19
June
2013

ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ

May 9, 2012 - 3:48pm
Chikku123

ಇಲ್ಲಿಯವರೆಗೆ:

http://sampada.net/b...

ಕಾಲ್ ಕಟ್ ಮಾಡಿ ನಾವಡವ್ರಿಗೆ ಕಾಲ್ ಮಾಡಿದೆ. ಅವ್ರು ಇಲ್ಲಿ ತುಂಬಾ ಮಳೆ ಚಿಕ್ಕು, ನೇತ್ರಾವತಿ ಬ್ರಿಡ್ಜ್ ದಾಟಿ ಮೇಲೆ ಹತ್ತಿದ್ದಾಳೆ, ಅವ್ಳು ಇಳ್ಯೋತಂಕ ನಾವಿಲ್ಲಂದ ಕದ್ಲಂಗಿಲ್ಲ.

ಸರಿ ಬಿಡಿ ಮುಂದಿನ ಮ್ಯಾಚಿಗೆ ಸಿಗ್ತೀರಾ ನೋಡೋಣ ಅಂದು ಕಾಲ್ ಕಟ್ ಮಾಡಿ ಶ್ರೀಧರವ್ರಿಗೆ ಕಾಲ್ ಮಾಡಿದೆ.

ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ?
ಶ್ರೀ: ಬಹುಶ ಆಗಲ್ಲ ಚಿಕ್ಕು, ಹೈದರಾಬಾದಲ್ಲಿದೀನಿ.
ನಾ: ನೋಡಿ ಪ್ರಯತ್ನ ಮಾಡಿ.
ಶ್ರೀ: ಆಗ್ಲಿ ಚಿಕ್ಕು, ಮತ್ತೆ ಎಷ್ಟು ಕುರಿಗಳು (ಸಂಪದಿಗರು) ಬರ್ತಿವೆ?
ನಾ: ಕುರಿ?? ಓಹೋ ಹಾಗೆ, ಎಲ್ಲಾ ಕುರಿಗಳಿಗೂ ಕಾಲ್ ಮಾಡಿದೀನಿ, ಕೆಲವು ಬರ್ತಿವೆ.
ಶ್ರೀ: ಸರಿ, ಆದ್ರೆ ಕುರಿ ಕಾಲ್ ಕಟ್ ಮಾಡ್ಬೇಡಿ.
ನಾ: ಹ್ಹ ಹ್ಹ ಹ್ಹ, ಹಾಗೆಲ್ಲಾ ಮಾಡೋಕೆ ಬಿಡಲ್ಲ ಅವು.
ಶ್ರೀ: ಎಷ್ಟು ಕಾಗೆಗಳು(ಸಂಪದಿಗರು) ಬರ್ತಿವೆ?
ನಾ: ಕಾಗೆ ಹಾರ್ಸೋರು ಗೊತ್ತಿಲ್ಲ, ಅಲ್ಲಿಗೆ ಹೋದ್ಮೇಲೆ ಗೊತ್ತಾಗತ್ತೆ.
ಶ್ರೀ: ಎಷ್ಟು ಹಕ್ಕಿಗಳು ಬರ್ತಿವೆ.
ನಾ: ಸ್ಟೇಡಿಯಮ್ನಲ್ಲಿ ಅವಕ್ಕೇನು ಕೊರತೆ, ಎಲ್ಲೆಲ್ಲೂ ಅವೇ ತುಂಬಿರ್ತಾವೆ!. ನೋಡಿ ಬರೋದಕ್ಕೆ ಪ್ರಯತ್ನ ಮಾಡಿ.
ಶ್ರೀ: ಸರಿ ಚಿಕ್ಕು, ಪ್ರಯತ್ನ ಮಾಡ್ತೀನಿ, ಸಿಗೋಣ ಮತ್ತೆ.

ಹಾಗೆ ಗೋಪಾಲವ್ರಿಗೆ ಮಾಡಿದ್ರೆ ಅವ್ರು ಮಂಜ ಎಲ್ಲೋ ಮಿಸ್ ಆಗಿದ್ದಾನೆ ಹುಡುಕ್ಬೇಕು ಬರೋಕಾಗಲ್ಲ ಅಂದ್ರು.
ಭಲ್ಲೆಯವ್ರು ಮಾಮೂಲಿನಂತೆ ಮಿಸ್.

