June 22, 2012 - 9:05pm
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ಸಾಮಾನ್ಯವಾಗಿ ೨೨ ಜೊತೆ ಆಟೋಸೋಮ್ ಗಳು ಇರುತ್ತವೆ. ಒಂದು ವೇಳೆ ೨೧ ನೇ ವರ್ಣತಂತು (ಆಟೋಸೋಮ್), ಎರಡರ ಬದಲು ಮೂರಿದ್ದರೆ ಏನಾಗುತ್ತದೆ?
2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಕೆಂಪು ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ."
3) ಬೀಟಾ ಥಾಲಿಸೀಮಿಯಾ ಮೇಜರ್ ಒಂದು ಆನುವಂಶಿಕ ಕಾಯಿಲೆ. ಹಾಗಾದರೆ ಮಗುವಿಗೆ ಈ ಕಾಯಿಲೆ ಬರಲು ೧) ತಂದೆಗೆ ಈ ಕಾಯಿಲೆ ಇರಲೇಬೇಕು ೨) ತಾಯಿಗೆ ಈ ಕಾಯಿಲೆ ಇರಲೇಬೇಕು ೩) ತಂದೆ ಅಥವಾ ತಾಯಿಗೆ ಈ ಕಾಯಿಲೆ ಇರಲೇಬೇಕು ಎಂದೇನಿಲ್ಲ
4) ಸರಿಯೋ ತಪ್ಪೋ ಹೇಳಿ: ಮನುಷ್ಯನಲ್ಲಿ ಇರುವ ಒಟ್ಟೂ ಜೀನ್ ಗಳ ಕುರಿತು ಇನ್ನೂ ನಿಖರವಾಗಿ ಹೇಳಲಾಗದು. ಆದಾಗ್ಯೂ ಮನುಷ್ಯನಲ್ಲಿರುವಷ್ಟು ಜೀನ್ ಗಳು ಬೇರೆ ಯಾವ ಜೀವಿಯಲ್ಲೂ ಇಲ್ಲ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಉತ್ತರಿಸಿ - ೨
ಡೌನ್ ಸಿಂಡ್ರೋಮ್ ಎಂಬ ಅಸಹಜತೆ ಕಾಣಿಸುತ್ತದೆ
ಸರಿ
ತಂದೆ ಅಥವ ತಾಯಿಗೆ ಇರಲೇಬೇಕೆಂದು ಇಲ್ಲ
ತಪ್ಪು .
ಉ: ಉತ್ತರಿಸಿ - ೨
ನಿಮ್ಮ ಎಲ್ಲ ಉತ್ತರಗಳೂ ಸರಿ ಇವೆ. :)
ಉ: ಉತ್ತರಿಸಿ - ೨
ಶಾಸ್ತ್ರಿಯವರೆ,
>>ನಿಮ್ಮ ಎಲ್ಲ ಉತ್ತರಗಳೂ ಸರಿ ಇವೆ. :)
-ಇಷ್ಟು ಹೇಳಿದರೆ ಸಾಲದು. ನಮಗರ್ಥವಾಗುವಂತೆ ಇನ್ನಷ್ಟು ವಿವರ ಸೇರಿಸಿ.
೪- http://news.discover... ಸರಿನಾ?
-ಗಣೇಶ.
ಉ: ಉತ್ತರಿಸಿ - ೨
<<-ಇಷ್ಟು ಹೇಳಿದರೆ ಸಾಲದು. ನಮಗರ್ಥವಾಗುವಂತೆ ಇನ್ನಷ್ಟು ವಿವರ ಸೇರಿಸಿ. >>
ನಿಜ ... ವಿವರ ಸೇರಿಸುತ್ತೇನೆ. :)
<<೪- http://news.discover... ಸರಿನಾ? Tiny Flea Has More Genes Than You>>
ನಿಜ ... ಕೆಲ ಬೇರೆ ಜೀವಿಗಳಲ್ಲೂ ಮನುಷ್ಯರಲ್ಲಿರುವುದಕ್ಕಿಂತ ಹೆಚ್ಚು ಜೀನ್ ಗಳಿವೆ.