19
June
2013

ಎರಡೇ ನಿಮಿಷ...!!

July 16, 2012 - 8:43pm
prasannakulkarni
ಉಶ್ಶಪ್ಪ..!! ಈ ಕಾಯುವುದಿದೆಯಲ್ಲ....ಹ್ಮ್..!!

 
ಒ೦ದು ದಿನ ಹೀಗೆ ಕಾಯುತ್ತ ಕುಳಿತಾಗ
ಏನಾಯಿತೆ೦ದರೇ...

 
ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ
ಸೆಳೆತಕ್ಕೆ ಸಿಕ್ಕು,
ಫ್ಯಾನಿನ ಬ್ಲೇಡಿನೊಳಹೊಕ್ಕು
ತು೦ಡು ತು೦ಡಾಗಿ....
ಅದರಲ್ಲೊ೦ದು, ನನ್ ಕೊರಳ ಸವರಿ,
ಬಗಲು ಏರಿ, ಹೊಟ್ಟೆ ಬಳಸಿ, ಕಳೆದು ಹೋಗಿ...,
ಮತ್ತೊ೦ದು, ಅವಳ ಮು೦ಗುರುಳ ನಲಿಸಿ,
ಕನ್ನೆಯಲಿಯಲೆಯ ತ೦ದು, ಹಾಗೇ ನುಸುಳಿತು...
ಮಿಕ್ಕವೆಲ್ಲ ಮೂಲೆ ಮೂಲೆ ವ್ಯಾಪಿಸಿ,
ಗೋಡೆಗಳಿಗೆ ಡಿಕ್ಕಿ ಹೊಡೆದು,
ಮತ್ತೆ ಮಾಡಿನಡಿಯಲ್ಲಿ ಸಿಲುಕಿ ಧೃತಿಗೆಟ್ಟವು....!!

 
ನಾನಿದನ್ನೆಲ್ಲ ನೋಡುತ್ತ,
ಮತ್ತೆ ಬಾಲಕನಾಗಿ,
ಹಾಳೆಯ ದೋಣಿ ಮಾಡಿ,
ಬರಿಯ ನೆನಪಲ್ಲಿದ್ದ ಊರ ಮನೆಯೆದುರಿನ
ತೊರೆಯಲ್ಲಿ ತೇಲಿ ಬಿಟ್ಟು, ನಾನೂ ತೇಲುತ್ತಿದ್ದೆ...
ಮರಳಿ ಮತ್ತೆ ಇಲ್ಲಿಗೇ ಬ೦ದು,
ಭವಿಷ್ಯದ ಕದ ತಟ್ಟಿ,
ಕನಸಿನ ಮನೆ ಕಟ್ಟಿ,
ಹೊತ್ತಿನ ಹೊತ್ತುಗಳ ಹೊತ್ತು ಸಾಗಿ ಬ೦ದೆ....

 
ಉಶ್ಶಪ್ಪ...!! ಸಾಕಷ್ಟು ಸಮಯ ಕಳೆದು ಹೋಗಿರಬಹುದಲ್ಲ ಈಗ...??
ಅರೇ..! ಇದೇನು..?? ಇನ್ನೂ ಬರೀ ಎರಡೇ ನಿಮಿಷ....!!!!

..

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ಪ್ರಸನ್ನ ಅವ್ರೆ

ಕವನ ಸಖತ್...

ನಿಜ ಕಾಯುವಿಕೆ ಸಖತ್ ಬೊರು ಕೆಲ್ಸ....!!

ಈ ಸಮಯ ಅನ್ನೊದು ಭಾವನೆಗೆ ತಕ್ಕನ್ತೆ ಬದಲಾಗುವುದೊ?
ಉದಾ ನೋಡಿ:

ಸ್ಹಾಲೆಗೆ ಹೋಗುವಾಗ ಬೆಳಗಿನ ಬೆಲ್ಲು ಕರ್ಕಶ ಅನ್ನಿಸುವುದು..

ಅದೇ ಶಾಲೆ ಬಿಡುವಾಗಿನ ಬೆಲ್ಲು ಮಧುರ‍ಸುಮಧುರ ಅನ್ನಿಸುವುದು... :())))(ಗೆಳೆಯರು ಕಳಿಸ್ದಿದ್ದ ಎಸ್ ಎಮ್ ಎಸ್)

ಅಸ್ತೆಲ್ಲ ಯೊಛನೆಯ ನನತ್ರ ಅದು ಬರಿ ಎರಡೇ ನಿಮಿಶ ಅನ್ನಿಸಿದ್ದು ಸಖತ್...

ವಾಕ್ಯ ಪ್ರಯೊಗಗಳು ಸಖತ್...

ಉದಾ:

ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ
ಸೆಳೆತಕ್ಕೆ ಸಿಕ್ಕು,
ಫ್ಯಾನಿನ ಬ್ಲೇಡಿನೊಳಹೊಕ್ಕು
ತು೦ಡು ತು೦ಡಾಗಿ....
ಅದರಲ್ಲೊ೦ದು, ನನ್ ಕೊರಳ ಸವರಿ,
ಬಗಲು ಏರಿ, ಹೊಟ್ಟೆ ಬಳಸಿ, ಕಳೆದು ಹೋಗಿ...,
ಮತ್ತೊ೦ದು, ಅವಳ ಮು೦ಗುರುಳ ನಲಿಸಿ,
ಕನ್ನೆಯಲಿಯಲೆಯ ತ೦ದು, ಹಾಗೇ ನುಸುಳಿತು...
ಮಿಕ್ಕವೆಲ್ಲ ಮೂಲೆ ಮೂಲೆ ವ್ಯಾಪಿಸಿ,
ಗೋಡೆಗಳಿಗೆ ಡಿಕ್ಕಿ ಹೊಡೆದು,
ಮತ್ತೆ ಮಾಡಿನಡಿಯಲ್ಲಿ ಸಿಲುಕಿ ಧೃತಿಗೆಟ್ಟವು....!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಮನಸ್ಸೂ ಗಾಳಿಯೂ ಒಂದೆಡೆ ನಿಲ್ಲವು; ಎನ್ನುವುದನ್ನು ಹೇಳದೆಯೇ ಹೇಳುತ್ತದೆ ನಿಮ್ಮ ಕವನ ಪ್ರಸನ್ನರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.