ಅಲ್ಲಿಗೆ ಗಣೇಶಣ್ಣ, ಕವಿ ಸರ್, ನಾನು.

ಮಾರನೇ ದಿನ ಸ್ಟೇಡಿಯಮ್ನಲ್ಲಿ ನಾವು ಮೂವರೂ ಒಟ್ಟಿಗೆ ಸೇರಿ ಒಂದು ಕಡೆ ಕೂತಿದ್ವಿ. ಗಣೇಶಣ್ಣ ಹೆಲ್ಮೆಟ್ ಹಾಕೊಂಡು ಬಂದಿದ್ರು (ಹೆಂಗೋ ಡೀಲ್ ಮಾಡಿ ಬಂದಿದ್ರು)

ಏನಕ್ಕೆ ಗಣೇಶಣ್ಣ ಅಂದ್ರೆ, ಸೇಫ್ಟಿ ಕಣಪ್ಪ, ಮೊನ್ನೆ ಗೇಲ್ ಹೊಡೆದದ್ದು ಗೊತ್ತಲ್ಲ?
ಸರಿ ಸರಿ ಅಂದು ಮ್ಯಾಚ್ ನೋಡೋಕೆ ಕೂತ್ವಿ.

ಸ್ವಲ್ಪ ಹೊತ್ತಾದ್ಮೇಲೆ ಶ್ರೀಧರವ್ರು, ರಾಮೋ, ಸತೀಶವ್ರು ಬಂದ್ರು.
ನನಗೆ ರಾಮೋ ಬಂದಿದ್ದು ನೋಡಿ ಆಶ್ಚರ್ಯ.
ನಾ: ಅರೆ ಬಂದಿದೀರಲ್ಲ?
ರಾಮೋ: ಹೂನಪ್ಪಾ, ನೀನು ಕಾಲ್ ಮಾಡಿ ಮನೆಹಾಳು ಕೆಲಸ ಮಾಡಿದೆ, ಸ್ವಲ್ಪನಾದ್ರೂ ನೆಮ್ಮದಿ ಸಿಗ್ಲಿ ಅಂತ ಇಲ್ಲಿಗೆ ಬಂದೆ.
ನಾ: ಅಯ್ಯೋ ನಾನೇನ್ಮಾಡಿದೆ, ಕ್ರಿಕೆಟ್ ನೋಡೋಕೆ ಬರ್ತೀರಾ ಅಂತ ಕಾಲ್ ಮಾಡಿದ್ದೆ ತಪ್ಪಾಯ್ತು. ನಿಮ್ಮ ತಪ್ಪು ಇಟ್ಕೊಂಡು ನನಗೆ ಬಯ್ತೀರಾ.
ರಾಮೋ: ನಾನೇನು ತಪ್ಪು ಮಾಡಿದೆ.
ನಾ: ಮತ್ತೆ ಲಲ್ತಾ, ಶಾರದಾನ ಇಟ್ಕೊಂಡು ತಪ್ಪು ಮಾಡಿಲ್ವಾ?
ರಾಮೋ: ಇಟ್ಕೊಂಡು??? ಏ ಏ ಏ ಏ ಏ ಏನು ಮಾತಾಡ್ತಿದೀಯಾ ಚಿಕ್ಕು?
ನಾ: ಅಯ್ಯೋ ಸಮಾಧಾನ, ನಾನು ಹೇಳಿದ್ದು ನೆನಪಲ್ಲಿ ಇಟ್ಕೊಂಡು ಅಂಥಾ, ನೀವೆನೇನೋ ತಿಳ್ಕೊಬೇಡಿ.

