19
June
2013

ಉತ್ತರಿಸಿ ...

June 21, 2012 - 8:44pm
shivaram_shastri

 

1) ಮಾನವನ ಪ್ರತಿ ಜೀವಕೋಶದಲ್ಲಿ ಒಟ್ಟು ಎಷ್ಟು ವರ್ಣತಂತುಗಳು (chromosomes) ಇರುತ್ತವೆ? 
 
2) ಡಿ ಏನ್ ಎ ಯು A, C, G, T ಎಂಬ ನಾಲ್ಕು ಕೊಂಡಿಗಳಿಂದ ಮಾಡಿರುವ ಒಂದು ಸರಪಳಿ ಎನ್ನಬಹುದಾದರೆ, ಮಾನವನ  ಒಂದು ಜೀವಕೋಶದಲ್ಲಿ ಇರುವ  ಡಿ ಏನ್ ಎ ಯು ಇಂಥ ಎಷ್ಟು ಕೊಂಡಿಗಳಿಂದ ಮಾಡಲ್ಪಟ್ಟಿದೆ?

3) ಸಾಮಾನ್ಯವಾಗಿ ಹೆಂಗಸರಲ್ಲಿ ಎರಡು X ವರ್ಣತಂತುಗಳು ಇರುತ್ತವೆ. ಗಂಡಸರಲ್ಲಿ ಒಂದು X ಮತ್ತು ಒಂದು Y ವರ್ಣತಂತು ಇರುತ್ತವೆ. ಹಾಗಾದರೆ, ಒಂದು X ವರ್ಣತಂತು ಮಾತ್ರ ಇದ್ದು ಇನ್ನೊಂದು X ಅಥವಾ Y ವರ್ಣತಂತು ಇಲ್ಲದೆ ಇದ್ದಾಗ ಆ ವ್ಯಕ್ತಿ ಗಂಡಾಗಿರುತ್ತಾನೋ ಹೆಂಗಸಾಗಿರುತ್ತಾನೋ?

4) ಇವುಗಳಲ್ಲಿ ಯಾವ ರೋಗ  ಗಂಡಸರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ? ೧) ಥಾಲಿಸಿಮಿಯಾ ೨) ಹೀಮೋಫಿಲಿಯಾ ೩) ಸಿಸ್ಟಿಕ್ ಫಾಯ್ಬ್ರೋಸಿಸ್ ೪) ಸಿಕಲ್ ಸೆಲ್ ಕಾಯಿಲೆ
 
    

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

1. 23 ಜೊತೆಗಳು (46)
2 ~ 1000
3. ಟರ್ ನರ್ ಸಿಂಡ್ರೋಮ್
4. ಹಿಮೋಪಿಲಿಯ

ಕ್ಷಮಿಸಿ ಎಲ್ಲ ಪ್ರಶ್ನೆಗಳಿಗು ಉತ್ತರ ಇಂಟರ್ ನೆಟ್ ನಲ್ಲಿ ಹುಡುಕಲು ಪ್ರಯತ್ನಿಸಿದ್ದೇನೆ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ಪಾರ್ಥ ಸರ್,

ನಾಲ್ಕನೆ ಪ್ರಶ್ನೆಗೆ ಉತ್ತರ ಹಿಮೋಪಿಲಿಯದ ಬದಲು ಸಿಕಲ್ ಸೆಲ್ ಕಾಯಿಲೆ ಸರಿಯೆಂದು ತೋರುತ್ತದೆ.

ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

ನಾಲ್ಕನೆಯ ಪ್ರಶ್ನೆಗೆ ಉತ್ತರ [ಹೀಮೋಫಿಲಿಯಾ] ಸರಿಯಾಗಿದೆ. :-) .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

ತಮ್ಮ ಯಶಸ್ವೀ ಪತ್ತೇದಾರಿಕೆಯನ್ನು ಮುಂದುವರೆಸಿರುವ ಪಾರ್ಥಸಾರಥಿ ಅವರಿಗೆ ಅಭಿನಂದನೆಗಳು :-)
ಆದರೂ, ಒಂದು ಉತ್ತರ ಸಮರ್ಪಕವಾಗಿಲ್ಲ ... ಉಳಿದವರೂ ಪ್ರಯತ್ನಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

