ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ.
ಮೊದಲು ಪಾರ್ಥವ್ರಿಗೆ.
ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ, ಬರ್ತೀರಾ?
ಪಾ: ಓ ಚಿಕ್ಕು, ಎಂಥ ಕೆಲಸ ಆಯ್ತು. ನಾನು ಆಗ್ಲೇ ಅಣ್ಣಿಗೇರಿಗೆ ಟ್ರೈನ್ ಬುಕ್ ಮಾಡಿದೀನಿ. ನೋಡೋಣ ಇನ್ನೊಂದ್ಸಲ ಹೋಗೋಕಾಗತ್ತಾ ಅಂತ ಯೋಚನೆ ಮಾಡಿ ಕ್ಯಾನ್ಸಲ್ ಮಾಡಿ ಬರೋದಕ್ಕೆ ಪ್ರಯತ್ನ ಮಾಡ್ತೀನಿ
ನಾ: !@#$%&*()... (ಅಯ್ಯೋ ಪುಣ್ಯಾತ್ಮ, ನಮ್ಗೆ ಬುರುಡೆ ಬ್ಲಾಗ್ ನೋಡೇ ಒಂದು, ಎರಡು ಆಗೋ ಹಾಗೆ ಮಾಡಿದ್ದೀರಾ, ಈ ವಯಸ್ಸಲ್ಲಿ ಇದೆಂಥಾ ಹುಚ್ಚಪ್ಪಾ). ಅಲ್ಲಿಗೆ ಮತ್ತೆ ಏನಕ್ಕೆ ಹೋಗ್ತಿದೀರಾ? ೨ನೇ ವರ್ಶನ್ ತಲೆ ಬುರುಡೆಗಳು ಬಂದಿದಾವಾ?
ಪಾ: ಹೂನಪ್ಪಾ, ಅದ್ಕೆ ಮತ್ತೆ ಹೋಗ್ತಿರೋದು. ನಂಗಂತೂ ಕುತೂಹಲ ತಡೆಯೋಕಾಗ್ತಿಲ್ಲ. ಯಾವಾಗ ಹೋಗ್ತೀನೋ ಅನ್ನೋ ಹಾಗೆ ಆಗಿದೆ. ಇಲ್ಲಿ ನೀನು ನೋಡಿದ್ರೆ ಮ್ಯಾಚಿಗೆ ಕರಿತಿದೀಯಾ.
ನಾ: (ಅಯ್ಯೋ ಶಿವನೆ, ನಮ್ಗೆ ಬುರುಡೆ ಕಂಡ್ರೆ ಕಿತ್ಕೊಂಡು ಓಡ್ತೀವಿ ಆದ್ರೆ ಈ ಯಪ್ಪಂಗೆ ಬುರುಡೆ ನೋಡೋದಕ್ಕೆ ಈ ಲೆವೆಲ್ಲಿಗೆ ಕುತೂಹಲ ಆಗಿದ್ಯಲ್ಲಪ್ಪ) ಹಾಗಿದ್ರೆ ನೀವು ಹೋಗಿ ಬನ್ನಿ, ಅಕಸ್ಮಾತ್ ಬುರುಡೆಗಳು ಬೇರೆ ಏರಿಯಾಕ್ಕೆ ಹೋದ್ರೆ ಕಷ್ಟ.
ಪಾ: ಹ್ಹ ಹ್ಹ ಹ್ಹ, ಅದೇ ಯೋಚನೆ ಮಾಡಿ ಹೇಳ್ತೀನಿ.
ನಾ: ಸರಿ, ಮೊದಲನೇ ವರ್ಶನ್ ರಾಜ ಮಹಾರಾಜರ ಕಾಲದ್ದು, ೨ನೆಯದ್ದು ಯಾರದ್ದು?
ಪಾ: ಸರ್ಕಾರಿ ನೌಕರರದ್ದಂತೆ ಚಿಕ್ಕು.
ನಾ: ಯಪ್ಪಾ, ನೀವು ಅದೃಷ್ಟವಂತರು ಬಿಡಿ. ಒಂದು ಜನ್ಮದಲ್ಲೇ ೨ ವರ್ಶನ್ ಬುರುಡೆ ಸಂತೆ ನೋಡಿದ್ರಿ.