ಅಷ್ಟೊತ್ತಿಗೆ

ಆರ್ ಸಿ ಬಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿತ್ತು. ಓಪನರ್ ಕೊಹ್ಲಿ, ಗೇಲ್ ಬಂದಿದ್ರು (ಚೇಂಜ್ ಇನ್ ಪ್ಲಾನ್ ಅಂತೆ).
ಮೊದಲ ಬಾಲ್
ಸಿಕ್ಸರ್!!!!
ಗಣೇಶಣ್ಣ, ಕೂತಲ್ಲಿಂದ ಎದ್ದು ಹೋ ಹೋ ಹೋ ಹೋ ಅಂತ ಖುಷಿಯಿಂದ ಚೀರಿದ್ರು.
ಸ್ವಲ್ಪ ಹೊತ್ತಿಗೆ ಗಾಬರಿಯಿಂದ ಕೂತ್ಕೊಬಿಟ್ರು.
ಗಣೇಶಣ್ಣ ಯಾಕೆ ಏನಾಯ್ತು?
ಅಯ್ಯೋ ಚಿಕ್ಕು ನೋಡಲ್ಲಿ, ಚಿಯರ್ ಗರ್ಲ್ಸ್ ಜಾಗದಲ್ಲಿ ಯಾರು ಕುಣಿತಿದ್ದಾರೆ ಅಂತ.
ನಾನು ನೋಡ್ತೀನಿ, ಬಾರಿಮುತ್ತು ಸೀರೆ ಹಾಕೊಂಡು ಸಿಕ್ಸರ್ಗೆ ಡ್ಯಾನ್ಸ್ ಮಾಡ್ತಿದ್ದಾಳೆ.
ಗಣೇಶಣ್ಣಗೆ ನಾಲಗೆ ಎಲ್ಲಾ ಒಣಗಿ ಹೋಗಿತ್ತು (ಚಿಯರ್ ಗರ್ಲ್ಸ್ ನೋಡೋಕೆ ಅಂತಾನೇ ಏನೇನೋ ಪ್ಲಾನ್ ಮಾಡಿ ಬಂದಿದ್ರು!!! ಇಲ್ಲಿ ನೋಡಿದ್ರೆ).

ಬಾರಿಮುತ್ತು ಒಂದೇ ಸಮನೆ ಕುಣಿಯುತ್ತಿದ್ದಾಳೆ, ಇದ್ದಕಿದ್ದಂತೆ ಅವಳು ಕುಣಿಯುತ್ತಿದ್ದ ಟೇಬಲ್ ಲರಕ್ ಲರಕ್ ಅಂತ ಶಬ್ದ ಬಂದು ಮುರಿದು ಬೀಳುವುದರಲ್ಲಿತ್ತು, ಬಾರಿಮುತ್ತು ಅದನ್ನರಿತು ಮುಂದಕ್ಕೆ ನೆಗೆದಳು, ಹಾರಿದವಳು ಸೀದಾ ಗಣೇಶಣ್ಣನ ಮೇಲೆ ಬಿದ್ದಳು.
ಗಣೇಶಣ್ಣ ಕುಳಿತಿದ್ದ ಚೇರ್ ಅರ್ಧ ಕೆಳಕ್ಕೆ ಹೋಗಿತ್ತು, ಗಣೇಶಣ್ಣ ಸೈಡಿಗೆ ಬಿದ್ದಿದ್ದರು, ಅವರ ದೇಹವೆಲ್ಲಾ ಅಪ್ಪಚ್ಚಿಯಾಗಿತ್ತು ತಲೆಯೊಂದನ್ನು ಬಿಟ್ಟು.
ನಾವೆಲ್ಲರೂ ಸೇರಿ ಕಷ್ಟಪಟ್ಟು ಬಾರಿಮುತ್ತುವನ್ನ ಮೇಲಕ್ಕೆಳೆಯಲು ಪ್ರಯತ್ನಿಸಿದೆವು.
ಉಹೂಂ, ಸ್ವಲ್ಪವೂ ಕದಲಿಸಲಾಗಲಿಲ್ಲ.
ಆಂಜನೇಯನ ಬಾಲವನ್ನ ಭೀಮನು ಎಳೆಯಲು ಪ್ರಯತ್ನ ಪಡುವ ಹಾಗೆ ನಮ್ಮ ಕೆಲಸ ನಡೆಯುತ್ತಿತ್ತು.
'ಸೈಡಿಗೆ ಬನ್ನಿ' ಹಿಂದಿಂದ ಒಂದು ಶಬ್ದ ಬಂತು.
ನೋಡಿದರೆ ಮಂಜಣ್ಣ, ನಮಗೆಲ್ಲರಿಗೂ ಸಮಾಧಾನ (ಮಂಜಣ್ಣ ನಮ್ಮಿಂದ ಎರಡು ಸಾಲು ಹಿಂದೆ ಕೂತಿದ್ದರು, ಮ್ಯಾಚ್ ಮುಗಿದ ಮೇಲೆ ನಮ್ಮನ್ನ ಭೇಟಿಯಾಗುವವರಿದ್ದರು ಆದರೆ......).
ಮಂಜಣ್ಣನನ್ನು ಸೇರಿಸಿಕೊಂಡು ನಾವೆಲ್ಲರೂ ಬಾರಿಮುತ್ತುವನ್ನ ಮೇಲಕ್ಕೆಳೆದೆವು.

