20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಳೆಯನ ಚೆಲುವು

August 11, 2012 - 11:20am
hamsanandi

ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು
ಕೊಳಲ ನಾದದಿ ತಂಪನೆರೆಯುತಿಹ ಮೊಗದ
ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ
ತಿಳಿಸುತಲಿವನ ಸೊಗವ ತುಸುವಾದರೂ!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) :

 

 

ಕಮನೀಯ ಕಿಶೋರ ಮುಗ್ಧ ಮೂರ್ತೇಃ

ಕಲವೇಣುಕ್ವಣಿತಾರ್ದ್ರಾನನೇಂದೋಃ

ಮಮ ವಾಚಿ ವಿಜೃಂಭತಾಂ ಮುರಾರೇಃ

ಮಧುರಿಂಣಃ ಕಣಿಕಾಪಿ ಕಾಪಿ ಕಾಪಿ

 

-ಹಂಸಾನಂದಿ

 

 

ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ananthesha nempu on

>>ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ>
ನುಡಿಗಳಲಿ ಎಂದಿದ್ದರೆ ಒಪ್ಪುವುದಲ್ಲವೆ? (ವಾಚಿ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.