ಪಾ: ೨ ಏನು ೩ನೆಯದ್ದು ಸಹ ನೋಡ್ತೀನಿ.
ನಾ: !!!!!! ಅದ್ಯಾರದ್ದು?
ಪಾ: ಸಾಫ್ಟ್ವೇರ್ ಇನ್ಜಿನಿಯರ್ಸ್ದು.
ನಾ: (ಬ್ಬೆ ಬ್ಬೆ ಬ್ಬೆ ಬ್ಬೆ ಬ್ಬೆ) ಆಂ, ಏನಂದ್ರಿ? (ಇವರ್ಯಾಕೋ ನನ್ನ ಬುರುಡೆಗೆ ಕೈ ಹಾಕ್ತಿದ್ದಾರೆ), ಪಾರ್ಥವ್ರೆ ನೀವು ನಂಜೊತೆ ಬರೋದು ಬೇಡ. ನಿಮ್ಮ ಪಾಡಿಗೆ ನೀವು ಹೋಗಿಬನ್ನಿ, ಮ್ಯಾಚ್ ಇನ್ಯಾವಾಗಲಾದ್ರೂ ನೋಡ್ಬಹುದು. ಬುರುಡೆ ಮಿಸ್ ಆಗೋ ಚಾನ್ಸ್ ಇರತ್ತೆ ಅಂದು ಸಡನ್ನಾಗಿ ಕಾಲ್ ಕಟ್ ಮಾಡಿ ನಿಟ್ಟುಸಿರೆಳೆದೆ
ಈ ವಯ್ಯನ್ನ ಮುಂದೆ ಭೇಟಿ ಮಾಡಬೇಕಾದಂಥ ಸಂಧರ್ಭ ಬಂದ್ರೆ ಹೆಂಗಪ್ಪ ಅಂತ ಅಂದ್ಕೊಂಡು, ಮುಂದಿನ ಕರೆ ಮಾಡಲಿಕ್ಕೆ ರೆಡಿಯಾದೆ.
ಜಯಂತ್ಗೆ ಕಾಲ್ ಮಾಡಿದೆ
ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ?
ಜ: ಇಲ್ಲ ಚಿಕ್ಕು, ನಾಳೆ ಶೂಟಿಂಗ್ ಇದೆ.
ನಾ: ಅಲ್ರೀ ವೀಕೆಂಡ್ ಆರಾಮಾಗಿ ಇರೋದು ಬಿಟ್ಟು ಇದೆನ್ತಂದು ಹೊಸಾ ಕೆಲ್ಸ?
ಜ: ಲಾಸ್ಟ್ ಟೈಮ್ ರಿಸೆಶನ್ ಆಯ್ತಲ್ಲ ಅದ್ಕೆ ಈ ಸಲ ಕೇರ್ಫುಲ್ ಆಗಿರೋಣ ಅಂತ.
ನಾ: ಒಳ್ಳೆ ನಿರ್ಧಾರನೇ ಬಿಡಿ, ಅದಿರ್ಲಿ ಯಾವ ಫಿಲ್ಮ್ದು?
ಜ: ಫಿಲಂ ಅಲ್ಲ. ರಿಯಾಲಿಟಿ ಷೋ.
ನಾ: ಓಹೋ, ನೀವು ಆಗ್ಬಹುದು ಬಿಡ್ರೀ, ತಡೀರಿ ನಿಮ್ಮ ಮನೆಯವರಿಗೆ ಕಂಪ್ಲೇಂಟ್ ಮಾಡ್ತೀವಿ!
ಜ: ಏನಕ್ಕೆ?
ನಾ: ಅದೇ ನಿಮ್ಮೆಜಮಾನ್ರು ರಿಯಾಲಿಟಿ ಷೋ ಅಂತ ಹೋಗ್ತಾರಲ್ಲ ಅಲ್ಲೆಲ್ಲ ಹುಡ್ಗೀರು ಶಾರ್ಟ್ ಸ್ಕರ್ಟ್ ಹಾಕೊಂಡು ಬರ್ತಾರೆ, ನಿಮ್ಗೆ ಇದೆಲ್ಲಾ ಗೊತ್ತಿಲ್ವಾ ಅಂತ.