ಎಲ್ಲರೂ ಕಷ್ಟಪಟ್ಟು ಅವರನ್ನ ಕರೆದುಕೊಂಡು ಹೋಗಿ ಹತ್ತಿರದಲ್ಲಿದ್ದ ಆಸ್ಪತ್ರೆಯಲ್ಲಿ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬಂದೆವು.

ಅಲ್ಲಿಗೆ ಮೊದಲ ಬಾಲ್ ನಮಗೆ ಕೊನೆಯ ಬಾಲಾಗಿತ್ತು!!!!

(ಕೊನೆಗೆ ತಿಳಿದ ವಿಷಯವೇನೆಂದರೆ, ಕಂಪನಿ ಲಾಸಲ್ಲಿದ್ದುದರಿಂದ ಚಿಯರ್ ಗರ್ಲ್ಸ್ ಬದಲಾಗಿ ಬಾರಿಮುತ್ತುವನ್ನ ಕರೆಸಲಾಗಿತ್ತು, ಮೂರು ಚಿಯರ್ ಗರ್ಲ್ಸ್ ಬದಲಾಗಿ ಆ ಮೂವರಿಗಿಂತ ಜಾಸ್ತಿ ಭಾರವಿದ್ದ ಜೊತೆಗೆ ಲೋಕಲ್ ಆಗಿದ್ದುದರಿಂದ ಅದೂ ಅಲ್ಲದೆ ಬಾರಿಮುತ್ತುವಿನ ಡ್ಯಾನ್ಸ್ ಫೀ ಕಡಿಮೆ ಸಹ ಇದ್ದುದರಿಂದ ಅವಳನ್ನು ಸೇರಿಸಿಕೊಂಡಿದ್ದರು).

ಕೊನೆಹನಿ: ಒಟ್ಟಿನಲ್ಲಿ ಬಾರಿಮುತ್ತುವಿನಿಂದ ಒಂದು ಮುತ್ತನ್ನು ಪಡೆಯುವ ಸೌಭಾಗ್ಯ ಗಣೇಶಣ್ಣನದಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on

>>ಒಟ್ಟಿನಲ್ಲಿ ಬಾರಿಮುತ್ತುವಿನಿಂದ ಒಂದು ಮುತ್ತನ್ನು ಪಡೆಯುವ ಸೌಭಾಗ್ಯ ಗಣೇಶಣ್ಣನದಾಗಿತ್ತು<<
ಗಣೇಶ್ ಜಿ ಹೆಲ್ಮೆಟ್ ಹಾಕಿದ್ದು ಒಳ್ಳೇದೆ ಆಯಿತು
ಒಂದು ಅನುಮಾನ ಬಾರಿಮುತ್ತು ಬರೋ ವಿಷಯ ಪಾರ್ಥಸಾರಥಿಯವರಿಗೆ ಗೊತ್ತಿತ್ತು ಅನ್ಸುತ್ತೆ ಅದಕ್ಕೆ ಬಂದಿಲ್ಲ ಅಲ್ಲವೆ?
........ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಅ೦ತೂ ಬಹಳ ದಿನದ ನ೦ತರ ಬಾರಿಮುತ್ತುವಿನ ಆಸೆ ಈ ರೀತಿ ಈಡೇರಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :)
ಹೌದು ಜಯಂತ್
ಮಲ್ಲೇಶ್ವರಂನಲ್ಲಿ ಮಿಸ್ಸಾಗಿದ್ದು ಚಿನ್ನಸ್ವಾಮಿಯಲ್ಲಿ ಸಿಕ್ತು !!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

