯಾಮಿತಿ ಪ್ರಕಾರವೇ ಬೆಳೆಸಿದ್ದು ಇವನ್ನು. ಮತ್ತೊಂದೆನೆಂದರೆ ಸ್ವಾತಂತ್ರ್ಯೋತ್ಸವದ ಪ್ರಭಾವ ಇರ್ಬೇಕು..ಹೂವಿನ ಕಲರ ಬದಲಾಗಿಬಿಟ್ಟಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ವಿಜಯ್,
ಸರಿಯಾದ ಸಮಯಕ್ಕೆ ಸಂಪದ ಎಂಟರ್ ಆದೆ. ಸ್ವಲ್ಪ ತಡವಾಗಿರುತ್ತಿದ್ದರೆ ಇದೂ ಕರಗಿ ಹೋಗುತ್ತಿತ್ತು. :) ಥ್ಯಾಂಕ್ಸ್.
ಎಲ್ಲಾ ಚಿತ್ರಗಳೂ ಚೆನ್ನಾಗಿದೆ. ಅದರಲ್ಲೂ ಈಗ ಹಾಕಿದ ಹೂವಿನ ಚಿತ್ರ ಸೂಪರ್. ಮೌಸ್ ಅಲ್ಲಾಡಿಸಿದ ಹಾಗೇ ಹೂವಿನ ದಳಗಳೂ ಚಲಿಸುತ್ತವೆ!
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಗಣೇಶಣ್ಣ..ಮೌಸ್ ಜಾಸ್ತಿ ಅಲುಗಾಡಿಸಬೇಡಿ..ದಳಗಳೆಲ್ಲ ಉದುರಿ ಹೋಗೊ ಚಾನ್ಸ್ ಇದೆ !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Ganesh.dvg on

ಸರ್, ನಿಮ್ಮ ಕ್ರಿಯಾತ್ಮಕವಾದ ಚಿತ್ರಗಳು ನನಗೆ ಬಹಳ ಇಷ್ಟವಾಯಿತು ಹಾಗೆಯೇ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ, ಸಾವಿರ ದನ್ಯವಾದಗಳು ತಮಗೆ.. ನಿಮ್ಮ ಲೇಖನ ಓದಿದ ಕೂಡಲೇ ತತ್ರಾಂಶವನ್ನ ಡೌನ್ಲೋಡ್ ಮಾಡಿ ಅಳವಡಿಸಿದೆ, ತುಂಬ ಖುಷಿ ಆಯಿತು.
ಮತ್ತೊಮ್ಮೆ ದನ್ಯವಾದಗಳು ತಮಗೆ

ವಿಶ್ವಾಸಿ ..
ಗಣೇಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijay pai on

ಮರು ಧನ್ಯವಾದಗಳು ನಿಮಗೆ :)..ಮೇಲಿನ ಪ್ರತಿಕ್ರಿಯೆಯಲ್ಲಿ ಕೊಟ್ಟ ಇಂಕಸ್ಕೇಪ್ ಟ್ಯುಟೋರಿಯಲ್ ಗಳ ತಾಣಕ್ಕೆ ಬೆಟ್ಟಿ ಕೊಡಿ. ಕಲಿಯಲು ಸಾಕಷ್ಟಿದೆ ಅಲ್ಲಿ. ಸಂದೇಹಗಳಿದ್ದರೆ ಬರೆಯಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.