ಜ: ಸುಮ್ನಿರಪ್ಪ, ಹುಳಿ ಯಾಕೆ ಹಿಂಡ್ತೀಯಾ. ಅವ್ಳಿಗೆ ಗೊತ್ತು ಆ ಷೋ ಬಗ್ಗೆ.
ನಾ: ಸರಿ ಬಿಡಿ ಹಾಗೆ ಆಗ್ಲಿ. ಶೂಟಿಂಗಿಗೆ ಹೋಗಿ.
ಜ: ಸರಿ ಚಿಕ್ಕು, ಇನ್ನೊಮ್ಮೆ ಮಾತಾಡ್ತೀನಿ. ಹೊರಗೆ ಮಳೆ ಬರ್ತಿದೆ ನಾನೀಗ ಮೋಡಕ್ಕೆ ನೇತಾಕೋಬೇಕು.
ನಾ: ****** ನನ್ನ ಮೈಯೆಲ್ಲಾ ಬೆವರೋದಕ್ಕೆ ಶುರುವಾಯ್ತು, ಆಗಲಿ ಅಂದು ಮೊಬೈಲ್ನ ಮಂಚದ ಮೇಲೆ ಎಸೆದೆ.
ಮನೆಯವರಿಗೆ ಒಂದು ಲೋಟ ಕಾಫಿ ಕೊಡು ಅಂತ ಹೇಳಿ ಸಾವರಿಸಿಕೊಳ್ಳಲು ಸೋಫಾ ಮೇಲೆ ಕುಳಿತೆ.
ಕಾಫಿ ಕುಡಿದು ಮುಂದಿನ ಕರೆಗೆ ರೆಡಿಯಾದೆ
(ಮೊಬೈಲ್ ಕಾಲ್ ಪ್ರೇರಣೆ ಗಣೇಶಣ್ಣನ ಲೇಖನದ ಇನ್ನೂ ಒಂದು ಕಥೆ.
ಚಿತ್ರಕೃಪೆ: ಅಂತರ್ಜಾಲ )









ಪ್ರತಿಕ್ರಿಯೆಗಳು
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
:)))
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
:)
ನೆಕ್ಸ್ಟ್ ನಿಮ್ಗೆ ಕಾಲ್ ಸರ್, ರೆಡಿಯಾಗಿರಿ ಕಾಲ್ ರಿಸೀವ್ ಮಾಡೋದಕ್ಕೆ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
ಈಗ ಗೊತ್ತಾಯ್ತು ಚಿಕ್ಕೂ ಮೊನ್ನೆ ಹೈದರಾಬಾದಿನಲ್ಲಿ ನಡೆದ ಮ್ಯಾಚ್ ನೋಡಲು ಅದು ಯಾರೋ ಬೆಂಗಳೂರಿನಿಂದ ಸಂಪದಿಗರಂತೆ ಎಂದು ನಮ್ಮ ಮನೆ ಲ್ಯಾಂಡ್ ಲೈನ್ ಗೆ ಕರೆ ಬಂದಿತ್ತು. ನೀವು ಅವತ್ತು ಆಫೀಸಿನಿಂದ ಬಹಳ ತಡವಾಗಿ ಬಂದ್ರಿ ಅಂತಾ ನನ್ನ ಶ್ರೀಮತಿ ಹೇಳ್ತಾ ಇದ್ದರು. ಅದು ನೀವೆಯೋ ಅಥವಾ ..........ಅದು ಇನ್ನಾರೋ.....ಗಡ.........ಗಡ......ನಡುಕವುಂಟಾಗುತ್ತಿದೆ!
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
:) :)
ಶ್ರೀಧರವ್ರೆ ಇದಕ್ಕೆ ಏನು ಹೇಳ್ಬೇಕು ಗೊತ್ತಾಗ್ತಿಲ್ಲ, ಕೋ ಇನ್ಸಿಡೆನ್ಸ್ ಅಂದ್ರೆ ಇದೇ ಇರ್ಬೇಕೆನೋ !!!!