<ಒಂದು ಅನುಮಾನ ಬಾರಿಮುತ್ತು ಬರೋ ವಿಷಯ ಪಾರ್ಥಸಾರಥಿಯವರಿಗೆ ಗೊತ್ತಿತ್ತು ಅನ್ಸುತ್ತೆ ಅದಕ್ಕೆ ಬಂದಿಲ್ಲ ಅಲ್ಲವೆ?> ಅದ್ಕೆ ಬಾಸ್ ಎಸ್ಕೇಪ್ ಆಗಿದ್ದು!!!
<ಗಣೇಶ್ ಜಿ ಹೆಲ್ಮೆಟ್ ಹಾಕಿದ್ದು ಒಳ್ಳೇದೆ ಆಯಿತು> ಸತೀಶವ್ರೆ ಎಲ್ಲಿದೀರಾ ನೀವು, ಹೆಲ್ಮೆಟ್ ಚೂರಾಗಿ ಆಮೇಲೆ ಮುತ್ತು ಸಿಕ್ಕಿದ್ದು !!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಅಯ್ಯೋ..!! ...!! . . . . ....:()) ಮೊದಲೇ ಆ ಭಾರಿ ಮುತ್ತು ಕಂಡರೆ ನಮ್ ಗಣೇಶ್ ಅಣ್ಣ ಗೆ ವಿಪರೀತ......... ???

ಅವತ್ತು ಗಣೇಶ್ ಅಣ್ಣ ನಿಮ್ಮನ್ನು- ನನ್ನನು ಸೇರಿಸಿ ಗುರುಗಳು ಮತ್ತು ತಂಡದ ಕೈಯಿಂದ ಸಖತ್ ಧರ್ಮದ ಏಟು ಬೀಳಿಸಿದ್ದಕ್ಕೆ ಈ ರೀತಿ ನೀವ್ ಅವರ ಮೇಲೆ ....ರ?

ಚೇತನ್
ಈ ಕೊನೇ ಕಂತು ಸಕ್ಕತ್ ಓದಿ ಓದಿ ಬಿದ್ದು ಬಿದ್ದು ನಕ್ಕೆ.. :()))

ಅದರಲ್ಲೂ ನೀವ್ ಶ್ರೀಧರ್ ಜೀ ಅವರ ಬರಹಗಳ ಪಾತ್ರಗಳ ಮೂಲಕ ಅವರನ್ನ ಪರಿಚಯಿಸಿದ್ದು..:()) ಕುರಿ, ಪಕ್ಚಿ, ಕಾ-
ಕಾ .. ಕಾಗೆ...!! ಸೂಪರ್...
ಅಂತೂ ಭಾರಿ ಮುಟ್ಟುವನ್ ಎತ್ತಲು ಮಂಜು ಅಣ್ಣ ಬರಬೇಕಾಯ್ತು..!!

ಆ ಭಾರಿ ಮುತ್ತು ಇನ್ನೂ ಎಲ್ಲೆಲ್ಲಿಗೆ ಗಣೇಶ್ ಅಣ್ಣ ಅವರನ್ ಹಿಂಬಾಲಿಸುವಳೋ?....

@ ಗಣೇಶ್ ಅಣ್ಣ ನಾವ್ ಇದ್ದೇವೆ....?????

ನಿಮ್ಮನ್ನು
ಭಾರಿ ಮುತ್ತು
ಕೈ ವಶ ಮಾಡಲು....!!

ಶುಭವಾಗಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) :) :)

ಸಗಿಯವ್ರೆ, ಗಣೇಶಣ್ಣ ಮೇಲೆ ರಿವೆಂಜ್ ಏನಿಲ್ಲ.
ಧರ್ಮದೇಟು ಬೀಳೋಕಿಂತ ಮೊದ್ಲೇ ನಾನು ಇದನ್ನ ಊಹಿಸಿದ್ದೆ
ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅಂತು ಕ್ರಿಕೆಟ್ ಖುಷಿಯಲ್ಲಿದ್ದ ಗಣೇಶರಿಗೆ ಚಿಕ್ಕು ಸಕ್ಕತ್ ಗೂಸ ಕೊಡಿಸಿದ್ದಾರೆ
ನಾನು ಹೇಳಿದೆ ಗಣೇಶರಿಗೆ ಚಿಕ್ಕುನ ನಂಬಬೇಡಿ ಅಂತ ಮಲ್ಲೇಶ್ವರ ಚಲೋದಲ್ಲಿ
ಅವರು ಕೇಳದ ನನ್ನ ಮೇಲೆ ಎತ್ತಿ ಕಟ್ಟಲು ನೋಡಿದರು
ಈಗ ನೋಡಿ ಅವಸ್ಥೆ ಪಾಪ!
ಇರಲಿ ಬಿಡಿ ಅಂ.ಭಂ ಸ್ವಾಮಿಗಳು ಎಂತ ಕಷ್ಟವನ್ನು ಗೆದ್ದುಬರಬಲ್ಲರು
ಅಂದ ಹಾಗೆ ಚಿಕ್ಕು ಸ್ಟೇಡಿಯಂ ನಲ್ಲಿದ್ದ ತಿಂಡಿ ಪಾನೀಯ ಗಳೆಲ್ಲ ಏನಾಯಿತು, ಪಾಪ
ಗಣೇಶರಿಗೆ ಏನು ತಿನ್ನಿಸದೆ ಕಳಿಸಿದ್ದೀರಿ ಇದು ಸರಿಯಾ?
**ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

