July 10, 2012 - 9:59am
ದೇವರೆಂದರೆ ಭಾರೀ ಭಕ್ತಿ ಕೆಲವರಿಗೆ
ನಸುಕಿನಲ್ಲೇ ಯಾರದೋ ಮನೆಯ
ಆವರಣದೊಳಗಿನ ಹೂಗಳನು
ಕಿತ್ತು ತಂದು ಪೂಜಿಸುವರು
" ನೀರು ಹಾಕಿ ಕಷ್ಟಪಟ್ಟು ಸಾಕುವುದು ನಾವು,
ಹೂವ ಕೊಯ್ಯುವವರು ಯಾರೋ "
ಗಿಡಗಳಲರಳಿ ನಳನಳಿಸುತ
ಕಂಪ ಬೀರುತಿರಲಿ
ಒಂದಷ್ಟು ದೇವರ ಪೂಜೆಗಿರಲಿ
ಎನ್ನುವ ಅಕೆಯ ಸಂಕಟದ ನುಡಿಗಳು
" ಅಲ್ಲಿಯಾದರೂ ದೇವರಿಗೇ
ಅರ್ಪಿತವಾಗುವುದು ತಾನೇ "
ನಿಟ್ಟುಸಿರಿನೊಂದಿಗೆ ಆತನ
ಸಾಂತ್ವನದ ನುಡಿಗಳು
ಮೂಡಲಿ ಭಾವ
‘ ಮೊದಲು ಮನಗಳ ತಂಪಾಗಿಸು ’
ಎನುವನೇನೋ ಆ ದೇವ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಎನುವನೇನೋ
>>" ನೀರು ಹಾಕಿ ಕಷ್ಟಪಟ್ಟು ಸಾಕುವುದು ನಾವು,
ಹೂವ ಕೊಯ್ಯುವವರು ಯಾರೋ "<<
>> "ಅಲ್ಲಿಯಾದರೂ ದೇವರಿಗೇ
ಅರ್ಪಿತವಾಗುವುದು ತಾನೇ "<< ...+1
...ಸತೀಶ್
ಉ: ಎನುವನೇನೋ
ಧನ್ಯವಾದಗಳು ಸತೀಶ್ ಅವರೆ.
ಉ: ಎನುವನೇನೋ
ಬೆಳೆಸಿದ್ದು ಒಬ್ಬರು ಕೊಯ್ದುಕೊಂಡು ಹೋದದ್ದು ಮತ್ತೊಬ್ಬರು;
ಹಾಗೆಯೇ ಪೂಜೆ ಒಬ್ಬರದು ಅದರ ಫಲ ಮತ್ತೊಬ್ಬರದು = ಹೀಗೆ ದೇವರು ಬ್ಯಾಲೆನ್ಸ್ ಮಾಡುತ್ತಾನೆ.
ಆಲೋಚಿಸಬೇಕಾದಂತಹ ವಿಚಾರವನ್ನು ಸರಳವಾಗಿ ಮಂಡಿಸಿದ್ದೀರ. ಅಭಿನಂದನೆಗಳು, ಪ್ರೇಮಾ ಅವರೆ.
ಉ: ಎನುವನೇನೋ
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಶ್ರೀಧರ್ ಬಂಡ್ರಿಯವರೆ.