ಈ ಬ್ಲಾಗಿಗೆ ಕವಿ ಸರ್ ಮೊದಲ ಪ್ರತಿಕ್ರಿಯೆ ಬಂತು. ನೆಕ್ಸ್ಟ್ ಅವ್ರಿಗೆ ಕಾಲ್ ಮಾಡೋ ಹಾಗೆ ಬರ್ದಿದೀನಿ (ಭಾಗ-೨), ಆಮೇಲೆ ನಿಮ್ಮ ಬಗ್ಗೆ ಹೈದರಬಾದಿಂದು ವಿಷಯ ಎತ್ತಿ ಬರೆದಿದೀನಿ (ಭಾಗ ೩ ರಲ್ಲಿ).
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
ಗ್ರೇಟ್ ಮೈಂಡ್ಸ್ ಥಿಂಕ ಅಲೈಕ್ ! ಒಂದೇ ರೀತಿಯಾಗಿ ಥಿಂಕ್ ಮಾಡಿರೋದ್ರಿಂದ ನೀವು ಮತ್ತು ನಾನು ಗ್ರೇಟ್ ಮೈಂಡ್ಸ್ ಹಾಗಾದರೆ :))
ಉ: ಐ ಪಿ ಎಲ್ - ಸಂಪದ ಟೀಮೂ- ೧:ಸಂಪದದಲ್ಲಿ ೨ ಗ್ರೇಟ್ ಮೈಂಡ್ಸ್...ಗೊತ್ತೇ?
:()))
ಉ: ಐ ಪಿ ಎಲ್ - ಸಂಪದ ಟೀಮೂ- ೧:ಸಂಪದದಲ್ಲಿ ೨ ಗ್ರೇಟ್ ಮೈಂಡ್ಸ್...ಗೊತ್ತೇ?
:) :) :)
ಇರ್ಬೇಕು
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
:()))
ಸಧ್ಯ- ೪ ನೇ ತಲೆ ಬುರುಡೆ ಇಲ್ಲ ಅನ್ನಿಸುತ್ತಿದೆ!!
ಇಬ್ಬರು ಐ ಪೀ ಎಲ್ ಗೆ ತಪ್ಪಿಸಿಕೊಂಡರು,
ಇನ್ನ ಗಣೇಶ್ ಅಣ್ಣ ,ಕವಿಗಳು, ಶ್ರೀಧರ್ ಜೀ ಸುಪ್ರೀತ್ ಮತ್ತು ಆ ಸಪ್ತಗಿರಿವಾಸಿ ಈರ್ವಾ ಹಾಗಿದೆ ಆದರೆ ಅದರಲ್ಲಿ ಸಪ್ತಗಿರಿವಾಸಿಗೆ ಕ್ರಿಕೆಟ್ ಬಗ್ಗೆ ನಯಾ ಪೈಸೆ ಜ್ಞಾನ ಇಲ್ಲ:((
ಕುಳಿತು ನೋಡಿದರೆ ಆಯ್ಟಪ್ಪ ಅಂದ್ರೆ- ಏನೂ ಅರ್ಥ ಆಗೋಲ್ಲ...!!
ನಾವ್ ಅದನ್ನ ಸಂಪದದಲ್ಲೇ ಒದ್ತೀವಿ ಬಿಡಿ!!
ಚಿಯರ್ ಗರ್ಲ್ಸ್ ಇಲ್ಲವೇ????!!!
ಐ ಪೀ ಎಲ್ಲೂ ಓಪನಿಂಗ್ ಗೆ ಸಲ್ಮಾನು ಶಾರೂಕೂ ಸ್ಟೆಪ್ಸ್ ಹಾಕ್ತಾರ?
ಶುಭವಾಗಲಿ..
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
<ಚಿಯರ್ ಗರ್ಲ್ಸ್ ಇಲ್ಲವೇ????!!!> ಅವ್ರಿಲ್ದಿದ್ರೆ ಐ ಪಿ ಎಲ್ಗೆ ಅರ್ಥ ಎಲ್ಲಿ???