<ನಾನು ಹೇಳಿದೆ ಗಣೇಶರಿಗೆ ಚಿಕ್ಕುನ ನಂಬಬೇಡಿ ಅಂತ ಮಲ್ಲೇಶ್ವರ ಚಲೋದಲ್ಲಿ> ಪಾರ್ಥವ್ರೆ ಈ ಫಿಟ್ಟಿಂಗ್ ಎಲ್ಲಾ ಬೇಡ!!!!!

<ಅಂದ ಹಾಗೆ ಚಿಕ್ಕು ಸ್ಟೇಡಿಯಂ ನಲ್ಲಿದ್ದ ತಿಂಡಿ ಪಾನೀಯ ಗಳೆಲ್ಲ ಏನಾಯಿತು, ಪಾಪ
ಗಣೇಶರಿಗೆ ಏನು ತಿನ್ನಿಸದೆ ಕಳಿಸಿದ್ದೀರಿ ಇದು ಸರಿಯಾ?> ಗಣೇಶಣ್ಣ ಪೂರ್ತಿ ಮ್ಯಾಚ್ ನೋಡೋದಾಗಿದ್ರೆ ಆ ತಿಂಡಿಯೆಲ್ಲಾ ಅವರ ಪಾಲೇ ಆದ್ರೆ ದೇವರು ದೊಡ್ಡವನು :)
ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಎಂಥದು ಚಿಕ್ಕು ನೀ...ಹೀಗೆ,,ಮಾಡೂ,,,,,ದ! ಗಣೇಶಣ್ಣಗೆ ಚೀರ್ ಗರ್ಲ್ಸ್ ಅಂತಾ ಹೇಳಿ ಸೀರೆ ಉಟ್ಟ ಭಾರೀ ನೀರೆ; ಗಜಗಾಮಿನಿ ಭಾರಿಮುತ್ತುವನ್ನು ಸೆಟ್ ಮಾಡುವುದಾ. ;))
ಮೊನ್ನಿನ ಕಾಗೆ ಪಕ್ಷಿ ಕತೆಯಲ್ಲಿ ಒಂದೊಂದು ತೆನೆ ಮೇಲೆ ಒಂದೊಂದು ಹಕ್ಕಿ ಕೂರೋಕಾಗೋಲ್ಲ ಅಂತ ಹೇಳಿದ್ದು ಈಗ ಗೊತ್ತಾಯ್ತು; ಏಕೆಂದ್ರೆ ಹಕ್ಕಿಗಳ ಸಂಖ್ಯೆಯೇ ಕಡಿಮೆ ಆಗಿ ಹೋಗಿದೆ :))
ಪಾಪ...ಮಲೆನಾಡಿಗರಿಗೇ ಮಲೆನಾಡಿನ ಹೆಣ್ಣುಗಳು ಸಿಕ್ಕುತ್ತಿಲ್ಲಾ ಅಂತಾದ್ದರಲ್ಲಿ ಸಪ್ತಗಿರಿಯವರು ಒಂದು ಸಂಖ್ಯೆ ಕಡಿಮೆ ಮಾಡಿದ್ದಾರೆ. ಈಗ ಪೂರ್ತಿ ಅರ್ಥವಾಯಿತು; ಪಡ್ಡೇ ಹುಡುಗರಿಗೇ ಹಕ್ಕಿಗಳು ಸಿಕ್ಕುತ್ತಿಲ್ಲ ಇನ್ನು ನ‌ಮ್ಮಂತಹ ಮುದುಕರಿಗೆ ಎಲ್ಲಿ ಸಿಗಬೇಕು? ;))