3) ಒಂದು 'ಎಕ್ಸ್' ವರ್ಣತಂತುವಿರುವುದರಿಂದ ಮತ್ತು 'ವೈ' ಇಲ್ಲದೇ ಇರುವುದರಿಂದ ಅದು ಖಂಡಿತವಾಗಿ ಹೆಣ್ಣು. ಏಕೆಂದರೆ ಎರಡು 'ಎಕ್ಸ್' ಕ್ರೋಮೋಸೋಮುಗಳನ್ನು ಹೊಂದಿರುವ ಸ್ತ್ರೀಯರಲ್ಲಿಯೂ ಕೂಡ ಒಂದು ವರ್ಣತಂತು ನಿಷ್ಕ್ರಿಯಗೊಂಡು ಅದು 'ಬೀರ್ ಬಾಡಿ' ಎನ್ನುವ ಉಂಡೆಯಾಗಿ ರೂಪಾಂತರಗೊಳ್ಳುತ್ತದೆ.
4) ಹೀಮೋಫಿಲಿಯ ಹೆಂಗಸರಲ್ಲಿ ಬರುವುದೇ ಇಲ್ಲವೆಂದೇನೂ ಇಲ್ಲ ಆದರೆ ಅದು ಅವರಲ್ಲಿ ಅಪರೂಪದಲ್ಲಿ ಅಪರೂಪವಷ್ಟೇ! ಏಕೆಂದರೆ ಇದಕ್ಕೆ ಕಾರಣವಾದ ವಂಶವಾಹಿ ಜೀನುಗಳು ಎಕ್ಸ್ ಮತ್ತು ವೈ ಕ್ರೋಮೋಸೋಮುಗಳ ಸಾಮ್ಯತೆ ಇರುವ ಭಾಗಗಳಲ್ಲಿ ಇರುವುದರಿಂದ ಅದನ್ನು ಹೆಂಗಸರಲ್ಲಿ ನೂರಕ್ಕೆ ನೂರರಷ್ಟು ತಳ್ಳಿಹಾಕುವಂತಿಲ್ಲ.

ಒಳ್ಳೆಯ ರಸಪ್ರಶ್ನೆಗೆ ಧನ್ಯವಾದಗಳು, ಶಾಸ್ತ್ರಿಗಳೆ. ನಿಮ್ಮ ಲಿಮರಿಕ್ಕುಗಳನ್ನು ಮುಂದುವರೆಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

ಶ್ರೀಧರ್ ಅವರೇ,
<<ಒಳ್ಳೆಯ ರಸಪ್ರಶ್ನೆಗೆ ಧನ್ಯವಾದಗಳು>> ತಮ್ಮ ಪ್ರೋತ್ಸಾಹಕ್ಕೆ ಋಣಿ.
<<ನಿಮ್ಮ ಲಿಮರಿಕ್ಕುಗಳನ್ನು ಮುಂದುವರೆಸಿ.>> ಪ್ರಯತ್ನಿಸುತ್ತೇನೆ, ನಾನೊಬ್ಬ ಆರಂಭ ಶೂರ!

ತಮ್ಮ ಎರಡೂ ಉತ್ತರಗಳು ಒಟ್ಟಿನಲ್ಲಿ ಸರಿಯಾಗಿವೆ. ಆದಾಗ್ಯೂ ತಮ್ಮ ಎಂದಿನ ಪ್ರತಿಕ್ರಿಯೆಗಳಂತೆ ನಿಖರ ಮತ್ತು ಸ್ಪಷ್ಟವಾಗಿಲ್ಲ. ಉದಾಹರಣೆಗೆ 'ಬೀರ್ ಬಾಡಿ'ಯ ಬದಲು 'ಬಾರ್ ಬಾಡಿ' ಎಂದಾಗಬೇಕು.

ಉಳಿದವನ್ನು ನೀವೇ ಹುಡುಕಿ ಹೇಳುವಿರಾಗಿ ಅಪೇಕ್ಷಿಸುತ್ತೇನೆ. :-)

<<ಹೀಮೋಫಿಲಿಯ ಹೆಂಗಸರಲ್ಲಿ ಬರುವುದೇ ಇಲ್ಲವೆಂದೇನೂ ಇಲ್ಲ ಆದರೆ ಅದು ಅವರಲ್ಲಿ ಅಪರೂಪದಲ್ಲಿ ಅಪರೂಪವಷ್ಟೇ! >> ಇದು ನಿಜ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

.ಶಾಸ್ತ್ರಿಗಳೆ,

ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಗೆಳೆಯರು, ಹೆಂಗಸರದು "ಬಾರ್ ಬಾಡಿ" ಗಂಡಸರದು "ಬೀರ್ ಬಾಡಿ" ಎಂದು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅದೇ ಗುಂಗಿನಲ್ಲಿ ನಾನು ಬಹಶ: 'ಬೀರ್ ಬಾಡಿ' ಎಂದು ಬರೆದಿದ್ದೇನೆ ಎಂದು ಕೊಳ್ಳುತ್ತೇನೆ. :))