೪ನೇ ತಲೆ ಬುರುಡೆ ನೋಡೋಕೆ ೩ ಬುರುಡೆಗಳೂ ಮಿಸ್ ಆಗಿರತ್ತಲ್ಲಾ :) :)
ಎಲ್ಲಾ ಬರ್ತಾರೆ ಏಳುಬೆಟ್ಟಗಳೇ....ನೀವೂ ಕ್ಯೂನಲ್ಲಿದೀರಾ :) :)
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
:) :) ಚಿಕ್ಕೂ ಸೂಪರ್ ಆಗಿದೆ. ಇನ್ನೂ ದೆವ್ವಗಳ ಹಿಂದೆಯೇ ಇಬ್ಬರೂ ಇದ್ದಾರಲ್ಲಾ? :)
ನಿಮ್ಮ ಶೀರ್ಷಿಕೆ+ ಲೇಖನ ಓದಿ ಈ ಯೋಚನೆ ಬಂತು...
-ನಮ್ಮ ರಾಯಲ್ ಚಾಲೆಂಜರ್ಸ್ ಟೀಮಲ್ಲಿ ಗೇಯ್ಲ್ ಮತ್ತು ಒಂದಿಬ್ಬರನ್ನು ಬಿಟ್ಟರೆ ಯಾರೂ ಚೆನ್ನಾಗಿ ಆಡುತ್ತಿಲ್ಲ ಎಂದು ಬೇಸರದಲ್ಲಿದ್ದ ಮಲ್ಯರನ್ನು, ಅವರ ಚಡ್ಡಿದೋಸ್ತ್ ಮಂಜಣ್ಣ ಭೇಟಿಯಾಗಿ, "ಟೀಮಲ್ಲಿ ನಾನು ಹೇಳಿದವರನ್ನು ಹಾಕಿದರೆ, ಐಪಿಎಲ್-೫ನ್ನು ಗೆಲ್ಲಿಸಿ ಕೊಡುವೆ" ಎಂದು ಮಾತು ಕೊಟ್ಟು ಬಂದಿದ್ದಾರೆ.
ಅವರ ಸಲಹೆಯಂತೆ ಪಾರ್ಥರು ಅಣ್ಣಿಗೇರಿಗೆ ಹೋಗಿ ೩-೪ ದೆವ್ವಗಳನ್ನು "ವಶೀಕರಿಸಿ" ಬರುವರು. ಟೀಮಲ್ಲಿ ಗೆಯ್ಲ್, ವಿಲ್ಲಿಯರ್ಸ್, ಅಪ್ಪಣ್ಣ ಬಿಟ್ಟರೆ ಉಳಿದವರೆಲ್ಲಾ ಸಂಪದಿಗರು!
ನಂತರ ಆಟ ನೋಡಿ :
ಗೇಯ್ಲ್ ಸಿಕ್ಸರ್ ೭೮ ಮೀಟರ್ ದೂರ ಬಿದ್ದರೆ, ಜತೆ ಆಟಗಾರ ಚೇತನ್ ಹೊಡೆದ ಸಿಕ್ಸರ್ ಮಲ್ಲೇಶ್ವರ ಗ್ರೌಂಡಲ್ಲಿ ಬೀಳುವುದು....
ರಾಮಮೋಹನರು "ಹ್ರಾಂಹ್ರೀಂಫಟ್.." ಎಂದಾಕ್ಷಣ ಸಿಕ್ಸರ್‌ಗೆ ಹೋಗುತ್ತಿದ್ದ ಸಚಿನ್ ಹೊಡೆದ ಬಾಲು, ಸ್ಪಿನ್ ತೆಗೆದುಕೊಂಡು, ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡ್ ಮಾಡುತ್ತಿರುವ ಸಪ್ತಗಿರಿವಾಸಿಯ ಕೈಗೆ ಬಂದು ಬೀಳುವುದು!
ನನ್ನನ್ನೂ ಟೀಮಿಗೆ ತೆಗೆದುಕೊಳ್ಳಿ ಎಂದು ಸಪ್ತಗಿರಿವಾಸಿ ಮೂಲಕ ನನ್ನ ವಯಸ್ಸನ್ನು ಕಮ್ಮಿ ತೋರಿಸಿದೆ. ಈ ಶ್ರೀಕರ್-ಶ್ರೀಧರ್ ಜೋಡಿ ನನ್ನ ನಿಜ ವಯಸ್ಸು ಹೇಳಿ ಟೀಮಿಗೆ ಸೇರದಂತೆ ಮಾಡಿದರು. :(
ಆದರೂ ಬಿಡದೇ ಮಂಜಣ್ಣನವರ ಪ್ರಭಾವ ಬೀರಿ ಪ್ರಯತ್ನಿಸಿದೆ..ಈ "ಕೈ ಎಳೆಯುವ ಜನ" ಇದ್ದಾರಲ್ಲಾ.. " ಈ ಗಣೇಶರು ಪಿಚ್ ಮೇಲೆ ಓಡಿದರೆ ಪಿಚ್ ತುಂಬಾ ಕ್ರೇಟರ್‌ಗಳು" ಎಂದು ಹೇಳಿ ಅಡ್ಡಗಾಲಿಟ್ಟರು :(
ಹೋಗಲಿ..ನೀವೆಲ್ಲಾ ಐಪಿಎಲ್ ಗೆದ್ದು ಬನ್ನಿ.