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಮಂಜಣ್ಣನವರ ಸಿ.ಡಿ. ಮ್ಯಾಚ್ ಗೆಲ್ಲುತ್ತಾನೋ ಇಲ್ಲಾ ಗೊತ್ತಿಲ್ಲ ಆದ್ರೆ ಹೈದರಾಬಾದಿನಲ್ಲಂತೂ ಅವರನ್ನು ಗೆಲ್ಲಿಸಿ ಕಳುಹಿಸಿದ್ದೇವೆ. :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

<ಎಂಥದು ಚಿಕ್ಕು ನೀ...ಹೀಗೆ,,ಮಾಡೂ,,,,,ದ! ಗಣೇಶಣ್ಣಗೆ ಚೀರ್ ಗರ್ಲ್ಸ್ ಅಂತಾ ಹೇಳಿ ಸೀರೆ ಉಟ್ಟ ಭಾರೀ ನೀರೆ; ಗಜಗಾಮಿನಿ ಭಾರಿಮುತ್ತುವನ್ನು ಸೆಟ್ ಮಾಡುವುದಾ> :) :)

<ಮೊನ್ನಿನ ಕಾಗೆ ಪಕ್ಷಿ ಕತೆಯಲ್ಲಿ ಒಂದೊಂದು ತೆನೆ ಮೇಲೆ ಒಂದೊಂದು ಹಕ್ಕಿ ಕೂರೋಕಾಗೋಲ್ಲ ಅಂತ ಹೇಳಿದ್ದು ಈಗ ಗೊತ್ತಾಯ್ತು; ಏಕೆಂದ್ರೆ ಹಕ್ಕಿಗಳ ಸಂಖ್ಯೆಯೇ ಕಡಿಮೆ ಆಗಿ ಹೋಗಿದೆ> ಆಲ್ವಾ ಮತ್ತೆ!

<ಮಲೆನಾಡಿಗರಿಗೇ ಮಲೆನಾಡಿನ ಹೆಣ್ಣುಗಳು ಸಿಕ್ಕುತ್ತಿಲ್ಲಾ ಅಂತಾದ್ದರಲ್ಲಿ ಸಪ್ತಗಿರಿಯವರು ಒಂದು ಸಂಖ್ಯೆ ಕಡಿಮೆ ಮಾಡಿದ್ದಾರೆ. ಈಗ ಪೂರ್ತಿ ಅರ್ಥವಾಯಿತು; ಪಡ್ಡೇ ಹುಡುಗರಿಗೇ ಹಕ್ಕಿಗಳು ಸಿಕ್ಕುತ್ತಿಲ್ಲ ಇನ್ನು ನ‌ಮ್ಮಂತಹ ಮುದುಕರಿಗೆ ಎಲ್ಲಿ ಸಿಗಬೇಕು> :) :) ಹೈದರಾಬಾದಿಗೆ ಕಾಲ್ ಮಾಡಿ ತಿಳಿಸಬೇಕಾ?????

ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

<<ಹೈದರಾಬಾದಿಗೆ ಕಾಲ್ ಮಾಡಿ ತಿಳಿಸಬೇಕಾ?????>> ಖಂಡಿತವಾಗಿ ಫೋನ್ ಮಾಡಿ ತಿಳಿಸು ಚಿಕ್ಕೂ! ಇದನ್ನು ಕೇಳಿ ನಮ್ಮ ವಳು ಹೊಸ ಜೋಕ್ ಕೇಳಿದಂತೆ ನಕ್ಕು ಸಂಭ್ರಮಿಸುತ್ತಾಳೆ; ಅವಳಿಂದ ಬರಬಹುದಾದ ಉತ್ತರ ಹೀಗಿರುತ್ತೆ: "ಇರೋ ಒಬ್ಳನ್ನೇ ಸರಿಯಾಗಿ ನೋಡ್ಕೊಳ್ಳೋಲ್ಲ; ಇನ್ನು ಇವರು ಇನ್ನೊಬ್ಬಳನ್ನು.......ಹ್ಹ....ಹ್ಹ್....ಹ್ಹ್......ಹ್ಹಾ!"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಶ್ರೀಧರ್ ಜೀ ...
ಇದು ಪ್ರತಿಯೊಬ್ಬ ವಿವಾಹಿತ ಹೆಣ್ಣು ಮಕ್ಕಳು ಹೇಳುವ ಮಾತೆ ಅನ್ನಿಸುತ್ತಿದೆ ...!!