1) ಈ ಪ್ರಶ್ನೆಗೆ ಪಾರ್ಥರು ಆಗಲೇ ಉತ್ತರಿಸಿದ್ದರಿಂದ ಮತ್ತು ಅದು ಸರಿಯಾಗಿದ್ದರಿಂದ ಅದನ್ನು ಮತ್ತೆ ಉತ್ತರಿಸುವ ಗೋಜಿಗೆ ಹೋಗಲಿಲ್ಲವಷ್ಟೆ. 22 ಆಟೋಸೋಮ್ ಜೊತೆಗಳು ಮತ್ತು ಒಂದು ಜೊತೆ ಸೆಕ್ಸ್ ಕ್ರೋಮೋಸೋಮುಗಳು. ಒಟ್ಟಿನಲ್ಲಿ 23 ಜೊತೆ ಅಂದರೆ 46 ವರ್ಣತಂತುಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

<<ಹೆಂಗಸರದು "ಬಾರ್ ಬಾಡಿ" ಗಂಡಸರದು "ಬೀರ್ ಬಾಡಿ" >> :-) :-)

<<1) ಈ ಪ್ರಶ್ನೆಗೆ ಪಾರ್ಥರು ಆಗಲೇ ಉತ್ತರಿಸಿದ್ದರಿಂದ ಮತ್ತು ಅದು ಸರಿಯಾಗಿದ್ದರಿಂದ ಅದನ್ನು ಮತ್ತೆ ಉತ್ತರಿಸುವ ಗೋಜಿಗೆ ಹೋಗಲಿಲ್ಲವಷ್ಟೆ. 22 ಆಟೋಸೋಮ್ ಜೊತೆಗಳು ಮತ್ತು ಒಂದು ಜೊತೆ ಸೆಕ್ಸ್ ಕ್ರೋಮೋಸೋಮುಗಳು. ಒಟ್ಟಿನಲ್ಲಿ 23 ಜೊತೆ ಅಂದರೆ 46 ವರ್ಣತಂತುಗಳು.>>

ಒಪ್ಪಿದೆ!

ನಾನು ಹೇಳಿದ್ದು ಪ್ರಶ್ನೆ ೩ ಮತ್ತು ೪ ಕ್ಕೆ ನೀವು ನೀಡಿರುವ ವಿವರಣೆ ಕುರಿತು ... ಇನ್ನೊಮ್ಮೆ ಸೂಕ್ಷ್ಮವಾಗಿ ನೋಡಿ. ನನಗಂತೂ ನಿಮ್ಮ ವಿವರಣೆಯಿಂದ 'ತೃಪ್ತಿ'ಯಾಗಿಲ್ಲ! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

ಶ್ರೀಧರ್ ಅವರೇ,
ನಿಮ್ಮ ಮರುಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ.
‍‍‍‍...ಶಿವರಾಮ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

2) A, T, G, C, ಇವುಗಳ ಜೋಡಿಗಳು ಒಂದು ಅಂದಾಜಿನಂತೆ ೩೦೦ ಕೋಟಿ (೩ ಬಿಲಿಯನ್) ಇವೆ. ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ: http://www.genome.go... ಅದರಲ್ಲಿ ಈ ರೀತಿಯಾಗಿ ವಿವರ ಸಿಗುತ್ತದೆ.

The human genome contains approximately 3 billion of these base pairs, which reside in the 23 pairs of chromosomes within the nucleus of all our cells. Each chromosome contains hundreds to thousands of genes, which carry the instructions for making proteins. Each of the estimated 30,000 genes in the human genome makes an average of three proteins.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

<<ಒಂದು ಅಂದಾಜಿನಂತೆ ೩೦೦ ಕೋಟಿ (೩ ಬಿಲಿಯನ್) ಇವೆ.>> ಸಾಮಾನ್ಯವಾಗಿ ಎಲ್ಲರೂ ಒಪ್ಪುವ ಅಂದಾಜು. ನನ್ನ ಉತ್ತರವೂ ಇದೇ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶಾಸ್ತ್ರಿಯವರೆ,
ನಿಮ್ಮ ಪ್ರಶ್ನೆಗಳು ಅದಕ್ಕೆ ಬಂದ ಉತ್ತರಗಳು ಓದಿ ಅನೇಕ ವಿಷಯಗಳು ಗೊತ್ತಾದವು.
ನನ್ನಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.