-ಗಣೇಶ.
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
ಚಿಕ್ಕೂ ನಿಮ್ಮನ್ನೂ ರಿಯಾಲಿಟಿ ಷೋಗೆ ಕರೆಯೋಣ ಎ೦ದುಕೊ೦ಡರೆ ನೀವು ಐಪಿಎಲ್ ನೋಡಲು ಹೋಗುತ್ತಿದ್ದೀರಾ ಹೋಗಿ ಬನ್ನಿ...ಸಕತ್ತಾಗಿದೆ ಬರಹ.
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
ಬ್ಯಾಡ್ರೀ ಜಯಂತ್
ನೀವೊಬ್ರೇ ಹೋಗ್ಬನ್ನಿ ಸಾಕು
ಮೆಚ್ಚುಗೆಗೆ ಧನ್ಯವಾದ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
@ಗಣೇಶ್..ಜಿ.
ಈ "ಕೈ ಎಳೆಯುವ ಜನ" ಇದ್ದಾರಲ್ಲಾ.. " ಈ ಗಣೇಶರು ಪಿಚ್ ಮೇಲೆ ಓಡಿದರೆ ಪಿಚ್ ತುಂಬಾ ಕ್ರೇಟರ್‌ಗಳು" ಎಂದು ಹೇಳಿ ಅಡ್ಡಗಾಲಿಟ್ಟರು :(.......ಹ್ಹ....ಹ್ಹ....ಹ್ಹಾ......! ಆದರೂ ನನಗೊಂದು ಸಂಶಯ ಅವರಿಗೆ ನಿಮ್ಮ ಕೈಯ್ಯನ್ನಾದರೂ ಎಳೆಯುವ ತಾಕತ್ತಿದೆಯಾ ಅಂತಾ? ಅಂತಹುದರಲ್ಲಿ ನಿಮಗೆ ಅಡ್ಡಗಾಲು ಹಾಕುವುದು ಸಾಧ್ಯವೇ? ಇದರಲ್ಲೇನೋ ಮ್ಯಾಚ್ ಫಿಕ್ಸಿಂಗಿನ ಭೂತದ ಚೇಷ್ಟೆ ಇರಬೇಕು ಅಂತಾ ನನಗೆ ಅನ್ನಿಸುತ್ತಿದೆ.
@ಚಿಕ್ಕೂ
ಅಂಡಾಂಡಭಂಡರನ್ನು ಹೇಗಾದರೂ ಮಾಡಿ ಒಲಿಸಿಕೊಂಡು ಸ್ಟೇಡಿಯಮ್ಮಿನಲ್ಲಿ ಕೂರುವಂತೆ ಮಾಡಿ. ಆ ಚೀರ್ ಗರ್ಲ್ಸ್ ನ ಮುಖನೋಡಿಕೊಂಡಾದರೂ ಮಂಜಣ್ಣವರ ದೋಸ್ತ್ ಮಲ್ಯರವರನ್ನು ಗೆಲ್ಲುವಂತೆ ಮಾಡುತ್ತಾರೆ. :))
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
ಬಂದ್ರು ನೋಡಿ ಶ್ರೀಧರವ್ರೆ, ಸ್ವಾಮಿಗಳು !!!
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧
ಧನ್ಯವಾದ ಗಣೇಶಣ್ಣ
ಹ್ಹ ಹ್ಹ ಹ್ಹ ನಿಮ್ಮ ಕ್ರಿಕೆಟ್ ಕಾಮೆಂಟರಿ ಚೆನ್ನಾಗಿದೆ