ಆದರೆ ಮನದಲ್ಲಿ ಒಮ್ಮೆ ಹಾಗೆಯೆ ಆದರೆ ಹೆಂಗೆ ?
ಅನ್ನುವ ಅಳುಕು ಸಹಾ ಇರುವುದೇನೋ ...:())

ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಚಿಕ್ಕೂ..
ಭಾಮು(ಪಾರ್ಥರು ಪ್ರೀತಿಯಿಂದ ಕರೆಯುವುದು) ನರ್ತನವೇನೋ ಚೆನ್ನಾಗಿತ್ತು :) ಆದರೆ ಎಂಡ್ ಭಯಾನಕ..
ಸರಿಯಾದ ಸಮಯಕ್ಕೆ ಮಂಜಣ್ಣ ಬರದಿದ್ದರೆ ...
(ಭಾಮುನನ್ನ ಕರೆಸಿ ನಮಗೆಲ್ಲರಿಗೂ ಐಪಿಎಲ್ ನೋಡದಂತೆ ಮಾಡಿದ ಪಾರ್ಥಸಾರಥಿಯವರನ್ನು ನಂತರ ವಿಚಾರಿಸಿಕೊಳ್ಳುವೆ :) )
ನನ್ನ ಸ್ಥಳದಲ್ಲಿ ಎಲ್ಲಾದರೂ ರಾಮಮೋಹನರು ಇರುತ್ತಿದ್ದರೆ...
***************
ಚಿಕ್ಕು,
ಹಾಸ್ಯ ಸೂಪರ್. ಗೇಯ್ಲ್ ಮತ್ತು ಕೊಯ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆದು, ಮುಂಬೈನ ಮೇಲೆ ಗೆದ್ದ ಖುಷಿಯಲ್ಲಿ, ಇಲ್ಲಿ ಬಂದರೆ.......... :(
ಗೆದ್ದ ಖುಷಿ ಜತೆಗೆ ಬಿದ್ದ ಖುಷಿನೂ.. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

>> ನನ್ನ ಸ್ಥಳದಲ್ಲಿ ಎಲ್ಲಾದರೂ ರಾಮಮೋಹನರು ಇರುತ್ತಿದ್ದರೆ...<<
ಚಿಕ್ಕು ಹೇಳೋತರ ಅವರ ``ಇಟ್ಕೊಂಡಿರೊ`` ಸಾಲಿಗೆ ಇನ್ನೊಂದು ಹೆಸ್ರು ಸೇರ್ಕೋತಿತ್ತು ಬಾಮು ಅಂತ.

ಕ್ರಿಕೇಟ್ ಹಾಸ್ಯ ಚೆನ್ನಾಗಿದೆ ಚಿಕ್ಕು ಅವ್ರೆ,
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

<ಭಾಮು(ಪಾರ್ಥರು ಪ್ರೀತಿಯಿಂದ ಕರೆಯುವುದು) ನರ್ತನವೇನೋ ಚೆನ್ನಾಗಿತ್ತು :) ಆಹಾ ಗಣೇಶಣ್ಣ ಜಾಸ್ತಿ ಇಮ್ಯಾಜಿನ್ ಮಾಡ್ಬೇಡಿ !!!
ಆದರೆ ಎಂಡ್ ಭಯಾನಕ..
ಸರಿಯಾದ ಸಮಯಕ್ಕೆ ಮಂಜಣ್ಣ ಬರದಿದ್ದರೆ ...> :) :) :)

<ಭಾಮುನನ್ನ ಕರೆಸಿ ನಮಗೆಲ್ಲರಿಗೂ ಐಪಿಎಲ್ ನೋಡದಂತೆ ಮಾಡಿದ ಪಾರ್ಥಸಾರಥಿಯವರನ್ನು ನಂತರ ವಿಚಾರಿಸಿಕೊಳ್ಳುವೆ> ಹ್ಹ ಹ್ಹ ಹ್ಹ
ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.